ಭಾರತದಲ್ಲಿ ಹೊಸ ಕವಾಸಕಿ ನಿಂಜಾ 650 ಸ್ಪೋರ್ಟ್ಸ್ ಬೈಕ್ ಬಿಡುಗಡೆ

ಜನಪ್ರಿಯ ದ್ವಿಚಕ್ರ ವಾಹನ ಕಂಪನಿಯಾದ ಕವಾಸಕಿ ತನ್ನ 2022ರ ನಿಂಜಾ 650 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಕವಾಸಕಿ ನಿಂಜಾ 650 ಮಿಡ್ ವೈಟ್ ಸ್ಪೋರ್ಟ್ಸ್ ಬೈಕ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.6.61 ಲಕ್ಷಗಳಾಗಿದೆ.

ಭಾರತದಲ್ಲಿ ಹೊಸ ಕವಾಸಕಿ ನಿಂಜಾ 650 ಸ್ಪೋರ್ಟ್ಸ್ ಬೈಕ್ ಬಿಡುಗಡೆ

ಈ ಹೊಸ ಕವಾಸಕಿ ನಿಂಜಾ 650 ಬೈಕ್ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಈ ಮಿಡ್ ವೈಟ್ ಸ್ಪೋರ್ಟ್ಸ್ ಬೈಕ್ ಲೈಮ್ ಗ್ರೀನ್ ಮತ್ತು ರೊಬೊಟಿಕ್ ವೈಟ್ ಎಂಬ ಎರಡು ಬಣ್ಣಗಳ ಆಯ್ಜೆಯಲ್ಲಿ ಲಭ್ಯವಿದೆ. ಈ ಬೈಕಿನ ಮುಂಭಾಗದ ಫೆಂಡರ್ ಮತ್ತು ಹಿಂಭಾಗದ ಟ್ರಿಮ್ ಅನ್ನು ಬಿಳಿ ಬಣ್ಣದಲ್ಲಿದೆ. ಈ ಬೈಕಿನ ಫ್ಯೂಯಲ್ ಟ್ಯಾಂಕ್, ಫೇರಿಂಗ್ ಮತ್ತು ಹೆಡ್‌ಲ್ಯಾಂಪ್ ಕೌಲ್ ಅನ್ನು ಮುಖ್ಯವಾಗಿ ಬ್ಲ್ಯಾಕ್ ಮತ್ತು ಗ್ರೀನ್ ಅಸ್ಸೆಂಟ್ ಗಳನ್ನು ಹೊಂದಿವೆ. ಇನ್ನು ವ್ಹೀಲ್ ಗಳು ಗ್ರೀನ್ ಪಿನ್ ಸ್ಟ್ರಿಪಿಂಗ್ ಅನ್ನು ಸಹ ಒಳಗೊಂಡಿರುತ್ತವೆ.

ಭಾರತದಲ್ಲಿ ಹೊಸ ಕವಾಸಕಿ ನಿಂಜಾ 650 ಸ್ಪೋರ್ಟ್ಸ್ ಬೈಕ್ ಬಿಡುಗಡೆ

ಹೊಸ ಬಣ್ಣವನ್ನು ಹೊರತುಪಡಿಸಿ, 2022ರ ಕವಾಸಕಿ ನಿಂಜಾ 650 ಬೈಕಿನಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಪಡೆದುಕೊಂಡಿಲ್ಲ. ಈ ಹೊಸ ಕವಾಸಕಿ ನಿಂಜಾ 650 ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಆಗ್ರೇಸಿವ್ ಲುಕ್ ಹೊಂದಲು ಫೇರಿಂಗ್ ಅನ್ನು ನವೀಕರಿಸಲಾಗಿದೆ. ಇದು ಸ್ವಲ್ಪ ನವೀಕರಿಸಿದ ಗ್ರಾಫಿಕ್ಸ್ ಅನ್ನು ಸಹ ಹೊಂದಿದೆ.

ಭಾರತದಲ್ಲಿ ಹೊಸ ಕವಾಸಕಿ ನಿಂಜಾ 650 ಸ್ಪೋರ್ಟ್ಸ್ ಬೈಕ್ ಬಿಡುಗಡೆ

ಈ ಹೊಸ ನಿಂಝಾ 650 ಬೈಕಿನಲ್ಲಿ 649 ಸಿಸಿಯ ಲಿಕ್ವಿಡ್ ಕೂಲ್ಡ್ ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8,000 ಆರ್‍‍ಪಿ‍ಎಂನಲ್ಲಿ 68 ಬಿ‍ಹೆಚ್‍‍ಪಿ ಪವರ್ ಹಾಗೂ 6,700 ಆರ್‍‍ಪಿ‍ಎಂನಲ್ಲಿ 64 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

ಭಾರತದಲ್ಲಿ ಹೊಸ ಕವಾಸಕಿ ನಿಂಜಾ 650 ಸ್ಪೋರ್ಟ್ಸ್ ಬೈಕ್ ಬಿಡುಗಡೆ

ಇನ್ನು ಹೊಸ ಸ್ಪೋರ್ಟ್ಸ್ ಬೈಕಿನ ಫೀಚರ್ಸ್, ಇದರಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು, ಅಂಡರ್-ಬೆಲ್ಲಿ ಎಕ್ಸಾಸ್ಟ್, ಸ್ಪ್ಲಿಟ್-ಸೀಟ್‌ಗಳು, ಕ್ಲಿಪ್-ಆನ್ ಹ್ಯಾಂಡಲ್‌ಬಾರ್ಸ್, ವಿಂಡ್‌ಸ್ಕ್ರೀನ್, 15-ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ ಕವಾಸಕಿ ನಿಂಜಾ 650 ಸ್ಪೋರ್ಟ್ಸ್ ಬೈಕ್ ಬಿಡುಗಡೆ

ಇದರೊಂದಿಗೆ 4.3 ಇಂಚಿನ ಟಿ‍ಎಫ್‍‍ಟಿ ಕಲರ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಹಾಗೂ ಡನ್‍‍ಲಪ್ ಸ್ಪೋರ್ಟ್ಸ್ ಮ್ಯಾಕ್ಸ್ ರೋಡ್‍‍ಸ್ಪೋರ್ಟ್ ಟಯರ್‍‍ಗಳಿವೆ. ಇನ್ನು ಈ ಇನ್ಸ್ ಟ್ರೂಮೆಂಟೆ ಕ್ಲಸ್ಟರ್ ಬ್ಲೂಟೂತ್ ಕನೆಕ್ಟಿವಿಟಿಯನ್ನು ಹೊಂದಿದೆ. ಇನ್ನು ಬೈಕಿನಲ್ಲಿ ಕಡಿಮೆ ತೂಕದ ಚಾಸೀಸ್ ಹಾಗೂ ಆರಾಮದಾಯಕವಾದ ಸೀಟುಗಳನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಹೊಸ ಕವಾಸಕಿ ನಿಂಜಾ 650 ಸ್ಪೋರ್ಟ್ಸ್ ಬೈಕ್ ಬಿಡುಗಡೆ

2022ರ ನಿಂಜಾ 650 ಬೈಕಿನ ಎರಡು ಬದಿಯ ಸ್ವಿಂಗಾರ್ಮ್‌ನೊಂದಿಗೆ ಟ್ರೆಲಿಸ್ ಫ್ರೇಮ್ ಅನ್ನು ಬಳಸುವುದನ್ನು ಮುಂದುವರೆಸಿದೆ, ಇದು ನೇರ ರಸ್ತೆಗಳಲ್ಲಿ ಮತ್ತು ಕಾರ್ನರ್ ಗಳಲ್ಲಿ ಅತ್ಯುತ್ತಮ ನಿರ್ವಹಣೆಯನ್ನು ನೀಡುತ್ತದೆ.

ಭಾರತದಲ್ಲಿ ಹೊಸ ಕವಾಸಕಿ ನಿಂಜಾ 650 ಸ್ಪೋರ್ಟ್ಸ್ ಬೈಕ್ ಬಿಡುಗಡೆ

ಇನ್ನು ಈ ಸ್ಪೋರ್ಟ್ಸ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 300 ಎಂಎಂನ ಡ್ಯುಯಲ್ ಸೆಮಿ ಪೆಟಲ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ ಡ್ಯುಯಲ್-ಪಿಸ್ಟನ್ ಕ್ಯಾಲಿಪರ್ 200 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಇದರೊಂದಿಗೆ ಎಬಿಎಸ್ ಅನ್ನು ಕೂಡ ನೀಡಲಾಗಿದೆ. ಕವಾಸಕಿ ನಿಂಜಾ 650 ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಮಿಡ್ ವೈಟ್ ಸ್ಪೋರ್ಟ್ಸ್ ಬೈಕ್‌ಗಳಲ್ಲಿ ಒಂದಾಗಿದೆ.

ಭಾರತದಲ್ಲಿ ಹೊಸ ಕವಾಸಕಿ ನಿಂಜಾ 650 ಸ್ಪೋರ್ಟ್ಸ್ ಬೈಕ್ ಬಿಡುಗಡೆ

ಕವಾಸಕಿ ಕಂಪನಿಯು ತನ್ನ ಆಫ್-ರೋಡ್ ಬೈಕ್‌ಗಳ ಮೇಲೆ ಭರ್ಜರಿ ಆಫರ್ ಅನ್ನು ಘೋಷಿಸಿದ್ದು, ಕವಾಸಕಿ ಕಂಪನಿಯು ಈ ಆಗಸ್ಟ್ ತಿಂಗಳಲ್ಲಿ ತನ್ನ ಆಫ್-ರೋಡ್ ಬೈಕ್‌ಗಳ ಮೇಲೆ ಒಟ್ಟು ರೂ.50,000ಗ ಳವರೆಗೆ ಆಫರ್ ಅನ್ನು ಘೋಷಿಸಿದೆ. ಕವಾಸಕಿ ಕಂಪನಿಯು ತನ್ನ ಕೆಎಲ್‌ಎಕ್ಸ್‌110, ಕೆಎಲ್‌ಎಕ್ಸ್‌140 ಮತ್ತು ಕೆಎಕ್ಸ್100 ಬೈಕ್‌ಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಲಾಗಿದೆ.

ಭಾರತದಲ್ಲಿ ಹೊಸ ಕವಾಸಕಿ ನಿಂಜಾ 650 ಸ್ಪೋರ್ಟ್ಸ್ ಬೈಕ್ ಬಿಡುಗಡೆ

ಇದರಲ್ಲಿ ಕವಾಸಕಿ ಕೆಎಲ್‌ಎಕ್ಸ್‌110 ಬೈಕಿನ ಮೇಲೆ ರೂ.30,000 ರಿಯಾಯಿತಿಯನ್ನು ನೀಡಿದರೆ, ಕೆಎಲ್‌ಎಕ್ಸ್‌140 ಬೈಕಿನ ಮೇಲೆ ರೂ.40,000 ಮತ್ತು ಕೆಎಕ್ಸ್100 ಬೈಕಿನ ಮೇಲೆ ರೂ.50,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಈ ರಿಯಾಯಿತಿ ವೋಚರ್ ಗಳು ಸೀಮಿತ ಸ್ಟಾಕ್‌ನಲ್ಲಿ ಮಾತ್ರ ಅನ್ವಯವಾಗುತ್ತವೆ ಮತ್ತು ಈ ಆಫರ್ ಈ ತಿಂಗಳ ಅಂತ್ಯದವರೆಗೂ ಮಾತ್ರ ಲಭ್ಯವಿರುತ್ತದೆ ಗಮನಿಸಿ ಈ ಬೈಕುಗಳ ಎಕ್ಸ್‌ಶೋರೂಂ ಬೆಲೆಯ ಮೇಲೆ ವೋಚರ್ ಅನ್ನು ಪಡೆದುಕೊಳ್ಳಬಹುದು.

ಭಾರತದಲ್ಲಿ ಹೊಸ ಕವಾಸಕಿ ನಿಂಜಾ 650 ಸ್ಪೋರ್ಟ್ಸ್ ಬೈಕ್ ಬಿಡುಗಡೆ

ಕವಾಸಕಿ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಬೈಕ್‌ಗಳ ಬೆಲೆಯನ್ನು ಈ ವರ್ಷ ಮೂರನೇ ಬಾರಿಗೆ ಹೆಚ್ಚಿಸಲಾಗಿದೆ. ಇದರಿಂದ ಕವಾಸಕಿ ಬೈಕ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಮತ್ತಷ್ಟು ದುಬಾರಿಯಾಗಲಿದೆ. ಕವಾಸಕಿ 650 ಸಿಸಿ ಲೈನ್-ಅಪ್ ನಲ್ಲಿರುವ ಝಡ್650, ನಿಂಜಾ 650, ವಲ್ಕನ್ ಎಸ್ ಮತ್ತು ವರ್ಸಿಸ್ 650 ಇವೆಲ್ಲವೂ ಬೆಲೆ ಏರಿಕೆಯನ್ನು ಪಡೆದಿವೆ. ಇದರ ಜೊತೆಯಲ್ಲಿ ಇತರ ಕವಾಸಕಿ ಬೈಕ್‌ಗಳು ಕೂಡ ಒಳಗೊಂಡಿದೆ.

ಭಾರತದಲ್ಲಿ ಹೊಸ ಕವಾಸಕಿ ನಿಂಜಾ 650 ಸ್ಪೋರ್ಟ್ಸ್ ಬೈಕ್ ಬಿಡುಗಡೆ

ಈ ಬೈಕನ್ನು ಹೊಸ ಬಣ್ಣಗಳ ಆಯ್ಕೆಯಲ್ಲಿ ಪರಿಚಯಿಸಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು. ಈ ಬೈಕಿನ ಸ್ವೀಟ್-ಸೌಂಡಿಂಗ್ ಪ್ಯಾರಲಲ್-ಟ್ವಿನ್ ಎಂಜಿನ್ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ನಿಂಜಾ 650 ತನ್ನ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಸ್ವಲ್ಪ ಹೆಚ್ಚು ಟೆಕ್ ಮತ್ತು ಎಲೆಕ್ಟ್ರಾನಿಕ್ ರೈಡರ್ಸ್ ಏಡ್‌ಗಳನ್ನು ಒಳಗೊಂಡಿದೆ. ಕವಾಸಕಿ ನಿಂಜಾ 650 ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಸಿಬಿಆರ್650ಆರ್ ಮತ್ತು ಸಿಎಫ್ ಮೊಟೋ ಜಿಟಿ 650 ಸ್ಪೋರ್ಟ್ಸ್ ಬೈಕ್‌ಗಳಿಗೆ ಪೈಪೋಟಿ ನೀಡುತ್ತದೆ. ಈ ಸ್ಪೋರ್ಟ್ಸ್ ಬೈಕ್ ಆಕರ್ಷಕ ಲುಕ್ ಅತ್ಯಾಧುನಿಕ ಫೀಚರ್ಸ್ ಮತ್ತು ಹೊಸ ತಂತ್ರಜ್ಙಾನಗಳನ್ನು ಹೊಂದಿವೆ.

More from DriveSpark

Article Published On: Thursday, August 12, 2021, 10:17 [IST]
English summary
Kawasaki launched 2022 ninja 650 in india engine design details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+