ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಐಷಾರಾಮಿ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್

ಅಮೆರಿಕ ಮೂಲದ ಐಷಾರಾಮಿ ದ್ವಿಚಕ್ರ ತಯಾರಕ ಕಂಪನಿಯಾದ ಹಾರ್ಲೆ ಡೇವಿಡ್ಸನ್ ತನ್ನ ಹೊಸ ಸ್ಪೋರ್ಟ್‌ಸ್ಟರ್ ಎಸ್ ಬೈಕನ್ನು ಇತ್ತೀಚೆಗೆ ಜಾಗತಿಕವಾಗಿ ಅನಾವರಣಗೊಳಿಸಿತು. ಹಾರ್ಲೆ ಡೇವಿಡ್ಸನ್ ಕಂಪನಿಯು ಈ ಹೊಸಸ್ಪೋರ್ಟ್‌ಸ್ಟರ್ ಎಸ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ ಎಂದು ಘೋಷಿಸಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಐಷಾರಾಮಿ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್

ಈ ಬಹುನಿರೀಕ್ಷಿತ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಸುಧಾರಿತ ತಂತ್ರಜ್ಙಾನವನ್ನು ಹೊಂದಿರುವ ಪ್ರೀಮಿಯಂ ಕ್ರೂಸರ್ ಬೈಕ್ ಆಗಿದೆ. ಈ ಐಷಾರಾಮಿ ಬೈಕನ್ನು ಭಾರತದಲ್ಲಿ ಸುಮಾರು ರೂ.15 ಲಕ್ಷಗಳಿಗೆ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಈ ಬೈಕಿನಲ್ಲಿ 1,252 ಸಿಸಿ ಎಂಜಿನ ಅನ್ನು ಅಳವಡಿಸಲಾಗಿದೆ. ಇದನ್ನು ಹೊಸ ಸ್ಪೋರ್ಟರ್ ಎಸ್ ನಲ್ಲಿ ವಿಭಿನ್ನವಾಗಿ ಟ್ಯೂನ್ ಮಾಡಲಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಐಷಾರಾಮಿ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್

ಈ ಹೊಸ ಸ್ಪೋರ್ಟ್‌ಸರ್ ಎಸ್ ಬೈಕ್ ಹಾರ್ಲಿಯ ರೆವಲ್ಯೂಷನ್ ಮ್ಯಾಕ್ಸ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್ 227.7 ಕೆಜಿ ತೂಕವನ್ನು ಹೊಂದಿದೆ. ಈ ಬೈಕಿನಲ್ಲಿ ಆಯತಾಕಾರದ ಎಲ್‌ಇಡಿ ಹೆಡ್‌ಲ್ಯಾಂಪ್, ಟಿಯರ್‌ಡ್ರಾಪ್ ಇಂಧನ ಟ್ಯಾಂಕ್, ವಿಶಾಲ ಹ್ಯಾಂಡಲ್‌ಬಾರ್‌ಗಳು ಮತ್ತು ಫ್ಲಾಟ್ ಸೀಟ್. ಕಂಚಿನ ಎಂಜಿನ್ ಹೆಡ್, ಬಾಬ್ ಕಟ್ ಫೆಂಡರ್‌ಗಳು ಮತ್ತು ಟೈಲ್-ಪೈಪ್ ಅನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಐಷಾರಾಮಿ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್

ಈ ಪ್ರೀಮಿಯಂ ಬೈಕ್ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಇನ್ನು ಈ ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 43 ಎಂಎಂ ಸಂಪೂರ್ಣ ಹೊಂದಾಣಿಕೆ ಮಾಡಬಹುದಾದ ಶೋವಾ ಫೋರ್ಕ್ ಮತ್ತು ಹಿಂಭಾಗದಲ್ಲಿ ಶೋವಾ ಪಿಗ್ಗಿಬ್ಯಾಕ್ ಪ್ರಿ ಲೊಡ್ ಸೆಟಪ್ ಅನ್ನು ಒಳಗೊಂಡಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಐಷಾರಾಮಿ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್

ಇನ್ನು ಈ ಐಷಾರಾಮಿ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್‌ನಿಂದ ಬ್ರೆಂಬೊ ರೇಡಿಯಲ್ 4-ಪಿಸ್ಟನ್ ಕ್ಯಾಲಿಪರ್ ಮತ್ತು ಹಿಂಭಾಗದಲ್ಲಿ 2-ಪಿಸ್ಟನ್ ಬ್ರೆಂಬೊ ಕ್ಯಾಲಿಪರ್‌ನೊಂದಿಗೆ 260 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಐಷಾರಾಮಿ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್

ಬೈಕಿನ ಹೃದಯ ಭಾಗ ಎಂದೇ ಹೇಳುವ ಎಂಜಿನ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಹೊಸ ಲಿಕ್ವಿಡ್ ಕೂಲ್ಡ್ ರೆವಲ್ಯೂಷನ್ ಮ್ಯಾಕ್ಸ್ 1,252 ಸಿಸಿ ವಿ-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 121 ಬಿಹೆಚ್‍ಪಿ ಪವರ್ ಮತ್ತು ,000 ಆರ್‌ಪಿಎಂನಲ್ಲಿ 127 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಐಷಾರಾಮಿ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್

ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ಪರ್ ಕ್ಲಚ್‌ನೊಂದಿಗೆ ಜೋಡಿಸಲಾಗಿದೆ. ಇನ್ನು ಈ ಐಷಾರಾಮಿ ಬೈಕಿನಲ್ಲಿ ರೋಡ್, ಸ್ಪೋರ್ಟ್ಸ್ ಮತ್ತು ರೈನ್ ಎಂಬ ಮೂರು ರೈಡಿಂಗ್ ಮೋಡ್ ಗಳನ್ನು ಒಳಗೊಂಡಿದೆ. ಬಿಡುಗಡೆಯಾಗಲಿರುವ ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಕ್ರೂಸರ್ ಬೈಕ್ ಸ್ಟೋನ್ ವಾಶ್ಡ್ ವೈಟ್ ಪರ್ಲ್, ಮಿಡ್ನೈಟ್ ಕ್ರಿಮ್ಸನ್ ಮತ್ತು ವಿವಿದ್ ಬ್ಲ್ಯಾಕ್ ಎಂಬ ಮೂರು ಬಣ್ಣಗಳ ಆಯ್ಜೆಗಳನ್ನು ಒಳಗೊಂಡಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಐಷಾರಾಮಿ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್

ಇನ್ನು ಹಾರ್ಲೆ ಡೇವಿಡ್ಸನ್ ತನ್ನ ಹೊಸ ಪ್ಯಾನ್ ಅಮೆರಿಕ 1250 ಬೈಕನ್ನು ಭಾರತದಲ್ಲಿ ಪರಿಚಯಿಸಲಾಗಿದೆ. ಈ ಹೊಸ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಜಾಗತಿಕವಾಗಿ ಜನಪ್ರಿಯ ಅಡ್ವೆಂಚರ್-ಟೂರರ್ ಬೈಕ್ ಆಗಿದೆ. ಹಾರ್ಲೆ ಡೇವಿಡ್ಸನ್ ಕಂಪನಿಯು ಭಾರತದಲ್ಲಿ ತನ್ನ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕಿನ ವಿತರಣೆಯನ್ನು ಈಗಾಗಲೇ ಪ್ರಾರಂಭಿಸಿದ್ದಾರೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಐಷಾರಾಮಿ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್

ಭಾರತದಲ್ಲಿ ಈ ಜನಪ್ರಿಯ ಅಡ್ವೆಂಚರ್-ಟೂರರ್ ಬೈಕ್ ಅನ್ನು ಮೊದಲ ವಿತರಣೆಯನ್ನು ಪಡೆದವರು ಲೇಡೀಸ್ ಆಫ್ ಹಾರ್ಲೆಯ ಸಹಾಯಕ ನಿರ್ದೇಶಕಿ ಅನುಶ್ರೀಯ ಗುಲಾಟಿ ಅವರು ಅಗಿದ್ದಾರೆ. ಈ ಅಡ್ವೆಂಚರ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.16.90 ಲಕ್ಷಗಳಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಐಷಾರಾಮಿ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್

ಈ ಹೊಸ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕ್ ಎರಡು ರೂಪಾಂತರಗಳಲ್ಲಿ ಭಾರತದಲ್ಲಿ ಲಭ್ಯವಿದೆ. ಇದರಲ್ಲಿ ಬೇಸ್ ಸ್ಪೆಕ್ ಬೆಲೆಯು ರೂ.16.90 ಲಕ್ಷಗಳಾದರೆ, ಟಾಪ್-ಸ್ಪೆಕ್ ಪ್ಯಾನ್ ಅಮೇರಿಕಾ 1250 ಸ್ಪೆಷಲ್‌ಗೆ ರೂ.19.99 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಐಷಾರಾಮಿ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್

ಈ ಪ್ಯಾನ್ ಅಮೆರಿಕ 1250 ಸಂಪೂರ್ಣವಾಗಿ ಹೊಸ ಬೈಕ್ ಆಗಿದ್ದು, ಇದನ್ನು ಸಂಪೂರ್ಣವಾಗಿ ಹೊಸದಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ. ಇದರ ವಿನ್ಯಾಸದ ಬಗ್ಗೆ ಹೇಳುವುದಾದರೆ, ಅಡ್ವೆಂಚರ್ ಪ್ರಿಯರನ್ನು ಸೆಳೆಯುವಂತೆ ವಿನ್ಯಾಸದಿಂದ ಕೂಡಿದೆ. ಈ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕಿನ ಸ್ಟ್ಯಾಂಡರ್ಡ್ ರೂಪಾಂತರದಲ್ಲಿ ಐದು ರೈಡಿಂಗ್ ಮೋಡ್ ಗಳನ್ನು ಪಡೆಯುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಐಷಾರಾಮಿ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್

ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕಿನಲ್ಲಿ ಕಾರ್ನೆರಿಂಗ್ ಡ್ರ್ಯಾಗ್-ಟಾರ್ಕ್ ಸ್ಲಿಪ್ ಕಂಟ್ರೋಲ್ ಸಿಸ್ಟಂ, ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್ (ಸಿ-ಎಬಿಎಸ್), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ( ಫ್ರಂಟ್-ವೀಲ್ ಲಿಫ್ಟ್ ತಗ್ಗಿಸುವಿಕೆ (ಎಫ್‌ಎಲ್‌ಎಂ) ಯೊಂದಿಗೆ ಟಿಪಿಎಂಎಸ್) ಮತ್ತು ಕಾರ್ನರಿಂಗ್ ಟ್ರ್ಯಾಕ್ಷನ್ ಕಂಟ್ರೋಲ್ (ಸಿ-ಟಿಸಿಎಸ್) ಅನ್ನು ಹೊಂದಿದೆ.

Most Read Articles

Kannada
English summary
New harley davidson announced sportster s for india details
Story first published: Saturday, August 14, 2021, 20:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X