ಬಿಡುಗಡೆಯಾಯ್ತು ಅಧಿಕ ಮೈಲೇಜ್ ನೀಡುವ ಕಬೀರ ಹೈಸ್ಪೀಡ್ ಎಲೆಕ್ಟ್ರಿಕ್ ಬೈಕುಗಳು

ಗೋವಾ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಯಾದ ಕಬೀರ ಮೊಬಿಲಿಟಿ ತನ್ನ ಕೆಎಂ3000 ಮತ್ತು ಕೆಎಂ4000 ಎಲೆಕ್ಟ್ರಿಕ್ ಬೈಕುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಕಬೀರ ಕೆಎಂ3000 ಮತ್ತು ಕೆಎಂ4000 ಹೈಸ್ಪೀಡ್ ಎಲೆಕ್ಟ್ರಿಕ್ ಬೈಕುಗಳಾಗಿವೆ.

ಬಿಡುಗಡೆಯಾಯ್ತು ಅಧಿಕ ಮೈಲೇಜ್ ನೀಡುವ ಕಬೀರ ಹೈಸ್ಪೀಡ್ ಎಲೆಕ್ಟ್ರಿಕ್ ಬೈಕುಗಳು

ಇನ್ನು ಕಬೀರ ಬೈಕುಗಳ ಬೆಲೆಗಳ ಬಗ್ಗೆ ಹೇಳುವುದಾದರೆ, ಇದರಲ್ಲಿ ಕಬೀರಾ ಕೆಎಂ3000 ಎಲೆಕ್ಟ್ರಿಕ್ ಬೈಕಿನ ಬೆಲೆಯು ರೂ.1,26,990 ಗಳಾದರೆ. ಕಬೀರ ಕೆಎಂ4000 ಎಲೆಕ್ಟ್ರಿಕ್ ಬೈಕಿನ ಬೆಲೆಯು ರೂ.1,36,990 ಗಳಾಗಿದೆ. ಕಬೀರ ಕೆಎಂ3000 4 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಮತ್ತು 6 ಕಿಲೋವ್ಯಾಟ್ ಬಿಎಲ್‌ಡಿಸಿ (ಬ್ರಷ್‌ಲೆಸ್ ಡಿಸಿ ಎಲೆಕ್ಟ್ರಿಕ್ ಮೋಟರ್) ಮೋಟಾರ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಅಧಿಕ ಮೈಲೇಜ್ ನೀಡುವ ಕಬೀರ ಹೈಸ್ಪೀಡ್ ಎಲೆಕ್ಟ್ರಿಕ್ ಬೈಕುಗಳು

ಕಬೀರ ಕೆಎಂ3000 ಎಲೆಕ್ತ್ರಿಕ್ ಬೈಕ್ ಇಕೋ ಮೋಡ್‌ನಲ್ಲಿ 120 ಕಿ,ಮೀ,ವರೆಗೂ ಚಲಿಸುತ್ತದೆ. ಇನ್ನು ಸ್ಪೋರ್ಟ್ ಮೋಡ್‌ನಲ್ಲಿ ಈ ಬೈಕ್ 60 ಕಿ.ಮೀ.ಮೈಲೇಜ್ ಅನ್ನು ನೀಡುತ್ತದೆ ಮತ್ತು 100 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಬಿಡುಗಡೆಯಾಯ್ತು ಅಧಿಕ ಮೈಲೇಜ್ ನೀಡುವ ಕಬೀರ ಹೈಸ್ಪೀಡ್ ಎಲೆಕ್ಟ್ರಿಕ್ ಬೈಕುಗಳು

ಇನ್ನು ಕಬೀರ ಕೆಎಂ4000 ಎಲೆಕ್ಟ್ರಿಕ್ ಬೈಕಿನಲ್ಲಿ 4.4 ಕಿಲೋವ್ಯಾಟ್ ಬ್ಯಾಟರಿ ಮತ್ತು 8 ಕಿಲೋವ್ಯಾಟ್ ಮೋಟರ್ ಅನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಬೈಕ್ ಇಕೋ ಮೋಡ್‌ನಲ್ಲಿ 150 ಕಿ,ಮೀ ರೇಂಜ್ ಅನ್ನು ಹೊಂದಿದೆ

ಬಿಡುಗಡೆಯಾಯ್ತು ಅಧಿಕ ಮೈಲೇಜ್ ನೀಡುವ ಕಬೀರ ಹೈಸ್ಪೀಡ್ ಎಲೆಕ್ಟ್ರಿಕ್ ಬೈಕುಗಳು

ಕಬೀರ ಕೆಎಂ4000 ಎಲೆಕ್ಟ್ರಿಕ್ ಬೈಕ್ 120 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಕಬೀರ ಕೆಎಂ4000 ಎಲೆಕ್ಟ್ರಿಕ್ ಬೈಕ್ ಸ್ಪೋರ್ಟ್ ಮೋಡ್‌ನಲ್ಲಿ 90 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಬಿಡುಗಡೆಯಾಯ್ತು ಅಧಿಕ ಮೈಲೇಜ್ ನೀಡುವ ಕಬೀರ ಹೈಸ್ಪೀಡ್ ಎಲೆಕ್ಟ್ರಿಕ್ ಬೈಕುಗಳು

ಕಬೀರ ಕೆಎಂ3000 ಎಲೆಕ್ಟ್ರಿಕ್ ಬೈಕ್ 3.3 ಸೆಕೆಂಡುಗಳಲ್ಲಿ 0 ರಿಂದ 40 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಕಬೀರ ಕೆಎಂ4000 ಎಲೆಕ್ಟ್ರಿಕ್ ಬೈಕ್ 3.1 ಸೆಕೆಂಡುಗಳಲ್ಲಿ 40 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಬಿಡುಗಡೆಯಾಯ್ತು ಅಧಿಕ ಮೈಲೇಜ್ ನೀಡುವ ಕಬೀರ ಹೈಸ್ಪೀಡ್ ಎಲೆಕ್ಟ್ರಿಕ್ ಬೈಕುಗಳು

ಕಬೀರ ಕೆಎಂ3000 ಮತ್ತು ಕೆಎಂ4000 ಎಲೆಕ್ಟ್ರಿಕ್ ಬೈಕುಗಳ ಬ್ಯಾಟರಿ ಪ್ಯಾಕ್‌ಗಳನ್ನು 2 ಗಂಟೆಗಳ 50 ನಿಮಿಷಗಳಲ್ಲಿ ಇಕೋ ಚಾರ್ಜ್ ಮೂಲಕ ಮತ್ತು 50 ನಿಮಿಷದಲ್ಲಿ ಜಾರ್ಚ್ ಮಾಡಬಹುದು. ಇಕೋ ಜಾರ್ಚ್ ನಲ್ಲಿ 6 ಗಂಟೆ 30 ನಿಮಿಷಗಳಲ್ಲಿ 100 ಪ್ರತಿಶತದಷ್ಟು ಜಾರ್ಚ್ ಮಾಡಬಹುದು.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಬಿಡುಗಡೆಯಾಯ್ತು ಅಧಿಕ ಮೈಲೇಜ್ ನೀಡುವ ಕಬೀರ ಹೈಸ್ಪೀಡ್ ಎಲೆಕ್ಟ್ರಿಕ್ ಬೈಕುಗಳು

ಎರಡೂ ಮಾದರಿಗಳು ಸಿಬಿಎಸ್ (ಕಾಂಬಿ ಬ್ರೇಕಿಂಗ್ ಸಿಸ್ಟಮ್) ನೊಂದಿಗೆ ಹಿಂಭಾಗದಲ್ಲಿ ರಿಯರ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿವೆ. ಕಬೀರ ಕೆಎಂ3000 ಮುಂಭಾಗ ಸಿಂಗಲ್ ಡಿಸ್ಕ್ ಬ್ರೇಕ್ ಹೊಂದಿದ್ದರೆ, ಕಬೀರ ಕೆಎಂ4000 ಮುಂಭಾಗದ ತುದಿಯಲ್ಲಿ ಡ್ಯುಯಲ್ ಡಿಸ್ಕ್ ಬ್ರೇಕ್ ಪಡೆಯುತ್ತದೆ.

ಬಿಡುಗಡೆಯಾಯ್ತು ಅಧಿಕ ಮೈಲೇಜ್ ನೀಡುವ ಕಬೀರ ಹೈಸ್ಪೀಡ್ ಎಲೆಕ್ಟ್ರಿಕ್ ಬೈಕುಗಳು

ಕಬೀರ ಕೆಎಂ3000 ಎಲೆಕ್ಟ್ರಿಕ್ ಬೈಕ್ 2100 ಎಂಎಂ ಉದ್ದ, 760 ಅಗಲ ಮತ್ತು 1200 ಎತ್ತರವನ್ನು ಹೊಂದಿದೆ. ಇನ್ನು 430 ಎಂಎಂ ವೀಲ್ ಬೇಸ್ ಮತ್ತು 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಕೆಎಂ3000 ಎಲೆಕ್ಟ್ರಿಕ್ ಬೈಕ್ 138 ಕೆಜಿ ತೂಕವನ್ನು ಹೊಂದಿದೆ.

Article Published On: Tuesday, February 16, 2021, 9:53 [IST]
English summary
Kabira KM3000, KM4000 High-Speed Electric Bikes. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+