ಆಕರ್ಷಕ ವಿನ್ಯಾಸದಲ್ಲಿ 2022ರ ಕವಾಸಕಿ ಝಡ್900ಆರ್‍ಎಸ್ ಬೈಕ್ ಬಿಡುಗಡೆ

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಕವಾಸಕಿಯು ತನ್ನ 2022 ಝಡ್900ಆರ್‍ಎಸ್ ಬೈಕನ್ನು ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. 2022ರ ಕವಾಸಕಿ ಝಡ್900ಆರ್‍ಎಸ್ ಬೈಕ್ ಕೆಲವು ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಿದೆ.

ಆಕರ್ಷಕ ವಿನ್ಯಾಸದಲ್ಲಿ 2022ರ ಕವಾಸಕಿ ಝಡ್900ಆರ್‍ಎಸ್ ಬೈಕ್ ಬಿಡುಗಡೆ

2022ರ ಕವಾಸಕಿ ಝಡ್900ಆರ್‍ಎಸ್ ಬೈಕ್ ಝಡ್900ಆರ್‍ಎಸ್ ಸ್ಟ್ಯಾಂಡರ್ಡ್ ಮತ್ತು ಝಡ್900ಆರ್‍ಎಸ್ ಕೆಫೆ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಈ ಬೈಕಿನ ಎರಡು ರೂಪಾಂತರಗಳು ಒಂದೇ ರೀತಿಯ ಎಂಜಿನ್ ಅನ್ನು ಹೊಂದಿದೆ. ಆದರೆ ಕೆಫೆ ರೂಪಾಂತರ ಮಾದರಿಯು ಬಿಕಿನಿ ಫೇರಿಂಗ್, ಡ್ಯುಯಲ್-ಟೋನ್ ಸ್ಯಾಡಲ್ ಮತ್ತು ವಿಭಿನ್ನ ಗ್ರಾಫಿಕ್ಸ್ ಅನ್ನು ಪಡೆಯುತ್ತದೆ. ಈ ಬೈಕಿನ ಎರಡು ರೂಪಾಂತರಗಳು ಕೂಡ ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ 2022ರ ಕವಾಸಕಿ ಝಡ್900ಆರ್‍ಎಸ್ ಬೈಕ್ ಬಿಡುಗಡೆ

ಬೈಕಿನ ಹೃದಯ ಭಾಗ ಎಂದೇ ಹೇಳುವ ಎಂಜಿನ್ ಬಗ್ಗೆ ಹೇಳುವುದಾದರೆ, ಈ ಹೊಸ ಕವಾಸಕಿ ಝಡ್900ಆರ್‍ಎಸ್ ಬೈಕಿನಲ್ಲಿ 948 ಸಿಸಿ, ಇನ್-ಲೈನ್ ನಾಲ್ಕು ಸಿಲಿಂಡರ್ ಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ 2022ರ ಕವಾಸಕಿ ಝಡ್900ಆರ್‍ಎಸ್ ಬೈಕ್ ಬಿಡುಗಡೆ

ಈ ಎಂಜಿನ್ 8,500 ಆರ್‌ಪಿಎಂನಲ್ಲಿ 107 ಬಿಹೆಚ್ಪಿ ಮತ್ತು 6,500 ಆರ್‌ಪಿಎಂನಲ್ಲಿ 95 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ 2022ರ ಕವಾಸಕಿ ಝಡ್900ಆರ್‍ಎಸ್ ಬೈಕ್ ಬಿಡುಗಡೆ

ಹೊಸ ಕವಾಸಕಿ ಝಡ್900ಆರ್‍ಎಸ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಇನ್ವಡರ್ಡ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಪ್ ಅನ್ನು ಹೊಂದಿದ್ದು, ಇದನ್ನು ರಿಬೌಂಡ್ ಡ್ಯಾಂಪಿಂಗ್ ಮತ್ತು ಸ್ಪ್ರಿಂಗ್ ಪ್ರೀಲೋಡ್‌ಗೆ ಹೊಂದಿಸಬಲ್ಲವು. ಹಿಂಭಾಗದ ಸೆಟಪ್ ಅನ್ನು ರಿಬೌಂಡ್ ಡ್ಯಾಂಪಿಂಗ್ ಮತ್ತು ಸ್ಪ್ರಿಂಗ್ ಪ್ರಿ-ಲೋಡ್ ಗಾಗಿ ಸಹ ಹೊಂದಿಸಬಹುದು.

ಆಕರ್ಷಕ ವಿನ್ಯಾಸದಲ್ಲಿ 2022ರ ಕವಾಸಕಿ ಝಡ್900ಆರ್‍ಎಸ್ ಬೈಕ್ ಬಿಡುಗಡೆ

ಇನ್ನು ಪ್ರಮುಖವಾಗಿ ಬ್ರೇಕಿಂಕ್ ಸಿಸ್ಟಂ ಬಗ್ಗೆ ಹೇಳುವುದಾದರೆ. ಇದರ ಮುಂಭಾಗದಲ್ಲಿ 300 ಎಂಎಂ ಡ್ಯುಯಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 250 ಎಂಎಂ ಸಿಂಗಲ್ ರೋಟರ್ ಬ್ರೇಕಿಂಗ್ ಸಿಸ್ಟಂ ಅನ್ನು ಕೂಡ ನೀಡಲಾಗಿದೆ. ಇದರೊಂದಿಗೆ ಈ ಬೈಕಿನಲ್ಲಿ ಎಬಿಎಸ್ ಅನ್ನು ಕೂಡ ನೀಡಿದೆ.

ಆಕರ್ಷಕ ವಿನ್ಯಾಸದಲ್ಲಿ 2022ರ ಕವಾಸಕಿ ಝಡ್900ಆರ್‍ಎಸ್ ಬೈಕ್ ಬಿಡುಗಡೆ

ಹೊಸ ಕವಾಸಕಿ ಝಡ್900ಆರ್‍ಎಸ್ ಬೈಕಿನಲ್ಲಿ ಕೆಲವು ಎಲೆಕ್ಟ್ರನಿಕ್ ತಂತ್ರಜ್ಙಾನಗಳನ್ನು ಒಳಗೊಂಡಿದೆ. ಇದರಲ್ಲಿ ರೈಡರ್ ಏಡ್ಸ್, ಟ್ರ್ಯಾಕ್ಷನ್ ಕಂಟ್ರೋಲ್, ಸ್ಲಿಪ್ಪರ್, ಅಸಿಸ್ಟ್ ಕ್ಲಚ್ ಮತ್ತು ಇತ್ಯಾದಿ ತಂತ್ರಜ್ಙಾನಗಳು ಸೇರಿವೆ.

ಆಕರ್ಷಕ ವಿನ್ಯಾಸದಲ್ಲಿ 2022ರ ಕವಾಸಕಿ ಝಡ್900ಆರ್‍ಎಸ್ ಬೈಕ್ ಬಿಡುಗಡೆ

ಇದರೊಂದಿಗೆ, ಕವಾಸಕಿ ಕಂಪನಿಯು ತನ್ನ 2021ರ ನಿಂಜಾ ಝಡ್ಎಕ್ಸ್-10ಆರ್ ಬೈಕನ್ನು ಕೂಡ ಇಂಡೋನೇಷ್ಯಾದ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ವಿಶ್ವದಾದ್ಯಂತ ಅತ್ಯಂತ ಜನಪ್ರಿಯ ಲೀಟರ್-ಕ್ಲಾಸ್ ಬೈಕ್‌ಗಳಲ್ಲಿ ಒಂದಾಗಿದೆ.

ಆಕರ್ಷಕ ವಿನ್ಯಾಸದಲ್ಲಿ 2022ರ ಕವಾಸಕಿ ಝಡ್900ಆರ್‍ಎಸ್ ಬೈಕ್ ಬಿಡುಗಡೆ

2022ರ ಕವಾಸಕಿ ಝಡ್900ಆರ್‍ಎಸ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ. ಈ ಹಿಂದೆ ರೆಟ್ರೊ ಶೈಲಿಯಲ್ಲಿ ಈ ಬೈಕ್ ಬಿಎಸ್4 ಎಂಜಿನ್ ನಲ್ಲಿ ಮಾರಾಟದಲ್ಲಿತ್ತು. ಝಡ್900ಆರ್‍ಎಸ್ ಬೈಕಿನ ಬಿಎಸ್6 ಮಾದರಿಯನ್ನು ಭವಿಷ್ಯದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

More from DriveSpark

Article Published On: Wednesday, June 30, 2021, 10:02 [IST]
English summary
2022 Kawasaki Z900RS Launched In Indonesia. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+