ಕಾಯುವಿಕೆ ಅಂತ್ಯ- ಇವಿ ಸ್ಕೂಟರ್ ಟೆಸ್ಟ್ ರೈಡ್ ಆರಂಭಿಸಿದ ಓಲಾ ಎಲೆಕ್ಟ್ರಿಕ್

ಬಹುನೀರಿಕ್ಷಿತ ಓಲಾ ಎಲೆಕ್ಟ್ರಿಕ್(Ola Electric) ನಿರ್ಮಾಣದ ಹೊಸ ಎಸ್1(S1) ಮತ್ತು ಎಸ್1 ಪ್ರೊ(S1 Pro) ಎಲೆಕ್ಟ್ರಿಕ್ ಸ್ಕೂಟರ್‌ಗಳು ಗ್ರಾಹಕರ ಕೈಸೇರುವ ಸಿದ್ದತೆಯಲ್ಲಿದ್ದು, ಸ್ಕೂಟರ್ ವಿತರಣೆ ಆರಂಭಕ್ಕೂ ಮುನ್ನ ಆಸಕ್ತ ಗ್ರಾಹಕರಿಗೆ ಕಂಪನಿಯು ಟೆಸ್ಟ್ ರೈಡ್ ಆರಂಭಿಸಿದೆ.

ಕಾಯುವಿಕೆ ಅಂತ್ಯ- ಇವಿ ಸ್ಕೂಟರ್ ಟೆಸ್ಟ್ ರೈಡ್ ಆರಂಭಿಸಿದ ಓಲಾ ಎಲೆಕ್ಟ್ರಿಕ್

ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬುಕ್ಕಿಂಗ್ ದಾಖಲಿಸಿರುವ ಗ್ರಾಹಕರಿಗೆ ಓಲಾ ಎಲೆಕ್ಟ್ರಿಕ್ ಕಂಪನಿಯು ಇಂದಿನಿಂದ ಅಧಿಕೃತವಾಗಿ ಟೆಸ್ಟ್ ರೈಡ್ ಆರಂಭಿಸಲಿದ್ದು, ಟೆಸ್ಟ್ ರೈಡ್ ನಂತರ ಆಸಕ್ತ ಗ್ರಾಹಕರು ಖರೀದಿ ಪ್ರಕ್ರಿಯೆಯನ್ನು ಮುಂದುವರಿಸುವ ಬಗೆಗೆ ಖಚಿತಗೊಳಿಸಬಹುದು. ಟೆಸ್ಟ್ ರೈಡ್ ನಂತರ ವಿತರಣೆಯ ಮಾಹಿತಿಯನ್ನು ಹಂಚಿಕೊಳ್ಳಲಿರುವ ಕಂಪನಿಯು ಡಿಸೆಂಬರ್ 1ರಿಂದ 31ರ ಒಳಗಾಗಿ ಹೊಸ ಸ್ಕೂಟರ್ ವಿತರಣೆ ಮಾಡುವುದಾಗಿ ಹೇಳಿಕೊಂಡಿದೆ.

ಕಾಯುವಿಕೆ ಅಂತ್ಯ- ಇವಿ ಸ್ಕೂಟರ್ ಟೆಸ್ಟ್ ರೈಡ್ ಆರಂಭಿಸಿದ ಓಲಾ ಎಲೆಕ್ಟ್ರಿಕ್

ಗ್ರಾಹಕರು ಟೆಸ್ಟ್ ರೈಡ್ ವೇಳೆ ಇಷ್ಟವಾದರೆ ಮಾತ್ರ ಇವಿ ಸ್ಕೂಟರ್ ಖರೀದಿಯನ್ನು ಪ್ರಕ್ರಿಯೆಯನ್ನು ಮುಂದುವರಿಸಬಹುದಾಗಿದ್ದು, ಇಷ್ಟವಾಗದೆ ಹೋದಲ್ಲಿ ನೀವು ಮುಂಗಡವಾಗಿ ಪಾವತಿ ಮಾಡಿರುವ ಒಟ್ಟು ಮೊತ್ತವನ್ನು ಹಿಂಪಡೆಯಬಹುದಾಗಿದೆ.

ಕಾಯುವಿಕೆ ಅಂತ್ಯ- ಇವಿ ಸ್ಕೂಟರ್ ಟೆಸ್ಟ್ ರೈಡ್ ಆರಂಭಿಸಿದ ಓಲಾ ಎಲೆಕ್ಟ್ರಿಕ್

ಓಲಾ ಕಂಪನಿಯು ಹೊಸ ಇವಿ ಸ್ಕೂಟರ್ ಖರೀದಿ ಪ್ರಕ್ರಿಯೆಗಾಗಿ ಶೋರೂಂಗಳ ಬದಲಾಗಿ ಸಂಪೂರ್ಣವಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಸ್ಕೂಟರ್ ಖರೀದಿ ಪ್ರಕ್ರಿಯೆ ಪ್ರಕ್ರಿಯೆ, ವಿತರಣೆ ಮತ್ತು ಮಾರಾಟ ನಂತರದ ಗ್ರಾಹಕರ ಸೇವೆಗಳು ಸಹ ಮನೆ ಬಾಗಿಲಿಗೆ ಒದಗಿಸುವ ಭರವಸೆ ನೀಡಿದೆ.

ಕಾಯುವಿಕೆ ಅಂತ್ಯ- ಇವಿ ಸ್ಕೂಟರ್ ಟೆಸ್ಟ್ ರೈಡ್ ಆರಂಭಿಸಿದ ಓಲಾ ಎಲೆಕ್ಟ್ರಿಕ್

ಓಲಾ ಹೊಸ ಇವಿ ಸ್ಕೂಟರ್‌ಗಳ ಖರೀದಿಗಾಗಿ ದೇಶಾದ್ಯಂತ ಪ್ರಮುಖ ನಗರಗಳಿಂದ ಸುಮಾರು 1.50 ಲಕ್ಷಕ್ಕೂ ಅಧಿಕ ಗ್ರಾಹಕರು ಬುಕ್ಕಿಂಗ್ ದಾಖಲಿಸಿದ್ದು, ಸ್ಕೂಟರ್ ಖರೀದಿದಾಗಿ ಕಂಪನಿಯು ಪ್ರಮುಖ ಬ್ಯಾಂಕ್‌ಗಳ ಪಾಲುದಾರಿಕೆಯೊಂದಿಗೆ ಗರಿಷ್ಠ ಸಾಲ ಸೌಲಭ್ಯದೊಂದಿಗೆ ಆಕರ್ಷಕ ಇಎಂಐ ಆಯ್ಕೆಗಳನ್ನು ನೀಡಿದೆ.

ಕಾಯುವಿಕೆ ಅಂತ್ಯ- ಇವಿ ಸ್ಕೂಟರ್ ಟೆಸ್ಟ್ ರೈಡ್ ಆರಂಭಿಸಿದ ಓಲಾ ಎಲೆಕ್ಟ್ರಿಕ್

ಜೊತೆಗೆ ಓಲಾ ಫೈನಾನ್ಸಿಲ್ ಸರ್ವಿಸ್ ಮೂಲಕವೂ ಗ್ರಾಹಕರು ಹೊಸ ಸ್ಕೂಟರ್ ಖರೀದಿ ಮಾಡಬಹುದಾಗಿದ್ದು, ಹೊಸ ಎಸ್1 ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 99,999 ಬೆಲೆ ಹೊಂದಿದ್ದರೆ ಎಸ್1 ಪ್ರೊ ಮಾದರಿಯು ರೂ. 1,29,999 ಬೆಲೆ ಹೊಂದಿದೆ.

ಕಾಯುವಿಕೆ ಅಂತ್ಯ- ಇವಿ ಸ್ಕೂಟರ್ ಟೆಸ್ಟ್ ರೈಡ್ ಆರಂಭಿಸಿದ ಓಲಾ ಎಲೆಕ್ಟ್ರಿಕ್

ಹೊಸ ಸ್ಕೂಟರ್ ಬೆಲೆಯು ಕೆಲವು ರಾಜ್ಯಗಳಲ್ಲಿ ಹೆಚ್ಚುವರಿ ಸಬ್ಸಡಿ ನೀಡುತ್ತಿರುವ ಹಿನ್ನಲೆಯಲ್ಲಿ ಸಬ್ಸಡಿ ಹೊಂದಿರದ ರಾಜ್ಯಗಳಿಂತೂ ತುಸು ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದ್ದು, ಕೇಂದ್ರ ಸರ್ಕಾರವು ಪ್ರತಿ ರಾಜ್ಯಗಳಿಗೂ ಅನ್ವಯವಾಗುವಂತೆ ಫೇಮ್ 2 ಯೋಜನೆ ಅಡಿ ಸಬ್ಸಡಿ ನೀಡುತ್ತಿದೆ.

ಕಾಯುವಿಕೆ ಅಂತ್ಯ- ಇವಿ ಸ್ಕೂಟರ್ ಟೆಸ್ಟ್ ರೈಡ್ ಆರಂಭಿಸಿದ ಓಲಾ ಎಲೆಕ್ಟ್ರಿಕ್

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ತೀವ್ರವಾಗಿ ಹೆಚ್ಚಿಸುವ ಉದ್ದೇಶದಿಂದ ದೆಹಲಿ, ಮಹಾರಾಷ್ಟ್ರ, ರಾಜಸ್ತಾನ ಮತ್ತು ಗುಜರಾತ್ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿ ಇವಿ ವಾಹನ ಖರೀದಿಸುವ ಗ್ರಾಹಕರಿಗೆ ಕೇಂದ್ರದ ಫೇಮ್ 2 ಸಬ್ಸಡಿ ಜೊತೆಗೆ ರಾಜ್ಯ ಸರ್ಕಾರದಿಂದಲೂ ಹೆಚ್ಚುವರಿ ಸಬ್ಸಡಿ ನೀಡುತ್ತಿವೆ.

ಕಾಯುವಿಕೆ ಅಂತ್ಯ- ಇವಿ ಸ್ಕೂಟರ್ ಟೆಸ್ಟ್ ರೈಡ್ ಆರಂಭಿಸಿದ ಓಲಾ ಎಲೆಕ್ಟ್ರಿಕ್

ಓಲಾ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಕುರಿತಾದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಉಪಯಕ್ತ ಮಾಹಿತಿಯುಳ್ಳ Ola Electric App ಅಭಿವೃದ್ದಿಪಡಿಸಿದ್ದು, ಹೊಸ ಆ್ಯಪ್ ಮೂಲಕ ವಾಹನ ಖರೀದಿ, ವಿತರಣೆ, ಗ್ರಾಹಕ ಸೇವೆ, ಇನ್ಸುರೆನ್ಸ್, ಮೌಲ್ಯ ವರ್ಧಿತ ಸೇವೆಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.

ಕಾಯುವಿಕೆ ಅಂತ್ಯ- ಇವಿ ಸ್ಕೂಟರ್ ಟೆಸ್ಟ್ ರೈಡ್ ಆರಂಭಿಸಿದ ಓಲಾ ಎಲೆಕ್ಟ್ರಿಕ್

ಇನ್ನು ಓಲಾ ಸ್ಕೂಟರ್‌ಗಳ ತಾಂತ್ರಿಕ ಸೌಲಭ್ಯಗಳ ಬಗೆಗೆ ಹೇಳುವುದಾದರೆ ಆರಂಭಿಕ ಮಾದರಿಯಾದ ಎಸ್1 ವೆರಿಯೆಂಟ್‌‌ನಲ್ಲಿ 2.98kWh ಮತ್ತು ಎಸ್1 ಪ್ರೊ ಮಾದರಿಯಲ್ಲಿ 3.97kWh ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆ ಮಾಡಿದ್ದು, ಪ್ರತಿ ಚಾರ್ಜ್‌ಗೆ ಎಸ್1 ಮಾದರಿಯು ಗರಿಷ್ಠ 121 ಕಿ.ಮೀ ಮೈಲೇಜ್ ಹಿಂದಿರುಗಿಸಿದರೆ ಎಸ್1 ಪ್ರೊ ಮಾದರಿಯು ಪ್ರತಿ ಚಾರ್ಜ್‌ಗೆ 181 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಕಾಯುವಿಕೆ ಅಂತ್ಯ- ಇವಿ ಸ್ಕೂಟರ್ ಟೆಸ್ಟ್ ರೈಡ್ ಆರಂಭಿಸಿದ ಓಲಾ ಎಲೆಕ್ಟ್ರಿಕ್

ಎಸ್1 ಮಾದರಿಯು ಗಂಟೆಗೆ 90 ಕಿ.ಮೀ ಟಾಪ್ ಸ್ಪೀಡ್‌ ಹೊಂದಿದ್ದರೆ ಎಸ್1 ಪ್ರೊ ಮಾದರಿಯು ಪ್ರತಿ ಗಂಟೆಗೆ 115ಕಿ.ಮೀ ಟಾಪ್ ಸ್ಪೀಡ್‌ ಹೊಂದಿದ್ದು, ಎಸ್1 ಮಾದರಿಯಲ್ಲಿ ನಾರ್ಮಲ್ ಮತ್ತು ಸ್ಪೋರ್ಟ್ ರೈಡ್ ಮೋಡ್‌ಗಳಿದ್ದರೆ ಎಸ್1 ಪ್ರೊ ಮಾದರಿಯಲ್ಲಿ ನಾರ್ಮಲ್, ಸ್ಪೋರ್ಟ್ ಮತ್ತು ಹೈಪರ್ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ.

ಕಾಯುವಿಕೆ ಅಂತ್ಯ- ಇವಿ ಸ್ಕೂಟರ್ ಟೆಸ್ಟ್ ರೈಡ್ ಆರಂಭಿಸಿದ ಓಲಾ ಎಲೆಕ್ಟ್ರಿಕ್

ಹಾಗೆಯೇ ಓಲಾ ಇವಿ ಸ್ಕೂಟರ್‌ಗಳು ಅತ್ಯುತ್ತಮ ವಿನ್ಯಾಸದೊಂದಿಗೆ ಗರಿಷ್ಠ ಮಟ್ಟದ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಂಡಿದ್ದು, ಹೊಸ ಸ್ಕೂಟರ್‌ಗಳಲ್ಲಿ ಟ್ವಿನ್ ಪಾಡ್ ಎಲ್ಇಡಿ ಸೆಟ್ಅಪ್, ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಟೈಲ್‌ಲ್ಯಾಂಪ್, ಕೌಂಟ್‌ರ್ಡ್ ಸೀಟ್, ಅಲಾಯ್ ವ್ಹೀಲ್, 36-ಲೀಟರ್ ಸಾಮರ್ಥ್ಯ ಅಂಡರ್ ಸೀಟ್ ಸ್ಪೋರೇಜ್, ರಿಯರ್ ಗ್ರ್ಯಾಬ್ ರೈಲ್ಸ್, ಫ್ರಂಟ್ ಸ್ಟೋರೇಜ್ ಪ್ಯಾಕೇಟ್, ಲಗೇಜ್ ಹುಕ್ ಮತ್ತು ಹತ್ತು ವಿವಿಧ ಬಣ್ಣಗಳ ಆಯ್ಕೆ ಹೊಂದಿದೆ.

ಕಾಯುವಿಕೆ ಅಂತ್ಯ- ಇವಿ ಸ್ಕೂಟರ್ ಟೆಸ್ಟ್ ರೈಡ್ ಆರಂಭಿಸಿದ ಓಲಾ ಎಲೆಕ್ಟ್ರಿಕ್

ಹೊಸ ಸ್ಕೂಟರ್‌ಗಳು 1,859 ಎಂಎಂ ಉದ್ದ, 712 ಎಂಎಂ ಅಗಲ, 1,160 ಎಂಎಂ ಎತ್ತರ, 1,359 ಎಂಎಂ ವ್ಹೀಲ್ ಬೆಸ್, 792 ಎಂಎಂ ಸೀಟ್ ಹೈಟ್, 125 ಕೆ.ಜಿ ತೂಕ ಹೊಂದಿದ್ದು, ಮುಂಭಾಗದಲ್ಲಿ ಸಿಂಗಲ್ ಫೋರ್ಕ್ ಸಸ್ಫೆಷನ್ ಮತ್ತು ಹಿಂಬದಿಯಲ್ಲಿ ಮೊನೊ ಶಾಕ್ ಸಸ್ಷೆಷನ್‌ನೊಂದಿಗೆ ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಜೋಡಣೆ ಹೊಂದಿವೆ.

ಕಾಯುವಿಕೆ ಅಂತ್ಯ- ಇವಿ ಸ್ಕೂಟರ್ ಟೆಸ್ಟ್ ರೈಡ್ ಆರಂಭಿಸಿದ ಓಲಾ ಎಲೆಕ್ಟ್ರಿಕ್

ಜೊತೆಗೆ ಹೊಸ ಸ್ಕೂಟರ್‌ನಲ್ಲಿ 7-ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಮತ್ತು ಶಟರ್‌ಪ್ರೂಫ್ ಸ್ಕ್ರೀನ್‌ನೊಂದಿಗೆ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆನ್ ಬೋರ್ಡ್ ನ್ಯಾನಿಗೇಷನ್‌ಗಾಗಿ ಇಸಿಮ್ ಇಂಟರ್‌ನೆಂಟ್ ಕನೆಕ್ಟಿವಿಟಿ, ಸ್ಮಾಟ್‌ಫೋರ್ಟ್ ಮೂಲಕ ವಿವಿಧ ತಾಂತ್ರಿಕ ಅಂಶಗಳನ್ನು ನಿಯಂತ್ರಿಸಲು ಕನೆಕ್ಟೆಡ್ ಫೀಚರ್ಸ್ ಸಹ ನೀಡಲಾಗಿದೆ.

More from DriveSpark

Article Published On: Wednesday, November 10, 2021, 10:59 [IST]
English summary
Ola electric will starts today s1 s1 pro scooters test ride details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+