ವಿದೇಶಿ ಮಾರುಕಟ್ಟೆಗಳಿಗೂ ಇವಿ ಬೈಕ್ ರಫ್ತು ಆರಂಭಿಸಿದ ಒನ್ ಎಲೆಕ್ಟ್ರಿಕ್

ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದಾಗಿ ಹೈರಾಣಗಿರುವ ವಾಹನ ಸವಾರು ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆಯತ್ತ ಗಮನಹರಿಸಿದ್ದು, ಗ್ರಾಹಕರ ಬೇಡಿಕೆಯೆಂತೆ ಮಾರುಕಟ್ಟೆಯಲ್ಲಿ ಹಲವಾರು ಇವಿ ವಾಹನ ಮಾದರಿಗಳು ಭಾರೀ ಬೇಡಿಕೆ ಪಡೆದುಕೊಳ್ಳುತ್ತಿವೆ.

ವಿದೇಶಿ ಮಾರುಕಟ್ಟೆಗಳಿಗೂ ಇವಿ ಬೈಕ್ ರಫ್ತು ಆರಂಭಿಸಿದ ಒನ್ ಎಲೆಕ್ಟ್ರಿಕ್

ಮೇಕ್ ಇನ್ ಇಂಡಿಯಾ ಅಭಿಯಾನದಡಿ ಒನ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಕಂಪನಿಯು ಕೂಡಾ ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಕ್ರಿಡನ್ ಎನ್ನುವ ಹೈ ಸ್ಪೀಡ್ ಎಲೆಕ್ಟ್ರಿಕ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡುವ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ಎಲೆಕ್ಟ್ರಿಕ್ ಬೈಕ್ ಮಾದರಿಯನ್ನು ಕೇವಲ ಭಾರತದಲ್ಲಿ ಮಾತ್ರ ವಿದೇಶಿ ಮಾರುಕಟ್ಟೆಗಳಿಗೂ ರಫ್ತು ಆರಂಭಿಸಿದೆ.

ವಿದೇಶಿ ಮಾರುಕಟ್ಟೆಗಳಿಗೂ ಇವಿ ಬೈಕ್ ರಫ್ತು ಆರಂಭಿಸಿದ ಒನ್ ಎಲೆಕ್ಟ್ರಿಕ್

ಒನ್ ಎಲೆಕ್ಟ್ರಿಕ್ ಕಂಪನಿಯು ತನ್ನ ಜನಪ್ರಿಯ ಕ್ರಿಡೆನ್ ಮೋಟಾರ್‌ಸೈಕಲ್‌ನ ಮೊದಲ ಘಟಕವನ್ನು ಕೀನ್ಯಾಕ್ಕೆ ರಫ್ತುಗೊಳಿಸಲಾಗಿದ್ದು, ಶೀಘ್ರದಲ್ಲೇ ಆಫ್ರಿಕಾ ಪ್ರಮುಖ ನಾಲ್ಕು ರಾಷ್ಟ್ರಗಳಲ್ಲಿ ಕ್ರಿಡೆನ್ ಮಾರಾಟಗೊಳ್ಳಲಿದೆ.

ವಿದೇಶಿ ಮಾರುಕಟ್ಟೆಗಳಿಗೂ ಇವಿ ಬೈಕ್ ರಫ್ತು ಆರಂಭಿಸಿದ ಒನ್ ಎಲೆಕ್ಟ್ರಿಕ್

2022ಕ್ಕೆ ಲ್ಯಾಟಿನ್ ಅಮೆರಿಕ ಮತ್ತು ಯುರೋಪಿನ ಪ್ರಮುಖ ರಾಷ್ಟ್ರಗಳಿಗೆ ಭಾರತದಿಂದಲೇ ಇವಿ ಬೈಕ್ ರಫ್ತು ಯೋಜನೆ ಹೊಂದಿರುವ ಒನ್ ಎಲೆಕ್ಟ್ರಿಕ್ ಕಂಪನಿಯು ಭಾರತದಲ್ಲಿ ಸದ್ಯಕ್ಕೆ ದೆಹಲಿ ಮತ್ತು ನೋಯ್ಡಾದಲ್ಲಿ ವಿತರಣೆ ಆರಂಭಿಸಿದೆ.

ವಿದೇಶಿ ಮಾರುಕಟ್ಟೆಗಳಿಗೂ ಇವಿ ಬೈಕ್ ರಫ್ತು ಆರಂಭಿಸಿದ ಒನ್ ಎಲೆಕ್ಟ್ರಿಕ್

ನೋಯ್ಡಾ ಮೂಲದ ಒನ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಹೊಸ ಕ್ರಿಡನ್ ಬೈಕ್ ಮಾದರಿಯನ್ನು ಸಿದ್ದಪಡಿದ್ದು, 2022 ಜನವರಿ ಮಧ್ಯಂತರದಲ್ಲಿ ಮುಂಬೈ, ಪುಣೆ, ಬೆಂಗಳೂರು, ಚೆನ್ನೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಹೊಸ ಬೈಕ್ ವಿತರಣೆ ಆರಂಭಿಸಲಿದೆ.

ವಿದೇಶಿ ಮಾರುಕಟ್ಟೆಗಳಿಗೂ ಇವಿ ಬೈಕ್ ರಫ್ತು ಆರಂಭಿಸಿದ ಒನ್ ಎಲೆಕ್ಟ್ರಿಕ್

ನಗರ ಪ್ರದೇಶದಲ್ಲಿ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ಈ ಇವಿ ಬೈಕ್ ಅಭಿವೃದ್ಧಿಪಡಿಸಲಾಗಿದ್ದು, ಒನ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಕಂಪನಿಯ ಪ್ರಕಾರ, ಕ್ರಿಡನ್ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 95 ಕಿ.ಮೀ ಹೈ ಸ್ಪೀಡ್ ಹೊಂದಿದೆ.

ವಿದೇಶಿ ಮಾರುಕಟ್ಟೆಗಳಿಗೂ ಇವಿ ಬೈಕ್ ರಫ್ತು ಆರಂಭಿಸಿದ ಒನ್ ಎಲೆಕ್ಟ್ರಿಕ್

ಬೈಕಿನಲ್ಲಿರುವ ಎಲೆಕ್ಟ್ರಿಕ್ ಮೋಟಾರ್‌ ಗರಿಷ್ಠ 165 ಎನ್‌ಎಂ ಟಾರ್ಕ್ ಉತ್ಪಾದಿಸುವ ಮೂಲಕ ನಗರ ಪ್ರದೇಶದಲ್ಲಿನ ಪ್ರಯಾಣಕ್ಕೆ ಸೂಕ್ತವಾಗಿದ್ದು, ಭಾರತದ ರಸ್ತೆಗಳನ್ನು ಗಮನದಲ್ಲಿಟ್ಟುಕೊಂಡು ಈ ಎಲೆಕ್ಟ್ರಿಕ್ ಬೈಕ್ ಅನ್ನು ತಯಾರಿಸಲಾಗಿದೆ.

ವಿದೇಶಿ ಮಾರುಕಟ್ಟೆಗಳಿಗೂ ಇವಿ ಬೈಕ್ ರಫ್ತು ಆರಂಭಿಸಿದ ಒನ್ ಎಲೆಕ್ಟ್ರಿಕ್

ಹೊಸ ಕ್ರಿಡನ್ ಎಲೆಕ್ಟ್ರಿಕ್ ಬೈಕ್ ಮಾದರಿಯು ಭಾರತದಲ್ಲಿ ಎಕ್ಸ್‌ಶೋರೂಂ ದರದಂತೆ ರೂ.1.29 ಲಕ್ಷಗಳಾಗಿದ್ದು, ಟ್ಯಾಕ್ಸಿ ಮಾರುಕಟ್ಟೆಗಾಗಿ ಒನ್ ಎಲೆಕ್ಟ್ರಿಕ್ ಕಂಪನಿಯು ವಿಶೇಷ ಬೈಕ್ ಮಾದರಿಯನ್ನು ಅಭಿವೃದ್ಧಿಪಡಿಸಿದೆ.

ವಿದೇಶಿ ಮಾರುಕಟ್ಟೆಗಳಿಗೂ ಇವಿ ಬೈಕ್ ರಫ್ತು ಆರಂಭಿಸಿದ ಒನ್ ಎಲೆಕ್ಟ್ರಿಕ್

ಕ್ರಿಡನ್ ಮೋಟಾರ್‌ಸೈಕಲ್ ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 120 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಗರಿಷ್ಠ ಮೈಲೇಜ್ ಪಡೆದುಕೊಳ್ಳಲು ಟಾಪ್ ಸ್ಪೀಡ್ ಸರಾಸರಿಯಾಗ 50 ಕಿ.ಮೀ ವೇಗಕ್ಕಿಂತ ಕಡಿಮೆ ವೇಗದಲ್ಲಿ ಚಲಿಸಬೇಕಾಗುತ್ತದೆ.

ವಿದೇಶಿ ಮಾರುಕಟ್ಟೆಗಳಿಗೂ ಇವಿ ಬೈಕ್ ರಫ್ತು ಆರಂಭಿಸಿದ ಒನ್ ಎಲೆಕ್ಟ್ರಿಕ್

ಹೊಸ ಕ್ರಿಡನ್ ಬೈಕ್ ಮಾದರಿಯು ಸಿಯೆಟ್ ನಿರ್ಮಾಣದ ಅಗಲವಾದ ಟೈರ್‌ಗಳು, ಬಲಿಷ್ಠ ಸಸ್ಪೆನ್ಷ್‌ ಹೊಂದಿದ್ದು, ಹೊಸ ಬೈಕ್ ಮಾದರಿಯ ದೀರ್ಘಕಾಲ ಬಾಳಿಕೆ ಬರುವುದಾಗಿ ಕಂಪನಿಯು ಹೊಸ ಬೈಕ್ ಮಾದರಿಯನ್ನು ಭಾರತದಲ್ಲಿ ಮಾತ್ರವಲ್ಲ ಜಾಗತಿಕ ಮಾರುಕಟ್ಟೆಯಲ್ಲೂ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ವಿದೇಶಿ ಮಾರುಕಟ್ಟೆಗಳಿಗೂ ಇವಿ ಬೈಕ್ ರಫ್ತು ಆರಂಭಿಸಿದ ಒನ್ ಎಲೆಕ್ಟ್ರಿಕ್

ಇನ್ನು ಒನ್ ಎಲೆಕ್ಟ್ರಿಕ್ ಕಂಪನಿಯು ಮುಂದಿನ ವರ್ಷ 75 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಮತ್ತೊಂದು ಹೊಸ ಎಲೆಕ್ಟ್ರಿಕ್ ಬೈಕ್ ಮಾದರಿಯನ್ನು ರೂ.1 ಲಕ್ಷಗಳ ಬಜೆಟ್ ನಲ್ಲಿ ಬಿಡುಗಡೆಗೊಳಿಸುವ ಯೋಜನೆಯನ್ನು ಹೊಂದಿದ್ದು, ಇದೀಗ ಕ್ರಿಡನ್ ವಿತರಣೆಯ ಮೇಲೆ ಗಮನಹರಿಸಲಿದೆ.

Article Published On: Saturday, July 10, 2021, 21:03 [IST]
English summary
One Electric Start Kridn Electric Motorcycle Exports From India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+