ಬಹುನಿರೀಕ್ಷಿತ 2021ರ Ducati Monster ಬೈಕ್ ಬಿಡುಗಡೆ ದಿನಾಂಕ ಬಹಿರಂಗ
ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಡುಕಾಟಿ ತನ್ನ 2021ರ ಮಾನ್ಸ್ಟರ್ ಬೈಕನ್ನು ಈಗಾಗಲೇ ಜಾಗತಿಕವಾಗಿ ಪರಿಚಯಿಸಲಾಗಿದೆ. ಇದೀಗ ಈ ಹೊಸ ಡುಕಾಟಿ ಮಾನ್ಸ್ಟರ್(Ducati Monster) ಬೈಕ್ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಸಜ್ಜಾಗಿದೆ.

ಡುಕಾಟಿ ಇಂಡಿಯಾ ಇಂದು ಎರಡು ದೊಡ್ಡ ಪ್ರಕಟಣೆಗಳನ್ನು ಮಾಡಿದ್ದಾರೆ. ಮೊದಲನೆಯದು ಕಂಪನಿಯು ಭಾರತದಲ್ಲಿ ಹೊಸ ಮಾನ್ಸ್ಟರ್ ಬೈಕಿನ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭಿಸಿದೆ, ಇನ್ನು ಎರಡನೇ ಪ್ರಕಟಣೆಯೆಂದರೆ ಡುಕಾಟಿ ಹೊಸ ಮಾನ್ಸ್ಟರ್ ಬೈಕ್ ಅನ್ನು ಇದೇ ತಿಂಗಳ 23 ರಂದು ಬಿಡುಗಡೆಗೊಳಿಸಲಿದೆ. ಹೊಸ ಡುಕಾಟಿ ಮಾನ್ಸ್ಟರ್ ಕಳೆದ ವರ್ಷಾಂತ್ಯದಲ್ಲಿ ಜಾಗತಿಕವಾಗಿ ಅನಾವರಣಗೊಂಡಿತು ಮತ್ತು ಅದರ ಜಾಗತಿಕ ಚೊಚ್ಚಲ ಸುಮಾರು 9 ತಿಂಗಳ ನಂತರ ಭಾರತಕ್ಕೆ ಬರುತ್ತಿದೆ. ಕರೋನಾ ಆತಂಕದಿಂದ ಭಾರತೀಯ ಮಾರುಕಟ್ಟೆಯಲ್ಲಿ ಈ ಬೈಕ್ ಬಿಡುಗಡೆಯು ತಡವಾಗಿದೆ.

ಈ ಹೊಸ ಡುಕಾಟಿ ಮಾನ್ಸ್ಟರ್ ಬೈಕ್ ವಿನ್ಯಾಸದ ವಿಷಯದಲ್ಲಿ ಮಾತ್ರವಲ್ಲದೆ ಹೊಸ ಫೀಚರ್, ರೈಡರ್ ಏಡ್ಸ್ ಮತ್ತು ಹೆಚ್ಚು ಪವರ್ ಫುಲ್ ಎಂಜಿನ್ ಅನ್ನು ಸಹ ಒಳಗೊಂಡಿದೆ. 2021ರ ಡುಕಾಟಿ ಮಾನ್ಸ್ಟರ್ ಬೈಕ್ ದೈತ್ಯಾಕಾರದ ಹಗುರವಾದ ನೇಕೆಡ್ ಸ್ಟ್ರೀಟ್ ಫೈಟರ್ ಆಗಿದೆ. ಈ ಹೊಸ ಡುಕಾಟಿ ಮಾನ್ಸ್ಟರ್ ಬೈಕ್ ಸ್ಪೋರ್ಟಿಯರ್ ಮತ್ತು ಸ್ಕಪಲಡಡ್ ವಿನ್ಯಾಸದೊಂದಿಗೆ ಬರುತ್ತದೆ.

ಈ ಮಾನ್ಸ್ಟರ್ ಹೊಚ್ಚ ಹೊಸ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಅದರ ಸುತ್ತಲಿನ ವೃತ್ತಾಕಾರದ ಎಲ್‌ಇಡಿ ಡಿಆರ್‌ಎಲ್‌ಗಳಿಂದ ಎದ್ದು ಕಾಣುತ್ತದೆ. 2021ರ ಮಾನ್ಸ್ಟರ್ ಬೈಕ್ ಸ್ಕಪಲಡಡ್ ಟ್ಯಾಂಕ್ ವಿನ್ಯಾಸ, ಡೈನಾಮಿಕ್ ಟರ್ನ್ ಇಂಡಿಕೇಟರ್ಸ್ ಮತ್ತು ಹಿಂಭಾಗದಲ್ಲಿ ಎಲ್ಇಡಿ ಟೈಲ್‌ಲೈಟ್‌ಗಳನ್ನು ಸಹ ಒಳಗೊಂಡಿದೆ. ಈ ಹೊಸ ಬೈಕಿನಲ್ಲಿ ಹ್ಯಾಂಡಲ್‌ಬಾರ್ ಮತ್ತು ಫುಟ್‌ಪೆಗ್ ಸ್ಥಾನಗಳಿಗೆ ಬದಲಾಯಿಸಲಾಗಿದೆ.

ಹೊಸ ಡುಕಾಟಿ ಮಾನ್ಸ್ಟರ್ ಸ್ಟೈಲಿಂಗ್ ಅಪ್‌ಡೇಟ್‌ನೊಂದಿಗೆ, ಡುಕಾಟಿ ಹೊಸ ಮಾನ್ಸ್ಟರ್ ಇನ್ನೂ ಹಗುರವಾದ ಆವೃತ್ತಿಯಾಗಿದೆ ಎಂದು ಖಚಿತಪಡಿಸಿದೆ. ಇಟಲಿ ಸೂಪರ್‌ಬೈಕ್ ತಯಾರಕರು ಈ ಬೈಕಿನ ತೂಕವನ್ನು ಕಡಿಮೆ ಮಾಡಲು ಯಶಸ್ವಿಯಾಗಿದ್ದಾರೆ.ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಡುಕಾಟಿ ಮಾನ್ಸ್ಟರ್ ಬೈಕಿಗೆ 18 ಕೆಜಿ ಕಡಿಮೆಯಾಗಿದೆ. ಈ ಹೊಸ ಡುಕಾಟಿ ಮಾನ್ಸ್ಟರ್ ಬೈಕ್ ದೊಡ್ಡ ಪ್ಯಾನಿಗಲೆ ಒಡಹುಟ್ಟಿದವರಿಂದ ಕಾನ್ಸೆಪ್ಟ್ ಅನ್ನು ಎರವಲು ಪಡೆಯುತ್ತದೆ.

2021ರ ಡುಕಾಟಿ ಮಾನ್ಸ್ಟರ್ ಬೈಕಿನಲ್ಲಿ ಪವರ್ ಫುಲ್ 937 ಸಿಸಿ ಎಲ್-ಟ್ವಿನ್ ಟೆಸ್ಟಾಸ್ಟ್ರೆಟಾ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 9250 ಆರ್‌ಪಿಎಂನಲ್ಲಿ 111 ಬಿಹೆಚ್‌ಪಿ ಪವರ್ ಮತ್ತು 6500 ಆರ್‌ಪಿಎಂನಲ್ಲಿ 93 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಇದರೊಂದಿಗೆ ಟೋ-ವೇ ಕ್ವೀಕ್ ಶಿಫ್ಟರ್ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತದೆ. 2021ರ ಡುಕಾಟಿ ಮಾನ್ಸ್ಟರ್ ಬೈಕಿನಲ್ಲಿನ ಇತರ ಫೀಚರ್ ಗಳಾದ, ಎಲೆಕ್ಟ್ರಾನಿಕ್ ರೈಡರ್ ಅಸಿಸ್ಟ್ ಗಳು ಮತ್ತು 4.3-ಇಂಚಿನ ಪೂರ್ಣ-ಬಣ್ಣದ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇದರೊಂದಿಗೆ ಸ್ಪೋರ್ಟ್, ಅರ್ಬನ್ ಮತ್ತು ಟೂರಿಂಗ್ ಎಂಬ ಮೂರು ರೈಡಿಂಗ್ ಮೋಡ್‌ಗಳನ್ನು ಕೂಡ ಒಳಗೊಂಡಿದೆ.

ದೈತ್ಯಾಕಾರದ ಪಾನಿಗಲೆ ವಿ4 ನಿಂದ ಸ್ಫೂರ್ತಿ ಪಡೆದ ಎಲ್ಲಾ ಹೊಸ ಅಲ್ಯೂಮಿನಿಯಂ ಫ್ರೇಮ್ ಅನ್ನು ಪಡೆಯುತ್ತದೆ. ಹಿಂಭಾಗದಲ್ಲಿರುವ ಸಬ್-ಫ್ರೇಮ್ ಅನ್ನು ಗಾಜಿನ ಫೈಬರ್ ಬಲವರ್ಧಿತ ಪಾಲಿಮರ್ (ಜಿಎಫ್‌ಆರ್‌ಪಿ) ನಿಂದ ಮಾಡಲಾಗಿದ್ದು, ಇದು ಮೊದಲಿಗಿಂತ ಹಗುರ ಮತ್ತು ಬಲಶಾಲಿಯಾಗಿದೆ.

ಈ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 43 ಎಂಎಂ ಅಪ್ ಸೈಡ್ ಫೋರ್ಕ್‌ಗಳನ್ನು 130 ಎಂಎಂ ಟ್ರಾವೆಲ್ ಮತ್ತು ಹಿಂಭಾಗದಲ್ಲಿ 140 ಎಂಎಂ ಟ್ರಾವೆಲ್‌ನೊಂದಿಗೆ ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಅನ್ನು ಪಡೆಯುತ್ತದೆ. ಈ ಬೈಕ್ ಹೊಸ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಪಡೆಯುತ್ತದೆ.

ಇನ್ನು ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಇದು ಎರಡು 320 ಎಂಎಂ ಡಿಸ್ಕ್‌ಗಳನ್ನು ಟ್ವಿನ್ ಬ್ರೆಂಬೊ ಎಂ 4.32 4-ಪಿಸ್ಟನ್ ಮೊನೊಬ್ಲಾಕ್ ಕ್ಯಾಲಿಪರ್‌ಗಳನ್ನು ಪಡೆಯುತ್ತದೆ. ಹಿಂಭಾಗದಲ್ಲಿ ಒಂದು 245 ಎಂಎಂ ಡಿಸ್ಕ್ ಅನ್ನು ಬ್ರೆಂಬೊ ಕಾಲಿಪರ್ ಮೂಲಕ ಹಿಡಿದಿಟ್ಟುಕೊಳ್ಳುತ್ತದೆ. ಮುಂಭಾಗದ ಬ್ರೇಕ್‌ನಂತೆ, ಇದು ಸಿಂಟರ್ಡ್ ಬ್ರೇಕ್ ಪ್ಯಾಡ್‌ಗಳನ್ನು ಒಳಗೊಂಡಿದೆ.

ಡುಕಾಟಿ ತನ್ನ ಸೂಪರ್‌ಸ್ಪೋರ್ಟ್ 950 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಡುಕಾಟಿ ಸೂಪರ್‌ಸ್ಪೋರ್ಟ್ 950 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.13.49 ಲಕ್ಷವಾಗಿದೆ. ಹೊಸ ಡುಕಾಟಿ ಸೂಪರ್‌ಸ್ಪೋರ್ಟ್ 950 ಬೈಕ್ ಸೂಪರ್‌ಸ್ಪೋರ್ಟ್ 950 ಮತ್ತು ಸೂಪರ್‌ಸ್ಪೋರ್ಟ್ 950 ಎಸ್ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ.

ಇದರಲ್ಲಿ ಸೂಪರ್‌ಸ್ಪೋರ್ಟ್ 950 ಎಸ್ ರೂಪಾಂತರದ ಬೆಲೆಯು ರೂ.15.49 ಲಕ್ಷಗಳಾದರೆ, ಡುಕಾಟಿ ಕೆಂಪು ಬಣ್ಣ ಮತ್ತು ಆರ್ಕ್ಟಿಕ್ ವೈಟ್ ಸಿಲ್ಕ್ ಬಣ್ಣದ ಬಣ್ಣದ ಮಾದರಿಗೆ ರೂ.15.69 ಲಕ್ಷವಾಗಿದೆ. ಭಾರತದಾದ್ಯಂತ ಎಲ್ಲಾ ಡುಕಾಟಿ ಡೀಲರ್‌ಶಿಪ್‌ಗಳಲ್ಲಿ ಬುಕ್ಕಿಂಗ್ ಪ್ರಾರಂಭಿಸಲಾಗಿದೆ. ಇನ್ನು ಶೀಘ್ರದಲ್ಲೇ ಈ ಸೂಪರ್‌ಸ್ಪೋರ್ಟ್ ಬೈಕಿನ ವಿತರಣೆಯನ್ನು ಪ್ರಾರಂಭಿಸಲಿದೆ.

2021ರ ಡುಕಾಟಿ ಮಾನ್ಸ್ಟರ್ ಬೈಕಿನಲ್ಲಿ ಐಷಾರಾಮಿ ಮಾದರಿಗಳಲ್ಲಿರುವಂತ ಟ್ಯಾಕ್ಷನ್ ಕಂಟ್ರೀಲ್, ವ್ಹೀಲಿ ಕಂಟ್ರೋಲ್ ಮತ್ತು ಲಾಂಚ್ ಕಂಟ್ರೋಲ್ ಗಳನ್ನು ಹೊಂದಿವೆ. ಇನ್ನು ಈ ಹೊಸ 2021ರ ಡುಕಾಟಿ ಮಾನ್ಸ್ಟರ್ ಮಿಡಲ್ ವೇಟ್ ನೇಕೆಡ್ ಸ್ಪೋರ್ಟ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಮತ್ತು ಕವಾಸಕಿ ಝಡ್900 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications








