ಭಾರತದಲ್ಲಿ ಹೊಸ 2022ರ Kawasaki Versys 1000 ಬೈಕ್ ಬಿಡುಗಡೆ
ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಕವಾಸಕಿ ಇಂಡಿಯಾ ತನ್ನ 2022ರ ವರ್ಸಿಸ್ 1000 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿದೆ. ಈ ಹೊಸ ಕವಾಸಕಿ ವರ್ಸಿಸ್ 1000(Kawasaki Versys 1000) ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.11.55 ಲಕ್ಷಗಳಾಗಿದೆ.

ಹೊಸ ಕವಾಸಕಿ ವರ್ಸಿಸ್ 1000 ಬೈಕ್ ಲೀಟರ್-ಕ್ಲಾಸ್ ಸ್ಪೋರ್ಟ್ಸ್ ಟೂರರ್ ಒಂದೇ ರೂಪಾಂತರದಲ್ಲಿ ಲಭ್ಯವಿದೆ. 2022ರ ಕವಾಸಕಿ ವರ್ಸಿಸ್ 1000 ಬೈಕ್ ಕ್ಯಾಂಡಿ ಲೈಮ್ ಗ್ರೀನ್ ಬಣ್ಣದಲ್ಲಿ ಲಭ್ಯವಿರಲಿದೆ, ಈ ಹೊಸ ಬೈಕಿನ ವಿತರಣೆಯನ್ನು ಮುಂದಿನ ತಿಂಗಳಲ್ಲಿ ಪ್ರಾರಂಭವಾಗುತ್ತವೆ. ಈ ಹೊಸ ಮಾದರಿಯ ವರ್ಷಕ್ಕೆ ಬೈಕು ಯಾವುದೇ ಗಣನೀಯ ಬದಲಾವಣೆಗಳನ್ನು ಪಡೆಯುವುದಿಲ್ಲ ಮತ್ತು ಅದೇ ಎಂಜಿನ್ ಮತ್ತು ವಿನ್ಯಾಸದೊಂದಿಗೆ ಮುಂದುವರೆಸಿದೆ. ಮಾಲೀಕತ್ವದ ಅನುಭವವನ್ನು ಸುಧಾರಿಸಲು ಇದು ಹೊಸ ರೇರ್ ಪ್ಯಾಕೇಜ್ ಅನ್ನು ಪಡೆಯುತ್ತದೆ.

ಹೊಸ ಕವಾಸಕಿ ವರ್ಸಿಸ್ 1000 ಬೈಕ್ ಈಗಾಗಲೇ ಇತ್ತೀಚಿನ ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದೆ. ಇನ್ನು ಈ ಹೊಸ ವರ್ಸಿಸ್ 1000 ಬೈಕಿನಲ್ಲಿ ಯಾಂತ್ರಿಕ ವಿಶೇಷಣಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಇದರಲ್ಲಿ ಅದೇ 1,043ಸಿಸಿ ಇನ್‌ಲೈನ್-ನಾಲ್ಕು, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಈ ಎಂಜಿನ್ 9,000 ಆರ್‌ಪಿಎಂನಲ್ಲಿ 118 ಬಿಹೆಚ್‍ಪಿ ಪವರ್ ಮತ್ತು 7,500 ಆರ್‌ಪಿಎಂನಲ್ಲಿ 102 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಆರು-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಲೀಟರ್-ಕ್ಲಾಸ್ ಸ್ಪೋರ್ಟ್ಸ್ ಟೂರರ್‌ನಲ್ಲಿ ಎಲೆಕ್ಟ್ರಾನಿಕ್ ರೈಡರ್ ಸಹಾಯಗಳು ಕ್ರೂಸ್ ಕಂಟ್ರೋಲ್, ಕವಾಸಕಿ ಕಾರ್ನರಿಂಗ್ ಮ್ಯಾನೇಜ್‌ಮೆಂಟ್ ಫಂಕ್ಷನ್‌ಗಳು, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ ಮತ್ತು ಎಬಿಎಸ್ ಅನ್ನು ಒಳಗೊಂಡಿವೆ.

ಹೊಸ ಕವಾಸಕಿ ವರ್ಸಿಸ್ 1000 ಬೈಕ್ ಯಾವುದೇ ಕಾಸ್ಮೆಟಿಕ್ ಬದಲಾವಣೆಗಳಿಲ್ಲದೆ, ಅದೇ ಡ್ಯುಯಲ್-ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎತ್ತರದ ವೈಸರ್, ಬೃಹತ್ ಫೇರಿಂಗ್ ಮತ್ತು ಆರಾಮವನ್ನು ಗರಿಷ್ಠಗೊಳಿಸಲು ಉದ್ದವಾದ ಸ್ಪ್ಲಿಟ್ ಸೀಟ್‌ಗಳನ್ನು ಹೊಂದಿದೆ. ಈ ಬೈಕ್ ದೇಶದಲ್ಲಿ ಮಾರಾಟದಲ್ಲಿರುವ ಅತ್ಯಂತ ಸುಲಭವಾಗಿ ಲಭ್ಯವಿರುವ ಲೀಟರ್-ಕ್ಲಾಸ್ ಕೊಡುಗೆಗಳಲ್ಲಿ ಒಂದಾಗಿದೆ.

ಬ್ರೇಕಿಂಗ್ ಕಾರ್ಯಕ್ಷಮತೆಯು ಮುಂಭಾಗದಲ್ಲಿ ಡ್ಯುಯಲ್ 310 ಎಂಎಂ ಪೆಟಲ್ ಡಿಸ್ಕ್‌ಗಳು ಮತ್ತು ಎಬಿಎಸ್ ಜೊತೆಗೆ ಹಿಂಭಾಗದಲ್ಲಿ ಒಂದೇ 250 ಎಂಎಂ ಪೆಟಲ್ ಡಿಸ್ಕ್‌ನಿಂದ ಬರುತ್ತದೆ. ಇನ್ನು ಈ ಬೈಕ್ 21-ಲೀಟರ್ ಇಂಧನ ಟ್ಯಾಂಕ್‌ನೊಂದಿಗೆ 255 ಕೆಜಿ ತೂಕವನ್ನು ಹೊಂದಿದೆ.

ಇನ್ನು ಕವಾಸಕಿಯು ತನ್ನ ನಿಂಜಾ ಝಡ್ಎಕ್ಸ್-10ಆರ್ ಬೈಕನ್ನು ಹೊಸ ಬಣ್ಣದ ಅಯ್ಕೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ವಿಶ್ವದಾದ್ಯಂತ ಅತ್ಯಂತ ಜನಪ್ರಿಯ ಲೀಟರ್-ಕ್ಲಾಸ್ ಬೈಕ್‌ಗಳಲ್ಲಿ ಒಂದಾಗಿದೆ. 2022ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್ ಈಗ ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡಿದೆ.

ಇದರೊಂದಿಗೆ 2022ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ಹೆಚ್ಚು ಅಗ್ರೇಸಿವ್ ಮತ್ತು ಸ್ಪೋರ್ಟಿ ವಿನ್ಯಾಸವನ್ನು ಹೊಂದಿದೆ. ಸೂಪರ್‌ಸ್ಪೋರ್ಟ್ ಬೈಕ್ ಏರೋಡೈನಾಮಿಕ್ ಮೇಲ್ಭಾಗದ ಕೌಲ್, ಹೊಸ ಟೈಲ್ ಕೌಲ್, ಪರಿಷ್ಕೃತ ಹ್ಯಾಂಡಲ್‌ಬಾರ್, ಫುಟ್‌ಪೆಗ್ ಮತ್ತು ಎಲ್‌ಇಡಿ ಲೈಟಿಂಗ್ ಅನ್ನು ಹೊಂದಿದೆ.

ಇದು ಮೆಟಾಲಿಕ್ ಮ್ಯಾಟ್ ಗ್ರ್ಯಾಫೆನೆಸ್ಟೀಲ್ ಗ್ರೇ ಬಣ್ಣದ ಜೊತೆಗೆ ಮೆಟಾಲಿಕ್ ಡಯಾಬ್ಲೊ ಬ್ಲ್ಯಾಕ್‌ನ ಅಂಶಗಳನ್ನು ಒಳಗೊಂಡಿದೆ. ಈ ಹೊಸ ಬಣ್ಣದ ಜೊತೆಗೆ ರೆಡ್ ಪಿನ್‌ಸ್ಟ್ರೈಪ್‌ಗಳನ್ನು ಮತ್ತು ಸೈಡ್ ಫೇರಿಂಗ್ ಅನ್ನು ಹೊಂದಿದೆ. 2022ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್ ಶೀಘ್ರದಲ್ಲೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ, ಮುಂದಿನ ವರ್ಷ ಭಾರತದಲ್ಲಿ ಇದನ್ನು ಬಿಡುಗಡೆ ಮಾಡಬಹುದು ಎಂದು ನಾವು ನಿರೀಕ್ಷಿಸುತ್ತೆವೆ.

ಇನ್ನು 2021ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಪ್ರೀಮಿಯಂ ಸೂಪರ್‌ಸ್ಪೋರ್ಟ್ ಬೈಕನ್ನು ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಸಾರವಾಗಿ ನವೀಕರಿಸಲಾಗಿದೆ. ಇನ್ನು ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಯುರೊ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಇದರೊಂದಿಗೆ ಕೆಲವು ಹೊಸ ಫೀಚರ್ ಗಳನ್ನು ಪಡೆದುಕೊಂಡಿವೆ.

ಇನ್ನು ಬ್ಲೂಟೂತ್ ಕನೆಕ್ಟಿವಿಟಿಯನ್ನು ಒಳಗೊಂಡ ಬಣ್ಣದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಸಹ ಹೊಂದಿದೆ. ಇದು ಬ್ರ್ಯಾಂಡ್‌ನ 'ರೈಡಾಲಜಿ ದಿ ಆ್ಯಪ್' ನೊಂದಿಗೆ ಕಾರ್ಯನಿರ್ವಹಿಸುತ್ತದೆ.ಲೀಟರ್-ಕ್ಲಾಸ್ ಸೂಪರ್‌ಸ್ಪೋರ್ಟ್ ಬೈಕ್ ಆಗಿರುವುದರಿಂದ, ಇದರಲ್ಲಿ ಎಲೆಕ್ಟ್ರಾನಿಕ್ ರೈಡರ್ ಏಡ್‌ಗಳನ್ನು ಹೊಂದಿವೆ,. ಇದರಲ್ಲಿ ಕ್ರೂಸ್ ಕಂಟ್ರೋಲ್, ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಲಾಂಚ್ ಕಂಟ್ರೋಲ್ ಅನ್ನು ಹೊಂದಿದೆ. ಇದರೊಂದಿಗೆ ರೈಡಿಂಗ್ ಮೋಡ್ ಗಳು, ಎಂಜಿನ್ ಬ್ರೇಕ್ ಮತ್ತು ಇನು ಹಲವಾರು ತಂತ್ರಜ್ಙಾನಗಳನ್ನು ಒಳಗೊಂಡಿವೆ

ಹೊಸ ಕವಾಸಕಿ ವರ್ಸಿಸ್ 1000 ಬೈಕ್ ಬಿಡುಗಡೆಯನ್ನು ಘೋಷಿಸುವುದರ ಜೊತೆಗೆ,ಕಂಪನಿಯ ಕೆ-ಕೇರ್ ಪ್ಯಾಕೇಜ್‌ನಿಂದ ಪ್ರಯೋಜನ ಪಡೆಯುತ್ತಾನೆ ಎಂದು ಹೇಳಿದೆ. ಹಿಂದಿನ ಎಲ್ಲಾ ಮಾದರಿ ವರ್ಷದ ಕವಾಸಕಿ ಮೋಟಾರ್‌ಸೈಕಲ್‌ಗಳನ್ನು ಕೆ-ಕೇರ್ ಪ್ರಯೋಜನಗಳಲ್ಲಿ ಸೇರಿಸಲಾಗಿಲ್ಲ. ಈ ಪ್ಯಾಕೇಜ್ ಮೋಟಾರ್‌ಸೈಕಲ್‌ಗೆ ವಿಸ್ತೃತ ಖಾತರಿಯನ್ನು ತರುತ್ತದೆ. ಇದಲ್ಲದೆ, ಕೆ-ಕೇರ್ ಪ್ಯಾಕೇಜ್‌ನ ಪ್ರಯೋಜನಗಳನ್ನು ವಾಹನದ ಮರುಮಾರಾಟದ ಸಮಯದಲ್ಲಿ ನಂತರದ ಮಾಲೀಕರಿಗೆ ವರ್ಗಾಯಿಸಲಾಗುತ್ತದೆ.


Click it and Unblock the Notifications








