ಹೊಸ ಬಣ್ಣಗಳ ಆಯ್ಕೆಯೊಂದಿಗೆ ಬಿಡುಗಡೆಗೊಂಡ ಬಿಎಸ್6 ಕವಾಸಕಿ ನಿಂಜಾ 300 ಬೈಕ್
ಕವಾಸಕಿ ಇಂಡಿಯಾ ಕಂಪನಿಯು ಕೊನೆಗೂ ತನ್ನ ಬಿಎಸ್6 ನಿಂಜಾ 300 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಕವಾಸಕಿ ನಿಂಜಾ 300 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.3.18 ಲಕ್ಷಗಳಾಗಿದೆ.

ಕವಾಸಕಿ ನಿಂಜಾ 300 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‌ನ ಅತ್ಯಂತ ಒಳ್ಳೆಯ ಮಾದರಿಯಾಗಿದೆ. ಈ ಕವಾಸಕಿ ನಿಂಜಾ 300 ಬೈಕನ್ನು ಬಿಎಸ್6 ಮಾಲಿನ್ಯ ನಿಯಮ ಜಾರಿಯಾಗುವ ಮುನ್ನವೇ 2019ರ ಡಿಸೆಂಬರ್‌ನಲ್ಲಿ ಸ್ಥಗಿತಗೊಳಿಸಿತ್ತು ಇದೀಗ ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಹೊಸ ಕವಾಸಕಿ ನಿಂಜಾ 300 ಬೈಕನ್ನು ನವೀಕರಿಸಿ ಬಿಡುಗಡೆಗೊಳಿಸಲಾಗಿದೆ. ಹಿಂದಿನ ಬಿಎಸ್-4 ಮಾದರಿಗೆ ಹೋಲಿಸಿದರೆ ಹೊಸ ಮಾದರಿಗೆ ರೂ.20 ಸಾವಿರ ಹೆಚ್ಚಿಸಲಾಗಿದೆ.

ಬಿಎಸ್6 ಕವಾಸಕಿ ನಿಂಜಾ 300 ಬೈಕಿನಲ್ಲಿ ಎಂಜಿನ್ ಅನ್ನು ಬದಲಾಯಿಸಲಾಗಿಲ್ಲ. ಅದೇ ಎಂಜಿನ್ ಅನ್ನು ನವೀಕರಿಸಲಾಗಿದೆ. ಇದು 296ಸಿಸಿ ಪ್ಯಾರೆಲಲ್-ಟ್ವಿನ್, ಲಿಕ್ವಿಡ್-ಕೂಲ್ಡ್ ಎಂಜಿನ್ ಆಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಈ ಎಂಜಿನ್ 38.4 ಬಿಹೆಚ್‌ಪಿ ಪವರ್ ಮತ್ತು 27 ಎನ್‌ಎಂ ಪೀಕ್ ಟಾರ್ಕ್ ಅನ್ನು ಅಭಿವೃದ್ಧಿಪಡಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದ್ದು, ಇದರೊಂದಿಗೆ ಅಸಿಸ್ಟ್ ಸ್ಲಿಪ್ಪರ್ ಕ್ಲಚ್ ಅನ್ನು ಪಡೆಯುತ್ತದೆ.

2021ರ ಕವಾಸಕಿ ನಿಂಜಾ 300 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಹಿಂದಿನ ಮಾದರಿಗೆ ಹೋಲಿಸಿದರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದರ ಮುಂಭಾಗದಲ್ಲಿ 37ಎಂಎಂ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ನೀಡಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಇನ್ನು ಸುರಕ್ಷತಾ ವಿಭಾಗದಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಬಿಎಸ್-6 ಕವಾಸಕಿ ನಿಂಜಾ 300 ಬೈಕಿನ ಮುಂಭಾಗ 290 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗ 220 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಿದ್ದಾರೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಇನ್ನು ಇದರ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಕೂಡ ಬದಲಾಯಿಸಲಾಗಿಲ್ಲ. ಎಂಆರ್ಎಫ್ ನೈಲೋಗ್ರಿಪ್ ಟೈರ್‌ಗಳನ್ನು ಇದರಲ್ಲಿ ನೀಡಲಾಗಿದೆ. 2021ರ ಕವಾಸಕಿ ನಿಂಜಾ 300 ಬೈಕಿನ ವಿನ್ಯಾಸದಲ್ಲಿ ಯಾವುದೇ ಪ್ರಮಖ ಬದಲಾವಣೆಗಳನ್ನು ಮಾಡಲಾಗಿಲ್ಲ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಆದರೆ ನಿಂಜಾ ಸರಣಿಯ ದೊಡ್ಡ ಬೈಕ್‌ಗಳಿಂದ ಪ್ರೇರಿತವಾದ ಹೊಸ ಡೆಕಲ್‌ಗಳೊಂದಿಗೆ ಹೊಸ ಮೂರು ಬಣ್ಣಗಳ ಆಯ್ಕೆಗಳನ್ನು ಪಡೆದುಕೊಂಡಿದೆ. ಈ 2021ರ ಕವಾಸಕಿ ನಿಂಜಾ 300 ಬೈಕ್ ಗ್ರೀನ್, ಕ್ಯಾಂಡಿ ಲೈಮ್ ಗ್ರೀನ್ ಮತ್ತು ಎಬೊನಿ ಎಂಬ ಹೊಸ ಬಣ್ಣಗಳ ಆಯ್ಕೆಯನ್ನು ಪಡೆದಿವೆ.

ಹೊಸ ಕವಾಸಕಿ ನಿಂಜಾ 300 ಬೆಲೆಯನ್ನು ಅದೇ ಸರಣಿಯ ಬೈಕುಗಳಿಗೆ ಹೋಲಿಸಿದರೆ ತುಸು ದುಬಾರಿಯಾಗಿದೆ. 2021ರ ಕವಾಸಕಿ ನಿಂಜಾ 300 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಟಿವಿಎಸ್ ಅಪಾಚೆ ಆರ್ಆರ್310 ಮತ್ತು ಕೆಟಿಎಂ ಆರ್ಸಿ 390 ಬೈಕುಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications








