Ola ಹೊಸ S1 ಮತ್ತು S1 Pro ಎಲೆಕ್ಟ್ರಿಕ್ ಸ್ಕೂಟರ್‌ಗಳ ನಡುವಿನ ವ್ಯತ್ಯಾಸಗಳೇನು?

ಓಲಾ ಎಲೆಕ್ಟ್ರಿಕ್(Ola Electric) ಕಂಪನಿಯು ತನ್ನ ಬಹುನೀರಿಕ್ಷಿತ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಕಂಪನಿಯು ಶೀಘ್ರದಲ್ಲೇ ಹೊಸ ಸ್ಕೂಟರ್ ವಿತರಣೆಯನ್ನು ಆರಂಭಿಸುವ ಸಿದ್ದತೆಯಲ್ಲಿದೆ.

Ola ಹೊಸ S1 ಮತ್ತು S1 Pro ಎಲೆಕ್ಟ್ರಿಕ್ ಸ್ಕೂಟರ್‌ಗಳ ನಡುವಿನ ವ್ಯತ್ಯಾಸಗಳೇನು?

ಓಲಾ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಎಸ್ ಸರಣಿಯಲ್ಲಿ S1 ಮತ್ತು S1 Pro ಆವೃತ್ತಿಗಳನ್ನು ಪರಿಚಯಿಸಿದ್ದು, ಎರಡು ಮಾದರಿಗಳು ನೋಡುವುದಕ್ಕೆ ಒಂದೇ ರೀತಿಯಾಗಿದ್ದರೂ ತಾಂತ್ರಿಕವಾಗಿ ಎರಡು ಮಾದರಿಗಳಲ್ಲೂ ಹಲವಾರು ತಾಂತ್ರಿಕ ಸೌಲಭ್ಯಗಳ ಜೋಡಣೆಯಲ್ಲಿ ವ್ಯತ್ಯಾಸ ಹೊಂದಿವೆ. ಹಾಗಾದರೆ ಓಲಾ ಇವಿ ಸ್ಕೂಟರ್‌ಗಳ ನಡುವಿನ ವ್ಯತ್ಯಾಸಗಳನ್ನು ಇಲ್ಲಿ ತಿಳಿಯೋಣ.

Ola ಹೊಸ S1 ಮತ್ತು S1 Pro ಎಲೆಕ್ಟ್ರಿಕ್ ಸ್ಕೂಟರ್‌ಗಳ ನಡುವಿನ ವ್ಯತ್ಯಾಸಗಳೇನು?

ಓಲಾ ಕಂಪನಿಯು ಹೊಸ S1 ಮತ್ತು S1 Pro ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಅತ್ಯುತ್ತಮ ಬ್ಯಾಟರಿ ಪ್ಯಾಕ್, ಅಧಿಕ ಮೈಲೇಜ್ ರೇಂಜ್ ಮತ್ತು ಕೈಗೆಟುಕುವ ಬೆಲೆಗಳಲ್ಲಿ ಬಿಡುಗಡೆಗೊಳಿಸಿದ್ದು, ಹೊಸ ಸ್ಕೂಟರ್‌ಗಳ ಬೆಲೆಯು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಉತ್ತಮವಾಗಿದೆ.

Ola ಹೊಸ S1 ಮತ್ತು S1 Pro ಎಲೆಕ್ಟ್ರಿಕ್ ಸ್ಕೂಟರ್‌ಗಳ ನಡುವಿನ ವ್ಯತ್ಯಾಸಗಳೇನು?

ಹೊಸ S1 ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 99,999 ಬೆಲೆ ಹೊಂದಿದ್ದರೆ S1 Pro ಮಾದರಿಯು ರೂ. 1,29,999 ಬೆಲೆ ಹೊಂದಿದ್ದು, ಹೊಸ ಸ್ಕೂಟರ್ ಬೆಲೆಯು ಕೆಲವು ರಾಜ್ಯಗಳಲ್ಲಿ ಹೆಚ್ಚುವರಿ ಸಬ್ಸಡಿ ನೀಡುತ್ತಿರುವ ಹಿನ್ನಲೆಯಲ್ಲಿ ಸಬ್ಸಡಿ ಹೊಂದಿರದ ರಾಜ್ಯಗಳಿಂತೂ ತುಸು ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ.

Ola ಹೊಸ S1 ಮತ್ತು S1 Pro ಎಲೆಕ್ಟ್ರಿಕ್ ಸ್ಕೂಟರ್‌ಗಳ ನಡುವಿನ ವ್ಯತ್ಯಾಸಗಳೇನು?

S1 Pro ಮಾದರಿಯು S1 ಮಾದರಿಗಿಂತಲೂ ರೂ. 30 ಸಾವಿರದಷ್ಟು ದುಬಾರಿಯಾಗಿದ್ದು, ಬೆಲೆಗೆ ತಕ್ಕಂತೆ ಎರಡು ಮಾದರಿಗಳಲ್ಲೂ ವಿವಿಧ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದ್ದು, ಎರಡು ಸ್ಕೂಟರ್‌‌ಗಳ ನಡುವೆ ಸಾಕಷ್ಟು ಭಿನ್ನತೆಗಳಿವೆ.

Prices S1 S1 Pro
Gujarat ₹79,999 ₹1.09 lakh
Delhi ₹85,099 ₹1.10 lakh
Rajasthan ₹89,968 ₹1.19 lakh
Maharashtra ₹94,999 ₹1.24 lakh
Other Cities ₹99,999 ₹1.29 lakh
Ola ಹೊಸ S1 ಮತ್ತು S1 Pro ಎಲೆಕ್ಟ್ರಿಕ್ ಸ್ಕೂಟರ್‌ಗಳ ನಡುವಿನ ವ್ಯತ್ಯಾಸಗಳೇನು?

ಬ್ಯಾಟರಿ ರೇಂಜ್ ಮತ್ತು ಪರ್ಫಾಮೆನ್ಸ್

S1 ವೆರಿಯೆಂಟ್‌ನಲ್ಲಿ ಕಂಪನಿಯು 2.98kWh ಮತ್ತು S1 Pro ಮಾದರಿಯಲ್ಲಿ 3.97kWh ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆ ಮಾಡಿದ್ದು, 8.5kW ಎಲೆಕ್ಟ್ರಿಕ್ ಮೋಟಾರ್ ಮೂಲಕ ಪರ್ಫಾಮೆನ್ಸ್ ಹೊಂದಿವೆ.

Ola ಹೊಸ S1 ಮತ್ತು S1 Pro ಎಲೆಕ್ಟ್ರಿಕ್ ಸ್ಕೂಟರ್‌ಗಳ ನಡುವಿನ ವ್ಯತ್ಯಾಸಗಳೇನು?

S1 ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 121 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದರೆ S1 Pro ಮಾದರಿಯು ಪ್ರತಿ ಚಾರ್ಜ್‌ಗೆ 181 ಕಿ.ಮೀ ಮೈಲೇಜ್ ನೀಡಲಿದ್ದು, ಹೊಸ ಸ್ಕೂಟರ್ ಚಾರ್ಜಿಂಗ್ ಸಮಯವು ಹೋಂ ಚಾರ್ಜರ್ ಮೂಲಕ ಪೂರ್ತಿಯಾಗಿ ಚಾರ್ಜ್ ಆಗಲು 6.50 ಗಂಟೆ ತೆಗೆದುಕೊಂಡಲ್ಲಿ ಫಾಸ್ಟ್ ಚಾರ್ಜಿಂಗ್ ಮೂಲಕ ಕೇವಲ 18 ನಿಮಿಷಗಳಲ್ಲಿ 75 ಕಿ.ಮೀ ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದು.

Specifications S1 S1 Pro
Battery 2.98KWh 3.97KWh
Electric Motor Output 5.5KW 5.5KW
Peak Power 8.5KW 8.5KW
Fast Charging Time 75km in 18 minutes 75km in 18 minutes
Normal Charging Time (0 to 100%) 4 hr 48 min 6 hr 30 min
Range (ARAI) 121km 181km
Ola ಹೊಸ S1 ಮತ್ತು S1 Pro ಎಲೆಕ್ಟ್ರಿಕ್ ಸ್ಕೂಟರ್‌ಗಳ ನಡುವಿನ ವ್ಯತ್ಯಾಸಗಳೇನು?

ಪರ್ಫಾಮೆನ್ಸ್ ಮತ್ತು ರೈಡಿಂಗ್ ಮೋಡ್‌ಗಳು

S1 ಮಾದರಿಯು ಗಂಟೆಗೆ 90 ಕಿ.ಮೀ ಟಾಪ್ ಸ್ಪೀಡ್‌ ಹೊಂದಿದ್ದರೆ S1 Pro ಮಾದರಿಯು ಪ್ರತಿ ಗಂಟೆಗೆ 115ಕಿ.ಮೀ ಟಾಪ್ ಸ್ಪೀಡ್‌ ಹೊಂದಿದ್ದು, S1 ಮಾದರಿಯಲ್ಲಿ ನಾರ್ಮಲ್ ಮತ್ತು ಸ್ಪೋರ್ಟ್ ರೈಡ್ ಮೋಡ್‌ಗಳಿದ್ದರೆ S1 Pro ಮಾದರಿಯಲ್ಲಿ ನಾರ್ಮಲ್, ಸ್ಪೋರ್ಟ್ ಮತ್ತು ಹೈಪರ್ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ.

Performance S1 S1 Pro
Acceleration (0 to 40kmph) 3.6 seconds 3 seconds
Acceleration (0 to 60kmph) 7 seconds 5 seconds
Top speed 90kmph 115kmph
Ride modes Normal & Sports Normal, Sports & Hyper
Ola ಹೊಸ S1 ಮತ್ತು S1 Pro ಎಲೆಕ್ಟ್ರಿಕ್ ಸ್ಕೂಟರ್‌ಗಳ ನಡುವಿನ ವ್ಯತ್ಯಾಸಗಳೇನು?

S1 ಮತ್ತು S1 Pro ಸ್ಕೂಟರ್‌ಗಳ ಉದ್ದಳತೆ

ಓಲಾ ಹೊಸ S1 ಮತ್ತು S1 Pro ಸ್ಕೂಟರ್‌ಗಳು 1,859 ಎಂಎಂ ಉದ್ದ, 712 ಎಂಎಂ ಅಗಲ, 1,160 ಎಂಎಂ ಎತ್ತರ, 1,359 ಎಂಎಂ ವ್ಹೀಲ್ ಬೆಸ್, 792 ಎಂಎಂ ಸೀಟ್ ಎತ್ತರ ಮತ್ತು 36 ಲೀಟರ್ ಬೂಟ್‌ಸ್ಪೆಸ್ ಹೊಂದಿದ್ದು, ಎಸ್1 ಪ್ರೊ 125 ಕೆ.ಜಿ ತೂಕ ಹೊಂದಿದ್ದರೆ ಎ1 ಮಾದರಿಯು 121 ಕೆ.ಜಿ ತೂಕ ಹೊಂದಿದೆ.

Dimensions S1 S1 Pro
Length 1859mm 1859mm
Width 712mm 712mm
Height 1160mm 1160mm
Wheelbase 1359mm 1359mm
Seat Height 792mm 792mm
Seat Length 738mm 738mm
Ground Clearance 165mm 165mm
Kerb Weight 121kg 125kg
Boot Space 36 litres 36 litres
Ola ಹೊಸ S1 ಮತ್ತು S1 Pro ಎಲೆಕ್ಟ್ರಿಕ್ ಸ್ಕೂಟರ್‌ಗಳ ನಡುವಿನ ವ್ಯತ್ಯಾಸಗಳೇನು?

ಹೊಸ ಸ್ಕೂಟರ್‌ಗಳು ಮುಂಭಾಗದಲ್ಲಿ ಸಿಂಗಲ್ ಫೋರ್ಕ್ ಸಸ್ಫೆಷನ್ ಮತ್ತು ಹಿಂಬದಿಯಲ್ಲಿ ಮೊನೊ ಶಾಕ್ ಸಸ್ಷೆಷನ್‌ನೊಂದಿಗೆ ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಜೋಡಣೆ ಹೊಂದಿದ್ದು, ಅತ್ಯುತ್ತಮ ಡಿಸೈನ್‌ನೊಂದಿಗೆ ಗರಿಷ್ಠ ಮಟ್ಟದ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಂಡಿವೆ.

Ola ಹೊಸ S1 ಮತ್ತು S1 Pro ಎಲೆಕ್ಟ್ರಿಕ್ ಸ್ಕೂಟರ್‌ಗಳ ನಡುವಿನ ವ್ಯತ್ಯಾಸಗಳೇನು?

ಹೊಸ ಸ್ಕೂಟರ್‌ಗಳಲ್ಲಿ ಟ್ವಿನ್ ಪಾಡ್ ಎಲ್ಇಡಿ ಸೆಟ್ಅಪ್, ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಟೈಲ್‌ಲ್ಯಾಂಪ್, ಕೌಂಟ್‌ರ್ಡ್ ಸೀಟ್, ಅಲಾಯ್ ವ್ಹೀಲ್, ರಿಯರ್ ಗ್ರ್ಯಾಬ್ ರೈಲ್ಸ್, ಫ್ರಂಟ್ ಸ್ಟೋರೇಜ್ ಪ್ಯಾಕೇಟ್, ಲಗೇಜ್ ಹುಕ್ ಮತ್ತು ಹತ್ತು ವಿವಿಧ ಬಣ್ಣಗಳ ಆಯ್ಕೆ ಹೊಂದಿದೆ.

Ola ಹೊಸ S1 ಮತ್ತು S1 Pro ಎಲೆಕ್ಟ್ರಿಕ್ ಸ್ಕೂಟರ್‌ಗಳ ನಡುವಿನ ವ್ಯತ್ಯಾಸಗಳೇನು?

ಜೊತೆಗೆ ಹೊಸ ಸ್ಕೂಟರ್‌ನಲ್ಲಿ 7-ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಮತ್ತು ಶಟರ್‌ಪ್ರೂಫ್ ಸ್ಕ್ರೀನ್‌ನೊಂದಿಗೆ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆನ್ ಬೋರ್ಡ್ ನ್ಯಾನಿಗೇಷನ್‌ಗಾಗಿ ಇಸಿಮ್ ಇಂಟರ್‌ನೆಂಟ್ ಕನೆಕ್ಟಿವಿಟಿ, ಸ್ಮಾಟ್‌ಫೋರ್ಟ್ ಮೂಲಕ ವಿವಿಧ ತಾಂತ್ರಿಕ ಅಂಶಗಳನ್ನು ನಿಯಂತ್ರಿಸಲು ಕನೆಕ್ಟೆಡ್ ಫೀಚರ್ಸ್ ಸಹ ನೀಡಲಾಗಿದೆ.

Features S1 S1 Pro
Instrument cluster 7-inch TFT 7-inch TFT
Proximity keyless entry Present Present
Remote boot Present Present
Calls, SMS & phonebook Present Present
Side-stand alert Present Present
Geo-fencing Present Present
4G, Wifi, Bluetooth Present Present
Onboard navigation Present Present
Limp home mode Present Present
Reverse mode Present Present
Hill hold Not Present Present
Cruise control Not Present Present
Voice assistant Not Present Present
HMI moods with sounds Present Present
Ola ಹೊಸ S1 ಮತ್ತು S1 Pro ಎಲೆಕ್ಟ್ರಿಕ್ ಸ್ಕೂಟರ್‌ಗಳ ನಡುವಿನ ವ್ಯತ್ಯಾಸಗಳೇನು?

ಈ ಮೂಲಕ ಎಲೆಕ್ಟ್ರಿಕ್ ವಾಹನಗಳ ಮಾರಾಟ ಹೊಸ ಕ್ರಾಂತಿ ಆರಂಭಿಸಿರುವ Ola ಎಲೆಕ್ಟ್ರಿಕ್ ಕಂಪನಿಯು ಈ ವರ್ಷಾಂತ್ಯದೊಳಗೆ 1 ಸಾವಿರ ಪ್ರಮುಖ ನಗರಗಳಲ್ಲಿ ಹೊಸ ಸ್ಕೂಟರ್ ಮಾರಾಟ ಮಾಡುವ ಯೋಜನೆ ಹೊಂದಿದ್ದು, ಭಾರತದಲ್ಲಿ ಮಾತ್ರವಲ್ಲ ವಿದೇಶಿ ಮಾರುಕಟ್ಟೆಗಳಿಗೂ ರಫ್ತು ಗುರಿ ಹೊಂದಿದೆ.

Ola ಹೊಸ S1 ಮತ್ತು S1 Pro ಎಲೆಕ್ಟ್ರಿಕ್ ಸ್ಕೂಟರ್‌ಗಳ ನಡುವಿನ ವ್ಯತ್ಯಾಸಗಳೇನು?

ಓಲಾ ಕಂಪನಿಯು ಹೊಸ ವಾಹನ ಉತ್ಪಾದನಾ ಘಟಕವನ್ನು ಇಂಡಸ್ಟ್ರಿ 4.0 ತತ್ವದ ಆಧಾರದ ಮೇಲೆ ತಮಿಳುನಾಡಿನ ಹೊಸೂರಿನಲ್ಲಿ ನಿರ್ಮಾಣ ಮಾಡಿದ್ದು, ಹೊಸ ಘಟಕವು ದೇಶದ ಅತ್ಯಾಧುನಿಕ ವಾಹನ ಉತ್ಪಾದನಾ ಘಟಕಗಳಲ್ಲಿ ಒಂದಾಗಿದೆ.

Ola ಹೊಸ S1 ಮತ್ತು S1 Pro ಎಲೆಕ್ಟ್ರಿಕ್ ಸ್ಕೂಟರ್‌ಗಳ ನಡುವಿನ ವ್ಯತ್ಯಾಸಗಳೇನು?

ಆಧುನಿಕ ವಾಹನ ಉತ್ಪಾದನಾ ಘಟಕದಲ್ಲಿ ಸಾವಿರಾರು ಉದ್ಯೋಗಗಳ ಜೊತೆಗೆ ವಾಹನಗಳನ್ನು ಅಸೆಂಬಲ್ ಮಾಡಲು ಸುಮಾರು 5 ಸಾವಿರ ರೋಬೋಟ್‌ಗಳನ್ನು ಹೊಸ ಘಟಕದಲ್ಲಿ ನಿಯೋಜಿಸಲಾಗಿದ್ದು, ಬರೋಬ್ಬರಿ 500 ಎಕರೆ ವ್ಯಾಪ್ತಿ ಹೊಂದಿರುವ ಹೊಸ ವಾಹನ ಉತ್ಪಾದನಾ ಘಟಕದಲ್ಲಿ ವಾರ್ಷಿಕವಾಗಿ 20 ಲಕ್ಷ ಎಲೆಕ್ಟ್ರಿಕ್ ಸ್ಕೂಟರ್‌ಗಳ ಉತ್ಪಾದನೆ ಮಾಡಲು ಯೋಜಿಸಲಾಗಿದೆ.

Ola ಹೊಸ S1 ಮತ್ತು S1 Pro ಎಲೆಕ್ಟ್ರಿಕ್ ಸ್ಕೂಟರ್‌ಗಳ ನಡುವಿನ ವ್ಯತ್ಯಾಸಗಳೇನು?

ಮೇಕ್ ಇನ್ ಇಂಡಿಯಾ ಫಾರ್ ವರ್ಲ್ಡ್ ಅಭಿಯಾನದಡಿ ಭಾರತದಲ್ಲೇ ಉತ್ಪಾದಿಸಿ ಜಾಗತಿಕ ಮಾರುಕಟ್ಟೆಗಳಿಗೆ ರಫ್ತು ಮಾಡುವ ಯೋಜನೆಗೆ ಚಾಲನೆ ನೀಡಿರುವ ಓಲಾ ಕಂಪನಿಯು ಹೊಸ ಇವಿ ಸ್ಕೂಟರ್ ಮಾದರಿಯನ್ನು ಲ್ಯಾಟಿನ್ ಅಮೆರಿಕ, ಆಫ್ರಿಕಾ ರಾಷ್ಟ್ರಗಳಲ್ಲೂ ಮಾರಾಟ ಮಾಡಲಿದೆ.

Most Read Articles

Kannada
English summary
Ola s1 and s1 pro electric scooters comparison details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X