Just In
Don't Miss!
- Movies
ಜನವರಿ 22ರಂದು ಐದು ಕನ್ನಡ ಸಿನಿಮಾ ಬಿಡುಗಡೆ
- News
ಲಿಂಗಾಂಬೂದಿಪಾಳ್ಯ ಕೆರೆಗೆ ಹರಿಯಲಿದೆ ಕೆಆರ್ಎಸ್ ನೀರು
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Sports
ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ದೋಷವನ್ನು ಆಟೋಮ್ಯಾಟಿಕ್ ಆಗಿ ಪತ್ತೆ ಹಚ್ಚಿ ಸರಿಪಡಿಸುತ್ತದೆ ಈ ಟೆಕ್ನಾಲಜಿ
ಬ್ಯಾಟರಿಗಳು ಎಲೆಕ್ಟ್ರಿಕ್ ವಾಹನಗಳ ಬಹು ಮುಖ್ಯ ಭಾಗಗಳಾಗಿವೆ. ಪ್ಯೂರ್ ಇವಿ ಎಂಬ ಕಂಪನಿಯು ವಿಶಿಷ್ಟ ರೀತಿಯ ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಅಭಿವೃದ್ಧಿಪಡಿಸಿದೆ. ಈ ಬ್ಯಾಟರಿಯು ದೋಷಗಳನ್ನು ಆಟೋಮ್ಯಾಟಿಕ್ ಆಗಿ ಪತ್ತೆ ಮಾಡುತ್ತದೆ.

ಜೊತೆಗೆ ಆ ದೋಷಗಳನ್ನು ಆಟೋಮ್ಯಾಟಿಕ್ ಆಗಿ ಸರಿಪಡಿಸುತ್ತದೆ. ಈ ಬ್ಯಾಟರಿಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ. ಪ್ಯೂರ್ ಇವಿ ಐಐಟಿ ಹೈದರಾಬಾದ್ ಒಡೆತನದ ಎಲೆಕ್ಟ್ರಿಕ್ ವಾಹನಗಳ ಸ್ಟಾರ್ಟ್ ಅಪ್ ಕಂಪನಿಯಾಗಿದೆ.

ಈ ಕಂಪನಿಯು ಇಪ್ಲುಟೊ 7 ಜಿ, ಎಟ್ರೆನ್ಸ್ ನಿಯೋ, ಎಟ್ರೆನ್ಸ್, ಎಗ್ನೈಟ್ ಹಾಗೂ ಎಟ್ರಾನ್ ಪ್ಲಸ್ ಎಂಬ ಐದು ಎಲೆಕ್ಟ್ರಿಕ್ ಬೈಕುಗಳನ್ನು ಮಾರಾಟ ಮಾಡುತ್ತದೆ. ಈಗ ಪ್ಯೂರ್ ಇವಿ ಕಂಪನಿಯು ಹೊಸ ಟೆಕ್ನಾಲಜಿಯನ್ನು ಅಳವಡಿಸಲು ಸಜ್ಜಾಗಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಪ್ಯೂರ್ ಇವಿ ಕಂಪನಿಯ ಎಲ್ಲಾ ವಾಹನಗಳಲ್ಲೂ ಈ ಟೆಕ್ನಾಲಜಿಯನ್ನು ನಿರೀಕ್ಷಿಸಲಾಗಿದೆ. ಈ ಟೆಕ್ನಾಲಜಿಯನ್ನು ಹೊಂದಿರುವ ವಾಹನಗಳು 2021ರ ಮೊದಲ ತ್ರೈಮಾಸಿಕದ ನಂತರ ಬಿಡುಗಡೆಯಾಗಲಿವೆ.

ಈ ವಿಶಿಷ್ಟವಾದ ಹಾಗೂ ವಿಭಿನ್ನವಾದ ಫೀಚರ್ ಹೊಂದುವ ಪ್ಯೂರ್ ಇವಿ ಕಂಪನಿಯ ಯಾವುದೇ ಎಲೆಕ್ಟ್ರಿಕ್ ಸ್ಕೂಟರ್ ಎಂದಿಗೂ ಬ್ಯಾಟರಿಯಲ್ಲಿ ಸಮಸ್ಯೆಯನ್ನು ಎದುರಿಸುವುದಿಲ್ಲವೆಂದು ಪ್ಯೂರ್ ಇವಿ ಕಂಪನಿಯು ತಿಳಿಸಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಇದರಿಂದಾಗಿ ಬ್ಯಾಟರಿಯಲ್ಲಿ ಸಮಸ್ಯೆ ಇದೆ ಎಂಬ ಕಾರಣಕ್ಕೆ ಸರ್ವೀಸ್ ಸೆಂಟರ್ ಅಥವಾ ಮೆಕಾನಿಕ್ ಬಳಿಗೆ ತೆರಳುವ ಅಗತ್ಯವಿಲ್ಲವೆಂದು ಕಂಪನಿಯು ಹೇಳಿದೆ. ಇದಕ್ಕಾಗಿ ಕಂಪನಿಯು ಆರ್ಟಿಫಿಶಿಯಲ್ ನ್ಯೂರಲ್ ನೆಟ್‌ವರ್ಕ್ (ಎಎನ್‌ಎನ್) ಅನ್ನು ಅಭಿವೃದ್ಧಿಪಡಿಸಿದೆ.

ಕಂಪನಿಯ ಎಲ್ಲಾ ಎಲೆಕ್ಟ್ರಿಕ್ ವಾಹನಗಳಲ್ಲಿ ಈ ಟೆಕ್ನಾಲಜಿಯನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಇದರ ಜೊತೆಗೆ ಭವಿಷ್ಯದಲ್ಲೂ ಈ ಟೆಕ್ನಾಲಜಿಯನ್ನು ಬಳಸಲು ಯೋಜಿಸಲಾಗಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಪ್ಯೂರ್ ಇವಿ ಕಂಪನಿಯು ಈ ಹೊಸ ತಂತ್ರಜ್ಞಾನವನ್ನು ಹೊಂದಿರುವ ಬ್ಯಾಟರಿಗೆ ಬ್ಯಾಟ್ರಿಕ್ಸ್ ಫ್ಯಾರಡೆ ಎಂಬ ಹೆಸರನ್ನಿಟ್ಟಿದೆ. ಇದರಲ್ಲಿರುವ ವಿಶೇಷ ಎಲೆಕ್ಟ್ರೋ ಸೆಲ್'ಗಳು ಬ್ಯಾಟರಿಯಲ್ಲಿನ ಯಾವುದೇ ಸಮಸ್ಯೆಯನ್ನು ಆಟೋಮ್ಯಾಟಿಕ್ ಆಗಿ ಸರಿಪಡಿಸುತ್ತವೆ.

ನಿರ್ದಿಷ್ಟವಾಗಿ ಹೇಳುವುದಾದರೆ ಈ ಟೆಕ್ನಾಲಜಿಯು ಆಟೋಮ್ಯಾಟಿಕ್ ಆಗಿ ದೋಷಗಳನ್ನು ಪತ್ತೆ ಹಚ್ಚಿ ಸರಿಪಡಿಸುತ್ತದೆ. ಬ್ಯಾಟರಿಯಿಂದ ಆಟೋಮ್ಯಾಟಿಕ್ ಆಗಿ ಸರಿಪಡಿಸುವುದರಿಂದ ಯಾವುದೇ ಮೆಕಾನಿಕ್'ನ ಅಗತ್ಯವಿಲ್ಲವೆಂದು ಹೇಳಲಾಗಿದೆ.