ಹೊಸ Aprilia SR 160 ಸ್ಕೂಟರ್ ಖರೀದಿಗೆ ಬುಕ್ಕಿಂಗ್ ಆರಂಭ
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಪಿಯಾಜಿಯೊ ಇಂಡಿಯಾ ಹೊಸ ಮತ್ತು ನವೀಕರಿಸಿದ ಎಪ್ರಿಲಿಯಾ ಎಸ್ಆರ್ 160 ಸ್ಕೂಟರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಪಿಯಾಜಿಯೊ ಕಂಪನಿಯು ತನ್ನ ಎಪ್ರಿಲಿಯಾ ಎಸ್ಆರ್ 160 ಸ್ಕೂಟರ್ ಖರೀದಿಗಾಗಿ ಪ್ರಿ-ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ.

ಎಪ್ರಿಲಿಯಾ ಎಸ್ಆರ್ 160 ಸ್ಕೂಟರ್ ಖರೀದಿಸಲು ಬಯಸುವ ಗ್ರಾಹಕರು ಕಂಪನಿಯ ವೆಬ್‌ಸೈಟ್‌ನಲ್ಲಿ ಸ್ಪೋರ್ಟಿ ಸ್ಕೂಟರ್ ಅನ್ನು ಬುಕ್ ಮಾಡಬಹುದು. ಈ ಎಪ್ರಿಲಿಯಾ ಎಸ್ಆರ್ 160 ಸ್ಕೂಟರ್ ಮೊದಲ ದೊಡ್ಡ ನವೀಕರಣವನ್ನು ಹೊಸ ಮುಂಭಾಗದ ವಿನ್ಯಾಸದೊಂದಿಗೆ ಪಡೆಯುತ್ತದೆ, ಅದು ಮೊದಲಿಗಿಂತ ಹೆಚ್ಚು ಸ್ಪೋರ್ಟಿಯರ್ ನೋಟವನ್ನು ನೀಡುತ್ತದೆ. ಇನ್ನು ಈ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಮೊದಲೇ ಡೀಲರ್‌ಶಿಪ್‌ಗಳಿಗೆ ಬರಲು ಪ್ರಾರಂಭಿಸಿದೆ ಮತ್ತು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಎಪ್ರಿಲಿಯಾ ಎಸ್ಆರ್ 160 ಸ್ಕೂಟರ್ ನವೀಕರಿಸಿದ ಮುಂಭಾಗದ ಫಾಸಿಕಿವನ್ನು ಹೊಂದಿದೆ. ಹೊಸ ಮಾದರಿಯು ಹಳೆಯ ಮಾದರಿಯಲ್ಲಿ ಹ್ಯಾಲೊಜೆನ್ ಯುನಿಟ್ ಬದಲಿಗೆ LED ಹೆಡ್‌ಲೈಟ್ ಅನ್ನು ಪಡೆಯುತ್ತದೆ. ಹೊಸ ಹೆಡ್‌ಲೈಟ್ ವಿನ್ಯಾಸವು ತೀಕ್ಷ್ಣವಾಗಿ ಮತ್ತು ಹೆಚ್ಚು ಆಕರ್ಷಕವಾಗಿ ಕಾಣುತ್ತದೆ ಮತ್ತು ಯುವ ಖರೀದಿದಾರರನ್ನು ಆಕರ್ಷಿಸುತ್ತದೆ.

ನವೀಕರಿಸಿದ ಎಪ್ರಿಲಿಯಾ ಎಸ್ಆರ್ 160 ಸ್ಕೂಟರ್ ಬ್ಲೂಟೂತ್ ತಂತ್ರಜ್ಞಾನದೊಂದಿಗೆ ಕನೆಕ್ಟ್ ಆಗಿರುವ ಹೊಸ ಕ್ಲಸ್ಟರ್ ಅನ್ನು ಹೊಂದಿದೆ. ಸ್ಕೂಟರ್‌ನಲ್ಲಿ ಹೊಸ ಬಣ್ಣಗಳು ಮತ್ತು ಗ್ರಾಫಿಕ್ಸ್ ಅನ್ನು ಪರಿಚಯಿಸುವ ಸಾಧ್ಯತೆಯಿದೆ.ಡೀಲರ್‌ಶಿಪ್‌ನಲ್ಲಿ ಕಾಣಿಸಿಕೊಂಡ ಎಪ್ರಿಲಿಯಾ ಎಸ್ಆರ್ 160 ಸ್ಕೂಟರ್ ವೈಟ್, ಬ್ಲ್ಯಾಕ್ ಮತ್ತು ರೇಸ್ ಎಡಿಷನ್ ಗ್ರಾಫಿಕ್ಸ್‌ನಲ್ಲಿ ಕಂಡುಬಂದಿದೆ.

ಹೊಸ ಎಪ್ರಿಲಿಯಾ ಎಸ್ಆರ್ 160 ಸ್ಕೂಟರ್ ಅನ್ನು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುವುದರಿಂದ ಯಾಂತ್ರಿಕ ವಿಶೇಷಣಗಳಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ನಿರೀಕ್ಷಿಸುವುದಿಲ್ಲ. ಈ ಸ್ಕೂಟರ್ ನಲ್ಲಿ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಇಂಧನ-ಇಂಜೆಕ್ಟ್ 160 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ.

ಈ ಎಂಜಿನ್ 7600 ಆರ್‌ಪಿಎಂನಲ್ಲಿ 10.8 ಬಿಹೆಚ್‍ಪಿ ಪವರ್ ಮತ್ತು 6000 ಆರ್‌ಪಿಎಂನಲ್ಲಿ 11.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇನ್ನು ಈ ಹೊಸ ಎಸ್‌ಆರ್ 160 ಯುವ ಪೀಳಿಗೆಯ ಖರೀದಿದಾರರನ್ನು ಆಕರ್ಷಿಸುವಂತೆ ಆಗ್ರೇಸಿವ್ ಮತ್ತು ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ಹೊಸ ಎಪ್ರಿಲಿಯಾ ಎಸ್ಆರ್ 160 ಸ್ಕೂಟರ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಒಳಗೊಂಡಿರುತ್ತದೆ, ಇದರಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿರುವುದರಿಲ್ಲ.

ಇನ್ನು ಪ್ರಮುಖವಾಗಿ ಸುರಕ್ಷತಾ ದೃಷ್ಠಿಯಿಂದ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರಲ್ಲಿ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಸೆಟಪ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಸೆಟಪ್ ಅನ್ನು ಒಳಗೊಂಡಿರಲಿದೆ.

ಇನ್ನು ಈ ಸ್ಕೂಟರ್ ಕಾಂಬೈಡ್ ಬ್ರೇಕಿಂಗ್ ಸಿಸ್ಟಂ(ಸಿಬಿಎಸ್) ಅನ್ನು ಸಹ ಹೊಂದಿದೆ. ಹೊಸ ಎಪ್ರಿಲಿಯಾ ಎಸ್ಆರ್ 160 ಸ್ಕೂಟರ್ 12-ಇಂಚಿನ ಅಲಾಯ್ ವ್ಹೀಲ್‌ಗಳ ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದ್ದು, ಇದು ಸ್ಕೂಟರ್‌ಗೆ ಉತ್ತಮ ನಿರ್ವಹಣಾ ಸಾಮರ್ಥ್ಯವನ್ನು ನೀಡಲಿದೆ.

ಇನ್ನು ಎಪ್ರಿಲಿಯಾ ಇಂಡಿಯಾ ತನ್ನ ಬಹುನಿರೀಕ್ಷಿತ ಆರ್‍ಎಸ್ 660 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿರುವ ಈ ಹೊಸ ಎಪ್ರಿಲಿಯಾ ಆರ್‍ಎಸ್ 660 ಈಗಾಗಲೇ ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ. ಈ ಮಿಡ್ ವೈಟ್ ಸೂಪರ್‌ಸ್ಪೋರ್ಟ್ ಬೈಕ್ ಸಿಬಿಯು ಆಗಿ ಭಾರತಕ್ಕೆ ಬರುತ್ತಿದೆ ಮತ್ತು ಇದನ್ನು ಮೂರು ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಇದು ಆಸಿಡ್ ಗೋಲ್ಡ್ಮ್ ಅಪೆಕ್ಸ್ ಬ್ಲ್ಯಾಕ್ ಮತ್ತು ಲಾವಾ ರೆಡ್ ಆಗಿದೆ. ಗ್ರಾಹಕರು ಇದರಲ್ಲಿ ತಮ್ಮ ಮೆಚ್ಚಿನ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬಹುದು.

ಈ ಹೊಸ ಎಪ್ರಿಲಿಯಾ ಆರ್‍ಎಸ್ 660 ಬೈಕಿನ ಖರೀದಿಗಾಗಿ ಫೆಬ್ರವರಿ ತಿಂಗಳಿನಂದಲೇ ಪ್ರಾರಂಭವಾಗಿತ್ತು, ಈ ಮಿಡ್ ವೈಟ್ ಸೂಪರ್‌ಸ್ಪೋರ್ಟ್ ಬೈಕ್ ವಿತರಣೆಯು ಇತ್ತೀಚೆಗೆ ಭಾರತದಾದ್ಯಂತ ಪ್ರಾರಂಭಿಸಿದೆ, ಭಾರತದಲ್ಲಿ ಮೊದಲ ಎಪ್ರಿಲಿಯಾ ಆರ್‍ಎಸ್ 660 ಬೈಕ್ ಅನ್ನು ರಾಷ್ಟ್ರೀಯ ಮಟ್ಟದ ವೃತ್ತಿಪರ ಮಹಿಳಾ ರೇಸರ್ ಅಲಿಷಾ ಅಬ್ದುಲ್ಲಾ ವಿತರಣೆಯನ್ನು ಪಡೆದಿದ್ದಾರೆ. ಈ ಬೈಕಿನಲ್ಲಿ ಲಿಕ್ವಿಡ್ ಕೂಲ್ಡ್, ಡಿಒಎಚ್‌ಸಿ, ಪ್ಯಾರಲಲ್ ಟ್ವಿನ್ ಸಿಲಿಂಡರ್ 659 ಸಿಸಿ ಎಂಜಿನ್ ಅನ್ನು ಹೊಂದಿದೆ, ಇನ್ನು ಈ ಹೊಸ ಮಿಡ್ ವೈಟ್ ಸೂಪರ್‌ಸ್ಪೋರ್ಟ್ ಬೈಕಿನಲ್ಲಿ ದೊಡ್ಡ ಒಡಹುಟ್ಟಿದವರಾದ ಆರ್‌ಎಸ್ ವಿ4 ನಿಂದ ಅದರ ವಿನ್ಯಾಸ ಸ್ಫೂರ್ತಿಯನ್ನು ಎರವಲು ಪಡೆದಿದೆ.

ಹೊಸ ಎಪ್ರಿಲಿಯಾ ಎಸ್ಆರ್ 160 ಭಾರತೀಯ ಮಾರುಕಟ್ಟೆಯಲ್ಲಿ ಕಂಪನಿಯ ಪ್ರೀಮಿಯಂ ಸ್ಕೂಟರ್ ಆಗಿದೆ. ಈ ಸ್ಕೂಟರ್ ಹೊಸ ನವೀಕರಣಗಳನ್ನು ಪಡೆದುಕೊಂಡಿರುವುದರಿಂದ ಇದರ ಬೆಲೆ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸುತ್ತೇವೆ. ಇನ್ನು ಬಹುನಿರೀಕ್ಷಿತ ಎಪ್ರಿಲಿಯಾ ಎಸ್ಆರ್ 160 ಸ್ಕೂಟರ್ ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂದು ನಿರೀಕ್ಷಿಸುತ್ತೇವೆ.


Click it and Unblock the Notifications








