ಹೊಸ ರೆಟ್ರೋ-ಶೈಲಿಯ ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ ಯಮಹಾ
ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ ತನ್ನ ಎಕ್ಸ್‌ಎಸ್‌ಆರ್ ರೆಟ್ರೋ-ಶೈಲಿಯ ಸರಣಿಯನ್ನು ವಿಸ್ತರಿಸಲು ಮುಂದಾಗಿದೆ. ಯಮಹಾದ ಎಕ್ಸ್‌ಎಸ್‌ಆರ್ 155 ಬೈಕಿಗೆ ಜಗತ್ತಿನಾದ್ಯಂತ ಖರೀದಿದಾರರಿಂದ ಅತ್ಯುತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ.

ಇದರಿಂದ ಯಮಹಾ ಇದೀಗ ಎಕ್ಸ್‌ಎಸ್‌ಆರ್ 155 ಮಾದರಿಯ ಕಿರಿಯ ಸಹೋದರ ಮಾದರಿಯ ರೀತಿಯಲ್ಲಿ ಹೊಸ ಎಕ್ಸ್‌ಎಸ್‌ಆರ್ 125 ಎಂಟ್ರಿ ಲೆವೆಲ್ ರೆಟ್ರೊ ಶೈಲಿಯ ಬೈಕನ್ನು ಯುರೋಪ್ ಮತ್ತು ಇತರ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಬೈಕ್ ಹೋಂಡಾ ಸಿಬಿ125 ಮಾದರಿಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆಯಾಗುತ್ತದೆ. ಇದು ಹಲವಾರು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ. ಈ ಹೊಸ ಯಮಹಾ ಎಕ್ಸ್‌ಎಸ್‌ಆರ್ 125 ಬೈಕ್ ಇದೇ ವರ್ಷದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು.

ಹೊಸ ಯಮಹಾ ಯಮಹಾ ಎಕ್ಸ್‌ಎಸ್‌ಆರ್ 125 ಬೈಕಿನಲ್ಲಿ 125 ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಇದೇ ಎಂಜಿನ್ ಯಮಹಾ ಆರ್125 ಮತ್ತು ಎಂಟಿ -125 ಬೈಕಿನಲ್ಲಿ ನೀಡಲಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಈ ಎಂಜಿನ್ 10,000 ಆರ್‌ಪಿಎಂನಲ್ಲಿ 14.9 ಬಿಹೆಚ್‍ಪಿ ಪವರ್ ಮತ್ತು 8,000 ಆರ್‌ಪಿಎಂನಲ್ಲಿ 11.5 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಎಂಜಿನ್ ವೇರಿಯಬಲ್ ವಾಲ್ವ್ ಆಕ್ಟಿವೇಷನ್ ಹೊಂದಿದ್ದು, ಕಡಿಮೆ-ಮಟ್ಟದ ಕಾರ್ಯಕ್ಷಮತೆಗೆ ಧಕ್ಕೆಯಾಗದಂತೆ ಉತ್ತಮ ಟಾಪ್ ಎಂಡ್ ನೀಡುತ್ತದೆ.

ಯಮಹಾ ಎಕ್ಸ್‌ಎಸ್‌ಆರ್ 125 ಚಾಸಿಸ್ ಅನ್ನು ಆರ್ 125 ಮತ್ತು ಎಂಟಿ -125 ನೊಂದಿಗೆ ಹಂಚಿಕೊಳ್ಳಲಿದ್ದು, ಇದರಲ್ಲಿ ಡೈಮಂಡ್ ಫ್ರೇಮ್ ಮತ್ತು ಅಲ್ಯೂಮಿನಿಯಂ ಸ್ವಿಂಗಾರ್ಮ್ ಇರುತ್ತದೆ. ಈ ಬೈಕ್ 292 ಎಂಎಂ ಫ್ರಂಟ್ ಡಿಸ್ಕ್ ಮತ್ತು 220 ಎಂಎಂ ರಿಯರ್ ಡಿಸ್ಕ್ ಬ್ರೇಕ್ ಜೊತೆಗೆ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಇನ್ನು ಯಮಹಾ ಎಕ್ಸ್‌ಎಸ್‌ಆರ್ 125 ನಿಯೋ ರೆಟ್ರೊ ಶೈಲಿಯ ಬೈಕ್‌ನಲ್ಲಿ 17 ಇಂಚಿನ ವೀಲ್ಸ್ ಶಾಡ್ 110/70 ಸೆಕ್ಷನ್ ಫ್ರಂಟ್ ಮತ್ತು 100/80 ಸೆಕ್ಷನ್ ರಿಯರ್ ಟೈರ್‌ಗಳನ್ನು ಹೊಂದಿದೆ.

ಈ ಹೊಸ ಯಮಹಾ ಎಕ್ಸ್‌ಎಸ್‌ಆರ್ 125 ಬೈಕ್ ಕ್ಲಾಸಿಕ್-ರೆಟ್ರೊ ವಿನ್ಯಾಸ ಮತ್ತು ಮಾರ್ಡನ್ ಲುಕ್ ಸ್ಪರ್ಶವನ್ನು ನೀಡಿದೆ. ಈ ಬೈಕ್ ದುಂಡಗಿನ ಆಕಾರದ ಹೆಡ್‌ಲೈಟ್ ಮತ್ತು ವಿಭಿನ್ನ ಶೈಲಿಯ ಇಂಧನ ಟ್ಯಾಂಕ್ ಅನ್ನು ಹೊಂದಿದೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಈ ಹೊಸ ಯಮಹಾ ಎಕ್ಸ್‌ಎಸ್‌ಆರ್ 125 ಬೈಕಿನಲ್ಲಿನ ಸಿಂಗಲ್-ಪಾಡ್ ಫುಲ್-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಸವಾರರಿಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ. ಇದರಲ್ಲಿ ಡಿಜಿಟಲ್ ಟ್ರಿಪ್ ಮೀಟರ್, ಫ್ಯೂಯಲ್ ಗೇಜ್, ಸ್ಪೀಡೋಮೀಟರ್, ಒಡಿಒ ಜೊತೆ ಗೇರ್ ಇಂಡಿಕೇಟರ್ ಮತ್ತು ಟ್ರಿಪ್ ಇಂಡಿಕೇಟರ್ ಅನ್ನು ಒಳಗೊಂಡಿದೆ.

ಯಮಹಾ ಎಕ್ಸ್‌ಎಸ್‌ಆರ್ 155 ಮಾದರಿಯು ಅಂತರರಾಷ್ಟ್ರೀಯ ಬಹುಬೇಡಿಕೆಯ ಬೈಕ್ ಆಗಿದೆ. ಇದರಿಂದ ಯಮಹಾ ಇದರ ಕಿರಿಯ ಮಾದರಿಯನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಈ ಹೊಸ ಯಮಹಾ ಎಕ್ಸ್‌ಎಸ್‌ಆರ್ 125 ಬೈಕ್ ಇದೇ ವರ್ಷದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications