ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಯಮಹಾ ಎಕ್ಸ್‌ಎಸ್‌ಆರ್ 125 ಬೈಕ್
ಯಮಹಾ ಕಂಪನಿಯು ತನ್ನ ಎಕ್ಸ್‌ಎಸ್‌ಆರ್ ರೆಟ್ರೋ-ಶೈಲಿಯ ಸರಣಿಯನ್ನು ವಿಸ್ತರಿಸಲು ಮುಂದಾಗಿದೆ. ಯಾಕೆಂದರೆ ಯಮಹಾದ ಎಕ್ಸ್‌ಎಸ್‌ಆರ್ 155 ಬೈಕಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಖರೀದಿದಾರರಿಂದ ಅತ್ಯುತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ.

ಇದರಿಂದ ಯಮಹಾ ಇದೀಗ ಎಕ್ಸ್‌ಎಸ್‌ಆರ್ 155 ಮಾದರಿಯ ಕಿರಿಯ ಸಹೋದರ ಮಾದರಿಹೊಸ ಎಕ್ಸ್‌ಎಸ್‌ಆರ್ 125 ಎಂಟ್ರಿ ಲೆವೆಲ್ ರೆಟ್ರೊ ಶೈಲಿಯ ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಬೈಕ್ ಮೊದಲು ಯುರೋಪ್ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ. ಯುರೋಪ್ ಮಾರುಕಟ್ಟೆಯಲ್ಲಿ ಹೋಂಡಾ ಸಿಬಿ125 ಮಾದರಿಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆಯಾಗುತ್ತದೆ. ಇದು ಹಲವಾರು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ. ಈ ಹೊಸ ಯಮಹಾ ಎಕ್ಸ್‌ಎಸ್‌ಆರ್ 125 ಬೈಕ್ ಶೀಘ್ರದಲ್ಲೇ ಯುರೋಪ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು.

ನಂತರ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗುತ್ತದೆ. ಹೊಸ ಯಮಹಾ ಯಮಹಾ ಎಕ್ಸ್‌ಎಸ್‌ಆರ್ 125 ಬೈಕಿನಲ್ಲಿ 125 ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಇದೇ ಎಂಜಿನ್ ಯಮಹಾ ಆರ್125 ಮತ್ತು ಎಂಟಿ -125 ಬೈಕಿನಲ್ಲಿ ನೀಡಲಾಗಿದೆ.

ಈ ಎಂಜಿನ್ 10,000 ಆರ್‌ಪಿಎಂನಲ್ಲಿ 14.9 ಬಿಹೆಚ್‍ಪಿ ಪವರ್ ಮತ್ತು 8,000 ಆರ್‌ಪಿಎಂನಲ್ಲಿ 11.5 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಎಂಜಿನ್ ವೇರಿಯಬಲ್ ವಾಲ್ವ್ ಆಕ್ಟಿವೇಷನ್ ಹೊಂದಿದ್ದು, ಇದು ಉತ್ತಮ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ.

ಯಮಹಾ ಎಕ್ಸ್‌ಎಸ್‌ಆರ್ 125 ಚಾಸಿಸ್ ಅನ್ನು ಆರ್ 125 ಮತ್ತು ಎಂಟಿ -125 ಮಾದರಿಯೊಂದಿಗೆ ಹಂಚಿಕೊಳ್ಳಲಿದ್ದು, ಇದರಲ್ಲಿ ಡೈಮಂಡ್ ಫ್ರೇಮ್ ಮತ್ತು ಅಲ್ಯೂಮಿನಿಯಂ ಸ್ವಿಂಗಾರ್ಮ್ ಇರುತ್ತದೆ. ಈ ಬೈಕ್ 292 ಎಂಎಂ ಫ್ರಂಟ್ ಡಿಸ್ಕ್ ಮತ್ತು 220 ಎಂಎಂ ರಿಯರ್ ಡಿಸ್ಕ್ ಬ್ರೇಕ್ ಜೊತೆಗೆ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ.

ಇನ್ನು ಯಮಹಾ ಎಕ್ಸ್‌ಎಸ್‌ಆರ್ 125 ನಿಯೋ ರೆಟ್ರೊ ಶೈಲಿಯ ಬೈಕ್‌ನಲ್ಲಿ 17 ಇಂಚಿನ ವೀಲ್ಸ್ ಶಾಡ್ 110/70 ಸೆಕ್ಷನ್ ಫ್ರಂಟ್ ಮತ್ತು 100/80 ಸೆಕ್ಷನ್ ರಿಯರ್ ಟೈರ್‌ಗಳನ್ನು ಒಳಗೊಂಡಿರುತ್ತದೆ.

ಈ ಹೊಸ ಯಮಹಾ ಎಕ್ಸ್‌ಎಸ್‌ಆರ್ 125 ಬೈಕ್ ಕ್ಲಾಸಿಕ್-ರೆಟ್ರೊ ವಿನ್ಯಾಸ ಮತ್ತು ಮಾರ್ಡನ್ ಲುಕ್ ಅನ್ನು ನೀಡಿದೆ. ಈ ಬೈಕ್ ದುಂಡಗಿನ ಆಕಾರದ ಹೆಡ್‌ಲೈಟ್ ಮತ್ತು ವಿಭಿನ್ನ ಶೈಲಿಯ ಇಂಧನ ಟ್ಯಾಂಕ್ ಅನ್ನು ಹೊಂದಿದೆ.

ಈ ಹೊಸ ಯಮಹಾ ಎಕ್ಸ್‌ಎಸ್‌ಆರ್ 125 ಬೈಕಿನಲ್ಲಿನ ಸಿಂಗಲ್-ಪಾಡ್ ಫುಲ್-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಸವಾರರಿಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ. ಇದರಲ್ಲಿ ಡಿಜಿಟಲ್ ಟ್ರಿಪ್ ಮೀಟರ್, ಫ್ಯೂಯಲ್ ಗೇಜ್, ಸ್ಪೀಡೋಮೀಟರ್ ಜೊತೆಗೆ ಗೇರ್ ಇಂಡಿಕೇಟರ್ ಮತ್ತು ಟ್ರಿಪ್ ಇಂಡಿಕೇಟರ್ ಅನ್ನು ಒಳಗೊಂಡಿದೆ.

ಯಮಹಾ ಎಕ್ಸ್‌ಎಸ್‌ಆರ್ 155 ಮಾದರಿಯು ಅಂತರರಾಷ್ಟ್ರೀಯ ಬಹುಬೇಡಿಕೆಯ ಬೈಕ್ ಆಗಿದೆ. ಇದರಿಂದ ಯಮಹಾ ಇದರ ಕಿರಿಯ ಮಾದರಿಯನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಈ ಹೊಸ ಯಮಹಾ ಎಕ್ಸ್‌ಎಸ್‌ಆರ್ 125 ಬೈಕ್ ಶೀಘ್ರದಲ್ಲೇ ಯುರೋಪ್ ಮಾರುಕಟ್ಟೆಗಳಿಗೆ ಲಗ್ಗೆಯಿಡಲಿದೆ.


Click it and Unblock the Notifications