ಹೊಸ TVS Apache 165 RP ಬೈಕ್ ಟೀಸರ್ ಬಿಡುಗಡೆ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಟಿವಿಎಸ್ ಮೋಟಾರ್ ಭಾರತೀಯ ಮಾರುಕಟ್ಟೆಯಲ್ಲಿ ಬ್ಯಾಕ್-ಟು-ಬ್ಯಾಕ್ ಹೊಸ ಮಾದರಿಗಳನ್ನು ಬಿಡುಗಡೆಗೊಳಿಸುತ್ತಿದೆ. ಇದೀಗ ಟಿವಿಎಸ್ ಕಂಪನಿಯು ಹೊಸ ಪರ್ಫಾಮೆನ್ಸ್ ಬೈಕ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

ಹೊಸ TVS Apache 165 RP ಬೈಕ್ ಟೀಸರ್ ಬಿಡುಗಡೆ

ಈ ವರ್ಷದ ಆರಂಭದಲ್ಲಿ, ಟಿವಿಎಸ್ ಅಪಾಚೆ ಸರಣಿಯಲ್ಲಿ ಹೆಚ್ಚು ಕಾರ್ಯಕ್ಷಮತೆ ಆಧಾರಿತ ಬೈಕ್ ಗಳಿಗಾಗಿ ಹೊಸ ಟ್ರೇಡ್‌ಮಾರ್ಕ್ ಅನ್ನು ಸಲ್ಲಿಸಿತ್ತು. ನೋಂದಾಯಿತ ಟ್ರೇಡ್‌ಮಾರ್ಕ್ ಅನ್ನು ಟಿವಿಎಸ್ ಅಪಾಚೆ165 ಆರ್‌ಪಿ ಕೂಡ ಒಂದು. ಹೊಸೂರು ಮೂಲದ ಬೈಕ್ ತಯಾರಕರು ಇದೀಗ ಅಧಿಕೃತ ಟೀಸರ್ ಅನ್ನು ಬಿಡುಗಡೆ ಮಾಡಿದ್ದು, ಟಿವಿಎಸ್ ಆರ್‌ಪಿ ರೇಸ್ ಪ್ರದರ್ಶನವು ಶೀಘ್ರದಲ್ಲೇ ಬರಲಿದೆ ಎಂದು ಹೇಳಿದೆ. ಮೊದಲಿಗೆ ಆರ್‌ಪಿ ಎಂದರೆ 'ರೇಸ್ ಪರ್ಫಾರ್ಮೆನ್ಸ್' ಇದು 14 ಸೆಕೆಂಡುಗಳ ಕಿರು ಟೀಸರ್‌ನಲ್ಲಿ ಬಹಿರಂಗವಾಗಿದೆ.

ಹೊಸ TVS Apache 165 RP ಬೈಕ್ ಟೀಸರ್ ಬಿಡುಗಡೆ

ಟಿವಿಎಸ್ ಭವಿಷ್ಯದಲ್ಲಿ ಬಹು ಅಪಾಚೆ ಮಾದರಿಗಳನ್ನು ಆಧರಿಸಿ ಆರ್‌ಪಿ ಆವೃತ್ತಿಗಳನ್ನು ಪ್ರಾರಂಭಿಸಲಿದೆ. ಅವುಗಳಲ್ಲಿ ಮೊದಲನೆಯದು ಅಪಾಚೆ 165 ಆರ್‌ಪಿ ಆಗಿರಬಹುದು, ಇದು ಆರ್‌ಟಿಆರ್ 160 4ವಿ ಅನ್ನು ಆಧರಿಸಿರುತ್ತದೆ.

ಹೊಸ TVS Apache 165 RP ಬೈಕ್ ಟೀಸರ್ ಬಿಡುಗಡೆ

ವೀಡಿಯೊ ಟೀಸರ್ ಹೆಚ್ಚಿನದನ್ನು ಬಹಿರಂಗಪಡಿಸುವುದಿಲ್ಲ. ಆದ್ದರಿಂದ ಆರ್‌ಪಿ ಸರಣಿಯ ಮಾದರಿಗಳು ಹೆಚ್ಚಿನ ಕಾರ್ಯಕ್ಷಮತೆಯನ್ನು ಬಯಸುವ ಉತ್ಸಾಹಿಗಳಿಗೆ ನಿರ್ದಿಷ್ಟವಾಗಿ ಪೂರೈಸುತ್ತವೆ. ಹೊಸ ಅಪಾಚೆ 165 ಆರ್‌ಪಿ ಬೈಕ್ ಗಾಗಿ ಟಿವಿಎಸ್ 159.7 ಸಿಸಿ, ಸಿಂಗಲ್-ಸಿಲಿಂಡರ್, ಆಯಿಲ್-ಕೂಲ್ಡ್ ಎಂಜಿನ್‌ನ ರಿಬೋರ್ಡ್ ಆವೃತ್ತಿಯನ್ನು ಬಳಸುತ್ತಿರಬಹುದು,

ಹೊಸ TVS Apache 165 RP ಬೈಕ್ ಟೀಸರ್ ಬಿಡುಗಡೆ

ಅದು ಪ್ರಸ್ತುತ ಅಪಾಚೆ ಆರ್‌ಟಿಆರ್ 160 4ವಿ ಅನ್ನು ಪವರ್ ಮಾಡುತ್ತದೆ. ಇದು ಈ ವರ್ಷದ ಆರಂಭದಲ್ಲಿ ಅಪಾಚೆ 310 ನೊಂದಿಗೆ ನೀಡಲಾದ ಕೆಲವು ಹೊಸ ಕಿಟ್‌ಗಳನ್ನು ಸಹ ನೀಡಬಹುದು. ಈ ಕಿಟ್‌ಗಳು ಮಾಲೀಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ತಮ್ಮ ಮೋಟಾರ್‌ಸೈಕಲ್‌ಗಳನ್ನು ಟ್ಯೂನ್ ಮಾಡಲು ಅನುಮತಿಸುತ್ತದೆ.

ಹೊಸ TVS Apache 165 RP ಬೈಕ್ ಟೀಸರ್ ಬಿಡುಗಡೆ

ಅದರ ಪ್ರಸ್ತುತ ರೂಪದಲ್ಲಿ, ಈ ಇಂಧನ-ಇಂಜೆಕ್ಟೆಡ್ ಎಂಜಿನ್ 17.63 ಬಿಹೆಚ್‍ಪಿ ಪವರ್ ಮತ್ತು 14.73 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದು ಸ್ವತಃ ವಿಭಾಗದಲ್ಲಿ ಪ್ರಮುಖವಾಗಿದೆ. ರಿಬೋರ್ಡ್ ಮತ್ತು ರಿಟ್ಯೂನ್ ಮಾಡಿದಾಗ, ಈ ಪವರ್ ಕೆಲವು ಹೆಚ್ಚುವರಿ ಪವರ್ ಅನ್ನು ಉತ್ಪಾದಿಸುತ್ತದೆ.

ಹೊಸ TVS Apache 165 RP ಬೈಕ್ ಟೀಸರ್ ಬಿಡುಗಡೆ

ಈ ಎಂಜಿನ್ ಅನ್ನು ಅದೇ 5-ಸ್ಪೀಡ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗುತ್ತದೆ, ಆದರೆ ಗೇರ್ ಅನುಪಾತಗಳಿಗೆ ಕೆಲವು ಟ್ವೀಕ್‌ಗಳನ್ನು ಮಾಡಬಹುದು. ಹೊಸ ಪರ್ಫಾಮೆನ್ಸ್ ಮಾದರಿಯು ತನ್ನನ್ನು ಆರ್‌ಟಿಆರ್ 160 4ವಿನಿಂದ ಪ್ರತ್ಯೇಕಿಸಲು ಮತ್ತು ತನ್ನ ಒಡಹುಟ್ಟಿದವರಿಗಿಂತ ಸ್ಪೋರ್ಟಿಯಾಗಿ ಕಾಣುವಂತೆ ಮಾಡಲು ಕೆಲವು ಸ್ಟೈಲಿಂಗ್ ಪರಿಷ್ಕರಣೆಗಳನ್ನು ಮಾಡುವ ನಿರೀಕ್ಷೆಯಿದೆ.

ಹೊಸ TVS Apache 165 RP ಬೈಕ್ ಟೀಸರ್ ಬಿಡುಗಡೆ

ಬೈಕ್‌ನ ಎರೋಗಾಮಿಕ್ಸ್ ಹೆಚ್ಚು ಅಗ್ರೇಸಿವ್ ವಾರಿ ಭಂಗಿಯನ್ನು ಒದಗಿಸಲು ಸಹ ಬದಲಾಯಿಸಲ್ಪಡುತ್ತದೆ, ಕಡಿಮೆ-ಸೆಟ್ ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ನೊಂದಿಗೆ ಸ್ವಲ್ಪ ಹಿಂಬದಿ-ಸೆಟ್ ಫುಟ್‌ಪೆಗ್‌ಗಳನ್ನು ಹೊಂದಿರಲಿದೆ,

ಎರೋಗಾಮಿಕ್ಸ್ ಮಾತ್ರವಲ್ಲದೆ ಬೈಕ್‌ನ ಹಾರ್ಡ್‌ವೇರ್ ಕಾನ್ಫಿಗರೇಶನ್‌ಗಳಿಗೆ ಹೊಂದಾಣಿಕೆಗಳನ್ನು ಮಾಡಲಾಗುವುದು. ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಒಳಗೊಂಡಿರುವ ಸಸ್ಪೆಂಕ್ಷನ್ ಸೆಟಪ್ ಮತ್ತು ಪ್ರಿ ಲೋಡ್ ಹೊಂದಾಣಿಕೆಯೊಂದಿಗೆ ಹಿಂಭಾಗದಲ್ಲಿ ಶೋವಾ ಮೂಲದ ಮೊನೊ-ಶಾಕ್ ಯುನೊಟ್ ಅನ್ನು ಹೊಂದಿರಬಹುದು.

ಹೊಸ TVS Apache 165 RP ಬೈಕ್ ಟೀಸರ್ ಬಿಡುಗಡೆ

ಆದರೆ ಹೆಚ್ಚಿನ ವೇಗದಲ್ಲಿ ಉತ್ತಮ ನಿರ್ವಹಣೆ ಮತ್ತು ಸ್ಥಿರತೆಯನ್ನು ಒದಗಿಸಲು ಮುಂಭಾಗ ಮತ್ತು ಹಿಂಭಾಗದ ಎರಡೂ ಯುನಿಟ್ ಗಳ ಡ್ಯಾಂಪಿಂಗ್ ಗಟ್ಟಿಯಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಬಲವಾದ ಬ್ರೇಕಿಂಗ್ ಸೆಟಪ್ ಅನ್ನು ಟಿವಿಎಸ್ ನೀಡುವ ನಿರೀಕ್ಷೆಯಿದೆ ಆದ್ದರಿಂದ ಇದು ಸಾಕಷ್ಟು ಬೈಟ್ ಅನ್ನು ನೀಡುತ್ತದೆ.

ಹೊಸ TVS Apache 165 RP ಬೈಕ್ ಟೀಸರ್ ಬಿಡುಗಡೆ

ಈ ಹೊಸ ಪರ್ಫಾಮೆನ್ಸ್ ಮಾದರಿಯ ಎರಡೂ ಕಡೆಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ, ಸ್ಟ್ಯಾಂಡರ್ಡ್ ಎಬಿಎಸ್‌ನಂತೆ ಡ್ಯುಯಲ್-ಚಾನೆಲ್ ಎಬಿಎಸ್‌ನಿಂದ ಪೂರಕವಾಗಿರುತ್ತವೆ. ಸದ್ಯಕ್ಕೆ ಅದರ ಪವರ್‌ಟ್ರೇನ್ ಸ್ಪೆಕ್ಸ್‌ನ ಡೇಟಾ ಲಭ್ಯವಿಲ್ಲ. ಆದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ವಿವರಗಳು ಬಹಿರಂಗವಾಗಲಿದೆ ಎಂದು ನಿರೀಕ್ಷಿಸುತ್ತೇವೆ.

ಹೊಸ TVS Apache 165 RP ಬೈಕ್ ಟೀಸರ್ ಬಿಡುಗಡೆ

ವೈಶಿಷ್ಟ್ಯಗಳ ವಿಷಯದಲ್ಲಿ, ಅಪಾಚೆ 165 ಆರ್‌ಪಿ ಮಾದರಿಯು ಅಪಾಚೆ ಆರ್‌ಟಿಆರ್ 160 4ವಿ ಬೈಕಿನಲ್ಲಿರುವ ಎಲ್ಲಾ ವೈಶಿಷ್ಟ್ಯಗಳನ್ನು ಒಳಗೊಂಡಿರಬಹುದು, ಇವುಗಳಲ್ಲಿ ಆಲ್-ಎಲ್‌ಡಿ ಇಲ್ಯುಮಿನೇಷನ್, ಸಂಪೂರ್ಣ ಡಿಜಿಟಲ್ ಇನ್ಸ್ ಟ್ರುಮೆಂಟ್ ಕನ್ಸೋಲ್, ಎಲ್‌ಇಡಿ ಡಿಆರ್‌ಎಲ್‌ಗಳು, ಗ್ಲೈಡ್ ಥ್ರೂ ಟ್ರಾಫಿಕ್ (ಜಿಟಿಟಿ) ತಂತ್ರಜ್ಞಾನ, ಒನ್-ಟಚ್ ಸ್ಟಾರ್ಟ್ ಮತ್ತು ವೇವ್ ಬೈಟ್ ಇಗ್ನಿಷನ್ ಕೀ ಸೇರಿವೆ.

ಹೊಸ TVS Apache 165 RP ಬೈಕ್ ಟೀಸರ್ ಬಿಡುಗಡೆ

ಟಿವಿಎಸ್ ಮೋಟಾರ್ ಕಂಪನಿಯು ತನ್ನ ಟಿವಿಎಸ್ ಕನೆಕ್ಟ್ ಅಪ್ಲಿಕೇಶನ್ ಅನ್ನು ನವೀಕರಿಸಿದೆ. ಯಾವುದೇ ಸ್ಥಳಕ್ಕೆ ನ್ಯಾವಿಗೇಷನ್ ಮಾಡಲು ಬಳಸಬಹುದಾದ ಟಿವಿಎಸ್ ಕನೆಕ್ಟ್ ಅಪ್ಲಿಕೇಶನ್‌ಗೆ What3words ಅನ್ನು ಸೇರಿಸಲಾಗಿದೆ ಎಂದು ಕಂಪನಿ ತಿಳಿಸಿದೆ.ಈ ಮೂಲಕ ಟಿವಿಎಸ್ ಮೋಟಾರ್ ಕಂಪನಿಯು ತನ್ನ ವಾಹನಗಳಲ್ಲಿ ಈ ಫೀಚರ್ ಅನ್ನು ತಂದ ಮೊದಲ ಭಾರತೀಯ ದ್ವಿಚಕ್ರ ವಾಹನ ತಯಾರಕ ಕಂಪನಿ ಎನಿಸಿಕೊಂಡಿದೆ. What3words ಫೀಚರ್ ಬಳಕೆದಾರರಿಗೆ ನಿಖರವಾದ ಸ್ಥಳವನ್ನು ಗುರುತಿಸಲು ನೆರವಾಗುತ್ತದೆ. ಈ ಫೀಚರ್, ವರ್ಡ್ ಅನ್ನು 57 ಟ್ರಿಲಿಯನ್ ಗ್ರಿಡ್‌ಗಳಾಗಿ ವಿಂಗಡಿಸಿದೆ.

Most Read Articles

Kannada
English summary
New tvs apache 165 rp teased india launch soon details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X