ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಚಾರ್ಜ್ ಮಾಡುವ ಓಲಾ ಇವಿ ಹೈಪರ್ ಚಾರ್ಜರ್ ನಿಲ್ದಾಣಗಳಿಗೆ ಚಾಲನೆ

ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಹೊಸ ಎಸ್1 ಮತ್ತು ಎಸ್1 ಪ್ರೊ ಇವಿ ಸ್ಕೂಟರ್ ಮಾದರಿಗಳನ್ನು ಬಿಡುಗಡೆಗೊಳಿಸುವುದರ ಜೊತೆಗೆ ದೇಶಾದ್ಯಂತ ವಿತರಣೆ ಆರಂಭಿಸಿದ್ದು, ಕಂಪನಿಯು ಹೈಪರ್ ಚಾರ್ಜರ್ ನಿಲ್ದಾಣಗಳ ನಿರ್ಮಾಣಕ್ಕೆ ಚಾಲನೆ ನೀಡಿದೆ.

ಹೆಚ್ಚು ಚಾರ್ಜ್ ಮಾಡುವ ಓಲಾ ಇವಿ ಹೈಪರ್ ಚಾರ್ಜರ್ ನಿಲ್ದಾಣಗಳಿಗೆ ಚಾಲನೆ

ಹೊಸ ಇವಿ ಸ್ಕೂಟರ್‌ಗಳಿಗೆ ನಗರದ ಯಾವುದೇ ಭಾಗಕ್ಕೆ ಮುಕ್ತವಾಗಿ ಸಂಚರಿಸಲು ಅನುಕೂಲಕರವಾಗುವಂತೆ ಪ್ರಮುಖ ಪೆಟ್ರೋಲ್ ಬಂಕ್‌ಗಳಲ್ಲಿ, ಶಾಪಿಂಗ್ ಕಾಂಪ್ಲೆಕ್ಸ್‌ಗಳ ಆವರಣಗಳಲ್ಲಿ ಮತ್ತು ಪೇ ಅಂಡ್ ಪಾರ್ಕಿಂಗ್ ಸ್ಥಳಗಳಲ್ಲಿ ಫಾಸ್ಟ್ ಮತ್ತು ಹೈಪರ್ ಚಾರ್ಜರ್ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಕಂಪನಿಯು 2022ರ ಅವಧಿಯಲ್ಲಿ ಒಟ್ಟು ನಾಲ್ಕು ಸಾವಿರ ಚಾರ್ಜಿಂಗ್ ಪಾಯಿಂಟ್‌ಗಳನ್ನು ತೆರೆಯಲಿದೆ ಉದ್ದೇಶಿಸಿದೆ.

ಹೆಚ್ಚು ಚಾರ್ಜ್ ಮಾಡುವ ಓಲಾ ಇವಿ ಹೈಪರ್ ಚಾರ್ಜರ್ ನಿಲ್ದಾಣಗಳಿಗೆ ಚಾಲನೆ

ಎಲೆಕ್ಟ್ರಿಕ್ ವಾಹನಗಳಿಗೆ ಹೋಂ ಚಾರ್ಜರ್ ಸೌಲಭ್ಯ ಹೊರತುಪಡಿಸಿ ಅತಿ ಕಡಿಮೆ ಅವಧಿಯಲ್ಲಿ ಚಾರ್ಜ್ ಮಾಡಬಹುದಾದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗುತ್ತಿದ್ದು, ಹೈಪರ್ ಚಾರ್ಜಿಂಗ್ ನಿಲ್ದಾಣಗಳಲ್ಲಿ ಪ್ರತಿ ಗಂಟೆಗೆ ಇ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ಒಂದೇ ಅವಧಿಯಲ್ಲೇ ಚಾರ್ಜ್ ಮಾಡಬಹುದಾಗಿದೆ.

ಹೆಚ್ಚು ಚಾರ್ಜ್ ಮಾಡುವ ಓಲಾ ಇವಿ ಹೈಪರ್ ಚಾರ್ಜರ್ ನಿಲ್ದಾಣಗಳಿಗೆ ಚಾಲನೆ

ಹೈಪರ್‌ ಚಾರ್ಜರ್‌ಗಳ ಕೇವಲ 18 ನಿಮಿಷಗಳಲ್ಲಿ ಸೊನ್ನೆಯಿಂದ ರಿಂದ ಶೇ. 50 ಪ್ರತಿಶತದಷ್ಟು ಇ-ಸ್ಕೂಟರ್ ಬ್ಯಾಟರಿಗಳನ್ನು ಚಾರ್ಜ್ ಮಾಡಬಹುದ್ದು, 18 ನಿಮಿಷಗಳ ಚಾರ್ಜಿಂಗ್ ಮೂಲಕ ಕನಿಷ್ಠ 75 ಕಿಮೀ ವರೆಗೆ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ.

ಹೆಚ್ಚು ಚಾರ್ಜ್ ಮಾಡುವ ಓಲಾ ಇವಿ ಹೈಪರ್ ಚಾರ್ಜರ್ ನಿಲ್ದಾಣಗಳಿಗೆ ಚಾಲನೆ

ಕಂಪನಿಯು ಸದ್ಯ ಬೆಂಗಳೂರಿನ ಆಯ್ದ ಪೆಟ್ರೋಲ್ ಬಂಕ್, ಐಟಿ ಪಾರ್ಕ್‌ಗಳಲ್ಲಿ ಹೈಪರ್‌ ಚಾರ್ಜಿಂಗ್ ಪಾಯಿಂಟ್‌ಗಳಿಗೆ ಚಾಲನೆ ನೀಡಿದ್ದು, ಚಾರ್ಜಿಂಗ್ ಪಾಯಿಂಟ್‌ಗಳಲ್ಲಿ ಕಂಪನಿಯು ತನ್ನ ಗ್ರಾಹಕರಿಗೆ ಮುಂಬರುವ ಜೂನ್ 22ರ ತನಕ ಉಚಿತವಾಗಿ ಚಾರ್ಜಿಂಗ್ ಮಾಡಿಕೊಳ್ಳುವ ಆಫರ್ ನೀಡಿದೆ.

ಹೆಚ್ಚು ಚಾರ್ಜ್ ಮಾಡುವ ಓಲಾ ಇವಿ ಹೈಪರ್ ಚಾರ್ಜರ್ ನಿಲ್ದಾಣಗಳಿಗೆ ಚಾಲನೆ

ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿನ ಇತರೆ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಬಜೆಟ್ ಬೆಲೆಯಲ್ಲಿ ಬಿಡುಗಡೆಯಾಗಿರುವ ಓಲಾ ಎಸ್1 ಮತ್ತು ಎಸ್1 ಪ್ರೊ ಇವಿ ಸ್ಕೂಟರ್ ಮಾದರಿಗಳು ಬಿಡುಗಡೆಗೂ ಮುನ್ನವೇ ಒಂದು ಲಕ್ಷಕ್ಕೂ ಅಧಿಕ ಬುಕ್ಕಿಂಗ್ ಪಡೆದುಕೊಂಡಿದ್ದು, ಸ್ಕೂಟರ್ ಬಿಡುಗಡೆಯ ನಂತರ ಇದೀಗ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ದೇಶದ ಪ್ರಮುಖ ನಗರಗಳಲ್ಲಿ ವಿತರಣೆಯನ್ನು ಆರಂಭಿಸಿದೆ.

ಹೆಚ್ಚು ಚಾರ್ಜ್ ಮಾಡುವ ಓಲಾ ಇವಿ ಹೈಪರ್ ಚಾರ್ಜರ್ ನಿಲ್ದಾಣಗಳಿಗೆ ಚಾಲನೆ

ಎಸ್1 ಮತ್ತು ಎಸ್1 ಪ್ರೊ ಇವಿ ಸ್ಕೂಟರ್ ವಿತರಣೆಗೆ ಅಧಿಕೃತವಾಗಿ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್ ಕಂಪನಿಯು ಮೊದಲ ಹಂತವಾಗಿ ಬೆಂಗಳೂರು ಮತ್ತು ಚೆನ್ನೈನಲ್ಲಿ ಸ್ಕೂಟರ್ ವಿತರಣೆ ಆರಂಭಿಸಿದ್ದು, ಎರಡನೇ ಹಂತದಲ್ಲಿ ಮುಂಬೈ, ಹೈದ್ರಾಬಾದ್, ಅಹಮದಾಬಾದ್, ಪುಣೆ ಮತ್ತು ವೈಜಾಗ್‌ನಲ್ಲಿ ಇವಿ ಸ್ಕೂಟರ್ ವಿತರಣೆಗೆ ಚಾಲನೆ ನೀಡಲಾಗಿದೆ.

ಹೆಚ್ಚು ಚಾರ್ಜ್ ಮಾಡುವ ಓಲಾ ಇವಿ ಹೈಪರ್ ಚಾರ್ಜರ್ ನಿಲ್ದಾಣಗಳಿಗೆ ಚಾಲನೆ

ಓಲಾ ಹೊಸ ಎಸ್1 ಇವಿ ಸ್ಕೂಟರ್ ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 99,999 ಬೆಲೆ ಹೊಂದಿದ್ದರೆ ಎಸ್1 ಪ್ರೊ ಮಾದರಿಯು ರೂ. 1,29,999 ಬೆಲೆ ಹೊಂದಿದ್ದು, ಅತ್ಯತ್ತಮ ಕಾರ್ಯಕ್ಷಮತೆ, ಗರಿಷ್ಠ ಮೈಲೇಜ್, ಪ್ರೀಮಿಯಂ ಫೀಚರ್ಸ್ ಮತ್ತು ಬಜೆಟ್ ಬೆಲೆಯು ಹೊಸ ಸ್ಕೂಟರ್ ಆಯ್ಕೆ ಮೌಲ್ಯವನ್ನು ಹೆಚ್ಚಿಸಿವೆ.

ಹೆಚ್ಚು ಚಾರ್ಜ್ ಮಾಡುವ ಓಲಾ ಇವಿ ಹೈಪರ್ ಚಾರ್ಜರ್ ನಿಲ್ದಾಣಗಳಿಗೆ ಚಾಲನೆ

ಹೊಸ ಎಸ್1 ವೆರಿಯೆಂಟ್‌‌ನಲ್ಲಿ ಓಲಾ ಕಂಪನಿಯು 2.98kWh ಮತ್ತು ಎಸ್1 ಪ್ರೊ ಮಾದರಿಯಲ್ಲಿ 3.97kWh ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆ ಮಾಡಿದ್ದು, ಪ್ರತಿ ಚಾರ್ಜ್‌ಗೆ ಎಸ್1 ಮಾದರಿಯು ಗರಿಷ್ಠ 121 ಕಿ.ಮೀ ಮೈಲೇಜ್ ಹಿಂದಿರುಗಿಸಿದರೆ ಎಸ್1 ಪ್ರೊ ಮಾದರಿಯು ಪ್ರತಿ ಚಾರ್ಜ್‌ಗೆ 181 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಹೆಚ್ಚು ಚಾರ್ಜ್ ಮಾಡುವ ಓಲಾ ಇವಿ ಹೈಪರ್ ಚಾರ್ಜರ್ ನಿಲ್ದಾಣಗಳಿಗೆ ಚಾಲನೆ

ಇದರಲ್ಲಿ ಎಸ್1 ಮಾದರಿಯು ಗಂಟೆಗೆ 90 ಕಿ.ಮೀ ಟಾಪ್ ಸ್ಪೀಡ್‌ ಹೊಂದಿದ್ದರೆ ಎಸ್1 ಪ್ರೊ ಮಾದರಿಯು ಪ್ರತಿ ಗಂಟೆಗೆ 115ಕಿ.ಮೀ ಟಾಪ್ ಸ್ಪೀಡ್‌ ಹೊಂದಿದ್ದು, ಎಸ್1 ಮಾದರಿಯಲ್ಲಿ ನಾರ್ಮಲ್ ಮತ್ತು ಸ್ಪೋರ್ಟ್ ರೈಡ್ ಮೋಡ್‌ಗಳಿದ್ದರೆ ಎಸ್1 ಪ್ರೊ ಮಾದರಿಯಲ್ಲಿ ನಾರ್ಮಲ್, ಸ್ಪೋರ್ಟ್ ಮತ್ತು ಹೈಪರ್ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ.

ಹೆಚ್ಚು ಚಾರ್ಜ್ ಮಾಡುವ ಓಲಾ ಇವಿ ಹೈಪರ್ ಚಾರ್ಜರ್ ನಿಲ್ದಾಣಗಳಿಗೆ ಚಾಲನೆ

ಹಾಗೆಯೇ ಓಲಾ ಇವಿ ಸ್ಕೂಟರ್‌ಗಳು ಅತ್ಯುತ್ತಮ ವಿನ್ಯಾಸದೊಂದಿಗೆ ಗರಿಷ್ಠ ಮಟ್ಟದ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಂಡಿದ್ದು, ಹೊಸ ಸ್ಕೂಟರ್‌ಗಳಲ್ಲಿ ಟ್ವಿನ್ ಪಾಡ್ ಎಲ್ಇಡಿ ಸೆಟ್ಅಪ್, ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಟೈಲ್‌ಲ್ಯಾಂಪ್, ಕೌಂಟ್‌ರ್ಡ್ ಸೀಟ್, ಅಲಾಯ್ ವ್ಹೀಲ್, 36-ಲೀಟರ್ ಸಾಮರ್ಥ್ಯ ಅಂಡರ್ ಸೀಟ್ ಸ್ಪೋರೇಜ್, ರಿಯರ್ ಗ್ರ್ಯಾಬ್ ರೈಲ್ಸ್, ಫ್ರಂಟ್ ಸ್ಟೋರೇಜ್ ಪ್ಯಾಕೇಟ್, ಲಗೇಜ್ ಹುಕ್ ಮತ್ತು ಹತ್ತು ವಿವಿಧ ಬಣ್ಣಗಳ ಆಯ್ಕೆ ಹೊಂದಿದೆ.

ಹೆಚ್ಚು ಚಾರ್ಜ್ ಮಾಡುವ ಓಲಾ ಇವಿ ಹೈಪರ್ ಚಾರ್ಜರ್ ನಿಲ್ದಾಣಗಳಿಗೆ ಚಾಲನೆ

ಹೊಸ ಸ್ಕೂಟರ್‌ಗಳು 1,859 ಎಂಎಂ ಉದ್ದ, 712 ಎಂಎಂ ಅಗಲ, 1,160 ಎಂಎಂ ಎತ್ತರ, 1,359 ಎಂಎಂ ವ್ಹೀಲ್ ಬೆಸ್, 792 ಎಂಎಂ ಸೀಟ್ ಹೈಟ್, 125 ಕೆ.ಜಿ ತೂಕ ಹೊಂದಿದ್ದು, ಮುಂಭಾಗದಲ್ಲಿ ಸಿಂಗಲ್ ಫೋರ್ಕ್ ಸಸ್ಫೆಷನ್ ಮತ್ತು ಹಿಂಬದಿಯಲ್ಲಿ ಮೊನೊ ಶಾಕ್ ಸಸ್ಷೆಷನ್‌ನೊಂದಿಗೆ ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಜೋಡಣೆ ಹೊಂದಿವೆ.

ಹೆಚ್ಚು ಚಾರ್ಜ್ ಮಾಡುವ ಓಲಾ ಇವಿ ಹೈಪರ್ ಚಾರ್ಜರ್ ನಿಲ್ದಾಣಗಳಿಗೆ ಚಾಲನೆ

ಜೊತೆಗೆ ಹೊಸ ಸ್ಕೂಟರ್‌ನಲ್ಲಿ 7-ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಮತ್ತು ಶಟರ್‌ಪ್ರೂಫ್ ಸ್ಕ್ರೀನ್‌ನೊಂದಿಗೆ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆನ್ ಬೋರ್ಡ್ ನ್ಯಾನಿಗೇಷನ್‌ಗಾಗಿ ಇಸಿಮ್ ಇಂಟರ್‌ನೆಂಟ್ ಕನೆಕ್ಟಿವಿಟಿ, ಸ್ಮಾಟ್‌ಫೋರ್ಟ್ ಮೂಲಕ ವಿವಿಧ ತಾಂತ್ರಿಕ ಅಂಶಗಳನ್ನು ನಿಯಂತ್ರಿಸಲು ಕನೆಕ್ಟೆಡ್ ಫೀಚರ್ಸ್ ಸಹ ನೀಡಲಾಗಿದೆ.

ಹೆಚ್ಚು ಚಾರ್ಜ್ ಮಾಡುವ ಓಲಾ ಇವಿ ಹೈಪರ್ ಚಾರ್ಜರ್ ನಿಲ್ದಾಣಗಳಿಗೆ ಚಾಲನೆ

ಇದರೊಂದಿಗೆ ಕಂಪನಿಯು ಶೀಘ್ರದಲ್ಲಿಯೇ ಎರಡನೇ ಹಂತದ ಬುಕ್ಕಿಂಗ್ ಪ್ರಕ್ರಿಯೆಯನ್ನು ಕೂಡಾ ಆರಂಭಗೊಳ್ಳುವುದಾಗಿ ಮಾಹಿತಿ ನೀಡಿದ್ದು, ಎರಡನೇ ಹಂತದಲ್ಲಿ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಮುಂದಿನ ಎಪ್ರಿಲ್‌ನಿಂದ ಸ್ಕೂಟರ್ ವಿತರಣೆಯಾಗಬಹುದಾಗಿದೆ.

ಹೆಚ್ಚು ಚಾರ್ಜ್ ಮಾಡುವ ಓಲಾ ಇವಿ ಹೈಪರ್ ಚಾರ್ಜರ್ ನಿಲ್ದಾಣಗಳಿಗೆ ಚಾಲನೆ

ಹೊಸ ಸ್ಕೂಟರ್‌ಗಳ ಖರೀದಿದಾಗಿ ಓಲಾ ಕಂಪನಿಯು ಪ್ರಮುಖ ಬ್ಯಾಂಕ್‌ಗಳ ಪಾಲುದಾರಿಕೆಯೊಂದಿಗೆ ಗರಿಷ್ಠ ಸಾಲ ಸೌಲಭ್ಯದೊಂದಿಗೆ ಆಕರ್ಷಕ ಇಎಂಐ ಆಯ್ಕೆಗಳನ್ನು ನೀಡಿದ್ದು, ಓಲಾ ಫೈನಾನ್ಸಿಲ್ ಸರ್ವಿಸ್ ಮೂಲಕವೂ ಗ್ರಾಹಕರು ಹೊಸ ಸ್ಕೂಟರ್ ಖರೀದಿ ಮಾಡಬಹುದಾಗಿದೆ.

More from DriveSpark

Article Published On: Wednesday, December 29, 2021, 11:10 [IST]
English summary
Ola electric hyper charger roll out details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+