ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಾಗಿ ವಿವಿಧ ಬಣ್ಣಗಳ ಆಯ್ಕೆ ನೀಡಲಿದೆ ಓಲಾ
ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಬಹುನೀರಿಕ್ಷಿತ ಇವಿ ಸ್ಕೂಟರ್ ಮಾದರಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದು, ಹೊಸ ಇವಿ ಸ್ಕೂಟರ್ ಮಾದರಿಗಾಗಿ ಕಂಪನಿಯು ವಿವಿಧ ಬಣ್ಣಗಳ ಆಯ್ಕೆ ನೀಡುವ ಸುಳಿವು ನೀಡಿದೆ.

ಗ್ರಾಹಕರ ಬೇಡಿಕೆಯೆಂತೆ ಓಲಾ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಮ್ಯಾಟೆ ಬ್ಲ್ಯಾಕ್, ಪಿಂಕ್ ಮತ್ತು ಬ್ಲ್ಯೂ ಬಣ್ಣಗಳನ್ನು ನೀಡಿರುವ ಈಗಾಗಲೇ ಬಹುತೇಕ ಖಚಿತವಾಗಿದ್ದು, ಹೊಸ ಟ್ವಿಟರ್ ಪೋಲ್‌ನಲ್ಲಿ ಹೊಸ ಸ್ಕೂಟರ್‌ಗಾಗಿ ಮತ್ತಷ್ಟು ಬಣ್ಣಗಳ ಆಯ್ಕೆ ನೀಡುತ್ತಿರುವ ಬಗೆಗೆ ಮಾಹಿತಿ ಹಂಚಿಕೊಂಡಿದೆ.

ಟ್ವಿಟರ್ ಪೊಲ್ ಆಧರಿಸಿ ಬಣ್ಣಗಳ ಆಯ್ಕೆ ನೀಡುವುದಾಗಿ ಓಲಾ ಕಂಪನಿಯು ಪ್ರಮುಖ ಬಣ್ಣಗಳ ಪ್ಯಾಕೇಜ್ ಸಿದ್ದಪಡಿಸಿದೆ. ಆದರೆ ಬಹುತೇಕ ಗ್ರಾಹಕರು ಕಂಪನಿಯು ಆಯ್ಕೆಗೆ ನೀಡಿರುವ ಎಲ್ಲಾ ಬಣ್ಣಗಳನ್ನು ಆಯ್ಕೆ ಮಾಡಿದ್ದು, ಗ್ರಾಹಕರ ಬೇಡಿಕೆಯೆಂತೆ ಒಂಬತ್ತು ಬಣ್ಣಗಳ ಆಯ್ಕೆ ನೀಡಬಹುದಾಗಿದೆ.

ಮೂರು ಬಣ್ಣಗಳ ಪ್ಯಾಕೇಜ್‌ನಲ್ಲಿ ಪ್ರಮುಖ ಬಣ್ಣಗಳ ಆಯ್ಕೆ ನೀಡಿರುವುದರಿಂದ ಮೂರು ಆಯ್ಕೆಗಳನ್ನು ನೀಡುವ ಸಾಧ್ಯತೆಗಳಿದ್ದು, ಪ್ಯಾಸ್ಟೆಲ್ ರೆಡ್, ಯೆಲ್ಲೊ, ಬ್ಲ್ಯೂ, ಮೆಟಾಲಿಕ್ ಸಿಲ್ವರ್, ಗೋಲ್ಡ್, ಪಿಂಕ್, ಮ್ಯಾಟೆ ಬ್ಲ್ಯಾಕ್, ಬ್ಲ್ಯೂ ಮತ್ತು ಗ್ರೆ ಬಣ್ಣಗಳ ಆಯ್ಕೆ ಲಭ್ಯವಾಗಲಿದೆ.

ಇನ್ನು ಹೊಸ ಸ್ಕೂಟರಿನಲ್ಲಿ ಕಂಪನಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿದ್ದು, ಹೊಸ ಸ್ಕೂಟರ್ ಖರೀದಿಗಾಗಿ ಕಂಪನಿಯು ರೂ. 499 ಮುಂಗಡ ಹಣದೊಂದಿಗೆ ಬುಕ್ಕಿಂಗ್ ಆರಂಭಿಸಿದೆ.

ಹೊಸ ಸ್ಕೂಟರ್‌ನಲ್ಲಿ ಕಂಪನಿಯು ಎರಡು ಮಾದರಿಯಲ್ಲಿ ಬ್ಯಾಟರಿ ಪ್ಯಾಕ್ ನೀಡುವ ಸಾಧ್ಯತೆಗಳಿದ್ದು, ಸಿಂಗಲ್ ಬ್ಯಾಟರಿ ಪ್ಯಾಕ್ ಹೊಂದಿರುವ ಮಾದರಿಯು ಪ್ರತಿ ಚಾರ್ಜ್‌ಗೆ 140 ಕಿ.ಮೀ ಮೈಲೇಜ್ ಹಿಂದಿರುಗಿಸಿದ್ದಲ್ಲಿ ಡ್ಯುಯಲ್ ಬ್ಯಾಟರಿ ಬ್ಯಾಕ್ಅಪ್ ಹೊಂದಿರುವ ಮಾದರಿಯು ಗರಿಷ್ಠ 240 ಕಿ.ಮೀ ಮೈಲೇಜ್ ಪಡೆಯಬಹುದಾಗಿದೆ.

ಈ ಮೂಲಕ ಓಲಾ ಹೊಸ ಸ್ಕೂಟರ್ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಹೊಸ ಸ್ಕೂಟರ್ ಬಿಡುಗಡೆಗೂ ಮುನ್ನ ಹೆಚ್ಚಿನ ಸಂಖ್ಯೆಯಲ್ಲಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯುತ್ತಿದೆ.

ಹೊಸ ವಾಹನ ಉತ್ಪಾದನಾ ಯೋಜನೆಗಾಗಿ ಓಲಾ ಎಲೆಕ್ಟ್ರಿಕ್ ಕಂಪನಿಯು ಆರಂಭಿಕ ಬಂಡವಾಳವಾಗಿ ರೂ. 2,400 ಕೋಟಿ ಹೂಡಿಕೆ ಮಾಡಲಾಗುತ್ತಿದ್ದು, ಸದ್ಯ ಇವಿ ಸ್ಕೂಟರ್ ಮಾತ್ರ ಉತ್ಪಾದನೆ ಮಾಡಲಿರುವ ಕಂಪನಿಯು ಮುಂಬರುವ ದಿನಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ತ್ರಿ ಚಕ್ರ ವಾಹನಗಳು ಮತ್ತು ಇವಿ ಕಾರುಗಳನ್ನು ಸಹ ಅಭಿವೃದ್ದಿಪಡಿಸಲಿದೆ.

ವಾಹನ ಉತ್ಪಾದನೆಗಾಗಿ ಓಲಾ ಕಂಪನಿಯು ತಮಿಳುನಾಡಿನ ಹೊಸರಿನಲ್ಲಿ ಬೃಹತ್ ಉತ್ಪಾದನಾ ಘಟಕವನ್ನು ನಿರ್ಮಾಣ ಮಾಡುತ್ತಿದ್ದು, ಹೊಸ ಉತ್ಪಾದನಾ ಘಟಕವು ಬರೋಬ್ಬರಿ 500 ಎಕರೆ ವ್ಯಾಪ್ತಿಯಲ್ಲಿ ಅಭಿವೃದ್ದಿಗೊಳ್ಳುತ್ತಿದೆ.

ಓಲಾ ಹೊಸ ವಾಹನ ಉತ್ಪದನಾ ಘಟಕವು ವಾರ್ಷಿಕವಾಗಿ 20 ಲಕ್ಷ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಉತ್ಪಾದನೆ ಮಾಡಬಹುದಾದ ಸಾಮರ್ಥ್ಯ ಹೊಂದಿದ್ದು, ಹೊಸ ಘಟಕವು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲಿದೆ.


Click it and Unblock the Notifications








