140 ಕಿ.ಮೀ ರೇಂಜ್ ಹೊಂದಿರುವ Enigma ಎಲೆಕ್ಟ್ರಿಕ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಾಗುತ್ತಿದೆ. ಇದರಿಂದ ಪಾರಾಗಲು ಹೆಚ್ಚಿನ ಜನರು ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳ ಕಡೆ ಮೊರೆ ಹೋಗುತ್ತಿದ್ದಾರೆ. ಇದರಿಂದ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ.

140 ಕಿ.ಮೀ ರೇಂಜ್ ಹೊಂದಿರುವ Enigma ಎಲೆಕ್ಟ್ರಿಕ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಇದರಿಂದ ಹಲವು ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಗಳು ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುತ್ತಿದೆ. ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಗಳದ ಬಜಾಜ್ ಆಟೋ, ಟಿವಿಎಸ್ ಮೋಟಾರ್ ಸಹ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಈಗಾಗಲೇ ಬಿಡುಗಡೆಗೊಳಿಸಿವೆ. ಬಜಾಜ್‌ ಚೇತಕ್ ಎಲೆಕ್ಟ್ರಿಕ್ ಮತ್ತು ಟಿವಿಎಸ್ ಐಕ್ಯೂಬ್‌ನಂತಹ ಸ್ಕೂಟರ್‌ಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಇದರ ನಡುವೆ ಹಲವು ಎಲೆಕ್ಟ್ರಿಕ್ ದ್ವಿಚಕ್ರ ಬ್ರ್ಯಾಂಡ್ ಗಳು ಕೂಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಪರಿಚಯಿಸಿದೆ.

140 ಕಿ.ಮೀ ರೇಂಜ್ ಹೊಂದಿರುವ Enigma ಎಲೆಕ್ಟ್ರಿಕ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಇದರ ನಡುವೆ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಸ್ಟಾರ್ಟ್‌ಅಪ್‌ ಎನಿಗ್ಮಾ ಆಟೋಮೊಬೈಲ್ಸ್ ತನ್ನ ಮುಂಬರುವ 'ಕೆಫೆ ರೇಸರ್' ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಎನಿಗ್ಮಾ ಕೆಫೆ ರೇಸರ್' ಎಲೆಕ್ಟ್ರಿಕ್ ಬೈಕ್ ಖರೀಗಾಗಿ ಬುಕ್ಕಿಂಗ್ ಪ್ರಾರಂಭಿಸಿದ್ದಾರೆ.

140 ಕಿ.ಮೀ ರೇಂಜ್ ಹೊಂದಿರುವ Enigma ಎಲೆಕ್ಟ್ರಿಕ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಮುಂದಿನ ತಿಂಗಳು ದೀಪಾವಳಿಗೆ ಮುಂಚಿತವಾಗಿ ಮುಂಬರುವ ಕೆಲವೇ ದಿನಗಳಲ್ಲಿ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಆಸಕ್ತ ಗ್ರಾಹಕರು ಅಧಿಕೃತ ಡೀಲರ್‌ಶಿಪ್‌ಗಳು ಅಥವಾ ಅಧಿಕೃತ ಕಂಪನಿ ವೆಬ್‌ಸೈಟ್ ಮೂಲಕ ಬುಕ್ಕಿಂಗ್ ಅನ್ನು ಮಾಡಿಕೊಳ್ಳಬಹುದು. ಕೆಫೆ ರೇಸರ್ ಅನ್ನು ಭಾರತದಲ್ಲಿ ಸಂಪೂರ್ಣವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ ಎಂದು ಎನಿಗ್ಮಾ ಹೇಳಿಕೊಂಡಿದೆ.

140 ಕಿ.ಮೀ ರೇಂಜ್ ಹೊಂದಿರುವ Enigma ಎಲೆಕ್ಟ್ರಿಕ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಕೆಫೆ ರೇಸರ್ ಅನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರಾರಂಭಿಸಲಾಗುವುದು. ಬೈಕ್ ಅರ್ಲ್ ಗ್ರೇ, ಮಿಲಿಟರಿ ಗ್ರೀನ್, ಥಂಡರ್ ವೈಟ್, ಆರ್‌ಎಂಎಸ್ ರೆಡ್ ಮತ್ತು ಲಾಗ್ ಆರೆಂಜ್ ಎಂಬ ಐದು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಎನಿಗ್ಮಾ'ಕೆಫೆ ರೇಸರ್' ಎಲೆಕ್ಟ್ರಿಕ್ ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದರ ಹೆಸರೇ ಸ್ಪಷ್ಟವಾಗಿ ಸೂಚಿಸುವಂತೆ, ಕೆಫೆ ರೇಸರ್ ಅನ್ನು ನ್ಯೂ-ರೆಟ್ರೊ ಸ್ಟೈಲಿಂಗ್ ಅಂಶಗಳೊಂದಿಗೆ ಕೆಫೆ ರೇಸರ್ ಆಗಿ ವಿನ್ಯಾಸಗೊಳಿಸಲಾಗಿದೆ.

140 ಕಿ.ಮೀ ರೇಂಜ್ ಹೊಂದಿರುವ Enigma ಎಲೆಕ್ಟ್ರಿಕ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಇವುಗಳಲ್ಲಿ ರೌಂಡ್ ಹೆಡ್‌ಲ್ಯಾಂಪ್, ಫೋರ್ಕ್ ಗೈಟರ್‌ಗಳು, ಟಿಯರ್‌ಡ್ರಾಪ್-ಆಕಾರದ ಇಂಧನ ಟ್ಯಾಂಕ್, ವೈರ್-ಸ್ಪೋಕ್ಡ್ ವ್ಹೀಲ್ ಗಳು ಮತ್ತು ಸಿಗ್ನೇಚರ್ ಕೆಫೆ-ರೇಸರ್-ಶೈಲಿಯ ಕೌಲ್‌ನೊಂದಿಗೆ ಸಿಂಗಲ್-ಪೀಸ್ ಪೀಸ್ ಸೀಟ್ ಸೇರಿವೆ. ಇತರ ಮುಖ್ಯಾಂಶಗಳಲ್ಲಿ ಕ್ಲಿಪ್-ಆನ್ ಹ್ಯಾಂಡಲ್‌ಬಾರ್, ಚಿಕ್ಕ ಮುಂಭಾಗದ ಫೆಂಡರ್ ಮತ್ತು ಹಿಂಭಾಗದ ಟೈರ್ ಹಗ್ಗರ್ ಸೇರಿವೆ.

140 ಕಿ.ಮೀ ರೇಂಜ್ ಹೊಂದಿರುವ Enigma ಎಲೆಕ್ಟ್ರಿಕ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಬೈಕಿನಲ್ಲಿ ಸಿಲ್ವರ್ ಬಣ್ಣದ ಫಾಕ್ಸ್ ಟ್ಯಾಂಕ್, ಬಿಳಿ ಬಣ್ಣದ ಟೇಲ್ ಭಾಗ ಮತ್ತು ಬ್ಲ್ಯಾಕ್ ಸೆಂಟ್ರಲ್ ಪ್ಯಾನೆಲ್ ಮತ್ತು ರಿಮ್‌ಗಳೊಂದಿಗೆ ಉತ್ತಮವಾದ ವ್ಯತಿರಿಕ್ತ ಗೋಷ್ ಫಿನಿಶಿಂಗ್ ಹೊಂದಿದೆ. ಎಲೆಕ್ಟ್ರಿಕ್ ಮೋಟಾರ್ ಮತ್ತು ಬ್ಯಾಟರಿ ಹೊಂದಿರುವ ಬೈಕಿನ ಸೆಂಟ್ರಲ್ ಪ್ಯಾನೆಲ್ ಪ್ರೊಫೈಲ್‌ನಲ್ಲಿ ಸ್ವಲ್ಪ ವಿಭಿನ್ನವಾಗಿ ಕಾಣುತ್ತದೆ.

140 ಕಿ.ಮೀ ರೇಂಜ್ ಹೊಂದಿರುವ Enigma ಎಲೆಕ್ಟ್ರಿಕ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಎನಿಗ್ಮಾ ಆಟೋಮೊಬೈಲ್ಸ್‌ನ ಸಂಸ್ಥಾಪಕ ಮತ್ತು ಸಿಇಒ ಅನ್ಮೋಲ್ ಬೋಹ್ರೆ ಅವರು ಈ ಬೆಳವಣಿಗೆಯ ಕುರಿತು ಮಾತನಾಡಿ, "ನಾವು ನಮ್ಮ ಮೋಟಾರ್‌ಸೈಕಲ್ ಅನ್ನು ವಿನ್ಯಾಸಗೊಳಿಸಲು ಪ್ರಾರಂಭಿಸಿದಾಗ, ನಮ್ಮ ಮಹತ್ವಾಕಾಂಕ್ಷೆಯು ಶಕ್ತಿಯುತವಾದ ಪರಿಶೋಧನಾ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ ಆದರೆ ದೈನಂದಿನ ಪ್ರಯಾಣವಕ್ಕೂ ಅನುಗುಣವಾಗಿರುತ್ತದೆ.

140 ಕಿ.ಮೀ ರೇಂಜ್ ಹೊಂದಿರುವ Enigma ಎಲೆಕ್ಟ್ರಿಕ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ - ಕೆಫೆ ರೇಸರ್ ಅನ್ನು ಪ್ರಾರಂಭಿಸಲು ನಾವು ಅತ್ಯಂತ ರೋಮಾಂಚನಗೊಂಡಿದ್ದೇವೆ ಮತ್ತು ಸಂತೋಷಪಡುತ್ತೇವೆ, ಈ ಹೊಸ ಎಲೆಕ್ಟ್ರಿಕ್ ಬೈಕ್ ಸುಧಾರಿತ ಮತ್ತು ಸಮರ್ಥವಾಗಿದೆ ಎಂದು ಹೇಳಿದರು.

140 ಕಿ.ಮೀ ರೇಂಜ್ ಹೊಂದಿರುವ Enigma ಎಲೆಕ್ಟ್ರಿಕ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಎನಿಗ್ಮಾ 'ಕೆಫೆ ರೇಸರ್' ಎಲೆಕ್ಟ್ರಿಕ್ ಬೈಕಿನಲ್ಲಿ ಸಿಂಗಲ್ ಎಲೆಕ್ಟ್ರಿಕ್ ಮೋಟರ್ ಆಗಿದ್ದು ಅದು 5.6 ಕಿವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದು ಗರಿಷ್ಠ ಪವರ್ ಅನ್ನು ಉತ್ಪಾದಿಸುತ್ತದೆ. ಈ ಮೋಟಾರು72V 50 Ah LifePo4 (ಲಿಥಿಯಂ ಫೆರಸ್ ಫಾಸ್ಫೇಟ್) ಬ್ಯಾಟರಿ ಸೆಲ್‌ನಿಂದ ಪವರ್ ಅನ್ನು ಪಡೆಯುತ್ತದೆ, ಇನ್ನು ಈ ಕೆಫೆ ರೇಸರ್' ಎಲೆಕ್ಟ್ರಿಕ್ ಬೈಕ್ ಒಂದೇ ಚಾರ್ಜ್‌ನಲ್ಲಿ 140 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

140 ಕಿ.ಮೀ ರೇಂಜ್ ಹೊಂದಿರುವ Enigma ಎಲೆಕ್ಟ್ರಿಕ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಈ ಎಲೆಕ್ಟ್ರಿಕ್ ಬೈಕ್ ಟಾಪ್-ಸ್ಪೀಡ್ ಸುಮಾರು 136 ಕಿ.ಮೀ ಆಗಿದೆ. ಈ ಕೆಫೆ ರೇಸರ್‌ನ ಕಾರ್ಯಕ್ಷಮತೆಯು ಐಸಿ ಎಂಜಿನ್-ಚಾಲಿತ ಬೈಕ್ ಗಳಿಗೆ ಸಮನಾಗಿದೆ ಎಂದು ಹೇಳಲಾಗುತ್ತದೆ. ಸ್ಟ್ಯಾಂಡರ್ಡ್ ಚಾರ್ಜರ್ ಅನ್ನು ಬಳಸಿಕೊಂಡು, ಬ್ಯಾಟರಿಯನ್ನು 3 ಗಂಟೆಗಳಲ್ಲಿ 0-80 ಪ್ರತಿಶತದಷ್ಟು ಅಥವಾ ನಾಲ್ಕು ಗಂಟೆಗಳಲ್ಲಿ ಪೂರ್ಣ 100 ಪ್ರತಿಶತದಷ್ಟು ಚಾರ್ಜ ಮಾಡಬಹುದು. ಕಂಪನಿಯು ಅನಿಯಮಿತ ಕಿಲೋಮೀಟರ್‌ಗಳೊಂದಿಗೆ ಬ್ಯಾಟರಿ ಪ್ಯಾಕ್‌ಗೆ 5 ವರ್ಷಗಳ ವಾರಂಟಿಯನ್ನು ಒದಗಿಸುತ್ತಿದೆ ಮತ್ತು ಬೈಕಿನ ಸ್ಪೋಕ್ ವೀಲ್‌ಗಳು 3 ವರ್ಷಗಳ ಟೈರ್ ವಾರಂಟಿಯೊಂದಿಗೆ ನೀಡಲಾಗುತ್ತದೆ.

140 ಕಿ.ಮೀ ರೇಂಜ್ ಹೊಂದಿರುವ Enigma ಎಲೆಕ್ಟ್ರಿಕ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಇನ್ನು ವಿಂಟೇಜ್-ಪ್ರೇರಿತ ಬೈಕ್ ಆಫ್-ರೋಡಿಂಗ್ ಸಾಮರ್ಥ್ಯಗಳ ಸಂಯೋಜನೆಯಲ್ಲಿ ಪ್ರಯಾಣಿಕರ ಅನುಕೂಲವನ್ನು ನೀಡುತ್ತದೆ ಎಂದು ಬೋಹ್ರೆ ಬಹಿರಂಗಪಡಿಸಿದ್ದಾರೆ. ಈ ಎಲೆಕ್ಟ್ರಿಕ್ ಕೆಫೆ ರೇಸರ್ ಸರಳವಾಗಿದೆ, ಕಡಿಮೆ ನಿರ್ವಹಣೆ ಮತ್ತು ಹೆಚ್ಚಿನ ಪವರ್ ಹೊಂದಿದೆ. ಮೊದಲೇ ಹೇಳಿದಂತೆ, ಬೈಕನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಪ್ರಸ್ತುತ ಭೋಪಾಲ್ ಮತ್ತು ಹೈದರಾಬಾದ್‌ನಲ್ಲಿರುವ ಕಂಪನಿಯ ಘಟಕಗಳಲ್ಲಿ ತಯಾರಿಸಲಾಗುತ್ತಿದೆ. ಈ ಹೊಸ ಎನಿಗ್ಮಾ 'ಕೆಫೆ ರೇಸರ್' ಎಲೆಕ್ಟ್ರಿಕ್ ಬೈಕ್ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ.

Most Read Articles

Kannada
English summary
New enigma electric motorcycle cafe racer booking started in india range details
Story first published: Tuesday, October 26, 2021, 14:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X