ಜಪಾನ್‌ನಲ್ಲಿ ಬಿಡುಗಡೆಗೊಂಡ ಮೇಡ್ ಇನ್ ಇಂಡಿಯಾ Royal Enfield Himalayan ಬೈಕ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್‌ಫೀಲ್ಡ್ ತನ್ನ ಜನಪ್ರಿಯ ಹಿಮಾಲಯನ್ ಅಡ್ವೆಂಚರ್ ಬೈಕ್ ಅನ್ನು ಜಪಾನ್‌ನ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ರಾಯಲ್ ಎನ್‌ಫೀಲ್ಡ್ ಹಿಮಾಲಯನ್(Royal Enfield Himalayan) ಅಡ್ವೆಂಚರ್ ಬೈಕ್ ಇತ್ತೀಚಿನ ಯುರೋ 5 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.

ಜಪಾನ್‌ನಲ್ಲಿ ಬಿಡುಗಡೆಗೊಂಡ ಮೇಡ್ ಇನ್ ಇಂಡಿಯಾ Royal Enfield Himalayan ಬೈಕ್

ಹೊಸ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಟ್ರಿಪ್ಪರ್ ನ್ಯಾವಿಗೇಶನ್ ಪಾಡ್, ಸ್ವಿಚ್ ಮಾಡಬಹುದಾದ ಎಬಿಎಸ್ ಮತ್ತು ಮೂರು ಹೊಸ ಬಣ್ಣಗಳಂತಹ ವೈಶಿಷ್ಟ್ಯಗಳೊಂದಿಗೆ ಪರಿಚಯಿಸಲಾಗಿದೆ. ಕಂಪನಿಯು ಈ ವರ್ಷದ ಆರಂಭದಲ್ಲಿ ಜಪಾನ್‌ನಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿತು. ಅಲ್ಲದೆ, ಏಷ್ಯಾ-ಪೆಸಿಫಿಕ್ ವಲಯದ ಮಾರುಕಟ್ಟೆಯಲ್ಲಿ ಕಂಪನಿಯ ಉಪಸ್ಥಿತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಕ್ರಮವು ಪ್ರಮುಖ ಹೆಜ್ಜೆಯಾಗಿದೆ.

ಜಪಾನ್‌ನಲ್ಲಿ ಬಿಡುಗಡೆಗೊಂಡ ಮೇಡ್ ಇನ್ ಇಂಡಿಯಾ Royal Enfield Himalayan ಬೈಕ್

ಹಿಮಾಲಯನ್ ಮತ್ತು 650 ಟ್ವಿನ್‌ಗಳಂತಹ ಮಾದರಿಗಳು (ಕಾಂಟಿನೆಂಟಲ್ ಜಿಟಿ 650, ಇಂಟರ್‌ಸೆಪ್ಟರ್ ಐಎನ್‌ಟಿ 650) ರಾಯಲ್ ಎನ್‌ಫೀಲ್ಡ್ ಕಂಪನಿಗೆ ಜಪಾನೀಸ್ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಜಪಾನ್‌ನಲ್ಲಿ ಬಿಡುಗಡೆಗೊಂಡ ಮೇಡ್ ಇನ್ ಇಂಡಿಯಾ Royal Enfield Himalayan ಬೈಕ್

ರಾಯಲ್ ಎನ್‌ಫೀಲ್ಡ್ ಭಾರತದಲ್ಲಿ ಅತಿದೊಡ್ಡ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರಾಂಡ್ ಗಳಲ್ಲಿ ಒಂದಾಗಿದೆ. ರಾಯಲ್ ಎನ್‌ಫೀಲ್ಡ್ ಬ್ರ್ಯಾಂಡ್ ರೆಟ್ರೊ-ಶೈಲಿಯ ಸ್ಟ್ರೀಟ್ ಬೈಕ್‌ಗಳಲ್ಲಿ ಪರಿಣತಿ ಹೊಂದಿದ್ದರೂ, ಅದರ ಪೋರ್ಟ್‌ಫೋಲಿಯೊದಲ್ಲಿ ಅಡ್ವೆಂಚರ್ ಬೈಕ್ ಅನ್ನು ಹೊಂದಿದೆ. ಈ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಭಾರತೀಯ ಮಾರುಕಟ್ಟೆಯ ಜನಪ್ರಿಯ ಅಡ್ವೆಂಚರ್-ಟೂರರ್ ಬೈಕ್‌ಗಳಲ್ಲಿ ಒಂದಾಗಿದೆ.

ಜಪಾನ್‌ನಲ್ಲಿ ಬಿಡುಗಡೆಗೊಂಡ ಮೇಡ್ ಇನ್ ಇಂಡಿಯಾ Royal Enfield Himalayan ಬೈಕ್

ಇನ್ನು ಈ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಅತ್ಯಂತ ಅಗ್ಗದ ಅಡ್ವೆಂಚರ್ ಟೂರರ್ ಬೈಕ್‌ಗಳಲ್ಲಿ ಒಂದಾಗಿದೆ. ಅಲ್ಲದೇ ಇದು ಅತ್ಯಂತ ಸಮರ್ಥ ಬೈಕ್ ಆಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಅಡ್ವೆಂಚರ್ ಬೈಕ್‌ಗಳ ಬೇಡಿಕೆ ಹೆಚ್ಚಾಗುತ್ತಿದೆ.

ಜಪಾನ್‌ನಲ್ಲಿ ಬಿಡುಗಡೆಗೊಂಡ ಮೇಡ್ ಇನ್ ಇಂಡಿಯಾ Royal Enfield Himalayan ಬೈಕ್

ಹೊಸ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಬಗ್ಗೆ ಹೇಳುವುದಾದರೆ, ಈ ಅಡ್ವೆಂಚರ್-ಟೂರರ್ ಮಾದರಿಯು ಸ್ಟ್ಯಾಂಡರ್ಡ್, ಡ್ಯುಯಲ್ ಟೋನ್ ಮತ್ತು ಪೈನ್ ಗ್ರೀನ್ ಮತ್ತು ಗ್ರಾನೈಟ್ ಬ್ಲ್ಯಾಕ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಈ ಬೈಕಿನಲ್ಲಿ 'ಟ್ರಿಪ್ಪರ್ ನ್ಯಾವಿಗೇಷನ್' ಅನ್ನು ಸಹ ಒಳಗೊಂಡಿದೆ. ಹೊಸ ಸರಳ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಪಾಡ್ ಅನ್ನು ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ.

ಜಪಾನ್‌ನಲ್ಲಿ ಬಿಡುಗಡೆಗೊಂಡ ಮೇಡ್ ಇನ್ ಇಂಡಿಯಾ Royal Enfield Himalayan ಬೈಕ್

ಇದರಲ್ಲಿ ಟ್ರಿಪ್ಪರ್ ನ್ಯಾವಿಗೇಷನ್ ಸಿಸ್ಟಂ ಬೈಕ್ ರೈಡಿಂಗ್ ವೇಳೆ ಸವಾರನಿಗೆ ಸಾಕಷ್ಟು ಸಹಕಾರಿಯಾಗಿರುತ್ತದೆ. ಈ ರಾಯಲ್ ಎನ್‌ಫೀಲ್ಡ್ ಎಕ್ಸ್‌ಪ್ಲೊರ್ ಆ್ಯಂಡ್ ಪ್ಲ್ಯಾನ್ ರೈಡರ್ ಆ್ಯಪ್ ಮೂಲಕ ಟ್ರಿಪ್ರರ್ ಮೀಟರ್‌ಗೆ ಕನೆಕ್ಟ್ ಮಾಡಬಹುದಾಗಿದೆ. ಇದು ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಸೇವೆಯನ್ನು ಒದಗಿಸುತ್ತದೆ.

ಜಪಾನ್‌ನಲ್ಲಿ ಬಿಡುಗಡೆಗೊಂಡ ಮೇಡ್ ಇನ್ ಇಂಡಿಯಾ Royal Enfield Himalayan ಬೈಕ್

ಈ ಹಿಮಾಲಯನ್ ಅಡ್ವೆಂಚರ್-ಟೂರರ್ ಬೈಕಿನಲ್ಲಿ ಅದೇ 411ಸಿಸಿ ಸಿಂಗಲ್-ಸಿಲಿಂಡರ್ ಎಸ್‌ಒಹೆಚ್‌ಸಿ ಏರ್-ಕೂಲ್ಡ್ ಎಂಜಿನ್ ಅನ್ನು ಆಳವಡಿಸಲಾಗಿದೆ. ಈ ಎಂಜಿನ್ 24.3 ಬಿಹೆಚ್‍ಪಿ ಪವರ್ ಮತ್ತು 32 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ ನೊಂದಿಗೆ ಜೋಡಿಸಲಾಗಿದೆ.

ಜಪಾನ್‌ನಲ್ಲಿ ಬಿಡುಗಡೆಗೊಂಡ ಮೇಡ್ ಇನ್ ಇಂಡಿಯಾ Royal Enfield Himalayan ಬೈಕ್

ಈ ಹೊಸ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಅದರ ಹಿಂದಿನ ಮಾದರಿಗಳಂತೆಯೇ ಅದೇ ವಿನ್ಯಾಸ ಮತ್ತು ಸಿಲೂಯೆಟ್ ಅನ್ನು ಮುಂದಕ್ಕೆ ಸಾಗಿಸಿದ್ದು, ಆದರೆ ಕೆಲವು ಸಣ್ಣ ನವೀಕರಣಗಳಿವೆ. ಇವುಗಳಲ್ಲಿ ನವೀಕರಿಸಿದ ಸೀಟ್ ಸೇರಿವೆ. ಇದು ಈಗ ಉತ್ತಮ ಕಂಫರ್ಟ್ ಅನ್ನು ನೀಡುತ್ತದೆ. ವಿಶೇಷವಾಗಿ ಲಾಂಗ್ ರೈಡ್ ತೆರಳುವಾಗ ಇದು ಹೆಚ್ಚು ಸಹಕಾರಿಯಾಗಿರುತ್ತದೆ. ಇನ್ನು ನವೀಕರಿಸಿದ ಹಿಂಭಾಗದ ಕ್ಯಾರಿಯರ್ ಮತ್ತು ಮುಂಭಾಗ ಮೆಟಲ್ ಫ್ರೇಮ್ ಮತ್ತು ಹೊಸ ವಿಂಡ್‌ಸ್ಕ್ರೀನ್ ಅನ್ನು ಹೊಂದಿದೆ.

ಜಪಾನ್‌ನಲ್ಲಿ ಬಿಡುಗಡೆಗೊಂಡ ಮೇಡ್ ಇನ್ ಇಂಡಿಯಾ Royal Enfield Himalayan ಬೈಕ್

ಹೊಸ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಆಫ್-ರೋಡರ್ ಹೊಸ ಪೈನ್ ಗ್ರೀನ್, ಗ್ರಾನೈಟ್ ಬ್ಲ್ಯಾಕ್ (ಡ್ಯುಯಲ್-ಟೋನ್ ವಿಥ್ ಮ್ಯಾಟ್ & ಗ್ಲೋಸ್ ಬ್ಲ್ಯಾಕ್) ಮತ್ತು ಮಿರಾಜ್ ಸಿಲ್ವರ್‌ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿದೆ. ಇದರೊಂದಿಗೆ ಪ್ರಸ್ತುತ ಇರುವ ಗ್ರೇವೆಲ್ ಗ್ರೇ, ರಾಕ್ ರೆಡ್ ಮತ್ತು ಲೇಕ್ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಮಾರಾಟವಾಗುತ್ತಿದೆ.

ಜಪಾನ್‌ನಲ್ಲಿ ಬಿಡುಗಡೆಗೊಂಡ ಮೇಡ್ ಇನ್ ಇಂಡಿಯಾ Royal Enfield Himalayan ಬೈಕ್

ಈ ಹೊಸ ಹಿಮಾಲಯನ್ ಅಡ್ವೆಂಚರ್-ಟೂರರ್ ಬೈಕ್ ಸಸ್ಪಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 41ಎಂಎಂ ಟೆಲಿಸ್ಕೋಪಿಕ್ ಸೆಟಪ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ಹೊಂದಿದೆ. ಇನ್ನು ಇದರ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 300ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 240ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇನ್ನು ಸ್ಟ್ಯಾಂಡರ್ಡ್ ಆಗಿ 'ಸ್ವಿಚ್ ಮಾಡಬಹುದಾದ ಎಬಿಎಸ್' ಅನ್ನು ಹೊಂದಿದೆ.

ಜಪಾನ್‌ನಲ್ಲಿ ಬಿಡುಗಡೆಗೊಂಡ ಮೇಡ್ ಇನ್ ಇಂಡಿಯಾ Royal Enfield Himalayan ಬೈಕ್

ಇನ್ನು ರಾಯಲ್ ಎನ್‍ಫೀಲ್ಡ್ ತನ್ನ ಹಿಮಾಲಯನ್ ಅಡ್ವೆಂಚರ್ ಬೈಕಿನ ಹೊಸ ವೆರಿಯೆಂಟ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹಿಮಾಲಯನ್ ಬೈಕಿನ ಆನ್-ರೋಡ್-ರೋಡ್ ಆಧಾರಿತ ಹೊಸ ವೆರಿಯೆಂಟ್ ಇತ್ತೀಚೆಗೆ ಸ್ಪಾಟ್ ಟೆಸ್ಟ್ ನಡೆಸಿದೆ. ಹಿಮಾಲಯನ್ ಬೈಕಿನ ಹೊಸ ವೆರಿಯೆಂಟ್ ಸ್ಪಾಟ್ ಟೆಸ್ಟ್ ಅನ್ನು ನಡೆಸುವ ಸ್ಪೈ ಚಿತ್ರಗಳು ಇತ್ತೀಚೆಗೆ ಬಹಿರಂಗವಾಗಿವೆ. ಹಿಮಾಲಯನ್ ಬೈಕಿನ ಹೊಸ ವೆರಿಯೆಂಟ್ ಮುಂಭಾಗದ ಜೆರ್ರಿ-ಕ್ಯಾನ್ ಹೋಲ್ಡರ್ ಫ್ರೇಮ್ ಕಾಣುವುದಿಲ್ಲ, ಫೋರ್ಕ್ ಗೇಟರ್ಸ್, ಎತ್ತರದ ವಿಂಡ್‌ಸ್ಕ್ರೀನ್ ಮತ್ತು ಮುಂಭಾಗದ ಮಡ್‌ಗಾರ್ಡ್ ಅನ್ನು ಒಳಗೊಂಡಿದೆ.

ಜಪಾನ್‌ನಲ್ಲಿ ಬಿಡುಗಡೆಗೊಂಡ ಮೇಡ್ ಇನ್ ಇಂಡಿಯಾ Royal Enfield Himalayan ಬೈಕ್

ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಜಿ 310 ಜಿಎಸ್ ಹಾಗೂ ಕವಾಸಕಿ ವರ್ಸಿಸ್-ಎಕ್ಸ್ 300, ಕೆಟಿ‍ಎಂ 390 ಅಡ್ವೆಂಚರ್ ಬೈಕ್ ಗಳಿಗೆ ಪೈಪೋಟಿ ನೀಡುತ್ತಿದೆ.

Most Read Articles

Kannada
English summary
New royal enfield himalayan launched in japanese market features spec details
Story first published: Friday, December 17, 2021, 10:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X