ಕವಾಸಕಿ ಆಫ್-ರೋಡ್ ಬೈಕುಗಳ ಮೇಲೆ ಭರ್ಜರಿ ರಿಯಾಯಿತಿ

ಕವಾಸಕಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಆಫ್-ರೋಡ್ ಬೈಕ್‌ಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಲಾಗಿದೆ. ಡರ್ಟ್ ಬೈಕ್‌ಗಳಲ್ಲಿ ಕಳೆದ ವರ್ಷದ ಉಳಿದಿರುವ ಸ್ಟಾಕ್ ಅನ್ನು ತೆರವುಗೊಳಿಸಲು ಮತ್ತು ಮಾರಾಟವನ್ನು ಹೆಚ್ಚಿಸಲು ಕೆಲವು ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ.

ಕವಾಸಕಿ ಆಫ್-ರೋಡ್ ಬೈಕುಗಳ ಮೇಲೆ ಭರ್ಜರಿ ರಿಯಾಯಿತಿ

ಕವಾಸಕಿ ಕಂಪನಿಯು ತನ್ನ ಕೆಎಲ್‌ಎಕ್ಸ್‌110, ಕೆಎಲ್‌ಎಕ್ಸ್‌140 ಮತ್ತು ಕೆಎಕ್ಸ್100 ಬೈಕುಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಲಾಗಿದೆ. ಇದರಲ್ಲಿ ಕವಾಸಕಿ ಕೆಎಲ್‌ಎಕ್ಸ್‌110 ಬೈಕಿನ ಮೇಲೆ ರೂ.30,000 ರಿಯಾಯಿತಿಯನ್ನು ನೀಡಿದರೆ, ಕೆಎಲ್‌ಎಕ್ಸ್‌140 ಬೈಕಿನ ಮೇಲೆ ರೂ. 40,000 ಮತ್ತು ಕೆಎಕ್ಸ್100 ಬೈಕಿನ ಮೇಲೆ ರೂ.50,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ.

ಕವಾಸಕಿ ಆಫ್-ರೋಡ್ ಬೈಕುಗಳ ಮೇಲೆ ಭರ್ಜರಿ ರಿಯಾಯಿತಿ

ಈ ರಿಯಾಯಿತಿ ಕೂಪನ್ ಗಳು ಸೀಮಿತ ಸ್ಟಾಕ್‌ನಲ್ಲಿ ಮಾತ್ರ ಅನ್ವಯವಾಗುತ್ತವೆ ಮತ್ತು ಅವುಗಳು ‘ಫಸ್ಟ್ ಕಮ್ ಫಸ್ಟ್ ಸರ್ವ್' ಆಧಾರದ ಮೇಲೆ ಲಭ್ಯವಿರುತ್ತವೆ. ಈ ಬೈಕುಗಳ ಎಕ್ಸ್‌ಶೋರೂಂ ಬೆಲೆಯ ಮೇಲೆ ಕೂಪನ್ ಅನ್ನು ಪಡೆದುಕೊಳ್ಳಬಹುದು.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಕವಾಸಕಿ ಆಫ್-ರೋಡ್ ಬೈಕುಗಳ ಮೇಲೆ ಭರ್ಜರಿ ರಿಯಾಯಿತಿ

ಈ ರಿಯಾಯಿತಿಗಳು ಕವಾಸಕಿ ಎಲ್ಲಾ ಡೀಲರುಗಳ ಬಳಿ ಲಭ್ಯವಿರುತ್ತದೆ. ಆದರೆ ಕವಾಸಕಿ ಕೆಎಕ್ಸ್ ಮತ್ತು ಕೆಎಲ್ಎಕ್ಸ್ ಮಾದರಿಗಳನ್ನು ಸರ್ವಾಜನಿಕ ರಸ್ತೆಗಳಲ್ಲಿ ನಿರ್ಬಂಧಿಸಲಾಗಿದೆ. ಇದು ಕೇವಲ ಟ್ರ್ಯಾಕ್ ನಲ್ಲಿ ಮತ್ತು ಆಫ್-ರೋಡ್ ಪ್ರದೇಶಗಳಲ್ಲಿ ಓಡಿಸುವ ಬೈಕುಗಳಾಗಿವೆ.

ಕವಾಸಕಿ ಆಫ್-ರೋಡ್ ಬೈಕುಗಳ ಮೇಲೆ ಭರ್ಜರಿ ರಿಯಾಯಿತಿ

ಕೆಎಲ್‌ಎಕ್ಸ್‌110 ಬೈಕಿನಲ್ಲಿ 112 ಸಿಸಿ, ಏರ್-ಕೂಲ್ಡ್, ಸಿಂಗಲ್ ಸಿಲಿಂಡರ್, 4-ಸ್ಟ್ರೋಕ್ ಎಂಜಿನ್ ಅನ್ನು ಅಳವಡಿಸಲಾಗಿದೆ, ಈಎಂಜಿನ್ 7.3 ಬಿಹೆಚ್‍ಪಿ ಪವರ್ ಮತ್ತು 8.0 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಕವಾಸಕಿ ಆಫ್-ರೋಡ್ ಬೈಕುಗಳ ಮೇಲೆ ಭರ್ಜರಿ ರಿಯಾಯಿತಿ

ಈ ಎಂಜಿನ್ ಅನ್ನು 4-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುತ್ತದೆ. ಇದು ಅತ್ಯಂತ ಕಡಿಮೆ ತೂಕದ ತೂಕವನ್ನು ಹೊಂದಿದೆ. ಈ ಕೆಎಲ್‌ಎಕ್ಸ್‌110 ಬೈಕ್ ಕೇವಲ 76 ಕೆಜಿ ತೂಕವನ್ನು ಹೊಂದಿದ್ದು, ಇದು ಆಫ್-ರೋಡ್ ಭೂಪ್ರದೇಶದಲ್ಲಿ ನಿಭಾಯಿಸಲು ಸುಲಭಗೊಳಿಸುತ್ತದೆ

ಕವಾಸಕಿ ಆಫ್-ರೋಡ್ ಬೈಕುಗಳ ಮೇಲೆ ಭರ್ಜರಿ ರಿಯಾಯಿತಿ

ಇನ್ನು ಕೆಎಲ್‌ಎಕ್ಸ್‌140 ಬೈಕಿನಲ್ಲಿ 144 ಸಿಸಿ, ಏರ್-ಕೂಲ್ಡ್, ಸಿಂಗಲ್ ಸಿಲಿಂಡರ್, 4-ಸ್ಟ್ರೋಕ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಕವಾಸಕಿ ಆಫ್-ರೋಡ್ ಬೈಕುಗಳ ಮೇಲೆ ಭರ್ಜರಿ ರಿಯಾಯಿತಿ

ಕೆಎಲ್‌ಎಕ್ಸ್‌140 ಬೈಕ್ 99 ಕೆಜಿ ತೂಕವನ್ನು ಹೊಂದಿದ್ದು, ಇದು ಆಫ್-ರೋಡ್ ಭೂಪ್ರದೇಶದಲ್ಲಿ ಸುಲಭವಾಗಿ ಸಾಗಲು ಮತ್ತು ಟ್ಯ್ರಾಕ್ ನಲ್ಲಿ ಓಡಿಸುವಾಗ ಹೆಚ್ಚು ಸಹಕಾರಿಯಾಗಿರುತ್ತದೆ. ಇದರ ಬೆಲೆಯು ರೂ.4.06 ಲಕ್ಷಗಳಾಗಿದೆ.

ಕವಾಸಕಿ ಆಫ್-ರೋಡ್ ಬೈಕುಗಳ ಮೇಲೆ ಭರ್ಜರಿ ರಿಯಾಯಿತಿ

ಕೊನೆಯದಾಗಿ ಕವಾಸಕಿ ಕೆಎಕ್ಸ್100 ಬೈಕಿನಲ್ಲಿ 99ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್, 2-ಸ್ಟ್ರೋಕ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಈ ಕೆಎಕ್ಸ್100 ಬೈಕ್ 77ಕೆಜಿ ತೂಕವನ್ನು ಹೊಂದಿದೆ.

More from DriveSpark

Article Published On: Wednesday, February 3, 2021, 15:29 [IST]
English summary
Up to Rs. 50,000 Discount On These 3 Kawasaki. Read In Kanada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+