ಹೊಸ Kawasaki Z650RS ನಿಯೋ-ರೆಟ್ರೊ ಬೈಕ್ ವಿತರಣೆ ಆರಂಭ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ ತನ್ನ ಝಡ್650ಆರ್‌ಎಸ್ ರೆಟ್ರೊ ಶೈಲಿಯ ಬೈಕ್ ಅನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಳಿಸಿತು. ಈ ಹೊಸ ಕವಾಸಕಿ ಝಡ್650ಆರ್‌ಎಸ್ ನಿಯೋ-ರೆಟ್ರೊ ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.6.65 ಲಕ್ಷಗಳಾಗಿದೆ.

ಹೊಸ Kawasaki Z650RS ನಿಯೋ-ರೆಟ್ರೊ ಬೈಕ್ ವಿತರಣೆ ಆರಂಭ

ರೆಟ್ರೊ ಶೈಲಿಯ ಝಡ್650ಆರ್‌ಎಸ್ ಬೈಕ್ ಬಿಡುಗಡೆಯೊಂದಿಗೆ ಕವಾಸಕಿ ಇಂಡಿಯಾ ತನ್ನ ಪೋರ್ಟ್‌ಫೋಲಿಯೊವನ್ನು ನವೀಕರಿಸಿದೆ. ಈ ಹೊಸ ಕವಾಸಕಿ ಝಡ್650ಆರ್‌ಎಸ್ ರೆಟ್ರೊ-ಥೀಮ್ ಬೈಕಿನ ವಿತರಣೆಯನ್ನು ಭಾರತದಲ್ಲಿ ಪ್ರಾರಂಭಿಸಿದೆ. ಈ ಹೊಸ ಕವಾಸಕಿ ಝಡ್650ಆರ್‌ಎಸ್ ಬೈಕ್ ಇದರ ಹಿರಿಯ ಸಹೋದರ ಮಾದರಿ ಝಡ್900ಆರ್‌ಎಸ್ ಮಾದರಿಯಿಂದ ವಿನ್ಯಾಸ ಸ್ಫೂರ್ತಿ ಪಡೆದಿದೆ ಮತ್ತು ಇದು ಸೊಗಸಾದ ರೆಟ್ರೊ ವಿನ್ಯಾಸವನ್ನು ಹೊಂದಿದೆ.

ಹೊಸ Kawasaki Z650RS ನಿಯೋ-ರೆಟ್ರೊ ಬೈಕ್ ವಿತರಣೆ ಆರಂಭ

ಈ ಹೊಸ ಕವಾಸಕಿ ಝಡ್650ಆರ್‌ಎಸ್ ಬೈಕ್ ಕ್ರೋಮ್ ಬೆಜೆಲ್‌ಗಳೊಂದಿಗೆ ರೌಂಡ್-ಆಕಾರದ ಎಲ್‌ಇಡಿ ಹೆಡ್‌ಲೈಟ್ ಯುನಿಟ್ ಅನ್ನು ಹೊಂದಿದೆ. ಹೊಸ ಕವಾಸಕಿ ಝಡ್650ಆರ್‌ಎಸ್ ಬೈಕ್ ಕ್ರೋಮ್ ಬೆಜೆಲ್‌ಗಳೊಂದಿಗೆ ರೌಂಡ್-ಆಕಾರದ ಎಲ್‌ಇಡಿ ಹೆಡ್‌ಲೈಟ್ ಯುನಿಟ್, ಎಲ್‌ಇಡಿ ಟೈಲ್‌ಲೈಟ್ ಮತ್ತು ಎಲ್‌ಇಡಿ ಟರ್ನ್ ಇಂಡಿಕೇಟರ್‌ಗಳನ್ನು ಒಳಗೊಂಡಿವೆ

ಹೊಸ Kawasaki Z650RS ನಿಯೋ-ರೆಟ್ರೊ ಬೈಕ್ ವಿತರಣೆ ಆರಂಭ

ಇದರೊಂದಿಗೆ ಈ ರೆಟ್ರೊ-ಶೈಲಿಯ ಬೈಕಿನ ಇತರ ಮುಖ್ಯಾಂಶಗಳು ವೃತ್ತಾಕಾರದ ಹಿಂಬದಿಯ ಮೀರರ್ಸ್, ಸ್ಪೋಕ್ಡ್ ವ್ಹೀಲ್ ಗಳು, ಚದರ-ಆಕಾರದ ಇಂಧನ ಟ್ಯಾಂಕ್, ಸಿಂಗಲ್-ಪೀಸ್ ಸೀಟ್, ಅಂಡರ್ಬೆಲ್ಲಿ ಎಕ್ಸಾಸ್ಟ್ ಸಿಸ್ಟಮ್ ಮತ್ತು ಡ್ಯುಯಲ್-ಪಾಡ್ ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್.ಅನ್ನು ಹೊಂದಿದೆ.

ಹೊಸ Kawasaki Z650RS ನಿಯೋ-ರೆಟ್ರೊ ಬೈಕ್ ವಿತರಣೆ ಆರಂಭ

ಈ ಹೊಸ ಕವಾಸಕಿ ಝಡ್650ಆರ್‌ಎಸ್ ಬೈಕ್ ಕ್ಯಾಂಡಿ ಎಮರಾಲ್ಡ್ ಗ್ರೀನ್ ಮತ್ತು ಮೆಟಾಲಿಕ್ ಮೂಂಡಸ್ಟ್ ಗ್ರೇ ಎಂಬ ಎರಡು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದೆ. ಆದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕವಾಸಕಿ ಝಡ್650ಆರ್‌ಎಸ್ ಬೈಕ್ ಮೂರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ.

ಹೊಸ Kawasaki Z650RS ನಿಯೋ-ರೆಟ್ರೊ ಬೈಕ್ ವಿತರಣೆ ಆರಂಭ

ಈ ಹೊಸ ಕವಾಸಕಿ ಝಡ್650ಆರ್‌ಎಸ್ ಬೈಕ್ ಇತರ ಮುಖ್ಯಾಂಶಗಳು ಡ್ಯುಯಲ್-ಚಾನೆಲ್ ಎಬಿಎಸ್ ಸಿಸ್ಟಂ, ಜೊತೆಗೆ ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್, ಲಂಬವಾದ ಹ್ಯಾಂಡಲ್‌ಬಾರ್ ಪೊಸಿಶನಿಂಗ್, ಸ್ವಲ್ಪ ಹಿಂಭಾಗದಲ್ಲಿ ಸೆಟ್ ಫುಟ್‌ಪೆಗ್‌ಗಳು ಮತ್ತು ಇತ್ಯಾದಿ ಅಂಶಗಳನ್ನು ಒಳಗೊಂಡಿದೆ.

ಹೊಸ Kawasaki Z650RS ನಿಯೋ-ರೆಟ್ರೊ ಬೈಕ್ ವಿತರಣೆ ಆರಂಭ

ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಈ ಹೊಸ ಕವಾಸಕಿ ಝಡ್650ಆರ್‌ಎಸ್ ಬೈಕಿನಲ್ಲಿ ಅದೇ 649 ಸಿಸಿ ಪ್ಯಾರಲಲ್ ಟ್ವಿನ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 6,700 ಆರ್‌ಪಿಎಮ್‌ನಲ್ಲಿ 67.3 ಬಿಹೆಚ್‌ಪಿ ಮತ್ತು 8,000 ಆರ್‌ಪಿಎಂನಲ್ಲಿ 64 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ Kawasaki Z650RS ನಿಯೋ-ರೆಟ್ರೊ ಬೈಕ್ ವಿತರಣೆ ಆರಂಭ

ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇನ್ನು ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕ್ ಗಳಿಗೆ ಹೋಲಿಸಿದರೆ ಈ ಹೊಸ ಬೈಕ್ 20 ಬಿಹೆಚ್‍ಪಿ ಪವರ್ ಮತ್ತು 12 ಎನ್ಎಂ ಟಾರ್ಕ್ ಕಡಿಮೆ ಉತ್ಪಾದಿಸಲಾಗುತ್ತದೆ.

ಹೊಸ Kawasaki Z650RS ನಿಯೋ-ರೆಟ್ರೊ ಬೈಕ್ ವಿತರಣೆ ಆರಂಭ

ಹೊಸ ಕವಾಸಕಿ ಝಡ್650ಆರ್‌ಎಸ್ ಬೈಕ್ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಅಂತರರಾಷ್ಟ್ರೀಯ ಮಾದರಿಯಂತೆ ಇದರ ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಬ್ಯಾಕ್‌ಲಿಂಕ್ ಮೊನೊಶಾಕ್ ಸೆಟಪ್ ಅನ್ನು ಒಳಗೊಂಡಿದೆ,

ಹೊಸ Kawasaki Z650RS ನಿಯೋ-ರೆಟ್ರೊ ಬೈಕ್ ವಿತರಣೆ ಆರಂಭ

ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಡ್ಯುಯಲ್-ಪಿಸ್ಟನ್ ಫ್ರಂಟ್ ಕ್ಯಾಲಿಪರ್‌ಗಳೊಂದಿಗೆ 300 ಎಂಎಂ ಟ್ವಿನ್ ರೋಟರ್‌ಗಳು ಮತ್ತು ಸಿಂಗಲ್-ಪಿಸ್ಟನ್ ರಿಯರ್ ಕಾಲಿಪರ್ ಹೊಂದಿರುವ 220 ಎಂಎಂ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ.

ಹೊಸ Kawasaki Z650RS ನಿಯೋ-ರೆಟ್ರೊ ಬೈಕ್ ವಿತರಣೆ ಆರಂಭ

ಇದರೊಂದಿಗೆ ಕವಾಸಕಿ ತನ್ನ ನಿಂಜಾ 1000ಎಸ್‌ಎಕ್ಸ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಕವಾಸಕಿ ನಿಂಜಾ 1000ಎಸ್‌ಎಕ್ಸ್ ಬೈಕಿನ ಬೆಲೆಯು ಎಕ್ಸ್ ಶೋ ರೂಂ ಪ್ರಕಾರ ರೂ.11.40 ಲಕ್ಷಗಳಾಗಿದೆ. ಈ ಹೊಸ ಕವಾಸಕಿ ನಿಂಜಾ 1000ಎಸ್‌ಎಕ್ಸ್ ಬೈಕ್ ಎಮರಾಲ್ಡ್ ಬ್ಲೇಜ್ಡ್ ಗ್ರೀನ್ ಮತ್ತು ಮೆಟಾಲಿಕ್ ಮ್ಯಾಟ್ ಗ್ರಾಫೆನೆಸ್ಟೀಲ್ ಗ್ರೇ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಕವಾಸಕಿ ಕಂಪನಿಯು ತನ್ನ ಹೊಸ ನಿಂಜಾ 1000ಎಸ್‌ಎಕ್ಸ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಈ ಹೊಸ ಬೈಕ್ ಅನ್ನು ಖರೀದಿಸಲು ಬಯಸುವ ಗ್ರಾಹಕರು ಟೋಕನ್ ಮೊತ್ತ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು.

ಹೊಸ Kawasaki Z650RS ನಿಯೋ-ರೆಟ್ರೊ ಬೈಕ್ ವಿತರಣೆ ಆರಂಭ

ಇದರ ವಿತರಣೆಯು ಮುಂದಿನ ತಿಂಗಳಿನಿಂದ ಪ್ರಾರಂಭವಾಗಲಿದೆ. ಹೊಸ ಕವಾಸಕಿ ನಿಂಜಾ 1000ಎಸ್‌ಎಕ್ಸ್ ಬೈಕ್ ಬದಲಾವಣೆಗಳು ಹೊಸ ಬಣ್ಣದ ಆಯ್ಕೆಗಳ ರೂಪದಲ್ಲಿ ಕಾಸ್ಮೆಟಿಕ್ ನವೀಕರಣಗಳಿಗೆ ಸೀಮಿತವಾಗಿವೆ. ಯಾಂತ್ರಿಕ ವಿಶೇಷಣಗಳು ಮತ್ತು ವೈಶಿಷ್ಟ್ಯಗಳ ಪಟ್ಟಿಯು ಬದಲಾಗದೆ ಉಳಿದಿದೆ. ಹೀಗಾಗಿ, 2022ರ ನಿಂಜಾ 1000ಎಸ್‌ಎಕ್ಸ್ ಎಲ್ಇಡಿ ಲೈಟಿಂಗ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ 4.3 TFT ಬಣ್ಣದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಮುಂದುವರೆಸಿದೆ.

ಹೊಸ Kawasaki Z650RS ನಿಯೋ-ರೆಟ್ರೊ ಬೈಕ್ ವಿತರಣೆ ಆರಂಭ

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಿಡ್ ಸೈಜ್ ಬೈಕ್ ಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಕವಾಸಕಿ ಕಂಪನಿಯು ಈ ಝಡ್650ಆರ್‌ಎಸ್ ಬೈಕ್ ಅನ್ನು ಕೊನೆಗೂ ಬಿಡುಗಡೆಗೊಳಿಸಿದ್ದಾರೆ. ಈ ಹೊಸ ಕವಾಸಕಿ ಝಡ್650ಆರ್‌ಎಸ್ ಬೈಕ್ ಮಿಡ್ ಸೈಜ್ ಐಷಾರಾಮಿ ಬೈಕ್ ಪ್ರಿಯರನ್ನು ಸೆಳಯಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ನಿಯೋ-ರೆಟ್ರೊ ಬೈಕ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ CB650R ಮತ್ತು ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ INT 650 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Monday, December 20, 2021, 10:28 [IST]
English summary
Kawasaki starts deliveries of new z650rs in india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+