ಯುಗಾದಿ ಸ್ಪೆಷಲ್: ಕವಾಸಕಿ ವಲ್ಕನ್ ಎಸ್ ಬೈಕಿನ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್
ಜನಪ್ರಿಯ ಕವಾಸಕಿ ವಲ್ಕನ್ ಎಸ್ ಬೈಕನ್ನು ಖರೀದಿಸಲು ಬಯಸುವ ಗ್ರಾಹಕರಿಗಾಗಿ ಕವಾಸಕಿ ಭರ್ಜರಿ ಡಿಸ್ಕೌಂಟ್ ಅನ್ನು ಘೋಷಿಸಿದೆ. ಈ ಹೊಸ ಕವಾಸಕಿ ವಲ್ಕನ್ ಎಸ್ ಬೈಕಿನ ಮೇಲೆ ಇರುವ ಡಿಸ್ಕೌಂಟ್ ಸೀಮಿತ ಅವಧಿವರೆಗೆ ಮಾತ್ರ ಲಭ್ಯವಿರುತ್ತದೆ.

ಕವಾಸಕಿ ಇಂಡಿಯಾ ಕಂಪನಿಯು ಕವಾಸಕಿ ವರ್ಸಿಸ್ ಎಸ್ ಬೈಕಿನ ಮೇಲೆ ರೂ.20,000 ಗಳವರೆಗೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಈ ಡಿಸ್ಕೌಂಟ್ ಈ ತಿಂಗಳ ಅಂತ್ಯದವರೆಗೂ ಲಭ್ಯವಿರುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಅಧಿಕೃತ ಕವಾಸಕಿ ಡೀಲರ್ ಅನ್ನು ಭೇಟಿ ಮಾಡಬಹುದು. ಕವಾಸಕಿ ಇಂಡಿಯಾ ಇತ್ತೀಚೆಗೆ 1 ಏಪ್ರಿಲ್ ರಿಂದ ಜಾರಿಗೊಳಿಸಲಾದ ಪರಿಷ್ಕೃತ ಬೆಲೆ ಪಟ್ಟಿಯನ್ನು ಪ್ರಕಟಿಸಿದೆ.

ಈ ಹೊಸ ದರ ಪಟ್ಟಿಯ ಪ್ರಕಾರ ಕವಾಸಕಿ ವಲ್ಕನ್ ಎಸ್ ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.6.04 ಲಕ್ಷಗಳಾಗಿದೆ. ಈ ಬೆಲೆಯ ಮೇಲೆ ಹೊಸ ಕವಾಸಕಿ ವಲ್ಕನ್ ಎಸ್ ಖರೀದಿಸುವಾಗ ರೂ.ರೂ.20,000 ಡಿಸ್ಕೌಂಟ್ ಪಡೆಯಬಹುದು.

ಕವಾಸಕಿ ವಲ್ಕನ್ ಎಸ್ ಬೈಕಿನಲ್ಲಿ 649ಸಿಸಿ ಪ್ಯಾರೆಲಲ್ ಲಿಕ್ವಿಡ್-ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7500 ಆರ್‌ಪಿಎಂನಲ್ಲಿ 60 ಬಿಹೆಚ್‍ಪಿ ಪವರ್ ಮತ್ತು 7000 ಆರ್‌ಪಿಎಂನಲ್ಲಿ 62.4 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಇನ್ನು ಕವಾಸಕಿ ಝಡ್650 ಮತ್ತು ನಿಂಝಾ 650 ಬೈಕಿನಲ್ಲಿರುವಂತಹ ಅದೇ ಮಾದರಿಯ ಫೀಚರ್ ಗಳನ್ನು ಹೊಸ ವಲ್ಕನ್ ಬೈಕಿನಲ್ಲಿ ಲಭ್ಯವಿದೆ. ಆದರೆ ಬ್ಲೂಟೂತ್ ಕನೆಕ್ಟಿಟ್ ಆಗಿರುವ ಇನ್ಸ್ ಟ್ರೂಮೆಂಟ್ ಕನ್ಸೋಲ್ ಫೀಚರ್ ಈ ವಲ್ಕನ್ ಬೈಕಿನಲ್ಲಿ ನೀಡಲಾಗಿಲ್ಲ.

ಈ ಹೊಸ ಕವಾಸಕಿ ವಲ್ಕನ್ ಎಸ್ ಬೈಕಿನಲ್ಲಿ ರೆಟ್ರೋ ವಿನ್ಯಾಸದ ಹೆಡ್‌ಲ್ಯಾಂಪ್ ಅನ್ನು ಹೊಂದಿದೆ. ಇದರೊಂದಿಗೆ ಬ್ಲ್ಯಾಕ್ ಕೌಲ್, ಎರಡು ಕಡೆಗಳಲ್ಲಿ ದುಂಡಗಿನ ಆಕಾರದ ಫೆಂಡರ್‌ಗಳು ಮತ್ತು ಹಿಂಭಾಗದಲ್ಲಿ ಸೆಟ್ ಟರ್ನ್ ಸಿಗ್ನಲ್ ಇಂಡಿಕೇಟರ್ ಗಳನ್ನು ಹೊಂದಿದೆ.

ಹೊಸ ಕವಾಸಕಿ ವಲ್ಕನ್ ಎಸ್ ಬೈಕ್ 1575 ಎಂಎಂ ಉದ್ದದ ವ್ಹೀಲ್ ಬೇಸ್ ಅನ್ನು ಹೊಂದಿದೆ. ಈ ಹೊಸ ಕವಾಸಕಿ ವಲ್ಕನ್ ಎಸ್ ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ 130 ಎಂಎಂ ಪ್ರಿ-ಲೋಡ್ ಆಫ್-ಸೆಟ್ ಮಾದರಿಯ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ.

ಇನ್ನು ಹೊಸ ಕವಾಸಕಿ ವಲ್ಕನ್ ಎಸ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಡ್ಯುಯಲ್ 300 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಒಂದೇ 250 ಎಂಎಂ ಯುನಿಟ್ ಅನ್ನು ನೀಡಲಾಗಿದೆ. ಇದರೊಂದಿಗೆ ಸ್ಟ್ಯಾಂಡರ್ಡ್ ಆಗಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಹೊಂದಿದೆ.

ಕವಾಸಕಿ ವಲ್ಕನ್ ಎಸ್ ಬೈಕಿನಲ್ಲಿ 14-ಲೀಟರ್ ಫೇರ್ಡ್ ಫ್ಯೂಯಲ್ ಟ್ಯಾಂಕ್, ಅಪ್-ರೈಟ್ ಹ್ಯಾಂಡಲ್‌ಬಾರ್ ಮತ್ತು ಫಾರ್ವರ್ಡ್-ಸೆಟ್ ಫುಟ್‌ಪೆಗ್‌ಗಳನ್ನು ಹೊಂದಿವೆ. ಇನ್ನು ಈ ಬೈಕಿನಲ್ಲಿ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಹೊಂದಿದೆ.

ಹೊಸ ಕವಾಸಕಿ ವಲ್ಕನ್ ಎಸ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಮತ್ತು ಸ್ಟ್ರೀಟ್ ರಾಡ್ ಬೈಕುಗಳಿಗೆ ಪೈಪೋಟಿ ನೀಡುತ್ತದೆ. ಕವಾಸಕಿ ಕಂಪನಿಯು ತನ್ನ ಜನಪ್ರಿಯ ಮಾದರಿಗಳನ್ನು ನವೀಕರಿಸಿ ಭಾರತದಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ.


Click it and Unblock the Notifications








