ಹೊಸ ಕವಾಸಕಿ ಆಫ್-ರೋಡ್ ಬೈಕ್‌ಗಳ ಮೇಲೆ ಭರ್ಜರಿ ರಿಯಾಯಿತಿ

ಕವಾಸಕಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಆಫ್-ರೋಡ್ ಬೈಕ್‌ಗಳ ಮೇಲೆ ಭರ್ಜರಿ ಆಫರ್ ಅನ್ನು ಘೋಷಿಸಲಾಗಿದೆ. ಕವಾಸಕಿ ಕಂಪನಿಯು ಈ ಆಗಸ್ಟ್ ತಿಂಗಳಲ್ಲಿ ತನ್ನ ಆಫ್-ರೋಡ್ ಬೈಕ್‌ಗಳ ಮೇಲೆ ಒಟ್ಟು ರೂ.50,000ಗ ಳವರೆಗೆ ಆಫರ್ ಅನ್ನು ಘೋಷಿಸಿದೆ.

ಹೊಸ ಕವಾಸಕಿ ಆಫ್-ರೋಡ್ ಬೈಕ್‌ಗಳ ಮೇಲೆ ಭರ್ಜರಿ ರಿಯಾಯಿತಿ

ಕವಾಸಕಿ ಇಂಡಿಯಾ ಕಂಪನಿಯು ತನ್ನ ಆಫ್-ರೋಡ್ ಬೈಕ್‌ಗಳ ಮೇಲೆ ಘೋಷಿಸಿರುವ ಆಫರ್ ಗಳ ಮಾಹಿತಿಯನ್ನು ತನ್ನ ಸಾಮಾಜಿಕ ಜಾಲತಾಣಗಳ ಹಂಚಿಕೊಂಡಿದೆ. ಕವಾಸಕಿ ಕಂಪನಿಯು ತನ್ನ ಕೆಎಲ್‌ಎಕ್ಸ್‌110, ಕೆಎಲ್‌ಎಕ್ಸ್‌140 ಮತ್ತು ಕೆಎಕ್ಸ್100 ಬೈಕ್‌ಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಲಾಗಿದೆ. ಇದರಲ್ಲಿ ಕವಾಸಕಿ ಕೆಎಲ್‌ಎಕ್ಸ್‌110 ಬೈಕಿನ ಮೇಲೆ ರೂ.30,000 ರಿಯಾಯಿತಿಯನ್ನು ನೀಡಿದರೆ, ಕೆಎಲ್‌ಎಕ್ಸ್‌140 ಬೈಕಿನ ಮೇಲೆ ರೂ.40,000 ಮತ್ತು ಕೆಎಕ್ಸ್100 ಬೈಕಿನ ಮೇಲೆ ರೂ.50,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ.

ಹೊಸ ಕವಾಸಕಿ ಆಫ್-ರೋಡ್ ಬೈಕ್‌ಗಳ ಮೇಲೆ ಭರ್ಜರಿ ರಿಯಾಯಿತಿ

ಈ ರಿಯಾಯಿತಿ ವೋಚರ್ ಗಳು ಸೀಮಿತ ಸ್ಟಾಕ್‌ನಲ್ಲಿ ಮಾತ್ರ ಅನ್ವಯವಾಗುತ್ತವೆ ಮತ್ತು ಈ ಆಫರ್ ಈ ತಿಂಗಳ ಅಂತ್ಯದವರೆಗೂ ಮಾತ್ರ ಲಭ್ಯವಿರುತ್ತದೆ ಗಮನಿಸಿ ಈ ಬೈಕುಗಳ ಎಕ್ಸ್‌ಶೋರೂಂ ಬೆಲೆಯ ಮೇಲೆ ವೋಚರ್ ಅನ್ನು ಪಡೆದುಕೊಳ್ಳಬಹುದು.

ಹೊಸ ಕವಾಸಕಿ ಆಫ್-ರೋಡ್ ಬೈಕ್‌ಗಳ ಮೇಲೆ ಭರ್ಜರಿ ರಿಯಾಯಿತಿ

ಈ ರಿಯಾಯಿತಿಗಳು ದೇಶದಾದ್ಯಂತವಿರುವ ಎಲ್ಲಾ ಕವಾಸಕಿ ಅಧಿಕೃತ ಡೀಲರುಗಳ ಬಳಿ ಲಭ್ಯವಿರುತ್ತದೆ. ಆದರೆ ಕವಾಸಕಿ ಕೆಎಕ್ಸ್ ಮತ್ತು ಕೆಎಲ್ಎಕ್ಸ್ ಮಾದರಿಗಳನ್ನು ಸರ್ವಾಜನಿಕ ರಸ್ತೆಗಳಲ್ಲಿ ನಿರ್ಬಂಧಿಸಲಾಗಿದೆ. ಇದು ಕೇವಲ ಟ್ರ್ಯಾಕ್ ನಲ್ಲಿ ಮತ್ತು ಆಫ್-ರೋಡ್ ಪ್ರದೇಶಗಳಲ್ಲಿ ಓಡಿಸುವ ಬೈಕುಗಳಾಗಿವೆ.

ಹೊಸ ಕವಾಸಕಿ ಆಫ್-ರೋಡ್ ಬೈಕ್‌ಗಳ ಮೇಲೆ ಭರ್ಜರಿ ರಿಯಾಯಿತಿ

ಇದರಲ್ಲಿ ಕವಾಸಕಿ ಕೆಎಲ್‌ಎಕ್ಸ್‌110 ಬೈಕಿನಲ್ಲಿ 112 ಸಿಸಿ, ಏರ್-ಕೂಲ್ಡ್, ಸಿಂಗಲ್ ಸಿಲಿಂಡರ್, 4-ಸ್ಟ್ರೋಕ್ ಎಂಜಿನ್ ಅನ್ನು ಅಳವಡಿಸಲಾಗಿದೆ, ಈ ಎಂಜಿನ್ 7.3 ಬಿಹೆಚ್‍ಪಿ ಪವರ್ ಮತ್ತು 8.0 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ ಕವಾಸಕಿ ಆಫ್-ರೋಡ್ ಬೈಕ್‌ಗಳ ಮೇಲೆ ಭರ್ಜರಿ ರಿಯಾಯಿತಿ

ಈ ಎಂಜಿನ್ ಅನ್ನು 4-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುತ್ತದೆ. ಇದು ಅತ್ಯಂತ ಕಡಿಮೆ ತೂಕದ ತೂಕವನ್ನು ಹೊಂದಿದೆ. ಈ ಕೆಎಲ್‌ಎಕ್ಸ್‌110 ಬೈಕ್ ಕೇವಲ 76 ಕೆಜಿ ತೂಕವನ್ನು ಹೊಂದಿದ್ದು, ಇದು ಆಫ್-ರೋಡ್ ಭೂಪ್ರದೇಶದಲ್ಲಿ ನಿಭಾಯಿಸಲು ಹೆಚ್ಚು ಸುಲಭಗೊಳಿಸುತ್ತದೆ. ಇದು ಅತ್ಯುತ್ತಮ ಆಫ್-ರೋಡ್ ಬೈಕ್ ಗಳಲ್ಲಿ ಒಂದಾಗಿದೆ

ಹೊಸ ಕವಾಸಕಿ ಆಫ್-ರೋಡ್ ಬೈಕ್‌ಗಳ ಮೇಲೆ ಭರ್ಜರಿ ರಿಯಾಯಿತಿ

ಇನ್ನು ಕೆಎಲ್‌ಎಕ್ಸ್‌140 ಬೈಕಿನಲ್ಲಿ 144 ಸಿಸಿ, ಏರ್-ಕೂಲ್ಡ್, ಸಿಂಗಲ್ ಸಿಲಿಂಡರ್, 4-ಸ್ಟ್ರೋಕ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಉತ್ತಮ ಪವರ್ ಮತ್ತು ಟಾರ್ಕ್ ಅನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ.

ಹೊಸ ಕವಾಸಕಿ ಆಫ್-ರೋಡ್ ಬೈಕ್‌ಗಳ ಮೇಲೆ ಭರ್ಜರಿ ರಿಯಾಯಿತಿ

ಕೆಎಲ್‌ಎಕ್ಸ್‌140 ಬೈಕ್ 99 ಕೆಜಿ ತೂಕವನ್ನು ಹೊಂದಿದ್ದು, ಇದು ಆಫ್-ರೋಡ್ ಭೂಪ್ರದೇಶದಲ್ಲಿ ಸುಲಭವಾಗಿ ಸಾಗಲು ಮತ್ತು ಟ್ಯ್ರಾಕ್ ನಲ್ಲಿ ಓಡಿಸುವಾಗ ಸವಾರನಿಗೆ ಹೆಚ್ಚು ಸಹಕಾರಿಯಾಗಿರುತ್ತದೆ. ಈ ಬೈಕ್ ಉತ್ತಮ ಆಫ್-ರೋಡ್ ಸಾಮಮರ್ಥ್ಯ ಹೊಂದಿರುವ ಬೈಕ್ ಆಗಿದೆ.

ಹೊಸ ಕವಾಸಕಿ ಆಫ್-ರೋಡ್ ಬೈಕ್‌ಗಳ ಮೇಲೆ ಭರ್ಜರಿ ರಿಯಾಯಿತಿ

ಕವಾಸಕಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಬೈಕ್‌ಗಳ ಬೆಲೆಯನ್ನು ಈ ವರ್ಷ ಮೂರನೇ ಬಾರಿಗೆ ಹೆಚ್ಚಿಸಲಾಗಿದೆ. ಇದರಿಂದ ಕವಾಸಕಿ ಬೈಕ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಮತ್ತಷ್ಟು ದುಬಾರಿಯಾಗಲಿದೆ. ಕವಾಸಕಿ 650 ಸಿಸಿ ಲೈನ್-ಅಪ್ ನಲ್ಲಿರುವ ಝಡ್650, ನಿಂಜಾ 650, ವಲ್ಕನ್ ಎಸ್ ಮತ್ತು ವರ್ಸಿಸ್ 650 ಇವೆಲ್ಲವೂ ಬೆಲೆ ಏರಿಕೆಯನ್ನು ಪಡೆದಿವೆ. ಇದರ ಜೊತೆಯಲ್ಲಿ ಇತರ ಕವಾಸಕಿ ಬೈಕ್‌ಗಳು ಕೂಡ ಒಳಗೊಂಡಿದೆ.

ಹೊಸ ಕವಾಸಕಿ ಆಫ್-ರೋಡ್ ಬೈಕ್‌ಗಳ ಮೇಲೆ ಭರ್ಜರಿ ರಿಯಾಯಿತಿ

ಇದರಲ್ಲಿ ಕವಾಸಕಿ ನಿಂಜಾ ಝಡ್‌ಎಕ್ಸ್-10ಆರ್ ಬೈಕ್ ಅತಿ ಹೆಚ್ಚು ಬೆಲೆ ಏರಿಕೆಯನ್ನು ಪಡೆದುಕೊಂಡಿದೆ. ಕವಾಸಕಿ ಮಿಡ್ ವೇಟ್ ರೆಟ್ರೊ-ರೋಡ್ಸ್ಟರ್ ಡಬ್ಲ್ಯು800 ಬೈಕ್ ರೂ.7,000 ಗಳವರೆಗೂ ಬೆಲೆ ಏರಿಕೆಯನ್ನು ಪಡೆದುಕೊಂಡಿದೆ.ಬ್ರ್ಯಾಂಡ್ ಮಾರಾಟ ಮಾಡುವ ಕೆಲವು ಮಾದರಿಗಳು ಇತ್ತೀಚಿನ ಬೆಲೆ ಏರಿಕೆಯಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಇದು ನಿಂಜಾ 300 ಅನ್ನು ಒಳಗೊಂಡಿದೆ. ಇನ್ನು ಝಡ್ಎಚ್2, ಕೆಎಕ್ಸ್ ಮತ್ತು ಕೆಎಲ್ಎಕ್ಸ್ ಸರಣಿಗಳು ಸೇರಿವೆ.

ಹೊಸ ಕವಾಸಕಿ ಆಫ್-ರೋಡ್ ಬೈಕ್‌ಗಳ ಮೇಲೆ ಭರ್ಜರಿ ರಿಯಾಯಿತಿ

ಕೊನೆಯ ಮಾದರಿ ಕವಾಸಕಿ ಕೆಎಕ್ಸ್100 ಬೈಕಿನಲ್ಲಿ 99ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್, 2-ಸ್ಟ್ರೋಕ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಈ ಕವಾಸಕಿ ಕೆಎಕ್ಸ್100 ಆಫ್-ರೋಡ್ ಬೈಕ್ 77ಕೆಜಿ ತೂಕವನ್ನು ಹೊಂದಿದೆ. ಕವಾಸಕಿ ಆಫ್-ರೋಡ್ ಬೈಕ್ ಅನ್ನು ಖರೀದಿಸಲು ಬಯಸುವರಿಗೆ ಉತ್ತಮ ಅವಕಾಶವಾಗಿದೆ.

More from DriveSpark

Article Published On: Wednesday, August 4, 2021, 18:01 [IST]
English summary
Kawasaki announced offers on klx110 klx140 kx100 in august 2021 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+