ಭಾರತದಲ್ಲಿ ಬಿಡುಗಡೆಯಾಯ್ತು ಹೊಸ ಎಪ್ರಿಲಿಯಾ ಆರ್‍ಎಸ್ 660, ಟುವೊನೊ 660 ಬೈಕುಗಳು
ಎಪ್ರಿಲಿಯಾ ಕಂಪನಿಯು ತನ್ನ ಆರ್‍ಎಸ್ 660 ಮತ್ತು ಟುವೊನೊ 660 ಎಂಬ ಬೈಕುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಎರಡೂ ಪರ್ಫಾಮೆನ್ಸ್ ಬೈಕುಗಳು ಸ್ಪೋರ್ಟಿ ವಿನ್ಯಾಸ, ಹೊಸ ತಂತ್ರಜ್ಞಾನ ಮತ್ತು ಉತ್ತಮ ಪರ್ಫಾಮೆನ್ಸ್ ಅನ್ನು ಹೊಂದಿದೆ.

ಹೊಸ ಎಪ್ರಿಲಿಯಾ ಆರ್‍ಎಸ್ 660 ಬೈಕಿನ ಬೆಲೆಯು ರೂ.13.39 ಲಕ್ಷಗಳಾದರೆ, ಎಪ್ರಿಲಿಯಾ ಟುವೊನೊ 660 ಬೈಕಿನ ಬೆಲೆಯು ರೂ.13.09 ಲಕ್ಷಗಳಾಗಿದೆ. ಈ ಬೆಲೆಗಳು ಎಕ್ಸ್ ಶೋರೂಂ ಪುಣೆಯ ಪ್ರಕಾರವಾಗಿದೆ. ಮೊದಲಿಗೆ ಎಪ್ರಿಲಿಯಾ ಆರ್‍ಎಸ್ 660 ಬೈಕಿನ ಬಗ್ಗೆ ಹೇಳುವುದಾದರೆ, ಇದು ತನ್ನದೆ ಸರಣಿಯಲ್ಲಿರುವ ಆರ್‌ಎಸ್‌ಟಿ 4 ಮಾದರಿಯ ವಿನ್ಯಾಸದಿಂದ ಸ್ಪೂರ್ತಿಯನ್ನು ಪಡೆದುಕೊಂಡಿದೆ. ಈ ಬೈಕಿನಲ್ಲಿ ಆರ್‌ಎಸ್‌ಟಿ 4 ಮಾದರಿಯಲ್ಲಿರುವ ಆಗ್ರೇಸಿವ್ ಆಗಿ ಕಾಣುವ ಫೇರಿಂಗ್ ಮತ್ತು ಏರೋ ವಿಂಗ್ಲೆಟ್ಗಳನ್ನು ಒಳಗೊಂಡಿದೆ.

ರೇಸ್-ಸ್ಪೆಕ್ ಶೈಲಿಯ ವಿಂಗ್ಲೆಟ್‌ಗಳು ಹೆಚ್ಚಿನ ವೇಗದಲ್ಲಿ ಉತ್ತಮ ಕಂಟ್ರೋಲ್ ಅನ್ನು ನೀಡುತ್ತದೆ. ಹೊಸ ಎಪ್ರಿಲಿಯಾ ಆರ್‍ಎಸ್ 660 ಬ್ರಾಂಡ್ ಸಿಗ್ನೇಚರ್ ಎಲ್ಇಡಿ ಹೆಡ್ ಲೈಟ್ ಅನ್ನು ಹೊಂದಿದೆ. ಮುಂಭಾಗದ ಎರಡೂ ಬದಿಯಲ್ಲಿ ಕಾರ್ನರಿಂಗ್ ಲ್ಯಾಂಪ್ ಅನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಇನ್ನು ಈ ಬೈಕಿನಲ್ಲಿ ಸ್ಪೋರ್ಟಿ ಲುಕ್ ಹೊಂದಿರುವ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಆರ್‍ಎಸ್660 ಬೈಕಿನ ಹಿಂಭಾಗವು ಕೂಡ ಆರ್‌ಎಸ್‌ಟಿ 4 ಮಾದರಿಯಂತೆ ಕಾಣುತ್ತದೆ. ಒಟ್ಟಾರೆಯಾಗಿ ಹೊಸ ಎಪ್ರಿಲಿಯಾ ಆರ್‍ಎಸ್ 660 ಬೈಕ್ ಆಗ್ರೇಸಿವ್ ಲುಕ್ ಅನ್ನು ಹೊಂದಿದೆ.

ಎಪ್ರಿಲಿಯಾ ಆರ್‍ಎಸ್ 660 ಬೈಕಿನಲ್ಲಿ ವ್ಹೀಲ್ ಕಂಟ್ರೋಲ್, ಕಾರ್ನರಿಂಗ್ ಎಬಿಎಸ್, ಕ್ರೂಸ್ ಕಂಟ್ರೋಲ್, ಐದು ವಿಭಿನ್ನ ರೈಡ್ ಮೋಡ್‌ಗಳು ಮತ್ತು ಎರಡು-ಹಂತದ ಕ್ವಿಕ್-ಶಿಫ್ಟರ್ ಒಳಗೊಂಡಿವೆ. ಈ ಬೈಕಿನಲ್ಲಿ 5 ಇಂಚಿನ ಟಿಎಫ್‌ಟಿ ಸ್ಪ್ಲಿಟ್-ಸ್ಕ್ರೀನ್ ಅನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಎಪ್ರಿಲಿಯಾ ಆರ್‍ಎಸ್ 660 ಬೈಕಿನಲ್ಲಿ 41 ಎಂಎಂ ಸಸ್ಪೆಂಷನ್ ಗಾಗಿ ಮುಂಭಾಗದಲ್ಲಿ ಯುಎಸ್ಡಿ ಫೋರ್ಕ್ಸ್ ಕಯಾಬಾ ಯುನಿಟ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುದಾದರೆ ಮುಂಭಾಗದಲ್ಲಿ ಡ್ಯುಯಲ್-ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡಿಸ್ಕ್-ಬ್ರೇಕ್ ಅನ್ನು ನೀಡಲಾಗಿದೆ.

ಇನ್ನು ಪ್ರಮುಖವಾಗಿ ಹೊಸ ಎಪ್ರಿಲಿಯಾ ಆರ್‍ಎಸ್ 660 ಮತ್ತು ಟುವೊನೊ 660 ಬೈಕುಗಳಲ್ಲಿ ಒಂದೇ 660ಸಿಸಿ ಪ್ಯಾರೆಲೆಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಆದರೆ ಎರಡು ಬೈಕುಗಳಲ್ಲಿ ಒಂದೇ ಎಂಜಿನ್ ಆಗಿದ್ದರು ಎರಡೂ ರೀತಿ ಟ್ಯೂನ್ ಮಾಡಲಾಗಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಇದರಲ್ಲಿ ಎಪ್ರಿಲಿಯಾ ಆರ್‍ಎಸ್ 660 ಬೈಕ್ 100 ಬಿಹೆಚ್‍ಪಿ ಪವರ್ ಮತ್ತು 67 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ನೊಂದಿಗೆ ಆರು-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ. ಇನ್ನು ಟುವೊನೊ 660 ಎಂಜಿನ್ 10,500 ಆರ್‌ಪಿಎಂನಲ್ಲಿ 95 ಬಿಹೆಚ್‌ಪಿ ಪವರ್ ಮತ್ತು 8,500 ಆರ್‌ಪಿಎಂನಲ್ಲಿ 67 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ

ಎಪ್ರಿಲಿಯಾ ಟುವೊನೊ 660 ಮಿಡಲ್-ವೈಟ್ ನೇಕೆಡ್ ಬೈಕ್ ಆರ್‍ಎಸ್ 660 ಮಾದರಿಯನ್ನು ಆಧರಿಸಿದೆ. ಆದರೆ ವಿನ್ಯಾಸವನ್ನು ಟುವೊನೊ ವಿ4 ಮಾದರಿಯಿಂದ ಸ್ಫೂರ್ತಿ ಪಡೆದಿದೆ. ಈ ಹೊಸ ಎಪ್ರಿಲಿಯಾ ಟುವೊನೊ 660 ಬೈಕ್ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಇನ್ನು ಈ ಹೊಸ ಎಪ್ರಿಲಿಯಾ ಸೂಪರ್ ಬೈಕ್ ವಿಶಿಷ್ಟವಾದ ಮೂರು-ಪಾಡ್ ಹೆಡ್ ಲ್ಯಾಂಪ್ ಸೆಟಪ್ ಅನ್ನು ಒಳಗೊಂಡಿದೆ.

ಟುವೊನೊ 660 ಬೈಕಿನಲ್ಲಿ ವ್ಹೀಲ್ ಕಂಟ್ರೋಲ್, ಕಾರ್ನರಿಂಗ್ ಎಬಿಎಸ್, ಕ್ರೂಸ್ ಕಂಟ್ರೋಲ್, ಐದು ವಿಭಿನ್ನ ರೈಡ್ ಮೋಡ್‌ಗಳು ಮತ್ತು ಎರಡು-ಹಂತದ ಕ್ವಿಕ್-ಶಿಫ್ಟರ್ ಒಳಗೊಂಡಿದೆ. ಈ ಬೈಕಿನಲ್ಲಿ 5 ಇಂಚಿನ ಟಿಎಫ್‌ಟಿ ಸ್ಪ್ಲಿಟ್-ಸ್ಕ್ರೀನ್ ಅನ್ನು ನೀಡಲಾಗಿದೆ.


Click it and Unblock the Notifications








