ಕಾಯುವಿಕೆ ಅಂತ್ಯ- ಎಸ್1 ಮತ್ತು ಎಸ್1 ಪ್ರೊ ಸ್ಕೂಟರ್ ವಿತರಣೆಗೆ ಸಿದ್ದವಾದ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್(Ola Electric) ತನ್ನ ಹೊಸ ಎಸ್1(S1) ಮತ್ತು ಎಸ್1 ಪ್ರೊ(S1 Pro) ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಶೀಘ್ರದಲ್ಲೇ ವಿತರಣೆ ಮಾಡುವ ಯೋಜನೆಯಲ್ಲಿದ್ದು, ಕಂಪನಿಯ ಮಾಹಿತಿ ಪ್ರಕಾರ ಹೊಸ ಸ್ಕೂಟರ್ ವಿತರಣೆಯು ಇದೇ ತಿಂಗಳು 15ರಿಂದ ಅಧಿಕೃತವಾಗಿ ಚಾಲನೆ ಪಡೆದುಕೊಳ್ಳುವುದು ಬಹುತೇಕ ಖಚಿತವಾಗಿದೆ.

ಕಾಯುವಿಕೆ ಅಂತ್ಯ- ಎಸ್1 ಮತ್ತು ಎಸ್1 ಪ್ರೊ ಸ್ಕೂಟರ್ ವಿತರಣೆಗೆ ಸಿದ್ದವಾದ ಓಲಾ ಎಲೆಕ್ಟ್ರಿಕ್

ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬುಕ್ಕಿಂಗ್ ದಾಖಲಿಸಿರುವ ಗ್ರಾಹಕರಿಗೆ ಓಲಾ ಎಲೆಕ್ಟ್ರಿಕ್ ಕಂಪನಿಯು ಈಗಾಗಲೇ ಟೆಸ್ಟ್ ರೈಡ್ ಪ್ರಕ್ರಿಯೆ ಹೆಚ್ಚಿಸಿದ್ದು, ಇದುವರೆಗೆ ಸುಮಾರು 25 ಸಾವಿರ ಸಂಭಾವ್ಯ ಗ್ರಾಹಕರು ಟೆಸ್ಟ್ ರೈಡ್ ಪೂರ್ಣಗೊಳಿಸಿದ್ದಾರೆ. ಶೇ.90ಕ್ಕಿಂತಲೂ ಹೆಚ್ಚು ಗ್ರಾಹಕರು ಹೊಸ ಸ್ಕೂಟರ್ ಖರೀದಿ ಪ್ರಕ್ರಿಯೆಗೆ ಒಪ್ಪಿಗೆ ಸೂಚಿಸಿದ್ದು, ಬುಕ್ಕಿಂಗ್ ಆಧರಿಸಿ ಡಿಸೆಂಬರ್ 15ರಿಂದ ಹೊಸ ಸ್ಕೂಟರ್‌ಗಳು ಗ್ರಾಹಕರ ಕೈಸೇರಲಿವೆ.

ಕಾಯುವಿಕೆ ಅಂತ್ಯ- ಎಸ್1 ಮತ್ತು ಎಸ್1 ಪ್ರೊ ಸ್ಕೂಟರ್ ವಿತರಣೆಗೆ ಸಿದ್ದವಾದ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್ ಕಂಪನಿಯು ಸದ್ಯ ಬುಕ್ಕಿಂಗ್ ಮಾಡಿರುವ ಗ್ರಾಹಕರಿಗೆ ಮಾತ್ರವೇ ಟೆಸ್ಟ್ ರೈಡ್ ಒದಗಿಸುತ್ತಿದ್ದು, ಟೆಸ್ಟ್ ರೈಡ್ ನಂತರ ಸ್ಕೂಟರ್ ಕಾರ್ಯಕ್ಷಮತೆ ಇಷ್ಟವಾದಲ್ಲಿ ಗ್ರಾಹಕರು ಖರೀದಿ ಪ್ರಕ್ರಿಯೆಯನ್ನು ಮುಂದುವರಿಸಬಹುದು ಇಲ್ಲವೆ ಮುಂಗಡವಾಗಿ ಪಾವತಿ ಮಾಡಿರುವ ಸಂಪೂರ್ಣ ಹಣವನ್ನು ವಾಪಸ್ ಪಡೆದುಕೊಳ್ಳಬಹುದಾಗಿದೆ.

ಕಾಯುವಿಕೆ ಅಂತ್ಯ- ಎಸ್1 ಮತ್ತು ಎಸ್1 ಪ್ರೊ ಸ್ಕೂಟರ್ ವಿತರಣೆಗೆ ಸಿದ್ದವಾದ ಓಲಾ ಎಲೆಕ್ಟ್ರಿಕ್

ಟೆಸ್ಟ್ ರೈಡ್ ನಂತರ ಬಹುತೇಕ ಗ್ರಾಹಕರು ಹೊಸ ಸ್ಕೂಟರ್ ಖರೀದಿಗೆ ಒಪ್ಪಿಗೆ ಸೂಚಿಸಿದ್ದು, ಹೊಸ ಇವಿ ಸ್ಕೂಟರ್‌ಗಳು ಡಿಸೆಂಬರ್ 15ರಿಂದ ಹಂತ-ಹಂತವಾಗಿ ಫೆಬ್ರವರಿ ತನಕ ವಿತರಣೆಯಾಗಲಿವೆ. ಹೊಸ ಸ್ಕೂಟರ್ ಖರೀದಿಗಾಗಿ ಈಗಾಗಲೇ 1 ಲಕ್ಷ ಅಧಿಕ ಗ್ರಾಹಕರು ಬುಕ್ಕಿಂಗ್ ದಾಖಲಿಸಿದ್ದು, ಬೇಡಿಕೆಗೆ ತಕ್ಕಂತೆ ಕಂಪನಿಯು ತಮಿಳುನಾಡಿನ ಹೊಸೂರಿನಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ಉತ್ಪಾದನೆಯನ್ನು ತೀವ್ರಗೊಳಿಸಿದೆ.

ಕಾಯುವಿಕೆ ಅಂತ್ಯ- ಎಸ್1 ಮತ್ತು ಎಸ್1 ಪ್ರೊ ಸ್ಕೂಟರ್ ವಿತರಣೆಗೆ ಸಿದ್ದವಾದ ಓಲಾ ಎಲೆಕ್ಟ್ರಿಕ್

ಸ್ಕೂಟರ್ ಖರೀದಿದಾಗಿ ಓಲಾ ಕಂಪನಿಯು ಪ್ರಮುಖ ಬ್ಯಾಂಕ್‌ಗಳ ಪಾಲುದಾರಿಕೆಯೊಂದಿಗೆ ಗರಿಷ್ಠ ಸಾಲ ಸೌಲಭ್ಯದೊಂದಿಗೆ ಆಕರ್ಷಕ ಇಎಂಐ ಆಯ್ಕೆಗಳನ್ನು ನೀಡಿದ್ದು, ಓಲಾ ಫೈನಾನ್ಸಿಲ್ ಸರ್ವಿಸ್ ಮೂಲಕವೂ ಗ್ರಾಹಕರು ಹೊಸ ಸ್ಕೂಟರ್ ಖರೀದಿ ಮಾಡಬಹುದಾಗಿದೆ.

ಕಾಯುವಿಕೆ ಅಂತ್ಯ- ಎಸ್1 ಮತ್ತು ಎಸ್1 ಪ್ರೊ ಸ್ಕೂಟರ್ ವಿತರಣೆಗೆ ಸಿದ್ದವಾದ ಓಲಾ ಎಲೆಕ್ಟ್ರಿಕ್

ಓಲಾ ಹೊಸ ಎಸ್1 ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 99,999 ಬೆಲೆ ಹೊಂದಿದ್ದರೆ ಎಸ್1 ಪ್ರೊ ಮಾದರಿಯು ರೂ. 1,29,999 ಬೆಲೆ ಹೊಂದಿದ್ದು, ಅತ್ಯತ್ತಮ ಕಾರ್ಯಕ್ಷಮತೆ, ಗರಿಷ್ಠ ಮೈಲೇಜ್, ಪ್ರೀಮಿಯಂ ಫೀಚರ್ಸ್ ಮತ್ತು ಬಜೆಟ್ ಬೆಲೆಯು ಹೊಸ ಸ್ಕೂಟರ್ ಆಯ್ಕೆ ಮೌಲ್ಯವನ್ನು ಹೆಚ್ಚಿಸಿವೆ.

ಕಾಯುವಿಕೆ ಅಂತ್ಯ- ಎಸ್1 ಮತ್ತು ಎಸ್1 ಪ್ರೊ ಸ್ಕೂಟರ್ ವಿತರಣೆಗೆ ಸಿದ್ದವಾದ ಓಲಾ ಎಲೆಕ್ಟ್ರಿಕ್

ಓಲಾ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಕುರಿತಾದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಉಪಯಕ್ತ ಮಾಹಿತಿಯುಳ್ಳ Ola Electric App ಕೂಡಾ ಅಭಿವೃದ್ದಿಪಡಿಸಿದ್ದು, ಹೊಸ ಆ್ಯಪ್ ಮೂಲಕ ವಾಹನ ಖರೀದಿ, ವಿತರಣೆ, ಗ್ರಾಹಕ ಸೇವೆ, ಇನ್ಸುರೆನ್ಸ್, ಮೌಲ್ಯ ವರ್ಧಿತ ಸೇವೆಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.

ಕಾಯುವಿಕೆ ಅಂತ್ಯ- ಎಸ್1 ಮತ್ತು ಎಸ್1 ಪ್ರೊ ಸ್ಕೂಟರ್ ವಿತರಣೆಗೆ ಸಿದ್ದವಾದ ಓಲಾ ಎಲೆಕ್ಟ್ರಿಕ್

ಇನ್ನು ಓಲಾ ಸ್ಕೂಟರ್‌ಗಳ ತಾಂತ್ರಿಕ ಸೌಲಭ್ಯಗಳ ಬಗೆಗೆ ಹೇಳುವುದಾದರೆ ಆರಂಭಿಕ ಮಾದರಿಯಾದ ಎಸ್1 ವೆರಿಯೆಂಟ್‌‌ನಲ್ಲಿ 2.98kWh ಮತ್ತು ಎಸ್1 ಪ್ರೊ ಮಾದರಿಯಲ್ಲಿ 3.97kWh ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆ ಮಾಡಿದ್ದು, ಪ್ರತಿ ಚಾರ್ಜ್‌ಗೆ ಎಸ್1 ಮಾದರಿಯು ಗರಿಷ್ಠ 121 ಕಿ.ಮೀ ಮೈಲೇಜ್ ಹಿಂದಿರುಗಿಸಿದರೆ ಎಸ್1 ಪ್ರೊ ಮಾದರಿಯು ಪ್ರತಿ ಚಾರ್ಜ್‌ಗೆ 181 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಕಾಯುವಿಕೆ ಅಂತ್ಯ- ಎಸ್1 ಮತ್ತು ಎಸ್1 ಪ್ರೊ ಸ್ಕೂಟರ್ ವಿತರಣೆಗೆ ಸಿದ್ದವಾದ ಓಲಾ ಎಲೆಕ್ಟ್ರಿಕ್

ಎಸ್1 ಮಾದರಿಯು ಗಂಟೆಗೆ 90 ಕಿ.ಮೀ ಟಾಪ್ ಸ್ಪೀಡ್‌ ಹೊಂದಿದ್ದರೆ ಎಸ್1 ಪ್ರೊ ಮಾದರಿಯು ಪ್ರತಿ ಗಂಟೆಗೆ 115ಕಿ.ಮೀ ಟಾಪ್ ಸ್ಪೀಡ್‌ ಹೊಂದಿದ್ದು, ಎಸ್1 ಮಾದರಿಯಲ್ಲಿ ನಾರ್ಮಲ್ ಮತ್ತು ಸ್ಪೋರ್ಟ್ ರೈಡ್ ಮೋಡ್‌ಗಳಿದ್ದರೆ ಎಸ್1 ಪ್ರೊ ಮಾದರಿಯಲ್ಲಿ ನಾರ್ಮಲ್, ಸ್ಪೋರ್ಟ್ ಮತ್ತು ಹೈಪರ್ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ.

ಕಾಯುವಿಕೆ ಅಂತ್ಯ- ಎಸ್1 ಮತ್ತು ಎಸ್1 ಪ್ರೊ ಸ್ಕೂಟರ್ ವಿತರಣೆಗೆ ಸಿದ್ದವಾದ ಓಲಾ ಎಲೆಕ್ಟ್ರಿಕ್

ಹಾಗೆಯೇ ಓಲಾ ಇವಿ ಸ್ಕೂಟರ್‌ಗಳು ಅತ್ಯುತ್ತಮ ವಿನ್ಯಾಸದೊಂದಿಗೆ ಗರಿಷ್ಠ ಮಟ್ಟದ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಂಡಿದ್ದು, ಹೊಸ ಸ್ಕೂಟರ್‌ಗಳಲ್ಲಿ ಟ್ವಿನ್ ಪಾಡ್ ಎಲ್ಇಡಿ ಸೆಟ್ಅಪ್, ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಟೈಲ್‌ಲ್ಯಾಂಪ್, ಕೌಂಟ್‌ರ್ಡ್ ಸೀಟ್, ಅಲಾಯ್ ವ್ಹೀಲ್, 36-ಲೀಟರ್ ಸಾಮರ್ಥ್ಯ ಅಂಡರ್ ಸೀಟ್ ಸ್ಪೋರೇಜ್, ರಿಯರ್ ಗ್ರ್ಯಾಬ್ ರೈಲ್ಸ್, ಫ್ರಂಟ್ ಸ್ಟೋರೇಜ್ ಪ್ಯಾಕೇಟ್, ಲಗೇಜ್ ಹುಕ್ ಮತ್ತು ಹತ್ತು ವಿವಿಧ ಬಣ್ಣಗಳ ಆಯ್ಕೆ ಹೊಂದಿದೆ.

ಕಾಯುವಿಕೆ ಅಂತ್ಯ- ಎಸ್1 ಮತ್ತು ಎಸ್1 ಪ್ರೊ ಸ್ಕೂಟರ್ ವಿತರಣೆಗೆ ಸಿದ್ದವಾದ ಓಲಾ ಎಲೆಕ್ಟ್ರಿಕ್

ಹೊಸ ಸ್ಕೂಟರ್‌ಗಳು 1,859 ಎಂಎಂ ಉದ್ದ, 712 ಎಂಎಂ ಅಗಲ, 1,160 ಎಂಎಂ ಎತ್ತರ, 1,359 ಎಂಎಂ ವ್ಹೀಲ್ ಬೆಸ್, 792 ಎಂಎಂ ಸೀಟ್ ಹೈಟ್, 125 ಕೆ.ಜಿ ತೂಕ ಹೊಂದಿದ್ದು, ಮುಂಭಾಗದಲ್ಲಿ ಸಿಂಗಲ್ ಫೋರ್ಕ್ ಸಸ್ಫೆಷನ್ ಮತ್ತು ಹಿಂಬದಿಯಲ್ಲಿ ಮೊನೊ ಶಾಕ್ ಸಸ್ಷೆಷನ್‌ನೊಂದಿಗೆ ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಜೋಡಣೆ ಹೊಂದಿವೆ.

ಕಾಯುವಿಕೆ ಅಂತ್ಯ- ಎಸ್1 ಮತ್ತು ಎಸ್1 ಪ್ರೊ ಸ್ಕೂಟರ್ ವಿತರಣೆಗೆ ಸಿದ್ದವಾದ ಓಲಾ ಎಲೆಕ್ಟ್ರಿಕ್

ಜೊತೆಗೆ ಹೊಸ ಸ್ಕೂಟರ್‌ನಲ್ಲಿ 7-ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಮತ್ತು ಶಟರ್‌ಪ್ರೂಫ್ ಸ್ಕ್ರೀನ್‌ನೊಂದಿಗೆ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆನ್ ಬೋರ್ಡ್ ನ್ಯಾನಿಗೇಷನ್‌ಗಾಗಿ ಇಸಿಮ್ ಇಂಟರ್‌ನೆಂಟ್ ಕನೆಕ್ಟಿವಿಟಿ, ಸ್ಮಾಟ್‌ಫೋರ್ಟ್ ಮೂಲಕ ವಿವಿಧ ತಾಂತ್ರಿಕ ಅಂಶಗಳನ್ನು ನಿಯಂತ್ರಿಸಲು ಕನೆಕ್ಟೆಡ್ ಫೀಚರ್ಸ್ ಸಹ ನೀಡಲಾಗಿದೆ.

ಕಾಯುವಿಕೆ ಅಂತ್ಯ- ಎಸ್1 ಮತ್ತು ಎಸ್1 ಪ್ರೊ ಸ್ಕೂಟರ್ ವಿತರಣೆಗೆ ಸಿದ್ದವಾದ ಓಲಾ ಎಲೆಕ್ಟ್ರಿಕ್

ಇದರೊಂದಿಗೆ ಕಂಪನಿಯು ಡಿಸೆಂಬರ್ 16ರಿಂದಲೇ ಎರಡನೇ ಹಂತದ ಬುಕ್ಕಿಂಗ್ ಪ್ರಕ್ರಿಯೆ ಕೂಡಾ ಆರಂಭಗೊಳ್ಳುವುದಾಗಿ ಓಲಾ ಕಂಪನಿಯು ಮಾಹಿತಿ ನೀಡಿದ್ದು, ಎರಡನೇ ಹಂತದಲ್ಲಿ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಮುಂದಿನ ಎಪ್ರಿಲ್‌ನಿಂದ ಸ್ಕೂಟರ್ ವಿತರಣೆಯಾಗಬಹುದಾಗಿದೆ.

ಕಾಯುವಿಕೆ ಅಂತ್ಯ- ಎಸ್1 ಮತ್ತು ಎಸ್1 ಪ್ರೊ ಸ್ಕೂಟರ್ ವಿತರಣೆಗೆ ಸಿದ್ದವಾದ ಓಲಾ ಎಲೆಕ್ಟ್ರಿಕ್

ಸದ್ಯಕ್ಕೆ ಆಯ್ದ ನಗರಗಳಲ್ಲಿ ಮಾತ್ರ ಟೆಸ್ಟ್ ರೈಡ್ ನಡೆಸುತ್ತಿರುವ ಓಲಾ ಕಂಪನಿಯು ಡಿಸೆಂಬರ್ 16ರಿಂದ ದೇಶದ ಪ್ರಮುಖ ಒಂದು ಸಾವಿರ ನಗರಗಳಲ್ಲಿ ಹೊಸ ಎಸ್1 ಸ್ಕೂಟರ್ ಟೆಸ್ಟ್ ರೈಡ್ ಆರಂಭಗೊಳಿಸುತ್ತಿದ್ದು, ಚಾರ್ಜಿಂಗ್ ನಿಲ್ದಾಣ ಲಭ್ಯತೆ ಆಧರಿಸಿ ವಿವಿಧ ನಗರಗಳಲ್ಲಿ ಸ್ಕೂಟರ್ ವಿತರಣೆಗೆ ಆದ್ಯತೆ ನೀಡಲಿದೆ.

More from DriveSpark

Article Published On: Monday, December 6, 2021, 11:18 [IST]
English summary
Ola s1 s1 pro electric scooter delivery to start from 15th december
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+