ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ ಝಡ್ಎಕ್ಸ್-25 ಬೈಕ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಕವಾಸಕಿಯು ತನ್ನ 2021ರ ನಿಂಜಾ ಝಡ್ಎಕ್ಸ್-25 ಕ್ವಾರ್ಟರ್-ಲೀಟರ್ ಬೈಕ್ ಅನ್ನು ನವೀಕರಿಸಲಾಗಿದೆ. ಈ 2021ರ ಕವಾಸಕಿ ಝಡ್ಎಕ್ಸ್-25 ಬೈಕನ್ನು ಹೊಸ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಇಂಡೋನೇಷ್ಯಾದಲ್ಲಿ ಪರಿಚಯಿಸಿದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ ಝಡ್ಎಕ್ಸ್-25 ಬೈಕ್

2021ರ ಕವಾಸಕಿ ನಿಂಜಾ ಝಡ್ಎಕ್ಸ್-25 ಸ್ಟ್ಯಾಂಡರ್ಡ್ ರೂಪಾಂತರವು ಸಿಂಗಲ್ ಬಣ್ಣದ ಆಯ್ಕೆ ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್ ಆಗಿದ್ದರೆ, ಮತ್ತೊಂದೆಡೆ ಡ್ಯುಯಲ್-ಟೋನ್ ಬಣ್ಣಗಳ ಆಯ್ಕೆಯಾಗಿ ಲೈಮ್ ಗ್ರೀನ್/ಎಬೊನಿ, ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್/ಪರ್ಲ್ ಫ್ಲಾಟ್ ಸ್ಟಾರ್ಡಸ್ಟ್ ವೈಟ್ ಮತ್ತು ಕ್ಯಾಂಡಿ ಪ್ಲಾಸ್ಮಾ ಬ್ಲೂ/ಮೆಟಾಲಿಕ್ ಸ್ಪಾರ್ಕ್ ಬ್ಲೂ ಬಣ್ಣಗಳ ಆಯ್ಕೆಯನ್ನು ಹೊಂದಿವೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ ಝಡ್ಎಕ್ಸ್-25 ಬೈಕ್

2021ರ ಕವಾಸಕಿ ನಿಂಜಾ ಝಡ್ಎಕ್ಸ್-25 ಬೈಕ್ ಇತರ ಝಡ್ಎಕ್ಸ್-10 ಆರ್ ನಂತಹ ಕವಾಸಕಿಯ ದೊಡ್ಡ ಬೈಕ್‌ಗಳಿಗೆ ಲಭ್ಯವಿರುವ ಅದೇ ಲೈಮ್ ಗ್ರೀನ್ ಬಣ್ಣದಲ್ಲಿಯು ಲಭ್ಯವಿರುತ್ತದೆ. ಇದು ವೈಟ್ ಮತ್ತು ಗ್ರೇ ಬಣ್ಣದ ಡೆಕಲ್‌ಗಳಿಂದ ಅಲಂಕರಿಸಲ್ಪಟ್ಟ ರೆಡ್ ಬಣ್ಣದ ಬಾಡಿ ಪ್ಯಾನೆಲ್‌ಗಳನ್ನು ಪಡೆಯುತ್ತದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ ಝಡ್ಎಕ್ಸ್-25 ಬೈಕ್

ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್-25ಆರ್ ಇನ್-ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಹೊಂದಿರುವ ಪವರ್ ಫುಲ್ ಬೈಕ್ ಆಗಿದೆ. ಕವಾಸಕಿ ಕಂಪನಿಯು 2019ರ ಟೋಕಿಯೊ ಮೋಟಾರ್ ಶೋನಲ್ಲಿ ಸಂಪೂರ್ಣ ಫೇರ್ಡ್ ಕವಾಸಕಿ ಝಡ್‍ಎಕ್ಸ್ 25ಆರ್ ಬೈಕನ್ನು ಮೊದಲ ಬಾರಿಗೆ ಪ್ರದರ್ಶಿಸಿತ್ತು.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ ಝಡ್ಎಕ್ಸ್-25 ಬೈಕ್

ಈ ಬೈಕ್ ತನ್ನ ಆಗ್ರೆಸಿವ್ ಸ್ಟೈಲಿಂಗ್ ಮತ್ತು ಇನ್-ಲೈನ್ ನಾಲ್ಕು ಎಂಜಿನ್ ನಿಂದ ಗ್ರಾಹಕರ ಗಮನಸೆಳೆಯಿತು. ಕವಾಸಕಿ ನಿಂಜಾ ಝಡ್ಎಕ್ಸ್-25 ಬೈಕ್ 249 ಸಿಸಿ, ಲಿಕ್ವಿಡ್-ಕೂಲ್ಡ್, ಇನ್-ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ ಝಡ್ಎಕ್ಸ್-25 ಬೈಕ್

ಈ ಎಂಜಿನ್ 15,500 ಆರ್‌ಪಿಎಂನಲ್ಲಿ 49.ಬಿಹೆಚ್‍ಪಿ ಪವರ್ ಮತ್ತು 14,500 ಆರ್‌ಪಿಎಂನಲ್ಲಿ 22.9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6 ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಸ್ಲಿಪ್ಪರ್ ಅಸಿಸ್ಟ್ ಕ್ಲಚ್ ಮತ್ತು ಕ್ವಿಕ್‌ಶಿಫ್ಟರ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ ಝಡ್ಎಕ್ಸ್-25 ಬೈಕ್

ಈ ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್ 25ಆರ್ ಟ್ವಿನ್ ಪಾಡ್ ಹೆಡ್‍ ಲ್ಯಾಂಪ್, ಫುಲ್ ಫೇರಿಂಗ್ ಮತ್ತು ಡ್ಯುಯಲ್ ಟೋನ್ ಬಣ್ಣದ ಆಯ್ಕೆಯನ್ನು ಹೊಂದಿದೆ. ಈ ಬೈಕ್ ಮಸ್ಕ್ಯುಲರ್ ಟ್ಯಾಂಕ್, ಅಂಡರ್ಬೆಲ್ಲಿ ಎಕ್ಸಾಸ್ಟ್ ಮತ್ತು ಕಡಿಮೆ ಸೆಟ್ ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ ಅನ್ನು ಹೊಂದಿದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ ಝಡ್ಎಕ್ಸ್-25 ಬೈಕ್

ಈ ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ 37 ಎಂಎಂ ಅಪ್‌ಸೈಡ್-ಡೌನ್ ಶೋವಾ ಪ್ರತ್ಯೇಕ ಫಂಕ್ಷನ್ ಫೋರ್ಕ್‌ ಮತ್ತು ಹಿಂಭಾಗದಲ್ಲಿ ಬ್ಯಾಕ್-ಲಿಂಕ್ ಸಂಸೆಕ್ಷನ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಸುರಕ್ಷತೆಗಾಗಿ ಮುಂಭಾಗ ಮತ್ತು ಹಿಂಭಾಗದ ಟಯರುಗಳಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಅಳವಡಿಸಲಾಗಿದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ ಝಡ್ಎಕ್ಸ್-25 ಬೈಕ್

ಈ ಹೊಸ ಬೈಕಿನಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಅನಲಾಗ್ ಟ್ಯಾಕೋಮೀಟರ್ ಮತ್ತು ಸೆಮಿ ಡಿಜೆಟಲ್ ಯುನಿಟ್ ಸಿಸ್ಟಂ ಅನ್ನು ಹೊಂದಿರಲಿದೆ. ಕವಾಸಕಿ ಝಡ್‍ಎಕ್ಸ್ 25ಆರ್ ಎಲೆಕ್ತ್ರಾನಿಕ್ ರೈಡರ್ ಅನ್ನು ಕೂಡ ಒಳಗೊಂಡಿದೆ. ಇವುಗಳೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಮತ್ತು ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಒಳಗೊಂಡಿದೆ.

More from DriveSpark

Article Published On: Monday, June 14, 2021, 10:02 [IST]
English summary
2021 Kawasaki Ninja ZX-25R New Colour Options. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+