ಭಾರತದಲ್ಲಿ ಹೊಸ Ducati Hypermotard 950 ಬೈಕ್ ಬಿಡುಗಡೆ

ಇಟಲಿ ಮೂಲದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಡುಕಾಟಿ ತನ್ನ ಹೈಪರ್‌ಮೋಟಾರ್ಡ್ 950 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಡುಕಾಟಿ ಹೈಪರ್‌ಮೋಟಾರ್ಡ್ 950(Ducati Hypermotard 950) ಬೈಕ್ ಆರಂಭಿಕ ಬೆಲೆಯು ಎಕ್ಸ್ ಶೂರೂಂ ಪ್ರಕಾರ ರೂ.12.99 ಲಕ್ಷವಾಗಿದೆ.

ಭಾರತದಲ್ಲಿ ಹೊಸ Ducati Hypermotard 950 ಬೈಕ್ ಬಿಡುಗಡೆ

ಹೊಸ ಡುಕಾಟಿ ಹೈಪರ್‌ಮೋಟಾರ್ಡ್ 950 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಹೈಪರ್‌ಮೋಟಾರ್ಡ್ 950 ಎಸ್‌ಪಿ ಮತ್ತು ಹೈಪರ್‌ಮೋಟಾರ್ಡ್ 950 ಆರ್‌ವಿಇ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರಲಿದೆ. ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಡುಕಾಟಿ ಹೈಪರ್‌ಮೋಟಾರ್ಡ್ 950 ಬೈಕ್ ಹೈಪರ್‌ಮೋಟಾರ್ಡ್ 950, ಹೈಪರ್‌ಮೋಟಾರ್ಡ್ 950 ಆರ್‌ವಿಇ, ಮತ್ತು ಹೈಪರ್‌ಮೋಟಾರ್ಡ್ 950 ಎಸ್‌ಪಿ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ, ಈ ಬೈಕ್ ವಿನ್ಯಾಸವು 'ಮೋಟಾರ್ಡ್‌ಗಳಿಂದ ಪ್ರೇರಿತವಾಗಿದೆ' ಎಂದು ಡುಕಾಟಿ ಕಂಪನಿ ಹೇಳಿಕೊಂಡಿದೆ.

ಭಾರತದಲ್ಲಿ ಹೊಸ Ducati Hypermotard 950 ಬೈಕ್ ಬಿಡುಗಡೆ

ಹೊಸ ಡುಕಾಟಿ ಹೈಪರ್‌ಮೋಟಾರ್ಡ್ 950 ಬೈಕಿನ ಎಂಜಿನ್ ಅನ್ನು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಈ ಬೈಕಿನಲ್ಲಿ 937 ಸಿಸಿ ಡುಕಾಟಿ ಟೆಸ್ಟಾಸ್ಟ್ರೆಟ್ಟಾ 11-ಡಿಗ್ರಿ V-ಟ್ವಿನ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 9,000 ಆರ್‌ಪಿಎಂನಲ್ಲಿ ನಲ್ಲಿ 112.4 ಬಿಹೆಚ್‍ಪಿ ಪವರ್ ಮತ್ತು 7,250 ಆರ್‌ಪಿಎಂನಲ್ಲಿ 96 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಫೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಭಾರತದಲ್ಲಿ ಹೊಸ Ducati Hypermotard 950 ಬೈಕ್ ಬಿಡುಗಡೆ

ಹೊಸ ಡುಕಾಟಿ ಹೈಪರ್‌ಮೋಟಾರ್ಡ್ 950 ಬೈಕಿನಲ್ಲಿ ಟ್ವಿನ್ ಎಕ್ಸಾಸ್ಟ್ ಸೆಟಪ್, ಕನಿಷ್ಠ ಬಾಡಿವರ್ಕ್, ಟ್ರೆಲ್ಲಿಸ್ ಫ್ರೇಮ್, ಟ್ರೆಲ್ಲಿಸ್ ಸಬ್-ಫ್ರೇಮ್, ಅಗಲವಾದ ಹ್ಯಾಂಡಲ್‌ಬಾರ್, ನಕಲ್‌ಗಾರ್ಡ್-ಸಂಯೋಜಿತ ಎಲ್ಇಡಿ ಬ್ಲಿಂಕರ್‌ಗಳು, ಫ್ಲಾಟ್ ಸೀಟ್ ಮತ್ತು 17-ಇಂಚಿನ ವ್ಹೀಲ್ ಗಳನ್ನು ಹೊಂದಿವೆ.

ಭಾರತದಲ್ಲಿ ಹೊಸ Ducati Hypermotard 950 ಬೈಕ್ ಬಿಡುಗಡೆ

ಇನ್ನು ಈ ಡುಕಾಟಿ ಹೈಪರ್‌ಮೋಟಾರ್ಡ್ 950 ಬೈಕ್ ಶ್ರೇಣಿಯ-ಟಾಪ್, ಎಸ್‌ಪಿ ರೂಪಾಂತರವು ಮಾರ್ಚೆಸಿನಿ ಫಾರ್ಗ್ಡ್ ವ್ಹೀಲ್ ಗಳು, ಕಾರ್ಬನ್-ಫೈಬರ್ ಫ್ರಂಟ್ ಮಡ್‌ಗಾರ್ಡ್ ಮತ್ತು ಕಾರ್ಬನ್-ಫೈಬರ್ ಟೈಮಿಂಗ್ ಬೆಲ್ಟ್ ಕವರ್ ಅನ್ನು ಪಡೆಯುತ್ತದೆ.

ಭಾರತದಲ್ಲಿ ಹೊಸ Ducati Hypermotard 950 ಬೈಕ್ ಬಿಡುಗಡೆ

ವೈಶಿಷ್ಟ್ಯದ ಪಟ್ಟಿಯಲ್ಲಿ ಹೊಸ ಡುಕಾಟಿ ಹೈಪರ್‌ಮೋಟಾರ್ಡ್ 950 ಬೈಕಿನಲ್ಲಿ ಎಲ್‌ಇಡಿ ಲೈಟಿಂಗ್, 4.3-ಇಂಚಿನ ಟಿಎಫ್‌ಟಿ ಡಿಸ್ ಪ್ಲೇ, ಮೊನಚಾದ ಅಲ್ಯೂಮಿನಿಯಂ ಹ್ಯಾಂಡಲ್‌ಬಾರ್, ತೆಗೆಯಬಹುದಾದ ಪ್ಯಾಸೆಂಜರ್ ಫುಟ್‌ಪೆಗ್‌ಗಳು ಮತ್ತು ಯುಎಸ್‌ಬಿ ಪವರ್ ಸಾಕೆಟ್ ಅನ್ನು ಒಳಗೊಂಡಿದೆ.

ಭಾರತದಲ್ಲಿ ಹೊಸ Ducati Hypermotard 950 ಬೈಕ್ ಬಿಡುಗಡೆ

ಇನ್ನು ಈ ಬೈಕಿನಲ್ಲಿ ಎಲೆಕ್ಟ್ರಾನಿಕ್ ರೈಡರ್ ಏಡ್ಸ್‌ಗಳಲ್ಲಿ ಬಾಷ್ ಸಿಕ್ಸ್-ಆಕ್ಸಿಸ್ ಇಂಟಿರಿಯಲ್ ಪ್ಲಾಟ್‌ಫಾರ್ಮ್, ರೈಡಿಂಗ್ ಮೋಡ್‌ಗಳು, ಪವರ್ ಮೋಡ್‌ಗಳು, ಕಾರ್ನರ್ ಮಾಡುವ ಎಬಿಎಸ್, ಟ್ರಾಕ್ಷನ್ ಕಂಟ್ರೋಲ್ ಮತ್ತು ವ್ಹೀಲಿ ಕಂಟ್ರೋಲ್ ಸೇರಿವೆ.

ಭಾರತದಲ್ಲಿ ಹೊಸ Ducati Hypermotard 950 ಬೈಕ್ ಬಿಡುಗಡೆ

ಡುಕಾಟಿ ಹೈಪರ್‌ಮೋಟಾರ್ಡ್ 950 ಆರ್‌ವಿಇ ರೂಪಾಂತರದ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಸಂಪೂರ್ಣ-ಹೊಂದಾಣಿಕೆ ಮಾಡಬಹುದಾದ 45 ಎಂಎಂ Marzocchi ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ರೀಬೌಂಡ್ ಡ್ಯಾಂಪಿಂಗ್-ಹೊಂದಾಣಿಕೆ ಮಾಡಬಹುದಾದ Sachs ಮೊನೊ-ಶಾಕ್ ಅನ್ನು ಒಳಗೊಂಡಿದೆ.

ಭಾರತದಲ್ಲಿ ಹೊಸ Ducati Hypermotard 950 ಬೈಕ್ ಬಿಡುಗಡೆ

ಇನ್ನು ಹೈಪರ್‌ಮೋಟಾರ್ಡ್ 950 ಎಸ್‌ಪಿ ರೂಪಾಂತರದಲ್ಲಿ ಓಹಿನ್ಸ್ ಮೂಲದ 48 ಎಂಎಂ ಅಪ್ ಸೈಡ್ ಡೌನ್ ಮುಂಭಾಗದ ಫೋರ್ಕ್‌ಗಳನ್ನು ಮತ್ತು ಓಹ್ಲಿನ್ ಹಿಂಭಾಗದ ಮೊನೊ-ಶಾಕ್ ಸೆಟಪ್ ಅನ್ನು ಒಳಗೊಂಡಿದೆ. ಇದು ಎರಡೂ ಸಂಪೂರ್ಣವಾಗಿ ಹೊಂದಾಣಿಕೆ ಮಾಡಬಹುದಾಗಿದೆ.

ಭಾರತದಲ್ಲಿ ಹೊಸ Ducati Hypermotard 950 ಬೈಕ್ ಬಿಡುಗಡೆ

ಇನ್ನು ಬ್ರೇಕಿಂಗ್ ಸೆಟಪ್ ಬಗ್ಗೆ ಹೇಳುವುದಾದರೆ, ಎರಡು ರೂಪಾಂತರಗಳಲ್ಲಿ ಒಂದೇ ರೀತಿಯ ಬ್ರೇಕಿಂಗ್ ಸೆಟಪ್ ಗಳನ್ನು ಒಳಗೊಂಡಿವೆ. ಇವುಗಳ ಮುಂಭಾಗದ ಟ್ವಿನ್ ರೋಟರ್‌ಗಳನ್ನು ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ಒಳಗೊಂಡಿದೆ.

ಭಾರತದಲ್ಲಿ ಹೊಸ Ducati Hypermotard 950 ಬೈಕ್ ಬಿಡುಗಡೆ

ಇನ್ನು ಡುಕಾಟಿ ತನ್ನ ಹೊಸ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಫಾಸ್ಟ್‌ಹೌಸ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಫಾಸ್ಟ್‌ಹೌಸ್ ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.10.99 ಲಕ್ಷಗಳಾಗಿದೆ. ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಫಾಸ್ಟ್‌ಹೌಸ್ ಮಾದರಿಯನ್ನು ವಿಶ್ವಾದ್ಯಂತ ಕೇವಲ 800 ಯೂನಿಟ್‌ಗಳಿಗೆ ಸೀಮಿತವಾಗಿದೆ. ಇದು ಲಿಮಿಟೆಡ್ ಎಡಿಷನ್ ಬೈಕ್ ಆಗಿದೆ. ಸ್ಕ್ರ್ಯಾಂಬ್ಲರ್ ಡುಕಾಟಿ ಮತ್ತು ಫಾಸ್ಟ್‌ಹೌಸ್ ಬ್ರ್ಯಾಂಡ್ ಸಹಯೋಗದಲ್ಲಿ ಇದನ್ನು ಅಭಿವೃದ್ದಿ ಪಡಿಸಲಾಗಿದೆ. ಆದರೆ ಭಾರತಕ್ಕೆ ನಿಗದಿಪಡಿಸಿದ ಈ ಸೀಮಿತ ಬೈಕ್‌ನ ಎಲ್ಲಾ ಯೂನಿಟ್‌ಗಳು ಮಾರಾಟವಾಗಿವೆ.

ಭಾರತದಲ್ಲಿ ಹೊಸ Ducati Hypermotard 950 ಬೈಕ್ ಬಿಡುಗಡೆ

ಕಳೆದ ವರ್ಷ ಡುಕಾಟಿ ಮತ್ತು ಫಾಸ್ಟ್‌ಹೌಸ್ ಒಟ್ಟಿಗೆ ಸಹಯೋಗದಲ್ಲಿ ಅಮೇರಿಕನ್ ರೈಡರ್ ಜೋರ್ಡಾನ್ ಗ್ರಹಾಂ ಮಿಂಟ್ 400 ಆಫ್-ರೋಡ್ ರೇಸ್ ನಲ್ಲಿ ಹೂಲಿಗನ್ ವಿಭಾಗವನ್ನು ಗೆದ್ದುಕೊಂಡಿತು. ಇದು ಅತ್ಯಂತ ಹಳೆಯ ಮತ್ತು ಅತ್ಯಂತ ಪ್ರತಿಷ್ಠಿತ ಅಮೇರಿಕನ್ ಆಫ್-ರೋಡ್ ರೇಸ್ ಆಗಿದೆ, ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಫಾಸ್ಟ್‌ಹೌಸ್ ಸಾಮಾನ್ಯ ಸ್ಕ್ರ್ಯಾಂಬಲ್ಡ್ ಸ್ಲೆಡ್ ಅನ್ನು ಆಧರಿಸಿದೆ. ಹೊಸ ಡುಕಾಟಿ ಹೈಪರ್‌ಮೋಟಾರ್ಡ್ 950 ಬೈಕ್ ಕೊನೆಗೂ ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಪ್ರೀಮಿಯಂ ಪರ್ಫಾಮೆನ್ಸ್ ಬೈಕ್ ಪ್ರಿಯರನ್ನು ಈ ಹೊಸ ಡುಕಾಟಿ ಹೈಪರ್‌ಮೋಟಾರ್ಡ್ 950 ಬೈಕ್ ಸೆಳೆಯಬಹುದು ಎಂದು ನಿರೀಕ್ಷಿಸುತ್ತೇವೆ.

More from DriveSpark

Article Published On: Wednesday, November 10, 2021, 14:58 [IST]
English summary
New ducati hypermotard 950 bs6 launched in india price details
Read more on ಡುಕಾಟಿ ducati
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+