ಹೊಸ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್ ಟೀಸರ್ ಬಿಡುಗಡೆ
ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಯಮಹಾ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೊಸ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದೀಗ ಯಮಹಾ ಕಂಪನಿಯು ಬಹುನಿರೀಕ್ಷಿತ ಈ ಹೊಸ ವೈಜೆಡ್ಎಫ್-ಆರ್7 ಬೈಕಿನ ಟೀಸರ್ ವಿಡಿಯೋವನ್ನು ಬಿಡುಗಡೆಗೊಳಿಸಿದೆ.

ಬೈಕ್ ಪ್ರಿಯರ ನಡುವೆ ಈ ಹೊಸ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿಸಿದೆ. ವೈಜೆಡ್ಎಫ್-ಆರ್6 ಬೈಕಿನ ಬದಲಾಯಿಸಿ ಯಮಹಾ ಕಂಪನಿಯು ವೈಜೆಡ್ಎಫ್-ಆರ್7 ಬೈಕನ್ನು ಬಿಡುಗಡೆಗೊಳಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಯಮಹಾ ವೈಜೆಡ್ಎಫ್ ಸರಣಿಯ ಬೈಕ್‌ಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಾರಿ ಜನಪ್ರಿಯತೆಯನ್ನು ಗಳಿಸಿದೆ.

ಯಮಹಾ ವೈಜೆಡ್ಎಫ್ ಸರಣಿಯಲ್ಲಿ 125 ಸಿಸಿ ಬೈಕಿನಿಂದ ವೈಜೆಡ್ಎಫ್ ಆರ್15, ವೈಜೆಡ್ಎಫ್ ಆರ್3 ಮತ್ತು ವೈಜೆಡ್ಎಫ್ ಆರ್1 ಮಾದರಿನಂತಹ ಲೀಟರ್ ಕ್ಲಾಸ್ ಬೈಕ್‌ಗಳನ್ನು ಒಳಗೊಂಡಿದೆ. ವೈಜೆಡ್ಎಫ್-ಆರ್1 ವಿಶ್ವದ ಅತ್ಯಾಧುನಿಕ ಬೈಕ್‌ಗಳಲ್ಲಿ ಒಂದಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಕಳೆದ ವರ್ಷದವರೆಗೂ ಯಮಹಾ ವೈಜೆಡ್ಎಫ್-ಆರ್6 ಬೈಕನ್ನು ಉತ್ಪಾದಿಸಿತು. ಯಮಹಾ ಆರ್6 ಬೈಕಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೊಡ್ಡ ಅಭಿಮಾನಿಗಳ ವರ್ಗವಿದೆ. 600ಸಿಸಿ ವಿಭಾಗದಲ್ಲಿ ಹೆಚ್ಚು ಜನಪ್ರಿಯಯನ್ನು ಗಳಿಸಿಕೊಂಡಿತು.

ಆದರೆ ಯಮಹಾ ಭಾರತದಲ್ಲಿ ಎಂದಿಗೂ ಆರ್6 ಬೈಕನ್ನು ಮಾರಾಟ ಮಾಡಲಿಲ್ಲ, ಆದರೆ ಈ ಯಮಹಾ ವೈಜೆಡ್ಎಫ್-ಆರ್6 ಬೈಕ್ 2020ರವರೆಗೆ ಯುರೋಪಿಯನ್ ಮಾರುಕಟ್ಟೆಯಲ್ಲಿ ಉತ್ಪಾದನೆಯಲ್ಲಿತು, ಆದರೆ ಯುರೋ 5 ಮಾಲಿನ್ಯ ನಿಯಮ ಜಾರಿಯಾದ ಕಾರಣ ವೈಜೆಡ್ಎಫ್-ಆರ್6 ಬೈಕಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿತು.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಆದರೆ ವೈಜೆಡ್ಎಫ್-ಆರ್6 ಬೈಕನ್ನು ಟ್ರ್ಯಾಕ್ ಬಳಕೆಗಾಗಿ ಸೀಮಿತ ಸಂಖ್ಯೆಯಲ್ಲಿ ತಯಾರಿಸುವುದನ್ನು ಮುಂದುವರೆಸಿತು. ಇನ್ನು ಯಮಹಾ ವೈಜೆಡ್ಎಫ್-ಆರ್6 ಬೈಕ್ ಸ್ಥಗಿತಗೊಂಡ ಕೂಡಲೇ ಹಲವಾರು ವದಂತಿಗಳು ಹರಿದಾಡತೊಡಗಿದವು.

ಎಂಟಿ -07 ಆಧಾರಿತ ಯಮಹಾ ಫೇರ್ಡ್ ಸ್ಪೋರ್ಟ್ಸ್ ಬೈಕು ಅಭಿವೃದ್ಧಿಪಡಿಸುತ್ತದೆ ಎಂದು ವದಂತಿಗಳಿತ್ತು. ಆದರೆ ಇತ್ತೀಚೆಗೆ ಯಮಹಾ ಕಂಪನಿಯು ವೈಜೆಡ್ಎಫ್-ಆರ್ 7 ಮಾನಿಕರ್ ಅನ್ನು ಟ್ರೇಡ್ಮಾರ್ಕ್ ಟ್ರೇಡ್‌ಮಾರ್ಕ್ ಹೊಸ ಫೇರ್ಡ್ ಎಂಟಿ-07 ಅನ್ನು ಆಧರಿಸಿದೆ ಎಂದು ಬಹುತೇಕ ಖಚಿತವಾಗಿತ್ತು.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ
ಇದೀಗ ಯಮಹಾ ಕಂಪನಿಯು ಟೀಸರ್ ವಿಡಿಯೋವನ್ನು ಬಿಡುಗಡೆಗೊಳಿಸಿದೆ. ಈ ಟೀಸರ್ ವಿಡಿಯೋದಲ್ಲಿ ಈ ಹೊಸ ಬೈಕಿನ ಸಿಲೂಯೆಟ್ ಅನ್ನು ಸಹ ಬಹಿರಂಗಪಡಿಸಿಲ್ಲ. ಈ ಯಮಹಾ ವೈಜೆಡ್ಎಫ್-ಆರ್7 ಬೈಕನ್ನು ರೇಸ್‌ಟ್ರಾಕ್‌ನಲ್ಲಿ ಮತ್ತು ನಂತರ ಪರ್ವತಗಳಲ್ಲಿ ರೈಡ್ ಮಾಡುವುದನ್ನು ತೋರಿಸಿದೆ. ಈ ಬೈಕ್ ರೇಸ್‌ಟ್ರಾಕ್‌ಗೆ ಮಾತ್ರವಲ್ಲದೆ ರಸ್ತೆಗೂ ಕೂಡ ಸೂಕ್ತವಾಗಿದೆ ಎಂದು ಟೀಸರ್ ನಲ್ಲಿ ಪ್ರದರ್ಶಿಸಿದೆ.

ಯಮಹಾ ಕಂಪನಿಯು ಈ ಬೈಕಿಗೆ ವೈಜೆಡ್ಎಫ್-ಆರ್7 ಎಂದು ಅಧಿಕೃತವಾಗಿ ಹೆಸರನ್ನು ನೀಡಲಾಗಿಲ್ಲ. ಇನ್ನು ಈ ಹೊಸ ಬೈಕಿನಲ್ಲಿ 689 ಸಿಸಿ, ಪ್ಯಾರಲಲ್ ಟ್ವಿನ್ ಎಂಜಿನ್ನು ಅನ್ನು ಹೊಂದಿದೆ. ಈ ಎಂಜಿನ್ 73.4 ಬಿಹೆಚ್‌ಪಿ ಪವರ್ ಮತ್ತು 67 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಯಮಹಾ ಕಂಪನಿಯು ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಯಮಹಾ ವೈಜೆಡ್ಎಫ್-ಆರ್7 ಮಾದರಿಯು ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಎಪ್ರಿಲಿಯಾ ಆರ್‌ಎಸ್ 660, ಹೋಂಡಾ ಸಿಬಿಆರ್ 6 ಆರ್ ಮತ್ತು ಕವಾಸಕಿ ನಿಂಜಾ 650 ಬೈಕ್‌ಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications