ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ 2021ರ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್

ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಬಹುನಿರೀಕ್ಷಿತ ಹೊಸ ಕ್ಲಾಸಿಕ್ 350 ಬೈಕನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. 2021ರ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್ ಹೊಸ ಬದಲಾಗಳೊಂದಿಗೆ ದೇಶಿಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ 2021ರ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್

ಇತ್ತೀಚೆಗೆ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ನಡೆದ ಟಿವಿಸಿ ಚಿತ್ರೀಕರಣದ ವೇಳೆ ಕಾಣಿಸಿಕೊಂಡ 2021ರ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್ ಸ್ಪೈ ಚಿತ್ರಗಳು ಬಹಿರಂಗವಾಗಿದೆ. ಇದರಲ್ಲಿ ಹೊಸ ಕ್ಲಾಸಿಕ್ 350 ವೃತ್ತಾಕಾರದ ಹೆಡ್‌ಲ್ಯಾಂಪ್, ಫ್ಲ್ಯಾಟ್ ಫ್ಯೂಯಲ್ ಟ್ಯಾಂಕ್, ದುಂಡಗಿನ ಆಕಾರದ ಹಿಂಭಾಗದ ರೇರ್ ಮೀರರ್ಸ್, ಸಿಂಗಲ್ ಸೀಟ್ ಮತ್ತು ಅಪ್‌ಸ್ವೆಪ್ಟ್ ಕ್ರೋಮ್-ಲೇಪಿತ ಎಕ್ಸಾಸ್ಟ್ ಸೇರಿದಂತೆ ಮೂಲ ರೆಟ್ರೊ ವಿನ್ಯಾಸ ಅಂಶಗಳನ್ನು ಉಳಿಸಿಕೊಂಡಿದೆ.

ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ 2021ರ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್

ಹೊಸ ಮಾದರಿ ಸಿಂಗಲ್ ಮತ್ತು ಡ್ಯುಯಲ್ ಸೀಟ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ. ಫುಟ್ ಪೆಗ್‌ಗಳನ್ನು ಮಧ್ಯದಲ್ಲಿ ಅಳವಡಿಸಲಾಗಿದೆ ಮತ್ತು ಹ್ಯಾಂಡಲ್‌ಬಾರ್‌ಗಳು ಮೊದಲಿಗಿಂತ ಚಿಕ್ಕದಾಗಿರುತ್ತವೆ.

ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ 2021ರ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್

ಈ ಬೈಕ್ ಈಗ ಹೊಸದಾಗಿ ವಿನ್ಯಾಸಗೊಳಿಸಲಾದ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ, ಈ ಹೊಸ ಬೈಕಿನಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಈಗ ಅನಲಾಗ್ ಸ್ಪೀಡೋಮೀಟರ್ ಕೆಳಗೆ ಸಣ್ಣ ಡಿಜಿಟಲ್ ಡಿಸ್ ಪ್ಲೇಯನ್ನು ಹೊಂದಿರುತ್ತದೆ.

ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ 2021ರ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್

ಈ ಡಿಸ್ ಪ್ಲೇಯಲ್ಲಿ ಟ್ರಿಪ್ ಮೀಟರ್, ಫ್ಯೂಯಲ್ ಗೇಜ್, ಓಡೋಮೀಟರ್ ಮತ್ತು ಇತರ ಮಾಹಿತಿಗಳನ್ನು ಪ್ರದರ್ಶಿಸುತ್ತದೆ. ಬದಿಯಲ್ಲಿ ಟ್ರಿಪ್ಪರ್ ನ್ಯಾವಿಗೇಷನ್ ಪಾಡ್ ಇರುವಿಕೆಯು ಅತ್ಯಂತ ಮುಖ್ಯವಾದ ಸೇರ್ಪಡೆಯಾಗಿದೆ. ಟ್ರಿಪ್ಪರ್ ನ್ಯಾವಿಗೇಷನ್ ಫೀಚರ್ ಅನ್ನು ಒಳಗೊಂಡಿರುತ್ತದೆ.

ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ 2021ರ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್

ಈ ಹೊಸ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿನ ಪ್ಲಾಟ್‌ಫಾರ್ಮ್ ಮತ್ತು ಎಂಜಿನ್ ಸೆಟಪ್‌ನಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಲಾಗುತ್ತದೆ. ಹೊಸ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕನ್ನು ಹೊಸ ಮಾಡ್ಯುಲರ್ ಜೆ ಪ್ಲಾಟ್‌ಫಾರ್ಮ್‌ನಲ್ಲಿ ತಯಾರಿಸಲಾಗುತ್ತದೆ.

ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ 2021ರ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್

ಈ ಮಾಡ್ಯುಲರ್ ಜೆ ಪ್ಲಾಟ್‌ಫಾರ್ಮ್‌ ಅಸ್ತಿತ್ವದಲ್ಲಿರುವ ಪ್ಲಾಟ್‌ಫಾರ್ಮ್‌ಗಿಂತ ಹಗುರವಾಗಿರುತ್ತದೆ, ಇನ್ನು 2021ರ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿನಲ್ಲಿ ಹೊಸ 349ಸಿಸಿ, ಸುಧಾರಿತ ಎಸ್‌ಒಹೆಚ್‌ಸಿ ಕಾನ್ಫಿಗರೇಶನ್‌ನೊಂದಿಗೆ ಸಿಂಗಲ್ ಸಿಲಿಂಡರ್ ಫ್ಯೂಯಲ್ ಇಂಜೆಕ್ಟ್ ಎಂಜಿನ್ ಅನ್ನು ಹೊಂದಿರುತ್ತದೆ.

ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ 2021ರ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್

ಈ 349ಸಿಸಿ ಎಂಜಿನ್ 20.2 ಬಿಹೆಚ್‌ಪಿ ಪವರ್ ಮತ್ತು 27 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುತ್ತದೆ.

ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ 2021ರ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್

ಈ 2021ರ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್ ಭಾರತದಲ್ಲಿ ಹಲವು ಬಾರಿ ಸ್ಫಾಟ್ ಟೆಸ್ಟ್ ಅನ್ನು ನಡೆಸಲಾಗಿದೆ. ಈ 2021ರ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ದೇಶೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸುತ್ತೇವೆ.

Source: Power On Wheel

Article Published On: Tuesday, July 27, 2021, 20:34 [IST]
English summary
2021 Royal Enfield Classic 350 Launch Soon. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+