ಕೇವಲ 15 ನಿಮಿಷಗಳಲ್ಲಿ ಶೇ.100ರಷ್ಟು ಚಾರ್ಜ್ ಮಾಡಬಹುದಾದ ಲಾಗ್9 ಫಾಸ್ಟ್ ಚಾರ್ಜಿಂಗ್ ಅನಾವರಣ

ಹೆಚ್ಚುತ್ತಿರುವ ಇವಿ ವಾಹನಗಳಿಗೆ ಪೂರಕವಾಗಿ ಹಲವಾರು ಸ್ಟಾರ್ಟ್ಅಪ್ ಕಂಪನಿಗಳು ಸುಧಾರಿತ ಇವಿ ಚಾರ್ಜಿಂಗ್ ಸೌಲಭ್ಯವನ್ನು ಹೆಚ್ಚಿಸುವತ್ತ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಹೀರೋ ಎಲೆಕ್ಟ್ರಿಕ್ ಕಂಪನಿಯು ಸಹ ಸಹಭಾಗಿತ್ವ ಯೋಜನೆ ಅಡಿ ದ್ವಿಚಕ್ರ ವಾಹನಗಳಿಗಾಗಿ ಅತಿ ಕಡಿಮೆ ಅವಧಿಯಲ್ಲಿ ಚಾರ್ಜ್ ಮಾಡಬಹುದಾದ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯುವ ಯೋಜನೆಗೆ ಚಾಲನೆ ನೀಡಿದೆ.

ಕೇವಲ 15 ನಿಮಿಷಗಳಲ್ಲಿ ಶೇ.100ರಷ್ಟು ಚಾರ್ಜ್ ಮಾಡಬಹುದಾದ ಲಾಗ್9 ಫಾಸ್ಟ್ ಚಾರ್ಜಿಂಗ್ ಅನಾವರಣ

ಭಾರತದಲ್ಲಿ ಹೆಚ್ಚುತ್ತಿರುವ ಇವಿ ವಾಹನಗಳಿಗೆ ಪೂರಕವಾಗಿ ವಿವಿಧ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು ಇವಿ ವಾಹನಗಳ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣ ಪ್ರಕ್ರಿಯೆಯನ್ನು ಹೆಚ್ಚಿಸಿದ್ದು, ಚಾರ್ಜಿಂಗ್ ಕೇಂದ್ರಗಳ ಹೆಚ್ಚಳಕ್ಕೆ ಪ್ರಮುಖ ಕಂಪನಿಗಳು ವಿಶೇಷ ಆಸಕ್ತಿ ವಹಿಸಿವೆ. ಅದರಲ್ಲೂ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಸೌಲಭ್ಯಕ್ಕಾಗಿ ವಿವಿಧ ಕಂಪನಿಗಳು ಹೆಚ್ಚಿನ ಮಟ್ಟದ ಹೂಡಿಕೆ ಮಾಡುತ್ತಿದ್ದು, ಹೀರೋ ಎಲೆಕ್ಟ್ರಿಕ್ ಕಂಪನಿಯು ಸಹ ನಮ್ಮ ಬೆಂಗಳೂರಿನ ಲಾಗ್9 ಕಂಪನಿ ಜೊತೆಗೂಡಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಹೆಚ್ಚಿಸುವ ಯೋಜನೆ ರೂಪಿಸಿದೆ.

ಕೇವಲ 15 ನಿಮಿಷಗಳಲ್ಲಿ ಶೇ.100ರಷ್ಟು ಚಾರ್ಜ್ ಮಾಡಬಹುದಾದ ಲಾಗ್9 ಫಾಸ್ಟ್ ಚಾರ್ಜಿಂಗ್ ಅನಾವರಣ

ನಮ್ಮ ಬೆಂಗಳೂರಿನ ಸ್ಟಾರ್ಟ್‌ಅಪ್ ಕಂಪನಿಯಾಗಿರುವ ಲಾಗ್9 ಜೊತೆಗೂಡಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಕೇವಲ 15 ನಿಮಿಷಗಳಲ್ಲಿ ಸೊನ್ನೆಯಿಂದ ಶೇ.100 ರಷ್ಟು ಚಾರ್ಜ್ ಮಾಡಬಹುದಾದ ಇನ್ಸ್ಟಾ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆದಿದೆ.

ಕೇವಲ 15 ನಿಮಿಷಗಳಲ್ಲಿ ಶೇ.100ರಷ್ಟು ಚಾರ್ಜ್ ಮಾಡಬಹುದಾದ ಲಾಗ್9 ಫಾಸ್ಟ್ ಚಾರ್ಜಿಂಗ್ ಅನಾವರಣ

ವಾಣಿಜ್ಯ ಬಳಕೆಗಾಗಿ ಅತಿ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿರುವ ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಆಯ ಕಟ್ಟಿನ ಪ್ರದೇಶಗಳಲ್ಲಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಿರುವ ಲಾಗ್9 ಕಂಪನಿಯು ಇವಿ ವಾಹನಗಳ ಸೇವೆಗಳನ್ನ ಸುಗಮಗೊಳಿಸುವ ಜವಾಬ್ದಾರಿ ವಹಿಸಿಕೊಂಡಿದೆ.

ಕೇವಲ 15 ನಿಮಿಷಗಳಲ್ಲಿ ಶೇ.100ರಷ್ಟು ಚಾರ್ಜ್ ಮಾಡಬಹುದಾದ ಲಾಗ್9 ಫಾಸ್ಟ್ ಚಾರ್ಜಿಂಗ್ ಅನಾವರಣ

ಬ್ಯುಸಿನೆಸ್ ಟು ಬ್ಯುಸಿನೆಸ್ ಉದ್ದೇಶಗಳಿಗಾಗಿ ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಾಗಿ ಅಳವಡಿಸಿಕೊಳ್ಳಲಾಗುತ್ತಿದ್ದು, ಇವಿ ವಾಹನಗಳಿಗೆ ಚಾರ್ಜಿಂಗ್ ಸಮಸ್ಯೆ ಉಂಟಾಗಿ ಗ್ರಾಹಕರ ಸೇವೆಗಳಿಗೆ ತೊಂದರೆಯಾಗದಂತೆ ಅತಿ ಕಡಿಮೆ ಅವಧಿಯಲ್ಲಿ ಚಾರ್ಜಿಂಗ್ ಸೇವೆಗಳನ್ನು ಒದಗಿಸುವತ್ತ ಲಾಗ್9 ಕಾರ್ಯನಿರ್ವಹಿಸಲಿದೆ.

ಕೇವಲ 15 ನಿಮಿಷಗಳಲ್ಲಿ ಶೇ.100ರಷ್ಟು ಚಾರ್ಜ್ ಮಾಡಬಹುದಾದ ಲಾಗ್9 ಫಾಸ್ಟ್ ಚಾರ್ಜಿಂಗ್ ಅನಾವರಣ

ಜೊತೆಗೆ ಲಾಗ್9 ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಫಾಸ್ಟ್ ಚಾರ್ಜಿಂಗ್ ಸರ್ಪೊಟ್ ಮಾಡಬಲ್ಲ ಬ್ಯಾಟರಿ ಪ್ಯಾಕ್ ಸಿದ್ದಪಡಿಸಿದ್ದು, ಲಾಗ್9 ಬ್ಯಾಟರಿ ಪ್ಯಾಕ್‌ ಅನ್ನು ಹೀರೋ ಎಲೆಕ್ಟ್ರಿಕ್ ಕಂಪನಿಯು ತನ್ನ ಮುಂಬರುವ ಹೊಸ ಸ್ಕೂಟರ್ ಮಾದರಿಗಳಲ್ಲಿ ಜೋಡಣೆ ಮಾಡಲಿದೆ.

ಕೇವಲ 15 ನಿಮಿಷಗಳಲ್ಲಿ ಶೇ.100ರಷ್ಟು ಚಾರ್ಜ್ ಮಾಡಬಹುದಾದ ಲಾಗ್9 ಫಾಸ್ಟ್ ಚಾರ್ಜಿಂಗ್ ಅನಾವರಣ

ಸದ್ಯ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಹೆಚ್ಚುತ್ತಿರುವ ಹೊರತಾಗಿಯೂ ಚಾರ್ಜಿಂಗ್ ಸೌಲಭ್ಯಗಳ ಕೊರತೆಯು ಹೆಚ್ಚಿನ ಮಟ್ಟದ ಬೆಳವಣಿಗೆ ಸಾಧಿಸಲು ಹಿನ್ನಡೆ ಉಂಟುಮಾಡುತ್ತಿದ್ದು, ಲಭ್ಯವಿರುವ ಚಾರ್ಜಿಂಗ್ ನಿಲ್ದಾಣಗಳಲ್ಲಿ ಕನಿಷ್ಠ 3 ಗಂಟೆಗಳಿಂದ 5 ಗಂಟೆಗಳ ಚಾರ್ಜ್ ಮಾಡಬೇಕಾಗುತ್ತದೆ.

ಕೇವಲ 15 ನಿಮಿಷಗಳಲ್ಲಿ ಶೇ.100ರಷ್ಟು ಚಾರ್ಜ್ ಮಾಡಬಹುದಾದ ಲಾಗ್9 ಫಾಸ್ಟ್ ಚಾರ್ಜಿಂಗ್ ಅನಾವರಣ

ಇದೇ ಕಾರಣಕ್ಕೆ ಸಾಕಷ್ಟು ಗ್ರಾಹಕರು ಇವಿ ವಾಹನ ಖರೀದಿ ಆಸಕ್ತಿ ಹೊಂದಿದ್ದರೂ ಕೂಡಾ ಅನಿವಾರ್ಯವಾಗಿ ಸಾಂಪ್ರದಾಯಿಕ ವಾಹನಗಳತ್ತ ಮುಖಮಾಡುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಅತಿ ಕಡಿಮೆ ಅವಧಿಯಲ್ಲಿ ಚಾರ್ಜಿಂಗ್ ಒದಗಿಸುವ ಸೌಲಭ್ಯವನ್ನು ತೆರೆಯಲು ಮುಂದಾಗಿದೆ.

ಕೇವಲ 15 ನಿಮಿಷಗಳಲ್ಲಿ ಶೇ.100ರಷ್ಟು ಚಾರ್ಜ್ ಮಾಡಬಹುದಾದ ಲಾಗ್9 ಫಾಸ್ಟ್ ಚಾರ್ಜಿಂಗ್ ಅನಾವರಣ

ಹೀರೋ ಎಲೆಕ್ಟ್ರಿಕ್ ಕಂಪನಿಯು ಕೂಡಾ ಇದೇ ಉದ್ದೇಶದಿಂದ ತನ್ನ ಇವಿ ಸ್ಕೂಟರ್ ಮಾದರಿಗಳಿಗೆ ಸರಿಯಾದ ಸಮಯಕ್ಕೆ ಇವಿ ಚಾರ್ಜಿಂಗ್ ಸೌಲಭ್ಯ ಒದಗಿಸುವುದರ ಜೊತೆಗೆ ಅತಿ ಕಡಿಮೆ ಅವಧಿಯಲ್ಲಿ ಚಾರ್ಜಿಂಗ್ ಒದಗಿಸಲು ಮುಂದಾಗಿರುವುದು ಹೊಸ ಬದಲಾವಣೆ ಕಾರಣವಾಗಿದೆ.

ಕೇವಲ 15 ನಿಮಿಷಗಳಲ್ಲಿ ಶೇ.100ರಷ್ಟು ಚಾರ್ಜ್ ಮಾಡಬಹುದಾದ ಲಾಗ್9 ಫಾಸ್ಟ್ ಚಾರ್ಜಿಂಗ್ ಅನಾವರಣ

ಲಾಗ್9 ಕಂಪನಿಯು ಹೀರೋ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಒದಗಿಸಲು ಸಹಕಾರಿಯಾಗುವಂತೆ ಚಾರ್ಜಿಂಗ್ ನಿಲ್ದಾಣಗಳ ಮಾಹಿತಿಗಾಗಿ ಪ್ರತ್ಯೇಕ ಆ್ಯಪ್ ಅಭಿವೃದ್ದಿಪಡಿಸಿದೆ.

ಕೇವಲ 15 ನಿಮಿಷಗಳಲ್ಲಿ ಶೇ.100ರಷ್ಟು ಚಾರ್ಜ್ ಮಾಡಬಹುದಾದ ಲಾಗ್9 ಫಾಸ್ಟ್ ಚಾರ್ಜಿಂಗ್ ಅನಾವರಣ

ಆ್ಯಪ್ ಮೂಲಕ ಹತ್ತಿರದಲ್ಲಿರುವ ಚಾರ್ಜಿಂಗ್ ನಿಲ್ದಾಣಗಳ ಮಾಹಿತಿ ಮತ್ತು ಚಾರ್ಜಿಂಗ್ ನಿಲ್ದಾಣದಲ್ಲಿ ಚಾರ್ಜಿಂಗ್‌ಗಾಗಿ ಸರತಿ ಸಾಲಿನಲ್ಲಿರುವ ವಾಹನಗಳ ಸಂಖ್ಯೆ ಮತ್ತು ಯಾವ ನಿಲ್ದಾಣದಲ್ಲಿ ಕಡಿಮೆ ವಾಹನಗಳಿವೆ ಎನ್ನುವುದರ ಜೊತೆ ಚಾರ್ಜಿಂಗ್‌ಗಾಗಿ ತೆಗೆದುಕೊಳ್ಳುವ ನಿಖರವಾದ ಸಮಯದ ಮಾಹಿತಿಯನ್ನು ಬಳಕೆದಾರರಿಗೆ ನೀಡಲಿದೆ.

ಕೇವಲ 15 ನಿಮಿಷಗಳಲ್ಲಿ ಶೇ.100ರಷ್ಟು ಚಾರ್ಜ್ ಮಾಡಬಹುದಾದ ಲಾಗ್9 ಫಾಸ್ಟ್ ಚಾರ್ಜಿಂಗ್ ಅನಾವರಣ

ಇದರ ಜೊತೆಗೆ ಹೀರೋ ಎಲೆಕ್ಟ್ರಿಕ್ ಕಂಪನಿಯು ಬೆಂಗಳೂರು ಮೂಲದ ಮತ್ತೊಂದು ಕಂಪನಿ ಚಾರ್ಜರ್ ಜೊತೆಗೂಡಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೆಚ್ಚಿಸಲು ಬೃಹತ್ ಯೋಜನೆಯೊಂದನ್ನು ರೂಪಿಸಿದ್ದು, ಹೊಸ ಯೋಜನೆಯಡಿ ಚಾರ್ಜರ್ ಮತ್ತು ಹೀರೋ ಎಲೆಕ್ಟ್ರಿಕ್ ಕಂಪನಿಗಳು ಬರೋಬ್ಬರಿ 1 ಲಕ್ಷ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಿವೆ.

ಕೇವಲ 15 ನಿಮಿಷಗಳಲ್ಲಿ ಶೇ.100ರಷ್ಟು ಚಾರ್ಜ್ ಮಾಡಬಹುದಾದ ಲಾಗ್9 ಫಾಸ್ಟ್ ಚಾರ್ಜಿಂಗ್ ಅನಾವರಣ

ಹೀರೋ ಎಲೆಕ್ಟ್ರಿಕ್ ಮತ್ತು ಚಾರ್ಜರ್ ಕಂಪನಿಗಳು ಮುಂದಿನ ಮೂರು ವರ್ಷದಲ್ಲಿ ಒಟ್ಟು 1 ಲಕ್ಷ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಿದ್ದು, ಮೊದಲ ವರ್ಷದಲ್ಲಿ ದೇಶದ ಪ್ರಮುಖ 30 ನಗರಗಳಲ್ಲಿ 10 ಸಾವಿರ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯುವ ಯೋಜನೆಯಲ್ಲಿದೆ.

ಕೇವಲ 15 ನಿಮಿಷಗಳಲ್ಲಿ ಶೇ.100ರಷ್ಟು ಚಾರ್ಜ್ ಮಾಡಬಹುದಾದ ಲಾಗ್9 ಫಾಸ್ಟ್ ಚಾರ್ಜಿಂಗ್ ಅನಾವರಣ

ಚಾರ್ಜರ್ ಕಂಪನಿಯು ಈಗಾಗಲೇ ದೇಶಾದ್ಯಂತ 20 ಪ್ರಮುಖ ನಗರಗಳಲ್ಲಿ ಆರಂಭಿಕ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣ ಮಾಡಿದ್ದು, ಇವಿ ವಾಹನ ಮಾಲೀಕರಿಗೆ ಚಾರ್ಜಿಂಗ್ ನಿಲ್ದಾಣಗಳನ್ನು ಸುಲಭವಾಗಿ ಪತ್ತೆ ಹಚ್ಚಲು ನೆರವಾಗುವಂತೆ ಪ್ರತ್ಯೇಕ ಆ್ಯಪ್ ಕೂಡಾ ಅಭಿವೃದ್ದಿಪಡಿಸಿದೆ.

ಕೇವಲ 15 ನಿಮಿಷಗಳಲ್ಲಿ ಶೇ.100ರಷ್ಟು ಚಾರ್ಜ್ ಮಾಡಬಹುದಾದ ಲಾಗ್9 ಫಾಸ್ಟ್ ಚಾರ್ಜಿಂಗ್ ಅನಾವರಣ

ಆ್ಯಪ್ ಮೂಲಕ ಹತ್ತಿರದಲ್ಲಿರುವ ಚಾರ್ಜಿಂಗ್ ನಿಲ್ದಾಣಗಳ ಮಾಹಿತಿ ಮತ್ತು ಚಾರ್ಜಿಂಗ್ ನಿಲ್ದಾಣದಲ್ಲಿ ಚಾರ್ಜಿಂಗ್‌ಗಾಗಿ ಸರತಿ ಸಾಲಿನಲ್ಲಿರುವ ವಾಹನಗಳ ಸಂಖ್ಯೆ ಮತ್ತು ಯಾವ ನಿಲ್ದಾಣದಲ್ಲಿ ಕಡಿಮೆ ವಾಹನಗಳಿವೆ ಎನ್ನುವುದರ ಜೊತೆ ಚಾರ್ಜಿಂಗ್‌ಗಾಗಿ ತೆಗೆದುಕೊಳ್ಳುವ ನಿಖರವಾದ ಸಮಯದ ಮಾಹಿತಿಯನ್ನು ಬಳಕೆದಾರರಿಗೆ ನೀಡಲಿದೆ.

ಕೇವಲ 15 ನಿಮಿಷಗಳಲ್ಲಿ ಶೇ.100ರಷ್ಟು ಚಾರ್ಜ್ ಮಾಡಬಹುದಾದ ಲಾಗ್9 ಫಾಸ್ಟ್ ಚಾರ್ಜಿಂಗ್ ಅನಾವರಣ

ಹೀರೋ ಎಲೆಕ್ಟ್ರಿಕ್ ಮತ್ತು ಚಾರ್ಜರ್ ಕಂಪನಿಗಳು ಸಾರ್ವಜನಿಕ ಬಳಕೆಯ ಇವಿ ಚಾರ್ಜಿಂಗ್ ನಿಲ್ದಾಣಗಳ ಜೊತೆಗೆ ಶಾಂಪಿಂಗ್ ಕಾಂಪ್ಲೆಕ್ಸ್, ಅಂಪಾರ್ಟ್‌ಮೆಂಟ್‌ಗಳು ಮತ್ತು ಮಾಲ್‌ಗಳಲ್ಲೂ ನಿರ್ದಿಷ್ಟ ವಾಹನ ಮಾಲೀಕರಿಗಾಗಿ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಿದೆ.

Article Published On: Friday, December 24, 2021, 20:51 [IST]
English summary
Log9 unveiled instacharging station full charge in just 15 minutes details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+