ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಬೈಕಿನ ಹೊಸ ವೆರಿಯೆಂಟ್

ಚೆನ್ನೈ ಮೂಲದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್‍ಫೀಲ್ಡ್ ತನ್ನ ಹಿಮಾಲಯನ್ ಅಡ್ವೆಂಚರ್ ಬೈಕಿನ ಹೊಸ ವೆರಿಯೆಂಟ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹಿಮಾಲಯನ್ ಬೈಕಿನ ಆನ್-ರೋಡ್-ರೋಡ್ ಆಧಾರಿತ ಹೊಸ ವೆರಿಯೆಂಟ್ ಇತ್ತೀಚೆಗೆ ಸ್ಪಾಟ್ ಟೆಸ್ಟ್ ನಡೆಸಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಬೈಕಿನ ಹೊಸ ವೆರಿಯೆಂಟ್

ಹಿಮಾಲಯನ್ ಬೈಕಿನ ಹೊಸ ವೆರಿಯೆಂಟ್ ಸ್ಪಾಟ್ ಟೆಸ್ಟ್ ಅನ್ನು ನಡೆಸುವ ಸ್ಪೈ ಚಿತ್ರಗಳು ಬಹಿರಂಗವಾಗಿವೆ. ಚಿತ್ರದಲ್ಲಿ ಹಲವಾರು ಬದಲಾವಣೆಗಳನ್ನು ನಾವು ಗಮನಿಸಬಹುದು. ಇದು ಸಣ್ಣ ಮುಂಭಾಗದ ವ್ಹೀಲ್, ಮುಂಭಾಗದ ಜೆರ್ರಿ-ಕ್ಯಾನ್ ಹೋಲ್ಡರ್ ಫ್ರೇಮ್ ಕಾಣುವುದಿಲ್ಲ, ಫೋರ್ಕ್ ಗೇಟರ್ಸ್, ಎತ್ತರದ ವಿಂಡ್‌ಸ್ಕ್ರೀನ್ ಮತ್ತು ಮುಂಭಾಗದ ಮಡ್‌ಗಾರ್ಡ್ ಅನ್ನು ಒಳಗೊಂಡಿದೆ. ಇನ್ನು ಮುಂಭಾಗದ ಫ್ರೇಮ್ ಬದಲಿಸಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಬೈಕಿನ ಹೊಸ ವೆರಿಯೆಂಟ್

ಈ ಬದಲಾವಣೆಗಳ ಹೊರತಾಗಿ, ಹೊಸ ಹಿಮಾಲಯದ ಬೈಕಿನ ಅಡ್ವೆಂಚರ್ ಆವೃತ್ತಿಯಿಂದ ತನ್ನ ಮೆಕ್ಯಾನಿಕಲ್ ಮತ್ತು ಇತರ ಟ್ರಿಮ್‌ಗಳನ್ನು ಎರವಲು ಪಡೆಯುತ್ತದೆ. ಇನ್ನು ಆನ್-ರೋಡ್ ಆಧಾರಿತ ಮಾದರಿಯಲ್ಲಿ ಎಕ್ಸಾಸ್ಟ್ ಮತ್ತು ಎತ್ತರ ಹ್ಯಾಂಡಲ್‌ಬಾರ್‌ನೊಂದಿಗೆ ನೇರವಾಗಿ ಕುಳಿತುಕೊಳ್ಳುವಂತಹ ಸೀಟ್ ಪೋಷಿಸನ್ ಅನ್ನು ಹೊಂದಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಬೈಕಿನ ಹೊಸ ವೆರಿಯೆಂಟ್

ಉಳಿದಂತೆ ಹಿಮಾಲಯದ ಬೈಕಿನ ಹೊಸ ವೆರಿಯೆಂಟ್ ಇತರ ಮಾಹಿತಿಗಳು ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ, ಇನ್ನು 2021ರ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನ ಬಗ್ಗೆ ಹೇಳುವುದಾದರೆ, ಈ ಬೈಕಿನಲ್ಲಿ 'ಟ್ರಿಪ್ಪರ್ ನ್ಯಾವಿಗೇಷನ್' ಅನ್ನು ಸಹ ಒಳಗೊಂಡಿದೆ. ಹೊಸ ಸರಳ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಪಾಡ್ ಅನ್ನು ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಜೊತೆಗೆ ಅಳವಡಿಸಲಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಬೈಕಿನ ಹೊಸ ವೆರಿಯೆಂಟ್

ಈ ಟ್ರಿಪ್ಪರ್ ನ್ಯಾವಿಗೇಷನ್ ಸಿಸ್ಟಂ ಬೈಕ್ ರೈಡಿಂಗ್ ವೇಳೆ ಸವಾರನಿಗೆ ಸಾಕಷ್ಟು ಸಹಕಾರಿಯಾಗಿರುತ್ತದೆ. ಇದನ್ನು ಎಕ್ಸ್‌ಪ್ಲೊರ್ ಆ್ಯಂಡ್ ಪ್ಲ್ಯಾನ್ ರೈಡರ್ ಆ್ಯಪ್ ಮೂಲಕ ಟ್ರಿಪ್ರರ್ ಮೀಟರ್‌ಗೆ ಕನೆಕ್ಟ್ ಮಾಡಬಹುದಾಗಿದೆ. ಇದು ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಸೇವೆಯನ್ನು ಒದಗಿಸಲಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಬೈಕಿನ ಹೊಸ ವೆರಿಯೆಂಟ್

ಈ ಹಿಮಾಲಯನ್ ಬೈಕಿನಲ್ಲಿ ಅದೇ 411ಸಿಸಿ ಸಿಂಗಲ್-ಸಿಲಿಂಡರ್ ಎಸ್‌ಒಹೆಚ್‌ಸಿ ಏರ್-ಕೂಲ್ಡ್ ಎಂಜಿನ್ ಅನ್ನು ಆಳವಡಿಸಲಾಗಿದೆ. ಈ ಎಂಜಿನ್ 24.3 ಬಿಹೆಚ್‍ಪಿ ಪವರ್ ಮತ್ತು 32 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಬೈಕಿನ ಹೊಸ ವೆರಿಯೆಂಟ್

ಇನ್ನು 2021ರ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಸಸ್ಪಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 41ಎಂಎಂ ಟೆಲಿಸ್ಕೋಪಿಕ್ ಸೆಟಪ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ಒಳಗೊಂಡಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಬೈಕಿನ ಹೊಸ ವೆರಿಯೆಂಟ್

ಇದರ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 300ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 240ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇನ್ನು ಸ್ಟ್ಯಾಂಡರ್ಡ್ ಆಗಿ ಸ್ವಿಚ್ ಮಾಡಬಹುದಾದ ಎಬಿಎಸ್ ಅನ್ನು ಹೊಂದಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಬೈಕಿನ ಹೊಸ ವೆರಿಯೆಂಟ್

ಹೊಸ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಜಿ 310 ಜಿಎಸ್, ಕವಾಸಕಿ ವರ್ಸಿಸ್-ಎಕ್ಸ್ 300 ಮತ್ತು ಕೆಟಿ‍ಎಂ 390 ಅಡ್ವೆಂಚರ್ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

Article Published On: Thursday, July 29, 2021, 19:53 [IST]
English summary
New Royal Enfield Himalayan Variant Spied. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+