Just In
- 26 min ago
ಮಿನಿ ಎಂಪಿವಿ ಕಾರು ಮಾರಾಟದಲ್ಲಿ ರೆನಾಲ್ಟ್ ಟ್ರೈಬರ್ ಹೊಸ ಮೈಲಿಗಲ್ಲು
- 2 hrs ago
ಎಕ್ಸ್ಯುವಿ700 ಬಿಡುಗಡೆಯ ನಂತರ ತಾತ್ಕಾಲಿಕವಾಗಿ ಮಾರಾಟದಿಂದ ಸ್ಥಗಿತವಾಗಲಿದೆ ಎಕ್ಸ್ಯುವಿ500
- 2 hrs ago
ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ರಾಯಲ್ ಎನ್ಫೀಲ್ಡ್ ಹಂಟರ್ ಬೈಕ್
- 3 hrs ago
ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮೇಲೆ ಒಟ್ಟು ರೂ.12 ಸಾವಿರ ಕೋಟಿ ಹೂಡಿಕೆ ಮಾಡಿದ ಮಹೀಂದ್ರಾ
Don't Miss!
- Sports
ಐಪಿಎಲ್ : ಈ ದಾಖಲೆ ಮಾಡಿದ್ದು ಕೊಹ್ಲಿ ಬಿಟ್ರೆ ಸಂಜು ಸ್ಯಾಮ್ಸನ್
- Lifestyle
ಅಧ್ಯಯನ: ಸ್ಥೂಲಕಾಯದವರ ಸ್ಮರಣಾ ಶಕ್ತಿ ಕಾಪಾಡುತ್ತೆ ಬೆಣ್ಣೆಹಣ್ಣು
- Finance
ಏಪ್ರಿಲ್ 13ರ ಬಿಟ್ಕಾಯಿನ್ ರೇಟ್ ಎಷ್ಟಿದೆ?
- News
ಹೆಲಿ ಟೂರಿಸಂ; 'ಸೇವ್ ಮೈಸೂರು' ಅಭಿಯಾನಕ್ಕೆ ಭಾರೀ ಬೆಂಬಲ
- Movies
ಸಾಮಾಜಿಕ ಜಾಲತಾಣಕ್ಕೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟ ಕನಸುಗಾರ
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಎಂ 2 ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲಿದೆ ಲೆನೊವೊ
ವಿಶ್ವದಾದ್ಯಂತ ಜನರು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಆದ್ಯತೆ ನೀಡುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ವಾಹನಗಳ ಬದಲು ಇನ್ನು ಮುಂದೆ ಜಗತ್ತಿನಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಮಾತ್ರ ಬಳಸುವಂತೆ ಉತ್ತೇಜನ ನೀಡಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನ ಉತ್ಪಾದನೆಯತ್ತ ಗಮನ ಹರಿಸುತ್ತಿದ್ದಾರೆ. ಎಲೆಕ್ಟ್ರಿಕ್ ವಾಹನಗಳು ಮಾತ್ರವಲ್ಲದೆ ಇನ್ನೂ ಹಲವು ಕಂಪನಿಗಳು ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ.

ಇದಕ್ಕೆ ಉತ್ತಮ ಉದಾಹರಣೆ ಓಲಾ ಕಂಪನಿ. ಜನಪ್ರಿಯ ಕ್ಯಾಬ್ ಕಂಪನಿಯಾದ ಓಲಾ ವಿಶ್ವದ ಹಲವು ದೇಶಗಳಲ್ಲಿ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಓಲಾ ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿಯೂ ಬಿಡುಗಡೆಗೊಳಿಸಲಿದೆ ಎಂಬುದು ಗಮನಾರ್ಹ. ಓಲಾ ಕಂಪನಿಯು ಕ್ಯಾಬ್ ಸೇವೆ ನೀಡುವುದರಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ.

ಲೆನೊವೊ ಕಂಪನಿಯು ಸಹ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕ್ಷೇತ್ರಕ್ಕೆ ಕಾಲಿಟ್ಟಿದೆ. ಕಂಪನಿಯು ಇತ್ತೀಚೆಗೆ ಸ್ಕೂಟರ್ ಮಾದರಿಯ ದ್ವಿಚಕ್ರ ವಾಹನವನ್ನು ಪರಿಚಯಿಸಿದೆ. ಸೆಲ್ ಫೋನ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ಉತ್ಪಾದಿಸುವ ಲೆನೊವೊ ಕಂಪನಿಯು ಎಲೆಕ್ಟ್ರಾನಿಕ್ಸ್ ಉದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಲೆನೊವೊ ಕಂಪನಿಯು ಎಂ 2 ಹೆಸರಿನಲ್ಲಿ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮೂಲ ಮಾದರಿಯಲ್ಲಿ ಪರಿಚಯಿಸಲಾಗಿದೆ.

ಲೆನೊವೊ ಕಂಪನಿಯ ಈ ಹೊಸ ಸ್ಕೂಟರ್ 1,115 ಎಂಎಂ ಉದ್ದ, 515 ಎಂಎಂ ಅಗಲ, 1,115 ಎಂಎಂ ಎತ್ತರವಿದೆ. ಬಿಜಿ ಇರುವ ರಸ್ತೆಗಳಲ್ಲಿ ಸುಲಭವಾಗಿ ಚಲಿಸಲು ಸಾಧ್ಯವಾಗುವಂತೆ ಈ ಗಾತ್ರವನ್ನು ನೀಡಲಾಗಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಲೆನೊವೊ ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಡಿಸುವಂತಹ ಸೌಲಭ್ಯವನ್ನೂ ಸಹ ನೀಡಿದೆ. ಈ ಸ್ಕೂಟರ್ ಅನ್ನು ಬಳಸದಿದ್ದಾಗ ಸುಲಭವಾಗಿ ನಿರ್ವಹಿಸಬಹುದು. ಈ ಫೀಚರ್'ನಿಂದಾಗಿ ಕಾರುಗಳಂತಹ ವಾಹನಗಳಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸುಲಭವಾಗಿ ಸಾಗಿಸಬಹುದು. ಈ ಎಲೆಕ್ಟ್ರಿಕ್ ಸ್ಕೂಟರ್ 120 ಕೆ.ಜಿವರೆಗಿನ ತೂಕವನ್ನು ಹೊರಬಲ್ಲದು.

ಎಂ 2 ಸ್ಕೂಟರ್‌ನ ಹ್ಯಾಂಡಲ್ ಬಾರ್‌ನಲ್ಲಿ ಸಣ್ಣ ಸ್ಕ್ರ್ರೀನ್ ನೀಡಲಾಗಿದೆ. ಸವಾರನಿಗೆ ಅಗತ್ಯವಾದ ಮಾಹಿತಿಯನ್ನು ಒದಗಿಸಲು ಈ ಸ್ಕ್ರೀನ್ ನೀಡಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರಿನ ಚಾರ್ಜಿಂಗ್ ಪ್ರಮಾಣ, ಇನ್ನೂ ಎಷ್ಟು ಕಿ.ಮೀ ಪ್ರಯಾಣಿಸಬಹುದು, ಎಷ್ಟು ವೇಗವಾಗಿ ಪ್ರಯಾಣಿಸುತ್ತಿದ್ದೇವೆ ಎಂಬ ವಿವಿಧ ಮಾಹಿತಿಯನ್ನು ಈ ಸ್ಕ್ರೀನ್ ಒದಗಿಸುತ್ತದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ಎಲೆಕ್ಟ್ರಿಕ್ ಸ್ಕೂಟರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 25 ಕಿ.ಮೀಗಳಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ ಸುಮಾರು 30 ಕಿ.ಮೀಗಳವರೆಗೆ ಪ್ರಯಾಣಿಸಬಹುದು. ಲೆನೊವೊ ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರ್ಚ್ 27ರಂದು ಫಿಲಿಪೈನ್ಸ್‌ನಲ್ಲಿ ಬಿಡುಗಡೆಗೊಳಿಸಲಿದೆ.

ಎಂ 2 ಎಲೆಕ್ಟ್ರಿಕ್ ಸ್ಕೂಟರಿನ ಆರಂಭಿಕ ಬೆಲೆ ರೂ.19,995ಗಳಾಗಿದೆ. ಕಂಪನಿಯು ಮಾರ್ಚ್ 18ರಿಂದ ಫಿಲಿಪೈನ್ಸ್‌ನಲ್ಲಿ ಈ ಸ್ಕೂಟರಿನ ಬುಕ್ಕಿಂಗ್'ಗಳನ್ನು ಆರಂಭಿಸಿದೆ. ಲೆನೊವೊ ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.