ಆಕರ್ಷಕ ವಿನ್ಯಾಸದಲ್ಲಿ ಹೊಸ ಕವಾಸಕಿ ಝಡ್650 ಬೈಕ್ ಬಿಡುಗಡೆ
ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಕವಾಸಕಿ ತನ್ನ 2022ರ ಝಡ್650 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಕವಾಸಕಿ ಝಡ್650 ಮಿಡ್ ವೈಟ್ ಸ್ಟ್ರೀಟ್-ನೇಕೆಡ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.6.24 ಲಕ್ಷವಾಗಿದೆ.

2022ರ ಕವಾಸಕಿ ಝಡ್650 ಬೈಕ್ ಹೊಸ ಕ್ಯಾಂಡಿ ಲೈಮ್ ಗ್ರೀನ್ ಟೈಪ್ 3 ಬಣ್ಣಕ್ಕೆ ಸಂಬಂಧಿಸಿದಂತೆ ಬ್ಲ್ಯಾಕ್ ಮತ್ತು ಗ್ರೀನ್ ಬಣ್ಣಗಳ ಸಂಯೋಜನೆಯಾಗಿದೆ. ಬೈಕಿನ ಚಾಸಿಸ್ ಅನ್ನು ಮ್ಯಾಟ್ ಗ್ರೀನ್ ಬಣ್ಣದಲ್ಲಿದೆ. ಬೈಕಿನ ಉಳಿದ ಬಾಡಿಯ ಭಾಗಗಳು ಬ್ಲ್ಯಾಕ್ ಬಣ್ಣದಲ್ಲಿ ಫ್ಯೂಯೆಲ್ ಟ್ಯಾಂಕ್, ಹೆಡ್ ಲ್ಯಾಂಪ್ ಕೌಲ್ ಮತ್ತು ಹಿಂಬದಿ ಟ್ರಿಮ್ ಮೇಲೆ ಗ್ರೀನ್ ಅಸ್ಸೆಂಟ್ ಗಳನ್ನು ಹೊಂದಿದೆ. ಇದರೊಂದಿಗೆ ಗ್ರೀನ್ ಪಿನ್ ಸ್ಟ್ರಿಪಿಂಗ್ ಅನ್ನು ಹೊಂದಿವೆ.

ಹೊಸ ಬಣ್ಣವನ್ನು ಹೊರತುಪಡಿಸಿ, 2022ರ ಕವಾಸಕಿ ಝಡ್650 ಬೈಕಿನಲ್ಲಿ ಉಳಿದಂತೆ ಯಾವುದೇ ಪ್ರಮುಖ ಬದಲಾವಣೆಗಳನ್ನು ಹೊಂದಿಲ್ಲ, ಈ ಹೊಸ ಬೈಕ್ ಜಪಾನಿನ 'ಸುಗೊಮಿ' ವಿನ್ಯಾಸವನ್ನು ಹೊಂದಿದೆ. ಈ ಬೈಕ್ ನೇರವಾದ ನಿಲುವು, ಅಗ್ರೇಸಿವ್ ಕಾಣುವ ಮುಂಭಾಗ, ಮಸ್ಕಲರ್ ಫ್ಯೂಯಲ್ ಟ್ಯಾಂಕ್ ಅನ್ನು ಹಿಂದಿನ ಮಾದರಿಯಿಂದಲೂ ಸಾಗಿಸಲಾಗಿದೆ.

2022ರ ಕವಾಸಕಿ ಝಡ್650 ಬೈಕಿನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು, ಅಂಡರ್-ಬೆಲ್ಲಿ ಎಕ್ಸಾಸ್ಟ್, ಸ್ಪ್ಲಿಟ್-ಸೀಟ್‌ಗಳು, 15-ಲೀಟರ್ ಫ್ಯೂಯಲ್ ಟ್ಯಾಂಕ್, ಹಿಂಭಾಗದ ಸೆಟ್ ಫುಟ್‌ಪೆಗ್‌ಗಳು ಮತ್ತು ಹೊಸ 4.3-ಇಂಚಿನ ಬಣ್ಣದ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಡಿಸ್‌ಪ್ಲೇಯನ್ನು ಹೊಂದಿದೆ.

ಇನ್ನು ಬ್ರಾಂಡ್‌ನ ಇತ್ತೀಚಿನ ಕನೆಕ್ಟಿವಿಟಿ ತಂತ್ರಜ್ಞಾನವನ್ನು ಹೊಂದಿದೆ. ಈ ಬೈಕಿನಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಬರುತ್ತದೆ. ಈ ಬೈಕಿನಲ್ಲಿ ಕವಾಸಕಿಯ ರಿಡಿಯಾಲಜಿ ಆಪ್ ಬಳಸಿ ತಮ್ಮ ಫೋನ್‌ಗಳನ್ನು ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ.

ಈ 2022ರ ಕವಾಸಕಿ ಝಡ್650 ಬೈಕಿನಲ್ಲಿ 649 ಸಿಸಿ ಪ್ಯಾರಲಲ್-ಟ್ವಿನ್-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 67 ಬಿಹೆಚ್‍ಪಿ ಪವರ್ ಮತ್ತು 64 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದರೊಂದಿಗೆ ಎಲೆಕ್ಟ್ರಾನಿಕ್ ರೈಡರ್ ಏಡ್‌ಗಳನ್ನು ಹೊಂದಿದೆ.

ಇನ್ನು ಈ ಹೊಸ ಕವಾಸಕಿ ಝಡ್650 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಮತ್ತು 130 ಎಂಎಂ ಟ್ರಾವೆಲ್ ನೊಂದಿಗೆ ಪ್ರಿ-ಲೋಡ್ ಹೊಂದಾಣಿಕೆ ಮಾಡಬಹುದಾದ 125 ಎಂಎಂ ಟ್ರಾವೆಲ್ ಮತ್ತು ಹಿಂಭಾಗ ಮೊನೊಶಾಕ್ ಸೆಟಪ್ ಅನ್ನು ಹೊಂದಿದೆ.

ಈ ಮಿಡ್ ವೈಟ್ ಸ್ಟ್ರೀಟ್-ನೇಕೆಡ್ ಬೈಕಿನಲ್ಲಿ ಸುರಕ್ಷತೆಗಾಗಿ ಮುಂಭಾಗದಲ್ಲಿ ಡ್ಯುಯಲ್-ಪಿಸ್ಟನ್ ಕ್ಯಾಲಿಪರ್‌ನೊಂದಿಗೆ 300 ಎಂಎಂ ಡ್ಯುಯಲ್ ಸೆಮಿ-ಫ್ಲೋಂಟಿಗ್ ಡಿಸ್ಕ್‌ಗಳು ಮತ್ತು ಹಿಂಭಾಗದಲ್ಲಿ ಸಿಂಗಲ್-ಪಿಸ್ಟನ್ ಕ್ಯಾಲಿಪರ್‌ನೊಂದಿಗೆ 220 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ, ಇದರೊಂದಿಗೆ ಡ್ಯುಯಲ್ ಎಬಿಎಸ್ ಅನ್ನು ಕೂಡ ನೀಡಲಾಗಿದೆ,

ಕವಾಸಕಿ ತನ್ನ 2022ರ ನಿಂಜಾ 650 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿದೆ. ಈ ಹೊಸ ಕವಾಸಕಿ ನಿಂಜಾ 650 ಮಿಡ್ ವೈಟ್ ಸ್ಪೋರ್ಟ್ಸ್ ಬೈಕ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.6.61 ಲಕ್ಷಗಳಾಗಿದೆ. ಈ ಹೊಸ ಕವಾಸಕಿ ನಿಂಜಾ 650 ಬೈಕ್ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಈ ಮಿಡ್ ವೈಟ್ ಸ್ಪೋರ್ಟ್ಸ್ ಬೈಕ್ ಲೈಮ್ ಗ್ರೀನ್ ಮತ್ತು ರೊಬೊಟಿಕ್ ವೈಟ್ ಎಂಬ ಎರಡು ಬಣ್ಣಗಳ ಆಯ್ಜೆಯಲ್ಲಿ ಲಭ್ಯವಿದೆ.

ಈ ಬೈಕಿನ ಮುಂಭಾಗದ ಫೆಂಡರ್ ಮತ್ತು ಹಿಂಭಾಗದ ಟ್ರಿಮ್ ಅನ್ನು ಬಿಳಿ ಬಣ್ಣದಲ್ಲಿದೆ. ಈ ಬೈಕಿನ ಫ್ಯೂಯಲ್ ಟ್ಯಾಂಕ್, ಫೇರಿಂಗ್ ಮತ್ತು ಹೆಡ್‌ಲ್ಯಾಂಪ್ ಕೌಲ್ ಅನ್ನು ಮುಖ್ಯವಾಗಿ ಬ್ಲ್ಯಾಕ್ ಮತ್ತು ಗ್ರೀನ್ ಅಸ್ಸೆಂಟ್ ಗಳನ್ನು ಹೊಂದಿವೆ. ಇನ್ನು ವ್ಹೀಲ್ ಗಳು ಗ್ರೀನ್ ಪಿನ್ ಸ್ಟ್ರಿಪಿಂಗ್ ಅನ್ನು ಸಹ ಒಳಗೊಂಡಿರುತ್ತವೆ.ಈ ಹೊಸ ನಿಂಝಾ 650 ಬೈಕಿನಲ್ಲಿ 649 ಸಿಸಿಯ ಲಿಕ್ವಿಡ್ ಕೂಲ್ಡ್ ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಈ ಎಂಜಿನ್ 8,000 ಆರ್‍ಪಿಎಂನಲ್ಲಿ 68 ಬಿಹೆಚ್‍ಪಿ ಪವರ್ ಹಾಗೂ 6,700 ಆರ್‍ಪಿಎಂನಲ್ಲಿ 64 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6 ಸ್ಪೀಡಿನ ಗೇರ್‍ಬಾಕ್ಸ್ ಅಳವಡಿಸಲಾಗಿದೆ. ಇನ್ನು ಹೊಸ ಸ್ಪೋರ್ಟ್ಸ್ ಬೈಕಿನ ಫೀಚರ್ಸ್, ಇದರಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು, ಅಂಡರ್-ಬೆಲ್ಲಿ ಎಕ್ಸಾಸ್ಟ್, ಸ್ಪ್ಲಿಟ್-ಸೀಟ್‌ಗಳು, ಕ್ಲಿಪ್-ಆನ್ ಹ್ಯಾಂಡಲ್‌ಬಾರ್ಸ್, ವಿಂಡ್‌ಸ್ಕ್ರೀನ್, 15-ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಹೊಂದಿದೆ.

ಇನ್ನು ಕವಾಸಕಿ ಕಂಪನಿಯು ತನ್ನ ಆಫ್-ರೋಡ್ ಬೈಕ್‌ಗಳ ಮೇಲೆ ಭರ್ಜರಿ ಆಫರ್ ಅನ್ನು ಘೋಷಿಸಿದೆ. ಕವಾಸಕಿ ಕಂಪನಿಯು ಈ ಆಗಸ್ಟ್ ತಿಂಗಳಲ್ಲಿ ತನ್ನ ಆಫ್-ರೋಡ್ ಬೈಕ್‌ಗಳ ಮೇಲೆ ಒಟ್ಟು ರೂ.50,000 ಗಳವರೆಗೆ ಆಫರ್ ಅನ್ನು ಘೋಷಿಸಿದೆ. ಕವಾಸಕಿ ಕಂಪನಿಯು ತನ್ನ ಕೆಎಲ್‌ಎಕ್ಸ್110, ಕೆಎಲ್‌ಎಕ್ಸ್140 ಮತ್ತು ಕೆಎಕ್ಸ್100 ಆಫ್-ರೋಡ್ ಬೈಕ್‌ಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಲಾಗಿದೆ.

2022ರ ಕವಾಸಕಿ ಝಡ್650 ಮಾದರಿಯು ಬಾರತೀಯ ಮಾರುಕಟ್ಟೆಯಲ್ಲಿ ಟ್ರಯಂಫ್ ಟ್ರೈಡೆಂಟ್ 660, ಹೋಂಡಾ ಸಿಬಿ 650ಆರ್ ಮತ್ತು ಸಿಎಫ್ ಮೊಟೊ 650 ಎನ್ಕೆ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ. ಈ ಹೊಸ ಕವಾಸಕಿ ಝಡ್650 ಬೈಕ್ ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನಗಳನ್ನು ಒಳಗೊಂಡಿದೆ.


Click it and Unblock the Notifications








