ಸ್ಪಾಟ್ ಟೆಸ್ಟ್‌ ನಡೆಸಿದ 2021ರ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್

ಚೆನ್ನೈ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್‌ಫೀಲ್ಡ್ ತನ್ನ 2021ರ ಹಿಮಾಲಯನ್ ಅಡ್ವೆಂಚರ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಕೆಲವು ಹೊಸ ಅಪ್ದೇಟ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಸ್ಪಾಟ್ ಟೆಸ್ಟ್‌ ನಡೆಸಿದ 2021ರ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್

2021ರ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಇತ್ತೀಚೆಗೆ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಈ ಹೊಸ ಹಿಮಾಲಯನ್ ಬೈಕ್ ಸ್ಪಾಟ್ ಟೆಸ್ಟ್ ನಡೆಸುತ್ತಿರು ಚಿತ್ರಗಳನ್ನು ಗಾಡಿವಾಡಿ ಬಹಿರಂಗಪಡಿಸಿದೆ. ಈ ಹೊಸ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನ ವಿನ್ಯಾಸದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಕಂಡುಬಂದಿಲ್ಲ. ಆದರೆ ಹೆಚ್ಚುವರಿ ಪ್ರೀಮಿಯಂ ಫೀಚರ್ ಗಳನ್ನು ಪಡೆಯಲಿದೆ.

ಸ್ಪಾಟ್ ಟೆಸ್ಟ್‌ ನಡೆಸಿದ 2021ರ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್

ಇತ್ತೀಚೆಗೆ ಬಿಡುಗಡೆಗೊಂಡ ರಾಯಲ್ ಎನ್‌ಫೀಲ್ಡ್ ಮಿಟಿಯೋರ್ 350 ಬೈಕಿನಲ್ಲಿ ಟ್ರಿಪ್ಪರ್ ನ್ಯಾವಿಗೇಷನ್ ಎಂಬ ಹೊಸ ಫೀಚರ್ ಅನ್ನು ಪರಿಚಯಿಸಿದ್ದರು. ಇದೇ ಫೀಚರ್ ಅನ್ನು ಹೊಸ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನಲ್ಲಿ ಅಳವಡಿಸಲಿದೆ. ಈ ಫೀಚರ್ ಸ್ಪಾಟ್ ಟೆಸ್ಟ್ ನಡೆಸುತ್ತಿರುವ 2021ರ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನಲ್ಲಿ ಕಾಣಿಸಿಕೊಂಡಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಸ್ಪಾಟ್ ಟೆಸ್ಟ್‌ ನಡೆಸಿದ 2021ರ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್

ಟ್ರಿಪ್ಪರ್ ನ್ಯಾವಿಗೇಷನ್ ಫೀಚರ್ ಬೈಕ್ ರೈಡಿಂಗ್ ವೇಳೆ ಸಾಕಷ್ಟು ಸಹಕಾರಿಯಾಗಲಿದೆ. ರಾಯಲ್ ಎನ್‌ಫೀಲ್ಡ್ ಎಕ್ಸ್‌ಪ್ಲೊರ್ ಆ್ಯಂಡ್ ಪ್ಲ್ಯಾನ್ ರೈಡರ್ ಆ್ಯಪ್ ಮೂಲಕ ಟ್ರಿಪ್ರರ್ ಮೀಟರ್‌ಗೆ ಕನೆಕ್ಟ್ ಮಾಡಬಹುದಾಗಿದೆ. ಇದು ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಸೇವೆ ಒದಗಿಸಲಿದೆ.

ಸ್ಪಾಟ್ ಟೆಸ್ಟ್‌ ನಡೆಸಿದ 2021ರ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್

ಇದಲ್ಲದೆ ಮುಂದಿನ ವರ್ಷ ಹಿಮಾಲಯನ್ ಬೈಕಿನಲ್ಲಿ ಇನ್ನೂ ಕೆಲವು ಬದಲಾವಣೆಗಳನ್ನು ನಾವು ನಿರೀಕ್ಷಿಸುತ್ತೇವೆ. ಇದು ಸ್ಮಾರ್ಟ್‌ಫೋನ್‌ಗಳಿಗಾಗಿ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಅನ್ನು ನೀಡಬಹುದು, ಮತ್ತು ಸ್ಟೈಲಿಂಗ್ ಅನ್ನು ಹೆಚ್ಚಿಸಲು ಹೊಸ ಬಣ್ಣದ ಆಯ್ಕೆಗಳನ್ನು ನೋಡಬಹುದು ಎಂದು ನಿರೀಕ್ಷಿಸುತ್ತೇವೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಸ್ಪಾಟ್ ಟೆಸ್ಟ್‌ ನಡೆಸಿದ 2021ರ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್

ಉಳಿದಂತೆ ಯಾವುದೇ ಬದಲಾವಣೆಗಳಿರುವುದ್ದಿಲ್ಲ. ಪ್ರಸ್ತುತ ಮಾರಾಟವಾಗುತ್ತಿರುವ ಹಿಮಾಲಯನ್ ಬೈಕಿನಲ್ಲಿ ಸ್ಪೋಕ್ ವ್ಹೀಲ್, ಎಂಆರ್‍ಎಫ್ ಡ್ಯುಯಲ್ ಪರ್ಪಸ್ ಟಯರ್‍‍ಗಳನ್ನು ಹೊಂದಿದೆ. ಹೊಸ ಹಿಮಾಲಯನ್ ಬೈಕಿನಲ್ಲಿ ಸ್ವಿಚ್ಎಬಲ್ ಎಬಿಎಸ್ ಮತ್ತು ಹಾರ್ಜಾರ್ಡ್ ಲೈ‍‍‍ಟ್‍ಗಳನ್ನು ಹೊಂದಿವೆ.

ಸ್ಪಾಟ್ ಟೆಸ್ಟ್‌ ನಡೆಸಿದ 2021ರ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್

ಈ ಫೀಚರ್ ಅನ್ನು ಹೊಂದಿರುವುದರಿಂದ ಹೆಚ್ಚಿನ ಆಫ್ ರೋಡ್ ಪ್ರಿಯರನ್ನು ಸೆಳೆದಿದೆ. ಈ ಸ್ವಿಚ್‍‍ಬಲ್ ಮಾಡಬಹುದಾದ ಎಬಿಎಸ್ ಆಯ್ಕೆಯ ಸಹಾಯದಿಂದ ಸವಾರನಿಗೆ ಬೈಕಿನ ಮೇಲೆ ಹೆಚ್ಚು ಕಂಟ್ರೋಲ್ ಅನ್ನು ಹೊಂದಬಹುದು.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಸ್ಪಾಟ್ ಟೆಸ್ಟ್‌ ನಡೆಸಿದ 2021ರ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್

ಇದರೊಂದಿಗೆ ಸವಾರ ಸುಲಭವಾಗಿ ಎಬಿಎಸ್ ಅನ್ನು ಆಫ್ ಮಾಡಬಹುದು ಮತ್ತು ಸಂಕಷ್ಠದ ಸನ್ನಿವೇಷದಲ್ಲಿ ಬೈಕ್ ನಿಲ್ಲಿಸಲು ಹಿಂದಿನ ಟಯರ್‍‍ಗಳನ್ನು ಲಾಕ್ ಮಾಡಬಹುದು. ಹಜಾರ್ಡ್ ಲೈಟ್‍ಗಳು ಕಠಿಣವಾದ ಹವಮಾನ ಪರಿಸ್ಥಿತಿಯಲ್ಲೂ ಸವಾರಿ ಮಾಡಲು ಹೆಚ್ಚು ಸಹಕಾರಿಯಾಗಿವೆ.

ಸ್ಪಾಟ್ ಟೆಸ್ಟ್‌ ನಡೆಸಿದ 2021ರ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್

2021ರ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಮಾದರಿಯಲ್ಲಿ 411 ಸಿಸಿಯ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 23.9 ಬಿ‍‍ಹೆಚ್‍‍ಪಿ ಪವರ್ ಮತ್ತು 32 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕಿನಲ್ಲಿ 5 ಸ್ಪೀಡ್ ಗೇರ್‌ಬಾಕ್ಸ್ ನೀಡಲಾಗಿದೆ.

ಸ್ಪಾಟ್ ಟೆಸ್ಟ್‌ ನಡೆಸಿದ 2021ರ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್

2021ರ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್ ಭಾರತದಲ್ಲಿ ಈ ವರ್ಷದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ. ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಜಿ 310 ಜಿಎಸ್ ಹಾಗೂ ಕವಾಸಕಿ ವರ್ಸಿಸ್-ಎಕ್ಸ್ 300, ಕೆಟಿ‍ಎಂ 390 ಬೈಕುಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Wednesday, January 6, 2021, 9:48 [IST]
English summary
2021 Royal Enfield Himalayan Spied Testing With Tripper Navigation System. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+