ಭಾರತದಲ್ಲಿ ಹೊಸ Kawasaki KLX450R ಆಫ್-ರೋಡ್ ಬೈಕ್ ಬಿಡುಗಡೆ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ ತನ್ನ ಹೊಸ ಕೆಎಲ್‌ಎಕ್ಸ್‌450ಆರ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಕವಾಸಕಿ ಕೆಎಲ್‌ಎಕ್ಸ್‌450ಆರ್( Kawasaki KLX450R) ಆಫ್-ರೋಡ್ ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.8.99 ಲಕ್ಷವಾಗಿದೆ.

ಭಾರತದಲ್ಲಿ ಹೊಸ Kawasaki KLX450R ಆಫ್-ರೋಡ್ ಬೈಕ್ ಬಿಡುಗಡೆ

ಈ ಹೊಸ ಕವಾಸಕಿ ಕೆಎಲ್‌ಎಕ್ಸ್‌450ಆರ್ ಬೈಕಿನ ಬೆಲೆಯು ಹಿಂದಿನ ಮಾದರಿಗಿಂತ ಸುಮಾರು ರೂ.50,000 ಹೆಚ್ಚು ದುಬಾರಿಯಾಗಿದೆ. ಬೈಕ್‌ನ 2022 ಆವೃತ್ತಿಯು ಹೊಸ ಲೈಮ್ ಗ್ರೀನ್ ಕಲರ್ ಆಯ್ಕೆಯಲ್ಲಿ ಹೊಸ ಸೆಟ್ ಡೆಕಾಲ್‌ಗಳನ್ನು ಒಳಗೊಂಡಿದೆ. ಕವಾಸಕಿಯು ಮೊದಲಿಗಿಂತ ಉತ್ತಮವಾದ ಲೋ-ಲೆವೆಲ್ ಟಾರ್ಕ್‌ಗಾಗಿ ಎಂಜಿನ್ ಅನ್ನು ಟ್ವೀಕ್ ಮಾಡಿದೆ, ಇದು ಟ್ರಿಕಿ ಸನ್ನಿವೇಶಗಳಿಂದ ಹೊರಬರಲು ಸುಲಭವಾಗುತ್ತದೆ. ಇದಲ್ಲದೆ, ಹೆಚ್ಚಿನ ಒರಟಾದ ಭೂಪ್ರದೇಶವನ್ನು ನಿರ್ವಹಿಸಲು ಸಸ್ಪೆಂಕ್ಷನ್ ಸೆಟಪ್ ಅನ್ನು ಸಹ ಬದಲಾಯಿಸಲಾಗಿದೆ.

ಭಾರತದಲ್ಲಿ ಹೊಸ Kawasaki KLX450R ಆಫ್-ರೋಡ್ ಬೈಕ್ ಬಿಡುಗಡೆ

2022ರ ಕೆಎಲ್‌ಎಕ್ಸ್‌450ಆರ್ ಬೈಕಿನಲ್ಲಿ 449 ಸಿಸಿ ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಇಂಜಿನ್ ಹಗುರವಾದ ಅಲ್ಯೂಮಿನಿಯಂ ಪಿರಿಯರ್ ಫ್ರೇಮ್ ನಿಂದ ಕೂಡಿದೆ.

ಭಾರತದಲ್ಲಿ ಹೊಸ Kawasaki KLX450R ಆಫ್-ರೋಡ್ ಬೈಕ್ ಬಿಡುಗಡೆ

ಈ ಹೊಸ ಕವಾಸಕಿ ಕೆಎಲ್‌ಎಕ್ಸ್‌450ಆರ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಅಪ್ ಸೈಡ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ನೀಡಲಾಗಿದೆ. ಹಿಂದಿನ ಮಾದರಿಯಲ್ಲಿ ಇದ್ದ ಸಸ್ಪೆಂಕ್ಷನ್ ಸೆಟಪ್ ಅನ್ನು ಬದಲಾಯಿಸಿದೆ.

ಭಾರತದಲ್ಲಿ ಹೊಸ Kawasaki KLX450R ಆಫ್-ರೋಡ್ ಬೈಕ್ ಬಿಡುಗಡೆ

ಇನ್ನು ಪ್ರಮುಖವಾಗಿ ಈ ಆಫ್-ರೋಡ್ ಬೈಕಿನ ಬ್ರೇಕಿಂಗ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಪೆಟಲ್-ಟೈಪ್ ಡಿಸ್ಕ್ ಬ್ರೇಕ್‌ಗಳಿಂದ ನಿರ್ವಹಿಸಲಾಗುತ್ತದೆ. ಇನ್ನು ಈ ಬೈಕಿನಲ್ಲಿ ರೆಂತಾಲ್ ಅಲ್ಯೂಮಿನಿಯಂ ಹ್ಯಾಂಡಲ್‌ಬಾರ್ ಮತ್ತು ಸಣ್ಣ ಡಿಜಿಟಲ್ ಕನ್ಸೋಲ್ ಕೂಡ ನೀಡಲಾಗಿದೆ,

ಭಾರತದಲ್ಲಿ ಹೊಸ Kawasaki KLX450R ಆಫ್-ರೋಡ್ ಬೈಕ್ ಬಿಡುಗಡೆ

ಕವಾಸಕಿ ಕಂಪನಿಯು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಕೆಎಕ್ಸ್250 ಮತ್ತು ಕೆಎಕ್ಸ್450 ಆಫ್-ರೋಡ್ ಬೈಕ್‌ಗಳನ್ನು ಬಿಡುಗಡೆಗೊಳಿಸಿತ್ತು. ಈ ಹೊಸ ಕವಾಸಕಿ ಕೆಎಕ್ಸ್250 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.7.99 ಲಕ್ಷಗಳಾದರೆ, ಕೆಎಕ್ಸ್450 ಬೈಕಿನ ಬೆಲೆಯು ರೂ.8.59 ಲಕ್ಷಗಳಾಗಿದೆ. ಈ ಹೊಸ ಕವಾಸಕಿ ಕೆಎಕ್ಸ್250 ಮತ್ತು ಕೆಎಕ್ಸ್450 ಆಫ್-ರೋಡ್ ಬೈಕ್‌ಗಳು ಲೈಮ್ ಗ್ರೀನ್ ಎಂಬ ಒಂದೇ ಬಣ್ಣದಲ್ಲಿ ಲಭ್ಯವಿದೆ,

ಭಾರತದಲ್ಲಿ ಹೊಸ Kawasaki KLX450R ಆಫ್-ರೋಡ್ ಬೈಕ್ ಬಿಡುಗಡೆ

ಈ ಎರಡು ಆಫ್-ರೋಡ್ ಬೈಕ್‌ಗಳು ರಸ್ತೆ-ಕಾನೂನುಬದ್ಧ ಮಾದರಿಗಳಾಗಿವೆ. ಹೊಸ ಕೆಎಕ್ಸ್250 ಮತ್ತು ಕೆಎಕ್ಸ್450 ಆಫ್-ರೋಡ್ ಬೈಕ್‌ಗಳ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ. ಆಸಕ್ತ ಗ್ರಾಹಕರು ಟೋಕನ್ ಮೊತ್ತ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು.

ಭಾರತದಲ್ಲಿ ಹೊಸ Kawasaki KLX450R ಆಫ್-ರೋಡ್ ಬೈಕ್ ಬಿಡುಗಡೆ

ಹೊಸ ಕವಾಸಕಿ ಕೆಎಕ್ಸ್250 ಮತ್ತು ಕೆಎಕ್ಸ್450 ಆಫ್-ರೋಡ್ ಬೈಕ್‌ಗಳ ನಡುವೆ ವಿನ್ಯಾಸದಲ್ಲಿ ಎರಡೂ ಕೆಲವು ಸಣ್ಣ ವ್ಯತ್ಯಾಸಗಳನ್ನು ಹೊರತುಪಡಿಸಿ ಅವುಗಳ ಸ್ಟೈಲಿಂಗ್‌ನಲ್ಲಿ ಬಹಳ ಹೋಲುತ್ತವೆ. ಡರ್ಟ್ ಬೈಕ್‌ಗಳಿಗೆ ಆಧಾರವಾಗಿರುವುದು ಪರಿಷ್ಕೃತ ಹಗುರವಾದ ಅಲ್ಯೂಮಿನಿಯಂ ಫ್ರೇಮ್ ಆಗಿದ್ದು, ಬೈಕ್‌ಗಳ ಡೈನಾಮಿಕ್ಸ್ ಅನ್ನು ಸುಧಾರಿಸುತ್ತದೆ.

ಭಾರತದಲ್ಲಿ ಹೊಸ Kawasaki KLX450R ಆಫ್-ರೋಡ್ ಬೈಕ್ ಬಿಡುಗಡೆ

ಎರಡೂ ಬೈಕ್‌ಗಳ ಎರಾಗೊನಾಮಿಕ್ ಸುಧಾರಿಸಲಾಗಿದೆ. ಇದು ಮರುವಿನ್ಯಾಸಗೊಳಿಸಿದ ಇಂಧನ ಟ್ಯಾಂಕ್, ಚಪ್ಪಟೆಯಾದ ಟ್ಯಾಂಕ್ ಸೀಟ್ ಮತ್ತು ತೆಳ್ಳನೆಯ ಕವಚಗಳನ್ನು ಒಳಗೊಂಡಿರುತ್ತದೆ. ಜಪಾನಿನ ಬೈಕು ತಯಾರಕರು ಡರ್ಟ್ ಬೈಕ್‌ಗಳನ್ನು ERGO FIT ಹೊಂದಿಸಬಹುದಾದ ಹ್ಯಾಂಡಲ್‌ಬಾರ್‌ನೊಂದಿಗೆ ಅಳವಡಿಸಿದ್ದಾರೆ. ಆದರೆ ಫುಟ್‌ಪೆಗ್‌ಗಳನ್ನು ಕೂಡ ಮರುಸ್ಥಾನಗೊಳಿಸಲಾಗಿದೆ.

ಭಾರತದಲ್ಲಿ ಹೊಸ Kawasaki KLX450R ಆಫ್-ರೋಡ್ ಬೈಕ್ ಬಿಡುಗಡೆ

ಇದಲ್ಲದೆ, ಎರಡೂ ಬೈಕುಗಳ ಹ್ಯಾಂಡಲ್‌ಬಾರ್‌ನಲ್ಲಿ ಕಂಪನಗಳನ್ನು ಎದುರಿಸಲು ಸ್ಟ್ಯಾಂಡರ್ಡ್ ವೈಶಿಷ್ಟ್ಯವಾಗಿ ರೆಂಟಾಲ್ ಅಲ್ಯೂಮಿನಿಯಂ ಫ್ಯಾಟ್‌ಬಾರ್ ಅನ್ನು ಅಳವಡಿಸಲಾಗಿದೆ. ಬೈಕ್‌ಗಳ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 49 ಎಂಎಂ ಇನ್ವರ್ಟಡ್ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಹೊಸ ಯೂನಿಟ್ ಟ್ರ್ಯಾಕ್ ಯುನಿಟ್ ಅನ್ನು ಒಳಗೊಂಡಿರುವ ರಿಟ್ಯೂನ್ಡ್ ರೇಸ್-ರೆಡಿ ಸಸ್ಪೆಂಕ್ಷನ್ ಸೆಟಪ್‌ನೊಂದಿಗೆ ಬೈಕಿನ ನಿರ್ವಹಣೆಯನ್ನು ಸುಧಾರಿಸಲಾಗಿದೆ.

ಭಾರತದಲ್ಲಿ ಹೊಸ Kawasaki KLX450R ಆಫ್-ರೋಡ್ ಬೈಕ್ ಬಿಡುಗಡೆ

ಎರಡೂ ಯುನಿಟ್ ಗಳು ಕಂಪ್ರೆಷನ್ ಮತ್ತು ರಿಬೌಂಡ್ ಡ್ಯಾಂಪಿಂಗ್‌ಗಾಗಿ ಹೊಂದಿಸಬಹುದಾಗಿದೆ. KW250ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಸಿಂಗಲ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದ್ದು 270 ಎಂಎಂ ರೋಟರ್ ಮತ್ತು ಟ್ವಿನ್-ಪಿಸ್ಟನ್ ಕ್ಯಾಲಿಪರ್‌ಗಳನ್ನು ಮುಂಭಾಗದಲ್ಲಿ ಮತ್ತು 250 ಎಂಎಂ ರೋಟರ್ ಮತ್ತು ಹಿಂಭಾಗದಲ್ಲಿ ಸಿಂಗಲ್-ಪಿಸ್ಟನ್ ಕ್ಯಾಲಿಪರ್ ಅನ್ನು ಒಳಗೊಂಡಿದೆ. ಬೈಕ್ ಗಾಗಿ ಸಸ್ಪೆಂಕ್ಷನ್ ಟ್ರಾವೆಲ್ ಕ್ರಮವಾಗಿ 314 ಎಂಎಂ ಮತ್ತು 316 ಎಂಎಂ ಮುಂಭಾಗ ಮತ್ತು ಹಿಂಭಾಗದಲ್ಲಿ ಜೋಡಿಸಲಾಗಿದೆ.

ಭಾರತದಲ್ಲಿ ಹೊಸ Kawasaki KLX450R ಆಫ್-ರೋಡ್ ಬೈಕ್ ಬಿಡುಗಡೆ

ಇನ್ನು K450 ಬೈಕ್ ಗಾಗಿ ಅಂಕಿಅಂಶಗಳು ಕ್ರಮವಾಗಿ ಮುಂಭಾಗ ಮತ್ತು ಹಿಂಭಾಗಕ್ಕೆ ಕ್ರಮವಾಗಿ 305 ಎಂಎಂ ಮತ್ತು 307 ಎಂಎಂ ಅನ್ನು ಜೋಡಿಸಲಾಗಿದೆ. ಇನ್ನು ಎರಡು ಬೈಕ್‌ಗಳ ಪವರ್‌ಟ್ರೇನ್‌ಗಳನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಕವಾಸಕಿ ತನ್ನ ಮೋಟೋಕ್ರಾಸರ್ ವ್ಯಾಪ್ತಿಯಲ್ಲಿ ಹೈಡ್ರಾಲಿಕ್ ಕ್ಲಚ್ ನೀಡುತ್ತಿರುವುದು ಇದೇ ಮೊದಲು. ಹೆಚ್ಚು ಮುಖ್ಯವಾಗಿ, ಎರಡೂ ಬೈಕ್‌ಗಳನ್ನು ಈ ಹಿಂದೆ ನೀಡದ ಎಲೆಕ್ಟ್ರಿಕ್ ಸ್ಟಾಟರ್ ನೀಡಲಾಗುತ್ತದೆ. ಇನ್ನು ಎರಡೂ ಆಫ್-ರೋಡ್ ಬೈಕ್‌ಗಳು ಲಾಂಚ್ ಕಂಟ್ರೋಲ್ ಮೋಡ್ ಅನ್ನು ಪಡೆಯುತ್ತವೆ.

ಭಾರತದಲ್ಲಿ ಹೊಸ Kawasaki KLX450R ಆಫ್-ರೋಡ್ ಬೈಕ್ ಬಿಡುಗಡೆ

2022ರ ಕವಾಸಕಿ ಕೆಎಲ್‌ಎಕ್ಸ್‌450ಆರ್ ಬೈಕ್ ಅದರ ಹಿಂದಿನ ಮಾದರಿಯಂತೆಯೇ ಸಿಬಿಯು ಯುನಿಟ್ ಆಗಿ ಭಾರತಕ್ಕೆ ಬರಲಿದೆ. ಈ ಹೊಸ ಬೈಕಿನ ಆಫ್-ರೋಡ್ ಬೈಕಿನ ವಿತರಣೆಯನ್ನು ಮುಂದಿನ ವರ್ಷದಲ್ಲಿ ಪ್ರಾರಂಭಿಸಬಹುದು.

More from DriveSpark

Article Published On: Saturday, December 18, 2021, 12:46 [IST]
English summary
New kawasaki klx450r dirt bike launched in india price details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+