ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಎಪ್ರಿಲಿಯಾ ಆರ್‍ಎಸ್ 660 ಬೈಕ್
ಹಲವಾರು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾದ ಬಳಿಕ ಎಪ್ರಿಲಿಯಾ ಆರ್‍ಎಸ್ 660 ಬೈಕ್ ಇದೀಗ ಫಿಲಿಪೈನ್ಸ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಹೊಸ ಎಪ್ರಿಲಿಯಾ ಆರ್‍ಎಸ್ 660 ಬೈಕ್ ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳನ್ನು ಒಳಗೊಂಡಿದೆ.

ಹೊಸ ಎಪ್ರಿಲಿಯಾ ಆರ್‍ಎಸ್ 660 ಬೈಕಿನ ಹೆಸರನ್ನು ಎಪ್ರಿಲಿಯಾ ಇಂಡಿಯಾ ವೆಬ್‌ಸೈಟ್‌ನಲ್ಲಿ ಟುವೊನೊ 660 ಜೊತೆಗೆ ಈಗಾಗಲೇ ಪಟ್ಟಿ ಮಾಡಲಾಗಿದೆ, ಆದರೆ ಅವುಗಳ ಬಿಡುಗಡೆಯ ಬಗ್ಗೆ ಇನ್ನು ಮಾಹಿತಿಗಳು ಲಭ್ಯವಿಲ್ಲ. ಈ ಬೈಕುಗಳು ಸ್ಪೋರ್ಟಿ ವಿನ್ಯಾಸ, ಹೊಸ ತಂತ್ರಜ್ಞಾನ ಮತ್ತು ಉತ್ತಮ ಪರ್ಫಾಮೆನ್ಸ್ ಅನ್ನು ಹೊಂದಿದೆ. ಈ ಹೊಸ ಎಪ್ರಿಲಿಯಾ ಆರ್‍ಎಸ್ 660 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಜೂನ್ ತಿಂಗಳಿನಲ್ಲಿ ಬಿಡುಗಡೆಗೊಳಿಸಬಹುದು.

ಆರ್‍ಎಸ್ 660 ಬೈಕಿನ ಬಗ್ಗೆ ಹೇಳುವುದಾದರೆ, ಇದು ತನ್ನದೆ ಸರಣಿಯಲ್ಲಿರುವ ಆರ್‌ಎಸ್‌ಟಿ 4 ಮಾದರಿಯ ವಿನ್ಯಾಸದಿಂದ ಸ್ಪೂರ್ತಿಯನ್ನು ಪಡೆದುಕೊಂಡಿದೆ. ಈ ಬೈಕಿನಲ್ಲಿ ಆರ್‌ಎಸ್‌ಟಿ 4 ಮಾದರಿಯಲ್ಲಿರುವ ಆಗ್ರೇಸಿವ್ ಆಗಿ ಕಾಣುವ ಫೇರಿಂಗ್ ಮತ್ತು ಏರೋ ವಿಂಗ್ಲೆಟ್ಗಳನ್ನು ಒಳಗೊಂಡಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ರೇಸ್-ಸ್ಪೆಕ್ ಶೈಲಿಯ ವಿಂಗ್ಲೆಟ್‌ಗಳು ಹೆಚ್ಚಿನ ವೇಗದಲ್ಲಿ ಉತ್ತಮ ಕಂಟ್ರೋಲ್ ಅನ್ನು ನೀಡುತ್ತದೆ. ಹೊಸ ಎಪ್ರಿಲಿಯಾ ಆರ್‍ಎಸ್ 660 ಬ್ರಾಂಡ್ ಸಿಗ್ನೇಚರ್ ಎಲ್ಇಡಿ ಹೆಡ್ ಲೈಟ್ ಅನ್ನು ಹೊಂದಿದೆ. ಮುಂಭಾಗದ ಎರಡೂ ಬದಿಯಲ್ಲಿ ಕಾರ್ನರಿಂಗ್ ಲ್ಯಾಂಪ್ ಅನ್ನು ಒಳಗೊಂಡಿದೆ.

ಇನ್ನು ಈ ಬೈಕಿನಲ್ಲಿ ಸ್ಪೋರ್ಟಿ ಲುಕ್ ಹೊಂದಿರುವ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಆರ್‍ಎಸ್660 ಬೈಕಿನ ಹಿಂಭಾಗವು ಕೂಡ ಆರ್‌ಎಸ್‌ಟಿ 4 ಮಾದರಿಯಂತೆ ಕಾಣುತ್ತದೆ. ಒಟ್ಟಾರೆಯಾಗಿ ಈ ಎಪ್ರಿಲಿಯಾ ಆರ್‍ಎಸ್ 660 ಬೈಕ್ ಆಗ್ರೇಸಿವ್ ಲುಕ್ ಅನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಎಪ್ರಿಲಿಯಾ ಆರ್‍ಎಸ್ 660 ಬೈಕಿನಲ್ಲಿ ವ್ಹೀಲ್ ಕಂಟ್ರೋಲ್, ಕಾರ್ನರಿಂಗ್ ಎಬಿಎಸ್, ಕ್ರೂಸ್ ಕಂಟ್ರೋಲ್, ಐದು ವಿಭಿನ್ನ ರೈಡ್ ಮೋಡ್‌ಗಳು ಮತ್ತು ಎರಡು-ಹಂತದ ಕ್ವಿಕ್-ಶಿಫ್ಟರ್ ಹೊಂದಿದೆ. ಈ ಬೈಕಿನಲ್ಲಿ 5 ಇಂಚಿನ ಟಿಎಫ್‌ಟಿ ಸ್ಪ್ಲಿಟ್-ಸ್ಕ್ರೀನ್ ಅನ್ನು ಒಳಗೊಂಡಿದೆ.

ಎಪ್ರಿಲಿಯಾ ಆರ್‍ಎಸ್ ಬೈಕಿನಲ್ಲಿ 660ಸಿಸಿ ಪ್ಯಾರೆಲೆಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 100 ಬಿಹೆಚ್‍ಪಿ ಪವರ್ ಮತ್ತು 67 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ನೊಂದಿಗೆ ಆರು-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಎಪ್ರಿಲಿಯಾ ಆರ್‍ಎಸ್ 660 ಬೈಕಿನ ಸಸ್ಪೆಂಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಮುಂಭಾಗದಲ್ಲಿ ಕಯಾಬಾದ ಯುಎಸ್ಡಿ ಫೋರ್ಕ್ಸ್ ಯುನಿಟ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ.

ಇನ್ನು ಪ್ರಮುಖವಾಗಿ ಈ ಹೊಸ ಪರ್ಫಾಮೆನ್ಸ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುದಾದರೆ, ಮುಂಭಾಗದಲ್ಲಿ ಡ್ಯುಯಲ್-ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್-ಬ್ರೇಕ್ ಅನ್ನು ನೀಡಲಾಗಿದೆ. ಎಪ್ರಿಲಿಯಾ ಆರ್‍ಎಸ್ 660 ಮಾದರಿಯು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜನಪ್ರಿಯ ಬೈಕ್ ಗಳಲ್ಲಿ ಒಂದಾಗಿದೆ.


Click it and Unblock the Notifications








