ಡೀಲರ್ ಬಳಿ ತಲುಪಿದ ಐಷಾರಾಮಿ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕ್

ಐಷಾರಾಮಿ ದ್ವಿಚಕ್ರ ತಯಾರಕ ಕಂಪನಿಯಾದ ಹಾರ್ಲೆ ಡೇವಿಡ್ಸನ್ ತನ್ನ ಹೊಸ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕನ್ನು ಕೆಲವು ವಾರಗಳ ಹಿಂದೆ ಅಮೆರಿಕದಲ್ಲಿ ಬಿಡುಗಡೆಗೊಳಿಸಿದರು. ಈ ಹೊಸ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕನ್ನು ಭಾರತದಲ್ಲಿ ನಾಳೆ ಪರಿಚಯಿಸಲಿದೆ.

ಡೀಲರ್ ಬಳಿ ತಲುಪಿದ ಐಷಾರಾಮಿ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕ್

ಇದೀಗ ಈ ಹೊಸ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಹಾರ್ಲೆ ಡೇವಿಡ್ಸನ್ ಡೀಲರುಗಳ ಬಳಿ ತಲುಪಲು ಪ್ರಾರಂಭವಾಗಿದೆ. ಡೀಲರ್ ಬಳಿ ತಲುಪಿರುವ ಈ ಅಡ್ವೆಂಚರ್ ಬೈಕ್ ಅನ್ನು ಅನ್ನ್ ಬಾಕ್ಸ್ ಮಾಡಿರುವ ವೀಡಿಯೊ ಬಹಿರಂಗವಾಗಿದೆ. ಈ ಅಡ್ವೆಂಚರ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.16.90 ಲಕ್ಷಗಳಾಗಿದೆ. ಹೊಸ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕ್ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಇದರಲ್ಲಿ ಬೇಸ್ ಸ್ಪೆಕ್ ಬೆಲೆಯು ರೂ.ರೂ.16.90 ಲಕ್ಷಗಳಾದರೆ, ಟಾಪ್-ಸ್ಪೆಕ್ ಪ್ಯಾನ್ ಅಮೇರಿಕಾ 1250 ಸ್ಪೆಷಲ್‌ಗೆ ರೂ.19.99 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ.

ಡೀಲರ್ ಬಳಿ ತಲುಪಿದ ಐಷಾರಾಮಿ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕ್

ಈ ಹೊಸ ಬೈಕಿನ ಎರಡು ಬೈಕಿನಲ್ಲಿ ವಿಭಿನ್ನವಾಗಿ ಫೀಚರ್ ಗಳನ್ನು ನೀಡಲಾಗಿದೆ. ಆದರೆ ಕೆಲವು ಫೀಚರ್ ಗಳು ಎರಡು ರೂಪಾಂತರಗಳಲ್ಲಿ ಒಂದೇ ರೀತಿಯಲ್ಲಿ ನೀಡಿದ್ದಾರೆ. ಇದು ಫುಲ್-ಎಲ್ಇಡಿ ಲೈಟಿಂಗ್, ಬ್ಲೂಟೂತ್-ಕನೆಕ್ಟಿವಿಟಿ ಹೊಂದಿರುವ 6.8-ಇಂಚಿನ ಕಲರ್ ಡಿಸ್ ಪ್ಲೇ ಮತ್ತು ಯುಎಸ್‌ಬಿ ಸಿ-ಟೈಪ್ ಔಟ್ ಲೈಟ್ ಅನ್ನು ಹೊಂದಿದೆ,

ಡೀಲರ್ ಬಳಿ ತಲುಪಿದ ಐಷಾರಾಮಿ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕ್

ಪ್ಯಾನ್ ಅಮೆರಿಕ 1250 ಸಂಪೂರ್ಣವಾಗಿ ಹೊಸ ಬೈಕ್ ಆಗಿದ್ದು, ಇದನ್ನು ಸಂಪೂರ್ಣವಾಗಿ ಹೊಸದಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ. ಇದರ ವಿನ್ಯಾಸದ ಬಗ್ಗೆ ಹೇಳುವುದಾದರೆ, ಅಡ್ವೆಂಚರ್ ಪ್ರಿಯರನ್ನು ಸೆಳೆಯುವಂತೆ ವಿನ್ಯಾಸವನ್ನು ಹೊಂದಿದೆ.

ಡೀಲರ್ ಬಳಿ ತಲುಪಿದ ಐಷಾರಾಮಿ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕ್

ಈ ಹೊಸ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕಿನ ಸ್ಟ್ಯಾಂಡರ್ಡ್ ರೂಪಾಂತರದಲ್ಲಿ ಐದು ರೈಡಿಂಗ್ ಮೋಡ್ ಗಳನ್ನು ಪಡೆಯುತ್ತದೆ. ನಾಲ್ಕು ಪ್ರಿ-ಪ್ರೊಗಾಮ್ ಮಾಡಲಾದ ರೋಡ್, ಸ್ಪೋರ್ಟ್, ರೈನ್, ಆಫ್-ರೋಡ್ ಮತ್ತು ಒಂದು ಕಸ್ಟಮ್ ಮೋಡ್ ಅನ್ನು ರೈಡರ್ ತನ್ನ ಸ್ವಂತ ಆದ್ಯತೆಯ ಪ್ರಕಾರ ಹೊಂದಿಸಬಹುದು.

ಡೀಲರ್ ಬಳಿ ತಲುಪಿದ ಐಷಾರಾಮಿ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕ್

ಈ ಬೈಕಿನ ಟಾಪ್-ಸ್ಪೆಕ್ ಆದ ಸ್ಪೆಷಲ್ ರೂಪಾಂತರದಲ್ಲಿ ಕಸ್ಟಮೈಸ್ ಮಾಡಬಹುದಾದ ಎರಡು ಹೆಚ್ಚುವರಿ ಮೋಡ್‌ಗಳನ್ನು ಪಡೆಯುತ್ತದೆ. ಇನ್ನು ಮೆಕ್ಯಾನಿಕಲ್‌ಗಳ ವಿಷಯದಲ್ಲಿ ಎರಡು ರೂಪಾಂತರಗಳಲ್ಲಿ ಒಂದೇ 1,252 ಸಿಸಿ, ರೆವಲ್ಯೂಷನ್ ಮ್ಯಾಕ್ಸ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಡೀಲರ್ ಬಳಿ ತಲುಪಿದ ಐಷಾರಾಮಿ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕ್

ಈ ಎಂಜಿನ್ 9,000 ಆರ್‌ಪಿಎಂನಲ್ಲಿ 150 ಬಿಹೆಚ್‌ಪಿ ಪವರ್ ಮತ್ತು 6,750 ಆರ್‌ಪಿಎಂನಲ್ಲಿ 127 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಈ ಎಂಜಿನ್ ನೊಂದಿಗೆ 6-ಸ್ಪೀಡ್ ಯುನಿಟ್ ಅನ್ನು ಜೋಡಿಸಲಾಗಿದೆ.

ಡೀಲರ್ ಬಳಿ ತಲುಪಿದ ಐಷಾರಾಮಿ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕ್

ಪ್ಯಾನ್ ಅಮೇರಿಕಾ 1250 ಸ್ಪೆಷಲ್ ರೂಪಾಂತರವು ಲೋಡ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಸ್ಟ್ಯಾಂಡರ್ಡ್ ಸೆಂಟರ್ ಸ್ಟ್ಯಾಂಡ್, ಹೊಂದಾಣಿಕೆ ಮಾಡಬಹುದಾದ ರಿಯರ್ ಬ್ರೇಕ್ ಪೆಡಲ್, ಅಲ್ಯೂಮಿನಿಯಂ ಸ್ಕಿಡ್-ಪ್ಲೇಟ್, ಸ್ಟೀರಿಂಗ್ ಡ್ಯಾಂಪರ್ ಮತ್ತು ಅಡಾಪ್ಟಿವ್ ರೈಡ್ ಎಂಬ ಫೀಚರ್ ಗಳನ್ನು ಒಳಗೊಂಡಿದೆ.

ಡೀಲರ್ ಬಳಿ ತಲುಪಿದ ಐಷಾರಾಮಿ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕ್

ಹಾರ್ಲೆ ಡೇವಿಡ್ಸನ್ ತನ್ನ ಹೊಸ ಸ್ಪೋರ್ಟ್‌ಸ್ಟರ್ ಎಸ್ ಬೈಕನ್ನು ಇತ್ತೀಚೆಗೆ ಜಾಗತಿಕವಾಗಿ ಅನಾವರಣಗೊಳಿಸಿತು. ಈ ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಹಾರ್ಲೆ-ಡೇವಿಡ್ಸನ್ ತನ್ನ ಭಾರತೀಯ ವೆಬ್‌ಸೈಟ್‌ನಲ್ಲಿ ಹೊಸ ಸ್ಪೋರ್ಟ್‌ಸರ್ ಎಸ್ ಬೈಕಿನ ಹೆಸರನ್ನು ಪಟ್ಟಿ ಮಾಡಿದೆ. ಈ ಬಹುನಿರೀಕ್ಷಿತ ಬೈಕ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಡೀಲರ್ ಬಳಿ ತಲುಪಿದ ಐಷಾರಾಮಿ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕ್

ಈ ಹೊಸ ಸ್ಪೋರ್ಟ್‌ಸರ್ ಎಸ್ ಬೈಕ್ ಹಾರ್ಲಿಯ ರೆವಲ್ಯೂಷನ್ ಮ್ಯಾಕ್ಸ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್ 227.7 ಕೆಜಿ ತೂಕವನ್ನು ಹೊಂದಿದೆ. ಈ ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕಿನಲ್ಲಿ 1250 ಸಿಸಿ ರೆವಲ್ಯೂಷನ್ ಮ್ಯಾಕ್ಸ್ 1250 ಟಿ ವಿ-ಟ್ವಿನ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 121 ಬಿಹೆಚ್‍ಪಿ ಪವರ್ ಮತ್ತು 127 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಡೀಲರ್ ಬಳಿ ತಲುಪಿದ ಐಷಾರಾಮಿ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕ್

ಇನ್ನು ಈ ಐಷಾರಾಮಿ ಅಡ್ವೆಂಚರ್ ಬೈಕಿನಲ್ಲಿ ಸೆಮಿ-ಆಕ್ಟಿವ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ. ಪ್ಯಾನ್ ಅಮೇರಿಕಾ 1250 ಹಾರ್ಲೆ-ಡೇವಿಡ್ಸನ್‌ನಿಂದ ಬಂದ ಮೊದಲ ಅಡ್ವೆಂಚರ್ ಬೈಕ್ ಆಗಿದೆ. ಹೊಸ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಬೈಕ್ ಅಗ್ರೇಸಿವ್ ಮತ್ತು ರಗಡ್ ಲುಕ್ ಅನ್ನು ಹೊಂದಿರುವ ಫ್ಯೂಚರಿಸ್ಟಿಕ್ ಫ್ರಂಟ್ ಎಂಡ್ ಅನ್ನು ಹೊಂದಿದೆ.

Article Published On: Saturday, August 7, 2021, 19:40 [IST]
English summary
New harley davidson pan america 1250 started arriving at select dealerships details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+