ಎಪ್ರಿಲಿಯಾ ಆರ್‍ಎಸ್ 660, ಟುವೊನೊ 660 ಬೈಕುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಎಪ್ರಿಲಿಯಾ ಕಂಪನಿಯು ಇತ್ತೀಚೆಗೆ ತನ್ನ ಆರ್‍ಎಸ್ 660 ಮತ್ತು ಟುವೊನೊ 660 ಎಂಬ ಪರ್ಫಾಮೆನ್ಸ್ ಬೈಕುಗಳನ್ನು ಇತ್ತೀಚೆಗೆ ಪರಿಚಯಿಸಿತು. ಈ ಎರಡೂ ಪರ್ಫಾಮೆನ್ಸ್ ಬೈಕುಗಳು ಸ್ಪೋರ್ಟಿ ವಿನ್ಯಾಸ, ತಂತ್ರಜ್ಞಾನ ಮತ್ತು ಪರ್ಫಾಮೆನ್ಸ್ ನಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದೆ.

ಎಪ್ರಿಲಿಯಾ ಆರ್‍ಎಸ್ 660, ಟುವೊನೊ 660 ಬೈಕುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಎಪ್ರಿಲಿಯಾ ಆರ್‍ಎಸ್ 660 ಮತ್ತು ಟುವೊನೊ 660 ಬೈಕುಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿವೆ. ಇದೀಗ ಭಾರತೀಯ ಮಾರುಕಟ್ಟೆಯಲ್ಲಿರುವ ಎಪ್ರಿಲಿಯಾ ಡೀಲರುಗಳು ಹೊಸ ಆರ್‍ಎಸ್ 660 ಮತ್ತು ಟುವೊನೊ 660 ಬೈಕುಗಳ ಖರೀದಿಗಾಗಿ ಪ್ರಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ ಎಂದು ವರದಿಗಳಾಗಿದೆ. ಹೊಸ ಎಪ್ರಿಲಿಯಾ ಆರ್‍ಎಸ್ 660 ಮತ್ತು ಟುವೊನೊ 660 ಪರ್ಫಾಮೆನ್ಸ್ ಬೈಕುಗಳನ್ನು ಸಿಬಿಯು ಆಗಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ.

ಎಪ್ರಿಲಿಯಾ ಆರ್‍ಎಸ್ 660, ಟುವೊನೊ 660 ಬೈಕುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಮೊದಲಿಗೆ ಎಪ್ರಿಲಿಯಾ ಆರ್‍ಎಸ್ 660 ಬೈಕಿನ ಬಗ್ಗೆ ಹೇಳುವುದಾದರೆ, ಇದು ತನ್ನದೆ ಸರಣಿಯಲ್ಲಿರುವ ಆರ್‌ಎಸ್‌ಟಿ 4 ಮಾದರಿಯ ವಿನ್ಯಾಸದಿಂದ ಸ್ಪೂರ್ತಿಯನ್ನು ಪಡೆದುಕೊಂಡಿದೆ. ಈ ಬೈಕಿನಲ್ಲಿ ಆರ್‌ಎಸ್‌ಟಿ 4 ಮಾದರಿಯಲ್ಲಿರುವ ಆಗ್ರೇಸಿವ್ ಆಗಿ ಕಾಣುವ ಫೇರಿಂಗ್ ಮತ್ತು ಏರೋ ವಿಂಗ್ಲೆಟ್ಗಳನ್ನು ಒಳಗೊಂಡಿದೆ. ರೇಸ್-ಸ್ಪೆಕ್ ಶೈಲಿಯ ವಿಂಗ್ಲೆಟ್‌ಗಳು ಹೆಚ್ಚಿನ ವೇಗದಲ್ಲಿ ಉತ್ತಮ ಕಂಟ್ರೋಲ್ ಅನ್ನು ನೀಡುತ್ತದೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಎಪ್ರಿಲಿಯಾ ಆರ್‍ಎಸ್ 660, ಟುವೊನೊ 660 ಬೈಕುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಎಪ್ರಿಲಿಯಾ ಆರ್‍ಎಸ್ 660 ಬ್ರಾಂಡ್ ಸಿಗ್ನೇಚರ್ ಎಲ್ಇಡಿ ಹೆಡ್ ಲೈಟ್ ಅನ್ನು ಹೊಂದಿದೆ. ಮುಂಭಾಗದ ಎರಡೂ ಬದಿಯಲ್ಲಿ ಕಾರ್ನರಿಂಗ್ ಲ್ಯಾಂಪ್ ಅನ್ನು ಹೊಂದಿರುತ್ತದೆ. ಸ್ಪೋರ್ಟಿ ಲುಕ್ ಹೊಂದಿರುವ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಆರ್‍ಎಸ್660 ಬೈಕಿನ ಹಿಂಭಾಗವು ಕೂಡ ಆರ್‌ಎಸ್‌ಟಿ 4 ಮಾದರಿಯಂತೆ ಕಾಣುತ್ತದೆ. ಒಟ್ಟಾರೆಯಾಗಿ ಹೊಸ ಎಪ್ರಿಲಿಯಾ ಆರ್‍ಎಸ್ 660 ಬೈಕ್ ಆಗ್ರೇಸಿವ್ ಲುಕ್ ಅನ್ನು ಹೊಂದಿದೆ.

ಎಪ್ರಿಲಿಯಾ ಆರ್‍ಎಸ್ 660, ಟುವೊನೊ 660 ಬೈಕುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಎಪ್ರಿಲಿಯಾ ಆರ್‍ಎಸ್ 660 ಬೈಕಿನಲ್ಲಿ ವ್ಹೀಲ್ ಕಂಟ್ರೋಲ್, ಕಾರ್ನರಿಂಗ್ ಎಬಿಎಸ್, ಕ್ರೂಸ್ ಕಂಟ್ರೋಲ್, ಐದು ವಿಭಿನ್ನ ರೈಡ್ ಮೋಡ್‌ಗಳು ಮತ್ತು ಎರಡು-ಹಂತದ ಕ್ವಿಕ್-ಶಿಫ್ಟರ್ ಒಳಗೊಂಡಿವೆ. ಈ ಬೈಕಿನಲ್ಲಿ 5 ಇಂಚಿನ ಟಿಎಫ್‌ಟಿ ಸ್ಪ್ಲಿಟ್-ಸ್ಕ್ರೀನ್ ಅನ್ನು ಹೊಂದಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಎಪ್ರಿಲಿಯಾ ಆರ್‍ಎಸ್ 660, ಟುವೊನೊ 660 ಬೈಕುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಎಪ್ರಿಲಿಯಾ ಆರ್‍ಎಸ್ 660 ಬೈಕಿನಲ್ಲಿ 41 ಎಂಎಂ ಸಸ್ಪೆಂಷನ್ ಗಾಗಿ ಮುಂಭಾಗದಲ್ಲಿ ಯುಎಸ್ಡಿ ಫೋರ್ಕ್ಸ್ ಕಯಾಬಾ ಯುನಿಟ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುದಾದರೆ ಮುಂಭಾಗದಲ್ಲಿ ಡ್ಯುಯಲ್-ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡಿಸ್ಕ್-ಬ್ರೇಕ್ ಅನ್ನು ನೀಡಲಾಗಿದೆ.

ಎಪ್ರಿಲಿಯಾ ಆರ್‍ಎಸ್ 660, ಟುವೊನೊ 660 ಬೈಕುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಈ ಎಪ್ರಿಲಿಯಾ ಆರ್‍ಎಸ್ 660 ಮತ್ತು ಟುವೊನೊ 660 ಬೈಕುಗಳಲ್ಲಿ ಒಂದೇ 660ಸಿಸಿ ಪ್ಯಾರೆಲೆಲ್-ಟ್ವಿನ್ ಎಂಜಿನ್ ಅನ್ನು ಹೊಂದಿರುತ್ತದೆ. ಆದರೆ ಎರಡು ಬೈಕುಗಳಲ್ಲಿ ಒಂದೇ ಎಂಜಿನ್ ಆಗಿದ್ದರು ಎರಡೂ ರೀತಿ ಟ್ಯೂನ್ ಮಾಡಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಎಪ್ರಿಲಿಯಾ ಆರ್‍ಎಸ್ 660, ಟುವೊನೊ 660 ಬೈಕುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಇದರಲ್ಲಿ ಎಪ್ರಿಲಿಯಾ ಆರ್‍ಎಸ್ 660 ಬೈಕ್ 100 ಬಿಹೆಚ್‍ಪಿ ಪವರ್ ಮತ್ತು 67 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ನೊಂದಿಗೆ ಆರು-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ. ಇನ್ನು ಟುವೊನೊ 660 ಎಂಜಿನ್ 10,500 ಆರ್‌ಪಿಎಂನಲ್ಲಿ 95 ಬಿಹೆಚ್‌ಪಿ ಪವರ್ ಮತ್ತು 8,500 ಆರ್‌ಪಿಎಂನಲ್ಲಿ 67 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ

ಎಪ್ರಿಲಿಯಾ ಆರ್‍ಎಸ್ 660, ಟುವೊನೊ 660 ಬೈಕುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಎಪ್ರಿಲಿಯಾ ಟುವೊನೊ 660 ಮಿಡಲ್-ವೈಟ್ ನೇಕೆಡ್ ಬೈಕ್ ಆರ್‍ಎಸ್ 660 ಮಾದರಿಯನ್ನು ಆಧರಿಸಿದೆ. ಆದರೆ ವಿನ್ಯಾಸವನ್ನು ಟುವೊನೊ ವಿ4 ಮಾದರಿಯಿಂದ ವಿನ್ಯಾಸ ಸ್ಫೂರ್ತಿಯನ್ನು ಪಡೆದಿದೆ. ಈ ಹೊಸ ಎಪ್ರಿಲಿಯಾ ಟುವೊನೊ 660 ಬೈಕ್ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಇನ್ನು ಈ ಹೊಸ ಎಪ್ರಿಲಿಯಾ ಸೂಪರ್ ಬೈಕ್ ವಿಶಿಷ್ಟವಾದ ಮೂರು-ಪಾಡ್ ಹೆಡ್ ಲ್ಯಾಂಪ್ ಸೆಟಪ್ ಅನ್ನು ಹೊಂದಿದೆ,

ಎಪ್ರಿಲಿಯಾ ಆರ್‍ಎಸ್ 660, ಟುವೊನೊ 660 ಬೈಕುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಈ ಬೈಕಿನಲ್ಲಿ ವ್ಹೀಲ್ ಕಂಟ್ರೋಲ್, ಕಾರ್ನರಿಂಗ್ ಎಬಿಎಸ್, ಕ್ರೂಸ್ ಕಂಟ್ರೋಲ್, ಐದು ವಿಭಿನ್ನ ರೈಡ್ ಮೋಡ್‌ಗಳು ಮತ್ತು ಎರಡು-ಹಂತದ ಕ್ವಿಕ್-ಶಿಫ್ಟರ್ ಒಳಗೊಂಡಿವೆ. ಈ ಬೈಕಿನಲ್ಲಿ 5 ಇಂಚಿನ ಟಿಎಫ್‌ಟಿ ಸ್ಪ್ಲಿಟ್-ಸ್ಕ್ರೀನ್ ಅನ್ನು ಹೊಂದಿದೆ.

ಎಪ್ರಿಲಿಯಾ ಆರ್‍ಎಸ್ 660, ಟುವೊನೊ 660 ಬೈಕುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಎಪ್ರಿಲಿಯಾ ಟುವೊನೊ ಬೈಕ್ ಭಾರತದಲ್ಲಿ ಬಿಡುಗಡೆಯಾದ ಬಳಿಕ ಹೋಂಡಾ ಸಿಬಿಆರ್ 650 ಆರ್, ಕವಾಸಕಿ ನಿಂಜಾ 650 ಮತ್ತು ಝಡ್‍ಡ್ಎಕ್ಸ್-6 ಆರ್ ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.

More from DriveSpark

Article Published On: Thursday, February 25, 2021, 12:42 [IST]
English summary
Aprilia RS 660 & Tuono 660 Bookings Open In India. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+