ಭಾರತದಲ್ಲಿ ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಂಡ ಡುಕಾಟಿ ಮಲ್ಟಿಸ್ಟ್ರಾಡಾ 950 ಎಸ್ ಬೈಕ್
ಇಟಲಿ ಮೂಲದ ಸೂಪರ್‌ಬೈಕ್ ತಯಾರಕ ಕಂಪನಿಯಾದ ಡುಕಾಟಿ ತನ್ನ ಮಲ್ಟಿಸ್ಟ್ರಾಡಾ 950 ಎಸ್ ಬೈಕನ್ನು ಹೊಸ ಜಿಪಿ ವೈಟ್ ಬಣ್ಣದ ಆಯ್ಕೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಡುಕಾಟಿ ಮಲ್ಟಿಸ್ಟ್ರಾಡಾ 950 ಎಸ್ ಜಿಪಿ ವೈಟ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.15.69 ಲಕ್ಷಗಳಾಗಿದೆ.

ಡುಕಾಟಿ ಕಂಪನಿಯು ಕಳೆದ ವರ್ಷ ಮಲ್ಟಿಸ್ಟ್ರಾಡಾ 950 ಎಸ್ ಬೈಕನ್ನು ಬಿಡುಗಡೆಗೊಳಿಸುವಾಗ ಇದನ್ನು ಹೊಸ ಬಣ್ಣದ ಲೆವಿರಿಯೊಂದಿಗೆ ಬಿಡುಗಡೆಗೊಳಿಸುವುದಾಗಿ ಘೋಷಿಸಿದ್ದರು. ಅದರಂತೆ ಬಿಡುಗಡೆಗೊಂಡ ಮಲ್ಟಿಸ್ಟ್ರಾಡಾ 950 ಎಸ್ ಜಿಪಿ ವೈಟ್ ಬಣ್ಣದ ಬೈಕ್ ಆರ್ಕ್ಟಿಕ್ ಕ್ಯಾಮೊ ಬಣ್ಣದ ಫ್ಯೂಯಲ್ ಟ್ಯಾಂಕ್ ಮತ್ತು ಫ್ರಂಟ್ ಫೇರಿಂಗ್‌ನಲ್ಲಿ ಗ್ರೇ ಮತ್ತು ಬೈಟ್ ಬಣ್ಣವನ್ನು ಹೊಂದಿದೆ. ಹೆಡ್‌ಲ್ಯಾಂಪ್ ಕೌಲ್ ಕೂಡ ಬಿಳಿ ಬಣ್ಣದಲ್ಲಿದೆ.

ಹೊಸ ಬಣ್ಣದ ಯೋಜನೆಯ ಹೊರತಾಗಿ, ಮಲ್ಟಿಸ್ಟ್ರಾಡಾ 950 ಎಸ್ ಮತ್ತು 950 ಎಸ್ ಜಿಪಿ ವೈಟ್ ನಡುವೆ ಬೇರೆ ಯಾವುದೇ ಬದಲಾವಣೆಗಳಿಲ್ಲ. ಆಡರೆ ಹೊಸ ಬಣ್ಣದಲ್ಲಿ ಡುಕಾಟಿ ಮಲ್ಟಿಸ್ಟ್ರಾಡಾ 950 ಎಸ್ ಬೈಕ್ ಆಕರ್ಷಕ ಮತ್ತು ಹೆಚ್ಚು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಈ ಡುಕಾಟಿ ಮಲ್ಟಿಸ್ಟ್ರಾಡಾ 950 ಎಸ್ ಜಿಪಿ ವೈಟ್ ಬೈಕಿನಲ್ಲಿ 937 ಸಿಸಿ, ಟ್ವಿನ್-ಸಿಲಿಂಡರ್, ಟೆಸ್ಟಾಸ್ಟ್ರೆಟಾ 11 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 9000 ಆರ್‌ಪಿಎಂನಲ್ಲಿ 112 ಬಿಹೆಚ್‍ಪಿ ಪವರ್ ಮತ್ತು 7750 ಆರ್‌ಪಿಎಂನಲ್ಲಿ 96 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ಅನ್ನು ಅಸಿಸ್ಟ್ ಕ್ಲಚ್ ಮತ್ತು ಬ್ರ್ಯಾಂಡ್‌ನ (ಡಿಕ್ಯೂಎಸ್) ಡುಕಾಟಿ ಕ್ವಿಕ್ ಶಿಫ್ಟ್ ಬೈ-ಡೈರಕ್ಷನಲ್ ಕ್ವಿಕ್-ಶಿಫ್ಟರ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಡುಕಾಟಿ ಮಲ್ಟಿಸ್ಟ್ರಾಡಾ 950 ಎಸ್ ತನ್ನ ಹಿರಿಯ ಸಹೋದರ ಮಲ್ಟಿಸ್ಟ್ರಾಡಾ 1260 ಬೈಕಿನಿಂದ ಸ್ಫೂರ್ತಿ ಪಡೆದಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಡುಕಾಟಿ ಮಲ್ಟಿಸ್ಟ್ರಾಡಾ 950 ಎಸ್ ಬೈಕ್ ಕಾರ್ನರಿಂಗ್ ಲ್ಯಾಂಪ್, ವಿಶಿಷ್ಟವಾದ ಕಲ್ ಗಾರ್ಡ್‌ಗಳು ಮತ್ತು ಎತ್ತರದ ವಿಂಡ್‌ಸ್ಕ್ರೀನ್ ಜೊತೆಗೆ ಟ್ವಿನ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿವೆ. ಹೊಸ ಡುಕಾಟಿ ಮಲ್ಟಿಸ್ಟ್ರಾಡಾ 950 ಎಸ್ ಹೊಸ ಲೆವಿರಿಯನ್ನು ನೀಡಿದೆ.

ಇದು ಬ್ರ್ಯಾಂಡ್‌ನ ಮೋಟೋ ಜಿಪಿ ಬೈಕ್‌ಗಳಿಂದಲೂ ಸ್ಫೂರ್ತಿ ಪಡೆದಿದೆ. ಈ ಬೈಕಿನಲ್ಲಿ 12ವಿ ಪವರ್ ಸಾಕೆಟ್ ಗಳನ್ನು ಹೊಂದಿವೆ. ಯುಎಸ್ಬಿ ಪೋರ್ಟ್ ಮತ್ತು 20-ಲೀಟರ್ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಇನ್ನು ಈ ಹೊಸ ಅಡ್ವೆಂಚರ್-ಟೂರರ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 48 ಎಂಎಂ ಸೆಮಿ-ಆಕ್ಟಿವ್ (ಡಿಎಸ್ಎಸ್) ಡುಕಾಟಿ ಸ್ಕೈಹೂಕ್ ಸಸ್ಪೆಂಕ್ಷನ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಯುನಿಟ್ ಅನ್ನು ಹೊಂದಿದೆ. ಈ ಎರಡು ಸಸ್ಪೆಂಕ್ಷನ್ ಸೆಟಪ್ ಅನ್ನು ಎಲೆಕ್ಟ್ರಿಕ್ ಆಗಿ ನಿಯಂತ್ರಿಸಬಹುದಾಗಿದೆ.

ಇನ್ನು ಈ ಹೊಸ ಬೈಕಿನ ಎರಡು ಕಡೆಗಳಲ್ಲಿ ಡ್ಯುಯಲ್ ಡಿಸ್ಕ್ ಮೂಲಕ ಮುಂಭಾಗದಲ್ಲಿ ರೇಡಿಯಲ್-ಮೌಂಟೆಡ್ ಕ್ಯಾಲಿಪರ್‌ಗಳೊಂದಿಗೆ ಮತ್ತು ಹಿಂಭಾಗದಲ್ಲಿ ಎರಡು ಪಿಸ್ಟನ್ ಕ್ಯಾಲಿಪರ್ ಹೊಂದಿರುವ ಒಂದೇ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ. ಈ ಬೈಕಿನಲ್ಲಿ 17 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ.


Click it and Unblock the Notifications








