ಕಡಿಮೆ ಬೆಲೆ, ಅತ್ಯಾಧುನಿಕ ಫೀಚರ್‌ಗಳೊಂದಿಗೆ ಬಿಡುಗಡೆಗೊಂಡ ಫೆಲಿಡೆ ಮಾವೆನ್ ಇ-ಬೈಕ್

ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಕ್ಕೇರುತ್ತಿದ್ದು, ಇದರಿಂದ ಪಾರಾಗಲು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಹಲವಾರು ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿ ಪಡಿಸುತ್ತಿದೆ.

ಕಡಿಮೆ ಬೆಲೆ, ಅತ್ಯಾಧುನಿಕ ಫೀಚರ್‌ಗಳೊಂದಿಗೆ ಬಿಡುಗಡೆಗೊಂಡ ಫೆಲಿಡೆ ಮಾವೆನ್ ಇ-ಬೈಕ್

ಇದರ ನಡುವೆ ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಇ-ಬೈಕ್ ಗಳಿಗೆ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ. ಫೆಲಿಡೆ ಎಲೆಕ್ಟ್ರಿಕ್ ಹೊಸ ಪೆಡಲ್-ಅಸಿಸ್ಟ್ ಇ-ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಫೆಲಿಡೆ ಪೆಡಲ್-ಅಸಿಸ್ಟ್ ಇ-ಬೈಕ್ ಬೆಲೆಯು ರೂ.24,500 ಆಗಿದೆ. ಈ ಹೊಸ ಇ-ಬೈಕಿನಲ್ಲಿ 250ಡಬ್ಲ್ಯು/32ಎನ್ಎಂ ಬಿಎಲ್ಡಿಸಿ ಹಬ್ ಮೋಟರ್ ಅನ್ನು ಹೊಂದಿದೆ. ಇನ್ನು ಈ ಇ-ಬೈಕ್ 25 ಕಿಲೋಮೀಟರ್ ಟಾಪ್ ಸ್ಫೀಡ್ ಅನ್ನು ಹೊಂದಿದೆ.

ಕಡಿಮೆ ಬೆಲೆ, ಅತ್ಯಾಧುನಿಕ ಫೀಚರ್‌ಗಳೊಂದಿಗೆ ಬಿಡುಗಡೆಗೊಂಡ ಫೆಲಿಡೆ ಮಾವೆನ್ ಇ-ಬೈಕ್

ಇನ್ನು ಈ ಹೊಸ ಬೈಕಿನಲ್ಲಿ 36ವಿ, 7.8 ಎಎಚ್ ಎಲ್ಐ ಬ್ಯಾಟರಿ ಪ್ಯಾಕ್ ಅನ್ನು ನೀಡಿದೆ. ಈ ಬ್ಯಾಟರಿ ಪ್ಯಾಕ್ 35-50 ಕಿಲೋಮೀಟರ್ ರೇಂಜ್ ಅನ್ನು ಹೊಂದಿದೆ. ಇದ್ ಪೂರ್ಣ ಚಾರ್ಜ್ ಆಗಲು ಮೂರೂವರೆ ಗಂಟೆ ತೆಗೆದುಕೊಳ್ಳುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಕಡಿಮೆ ಬೆಲೆ, ಅತ್ಯಾಧುನಿಕ ಫೀಚರ್‌ಗಳೊಂದಿಗೆ ಬಿಡುಗಡೆಗೊಂಡ ಫೆಲಿಡೆ ಮಾವೆನ್ ಇ-ಬೈಕ್

ಈ ಹೊಸ ಫೆಲಿಡೆ ಇ-ಬೈಕಿನಲ್ಲಿ 19 ಇಂಚಿನ ಕ್ರೋಮೋಲಿ ಸ್ಟೀಲ್ ಫ್ರೇಮ್ ಮತ್ತು 27.5-ಇಂಚಿನ ಅಲ್ಯೂಮಿನಿಯಂ ವ್ಹೀಲ್ ಗಳನ್ನು ಒಳಗೊಂಡಿದೆ. ಇವುಗಳು 21 ಕೆಜಿ ತೂಕವನ್ನು ಹೊಂದಿದೆ.

ಕಡಿಮೆ ಬೆಲೆ, ಅತ್ಯಾಧುನಿಕ ಫೀಚರ್‌ಗಳೊಂದಿಗೆ ಬಿಡುಗಡೆಗೊಂಡ ಫೆಲಿಡೆ ಮಾವೆನ್ ಇ-ಬೈಕ್

ಇನ್ನು ಹೊಸ ಇ-ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಅನ್ನು ಒಳಗೊಂಡಿದೆ. ಇನ್ನು ಹೆಚ್ಚಿನ ಸುರಕ್ಷತೆಗಾಗಿ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಅಳವಡಿಸಲಾಗಿದೆ. ಆದರೆ ಹಿಂಭಾಗದಲ್ಲಿ ಯಾವುದೇ ಸಸ್ಪೆಂಕ್ಷನ್ ಸೆಟಪ್ ಅನ್ನು ನೀಡಿಲ್ಲ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಕಡಿಮೆ ಬೆಲೆ, ಅತ್ಯಾಧುನಿಕ ಫೀಚರ್‌ಗಳೊಂದಿಗೆ ಬಿಡುಗಡೆಗೊಂಡ ಫೆಲಿಡೆ ಮಾವೆನ್ ಇ-ಬೈಕ್

ಬ್ಯಾಟರಿ ಬಾಳಿಕೆ ಮತ್ತು ನೀವು ಬಳಸುತ್ತಿರುವ ಪೆಡಲ್ ಅಸಿಸ್ಟ್ ಲೆವೆಲ್ ಬಗ್ಗೆ ನಿಮಗೆ ತಿಳಿಸಲು ಫೆಲಿಡೆ ಎಲ್ಇಡಿ ಇಂಡೀಕೆಟರ್ ಅನ್ನು ನೀಡಿದೆ. ಇದರ ಮೋಟಾರ್'ಗೆ 2 ವರ್ಷಗಳ ವಾರಂಟಿಯನ್ನು ನೀಡಲಾಗಿದೆ. ಇನ್ನು ಉಳಿದ ಎಲೆಕ್ಟ್ರಿಕ್ ಯುನಿಟ್ ಗಳಿಗೆ 1 ವರ್ಷದ ವಾರಂಟಿಯನ್ನು ನೀಡಿದೆ.

ಕಡಿಮೆ ಬೆಲೆ, ಅತ್ಯಾಧುನಿಕ ಫೀಚರ್‌ಗಳೊಂದಿಗೆ ಬಿಡುಗಡೆಗೊಂಡ ಫೆಲಿಡೆ ಮಾವೆನ್ ಇ-ಬೈಕ್

ಬೆಳೆಯುತ್ತಿರುವ ನಗರದಲ್ಲಿ ಜೀವನಶೈಲಿ ಕೂಡ ಬದಲಾಗಿದೆ ಫಿಟ್ನೆಸ್​ಗಾಗಿ ಹೆಚ್ಚಿನವರು ಇ-ಬೈಕನ್ನು ಖರೀದಿಸುತ್ತಾರೆ. ಅಲ್ಲದೇ ಇ ಬೈಕಿಗೆ ಡ್ರೈವಿಂಗ್ ಲೆಸನ್ಸ್ ಅಥವಾ ಇತರೆ ಯಾವುದೇ ದಾಖಲೆಗಳು ಬೇಕಾಗಿಲ್ಲ. ಯಾರು ಬೇಕಾದರೂ ಚಲಾಯಿಸಬಹುದು.

ಕಡಿಮೆ ಬೆಲೆ, ಅತ್ಯಾಧುನಿಕ ಫೀಚರ್‌ಗಳೊಂದಿಗೆ ಬಿಡುಗಡೆಗೊಂಡ ಫೆಲಿಡೆ ಮಾವೆನ್ ಇ-ಬೈಕ್

ಇನ್ನು ಇ-ಬೈಕ್ ಗಳು ಕೈಗೆಟುಕುವ ದರದಲ್ಲಿ ಲಭ್ಯವಾಗುತ್ತದೆ. ಅಲ್ಲದೇ ಇಂಧನದ ಅವಶ್ಯಕತೆ ಇಲ್ಲ. ಇನ್ನು ಪಾರ್ಕಿಂಗ್ ಬಗ್ಗೆಯು ಹೆಚ್ಚಿನ ತಲೆ ಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ. ಈ ರೀತಿ ಹಲವಾರು ಪ್ರಯೋಜನಗಳಿವೆ. ಅಲ್ಲದೇ ಇದನ್ನು ಪೆಡಲ್ ತುಳಿತು ಚಲಾಯಿಸಿದರೆ ಆರೋಗ್ಯ ಕೂಡ ಉತ್ತಮವಾಗಿದೆ.

Most Read Articles

Kannada
English summary
Felidae Maven E-Bike Launched. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X