ಹೊಸ ಇವಿ ಸ್ಕೂಟರಿನ ರಿವರ್ಸ್ ಮೋಡ್ ಟೀಸರ್ ಬಿಡುಗಡೆ ಮಾಡಿದ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಬಹುನೀರಿಕ್ಷಿತ ಇವಿ ಸ್ಕೂಟರ್ ಅನ್ನು ಇದೇ ತಿಂಗಳು 15ರಂದು ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಹೊಸ ಸ್ಕೂಟರ್ ಬಿಡುಗಡೆಗೂ ಮುನ್ನ ರೀವರ್ಸ್ ಮೋಡ್ ಟೀಸರ್ ಬಹಿರಂಗಪಡಿಸಿದೆ.

ಹೊಸ ಇವಿ ಸ್ಕೂಟರಿನ ರಿವರ್ಸ್ ಮೋಡ್ ಟೀಸರ್ ಬಿಡುಗಡೆ ಮಾಡಿದ ಓಲಾ ಎಲೆಕ್ಟ್ರಿಕ್

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯ ದಿನದಂದೆ ಅಧಿಕೃತ ಹೆಸರು ಮತ್ತು ತಾಂತ್ರಿಕ ಅಂಶಗಳನ್ನು ಅನಾವರಣಗೊಳಿಸಲಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಸ್ಕೂಟರಿನ ಪ್ರಮುಖ ತಾಂತ್ರಿಕ ಅಂಶಗಳನ್ನು ಟೀಸರ್ ಮೂಲಕ ಈಗಾಗಲೇ ಮಾಹಿತಿ ಹಂಚಿಕೊಂಡಿದ್ದು, ಇದೀಗ ಹೊಸ ಸ್ಕೂಟರಿನಲ್ಲಿ ರೀವರ್ಸ್ ಮೋಡ್ ನೀಡುವ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ಹೊಸ ಇವಿ ಸ್ಕೂಟರಿನ ರಿವರ್ಸ್ ಮೋಡ್ ಟೀಸರ್ ಬಿಡುಗಡೆ ಮಾಡಿದ ಓಲಾ ಎಲೆಕ್ಟ್ರಿಕ್

ಹೊಸ ಇವಿ ಸ್ಕೂಟರಿನಲ್ಲಿ ಓಲಾ ಕಂಪನಿಯು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಅತ್ಯುತ್ತಮ ತಾಂತ್ರಿಕ ಅಂಶಗಳನ್ನು ನೀಡಿದ್ದು, ಹೊಸ ಸ್ಕೂಟರ್ ಮೈಲೇಜ್, ಫೀಚರ್ಸ್ ಮತ್ತು ಬೆಲೆಯಲ್ಲೂ ಗ್ರಾಹಕರನ್ನು ಸೆಳೆಯಲಿದೆ.

ಹೊಸ ಇವಿ ಸ್ಕೂಟರಿನ ರಿವರ್ಸ್ ಮೋಡ್ ಟೀಸರ್ ಬಿಡುಗಡೆ ಮಾಡಿದ ಓಲಾ ಎಲೆಕ್ಟ್ರಿಕ್

ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಸಾಮಾನ್ಯವಾಗಿ ರೀವರ್ಸ್ ಮೋಡ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿದ್ದು, ಓಲಾ ಕಂಪನಿಯು ಕೂಡಾ ಹೊಸ ಸ್ಕೂಟರಿನಲ್ಲಿ ರೀವರ್ಸ್ ಮೋಡ್ ಜೋಡಿಸಿರುವುದು ಪಾರ್ಕಿಂಗ್ ಪ್ರದೇಶಗಳಲ್ಲಿ ವಾಹನ ನಿಲುಗಡೆಗಾಗಿ ಮತ್ತು ಪಾರ್ಕಿಂಗ್ ಪ್ರದೇಶದಿಂದ ವಾಹನಗಳನ್ನು ಹೊರತೆಗೆಯಲು ರಿವರ್ಸ್ ಮೋಡ್ ಸಾಕಷ್ಟು ಸಹಕಾರಿಯಾಗುತ್ತದೆ.

ಹೊಸ ಇವಿ ಸ್ಕೂಟರಿನ ರಿವರ್ಸ್ ಮೋಡ್ ಟೀಸರ್ ಬಿಡುಗಡೆ ಮಾಡಿದ ಓಲಾ ಎಲೆಕ್ಟ್ರಿಕ್

ಆಧುನಿಕ ತಂತ್ರಜ್ಞಾನ ಪ್ರೇರಿತ ದ್ವಿಚಕ್ರ ಗಳಲ್ಲಿ ರಿವರ್ಸ್ ಮೋಡ್ ಹೆಚ್ಚು ಜನಪ್ರಿಯತೆ ಹೊಂದುತ್ತಿದ್ದು, ರಿವರ್ಸ್ ಮೋಡ್ ಸೌಲಭ್ಯವು ಮುಂಬರುವ ಕೆಲ ವರ್ಷಗಳಲ್ಲಿ ಸಾಮಾನ್ಯ ತಾಂತ್ರಿಕ ಅಂಶವಾಗಿ ಬಳಕೆಯಾಗಲಿದೆ.

ಇನ್ನು ಓಲಾ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗಾಗಿ ರೂ. 499 ಮುಂಗಡದೊಂದಿಗೆ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿದ್ದು, ಹೊಸ ಸ್ಕೂಟರ್ ಖರೀದಿಗಾಗಿ ಈಗಾಗಲೇ ಸುಮಾರು 1.50 ಲಕ್ಷಕ್ಕೂ ಹೆಚ್ಚು ಗ್ರಾಹಕರು ಮುಂಗಡ ಪಾವತಿಸಿದ್ದಾರೆ.

ಹೊಸ ಇವಿ ಸ್ಕೂಟರಿನ ರಿವರ್ಸ್ ಮೋಡ್ ಟೀಸರ್ ಬಿಡುಗಡೆ ಮಾಡಿದ ಓಲಾ ಎಲೆಕ್ಟ್ರಿಕ್

ಹೊಸ ಸ್ಕೂಟರ್‌ನಲ್ಲಿ ಓಲಾ ಕಂಪನಿಯು ಎರಡು ಮಾದರಿಯ ಬ್ಯಾಟರಿ ಪ್ಯಾಕ್ ನೀಡುವ ಸಾಧ್ಯತೆಗಳಿದ್ದು, ಸಿಂಗಲ್ ಬ್ಯಾಟರಿ ಪ್ಯಾಕ್ ಹೊಂದಿರುವ ಮಾದರಿಯು ಪ್ರತಿ ಚಾರ್ಜ್‌ಗೆ 140 ಕಿ.ಮೀ ಮೈಲೇಜ್ ಹಿಂದಿರುಗಿಸಿದ್ದಲ್ಲಿ ಡ್ಯುಯಲ್ ಬ್ಯಾಟರಿ ಬ್ಯಾಕ್ಅಪ್ ಹೊಂದಿರುವ ಮಾದರಿಯಿಂದ ಗರಿಷ್ಠ 240 ಕಿ.ಮೀ ಮೈಲೇಜ್ ಪಡೆಯಬಹುದಾಗಿದೆ.

ಹೊಸ ಇವಿ ಸ್ಕೂಟರಿನ ರಿವರ್ಸ್ ಮೋಡ್ ಟೀಸರ್ ಬಿಡುಗಡೆ ಮಾಡಿದ ಓಲಾ ಎಲೆಕ್ಟ್ರಿಕ್

ಹಾಗೆಯೇ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಸುಮಾರು ಹತ್ತು ಹೊಸ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಪ್ಯಾಸ್ಟೆಲ್ ರೆಡ್, ಯೆಲ್ಲೊ, ಬ್ಲ್ಯೂ, ವೈಟ್, ಮೆಟಾಲಿಕ್ ಸಿಲ್ವರ್, ರೋಜ್ ಗೋಲ್ಡ್, ಪಿಂಕ್, ಮ್ಯಾಟೆ ಬ್ಲ್ಯಾಕ್, ಬ್ಲ್ಯೂ ಮತ್ತು ಗ್ರೆ ಬಣ್ಣಗಳ ಆಯ್ಕೆ ಪಡೆದುಕೊಳ್ಳಲಿದೆ.

ಹೊಸ ಇವಿ ಸ್ಕೂಟರಿನ ರಿವರ್ಸ್ ಮೋಡ್ ಟೀಸರ್ ಬಿಡುಗಡೆ ಮಾಡಿದ ಓಲಾ ಎಲೆಕ್ಟ್ರಿಕ್

ಈ ಮೂಲಕ ಓಲಾ ಹೊಸ ಸ್ಕೂಟರ್ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಹೊಸ ಸ್ಕೂಟರ್ ಬಿಡುಗಡೆಗೂ ಮುನ್ನ ಹೆಚ್ಚಿನ ಸಂಖ್ಯೆಯಲ್ಲಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯುತ್ತಿದೆ.

ಹೊಸ ಇವಿ ಸ್ಕೂಟರಿನ ರಿವರ್ಸ್ ಮೋಡ್ ಟೀಸರ್ ಬಿಡುಗಡೆ ಮಾಡಿದ ಓಲಾ ಎಲೆಕ್ಟ್ರಿಕ್

ಎಲೆಕ್ಟ್ರಿಕ್ ವಾಹನಗಳಿಗೆ ಅಗತ್ಯವಾಗಿರುವ ಚಾರ್ಜಿಂಗ್ ನಿಲ್ದಾಣಗಳ ಸೌಲಭ್ಯದ ಮೇಲೆ ವಿಶೇಷ ಆಸಕ್ತಿ ವಹಿಸಿರುವ ಓಲಾ ಕಂಪನಿಯು ದೇಶದ ಪ್ರಮುಖ 400 ನಗರಗಳಲ್ಲಿ 1 ಲಕ್ಷ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಜಾಲವನ್ನು ವಿಸ್ತರಿಸುತ್ತಿದೆ.

ಹೊಸ ಇವಿ ಸ್ಕೂಟರಿನ ರಿವರ್ಸ್ ಮೋಡ್ ಟೀಸರ್ ಬಿಡುಗಡೆ ಮಾಡಿದ ಓಲಾ ಎಲೆಕ್ಟ್ರಿಕ್

ಎಲೆಕ್ಟ್ರಿಕ್ ವಾಹನಗಳಿಗೆ ಹೋಂ ಚಾರ್ಜರ್ ಸೌಲಭ್ಯ ಹೊರತುಪಡಿಸಿ ಅತಿ ಕಡಿಮೆ ಅವಧಿಯಲ್ಲಿ ಚಾರ್ಜ್ ಮಾಡಬಹುದಾದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗುತ್ತಿದ್ದು, ಹೈಪರ್ ಚಾರ್ಜಿಂಗ್ ನಿಲ್ದಾಣಗಳಲ್ಲಿ ಗಂಟೆಗೆ ನೂರಾರು ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ಒಂದೇ ಅವಧಿಯಲ್ಲೇ ಚಾರ್ಜ್ ಮಾಡಬಹುದಾಗಿದೆ.

ಹೊಸ ಇವಿ ಸ್ಕೂಟರಿನ ರಿವರ್ಸ್ ಮೋಡ್ ಟೀಸರ್ ಬಿಡುಗಡೆ ಮಾಡಿದ ಓಲಾ ಎಲೆಕ್ಟ್ರಿಕ್

ಮಾಹಿತಿಗಳ ಪ್ರಕಾರ ಓಲಾ ಕಂಪನಿಯು ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ ಸೇರಿದಂತೆ ಪ್ರಮುಖ ಮಹಾನಗರಗಳ ಜೊತೆಗೆ ಆಯ್ದ ಟೈರ್ 1, ಟೈರ್ 2 ನಗರಗಳಲ್ಲಿ ಆರಂಭಿಕ ಮಾರಾಟ ಚಾಲನೆ ನೀಡಿಲಿದ್ದು, ತದನಂತರ ಹಂತ-ಹಂತವಾಗಿ ಸ್ಕೂಟರ್ ಮಾರಾಟವನ್ನು ದೇಶಾದ್ಯಂತ ವಿಸ್ತರಿಸಲಿದೆ.

More from DriveSpark

Article Published On: Saturday, August 7, 2021, 19:56 [IST]
English summary
Ola Electric Scooter Reverse Mode Teased.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+