ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬುಕ್ಕಿಂಗ್ ಆರಂಭಿಸಿದ ರೆಡ್‌ಮೊಟೊ ಎಕ್ಸ್‌ಇವಿ

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಪೆಟ್ರೋಲ್ ಬೆಲೆ ಈಗಾಗಲೇ ಹಲವು ನಗರಗಳಲ್ಲಿ ರೂ.100ರ ಗಡಿ ದಾಟಿದೆ. ಬೆಲೆ ಏರಿಕೆಯಿಂದ ಕಂಗಾಲಾಗಿರುವ ವಾಹನ ಸವಾರರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬುಕ್ಕಿಂಗ್ ಆರಂಭಿಸಿದ ರೆಡ್‌ಮೊಟೊ ಎಕ್ಸ್‌ಇವಿ

ಭಾರತದಲ್ಲಿ ಖ್ಯಾತ ವಾಹನ ತಯಾರಕ ಕಂಪನಿಗಳು ಮಾತ್ರವಲ್ಲದೇ ಸ್ಟಾರ್ಟ್ ಅಪ್ ಕಂಪನಿಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ. ಈಗ ಛತ್ತೀಸ್‌ಗಢ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ರೆಡ್‌ಮೊಟೊ ಎಕ್ಸ್‌ಇವಿ ದೇಶಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ತನ್ನ ಛಾಪು ಮೂಡಿಸಲು ಮೂರು ಹೊಸ ಎಲೆಕ್ಟ್ರಿಕ್ ವಾಹನಗಳ ಬುಕ್ಕಿಂಗ್ ಆರಂಭಿಸುತ್ತಿರುವ ಬಗ್ಗೆ ವರದಿಯಾಗಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬುಕ್ಕಿಂಗ್ ಆರಂಭಿಸಿದ ರೆಡ್‌ಮೊಟೊ ಎಕ್ಸ್‌ಇವಿ

ಕಂಪನಿಯು ಕಳೆದ ಮೇ ತಿಂಗಳಿನಲ್ಲಿ ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈಗ ಈ ಎಲೆಕ್ಟ್ರಿಕ್ ವಾಹನಗಳಿಗಾಗಿ ಬುಕ್ಕಿಂಗ್ ಆರಂಭಿಸಲು ಮುಂದಾಗಿದೆ. ಇಂದಿನಿಂದ ಈ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬುಕ್ಕಿಂಗ್ ಆರಂಭವಾಗಲಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬುಕ್ಕಿಂಗ್ ಆರಂಭಿಸಿದ ರೆಡ್‌ಮೊಟೊ ಎಕ್ಸ್‌ಇವಿ

ರೂ.4,999 ಪಾವತಿಸಿ ಈ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬುಕ್ಕಿಂಗ್ ಮಾಡಬಹುದು. ಬುಕ್ಕಿಂಗ್'ಗಾಗಿ ಕಂಪನಿಯ ಅಧಿಕೃತ ಸೈಟ್‌ನಲ್ಲಿ ಲಿಂಕ್ ಲಭ್ಯವಿರಲಿದೆ ಎಂದು ಕಂಪನಿ ತಿಳಿಸಿದೆ. ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಬುಕ್ಕಿಂಗ್ ಮಾಡಲಾದ ದಿನದಿಂದ 3 ತಿಂಗಳೊಳಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ವಿತರಿಸಲಾಗುವುದು ಎಂದು ಕಂಪನಿ ತಿಳಿಸಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬುಕ್ಕಿಂಗ್ ಆರಂಭಿಸಿದ ರೆಡ್‌ಮೊಟೊ ಎಕ್ಸ್‌ಇವಿ

ಇದರಿಂದ ಕಂಪನಿಯ ಮೊದಲ ಬ್ಯಾಚ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ನವೆಂಬರ್ ವೇಳೆಗೆ ಅವುಗಳ ಮಾಲೀಕರನ್ನು ತಲುಪುವ ನಿರೀಕ್ಷೆಗಳಿವೆ. ಕಂಪನಿಯು ಎರಡು ಎಲೆಕ್ಟ್ರಿಕ್ ಸ್ಕೂಟರ್ ಬಾಗೂ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆಗೊಳಿಸಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬುಕ್ಕಿಂಗ್ ಆರಂಭಿಸಿದ ರೆಡ್‌ಮೊಟೊ ಎಕ್ಸ್‌ಇವಿ

ಆರ್‌ಎಕ್ಸ್ ಹಾಗೂ ಆರ್ 3 ಎಕ್ಸ್ ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಆರ್ 5 ಎಕ್ಸ್ ಹೆಸರಿನ ಎಲೆಕ್ಟ್ರಿಕ್ ಬೈಕ್‌ ಅನ್ನು ಬಿಡುಗಡೆಗೊಳಿಸಲಾಗಿದೆ. ರೆಡ್‌ಮೊಟೊ ಕಂಪನಿಯ ಈ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಭಾರತದ ಕೆಲವು ನಗರಗಳಲ್ಲಿ ಮಾತ್ರ ಲಭ್ಯವಿರಲಿವೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬುಕ್ಕಿಂಗ್ ಆರಂಭಿಸಿದ ರೆಡ್‌ಮೊಟೊ ಎಕ್ಸ್‌ಇವಿ

ರೆಡ್‌ಮೊಟೊ ಎಕ್ಸ್‌ಇವಿ ಎಲೆಕ್ಟ್ರಿಕ್ ವಾಹನಗಳು ಬೆಂಗಳೂರು, ಚೆನ್ನೈ, ಪುಣೆ, ನೋಯ್ಡಾ, ಪ್ರಯಾಗರಾಜ್, ಲಕ್ನೋ, ಜೈಪುರ, ಇಂದೋರ್, ಭುವನೇಶ್ವರ, ಭೋಪಾಲ್, ಬಿಲಾಸ್ಪುರ್, ರಾಂಚಿ, ರಾಯ್‌ಪುರ, ಗುವಾಹಟಿ ಹಾಗೂ ನವದೆಹಲಿಯಲ್ಲಿ ಲಭ್ಯವಿರಲಿವೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬುಕ್ಕಿಂಗ್ ಆರಂಭಿಸಿದ ರೆಡ್‌ಮೊಟೊ ಎಕ್ಸ್‌ಇವಿ

ಈ ನಗರಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟದ ನಂತರ ಕಂಪನಿಯು ಟೆಸ್ಟ್ ಡ್ರೈವ್‌ಗಳನ್ನು ಒದಗಿಸುವ ಪ್ರಯತ್ನಗಳನ್ನು ಮಾಡುತ್ತಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಫೇಮ್ 2 ಯೋಜನೆಯಡಿ ನೀಡಲಾಗುವ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬುಕ್ಕಿಂಗ್ ಆರಂಭಿಸಿದ ರೆಡ್‌ಮೊಟೊ ಎಕ್ಸ್‌ಇವಿ

ಸಾಂದರ್ಭಿಕ ಚಿತ್ರ

ಇದರಿಂದ ರೆಡ್‌ಮೊಟೊ ಎಕ್ಸ್‌ಇವಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ನಿರೀಕ್ಷೆಗಳಿವೆ. ಈ ಹಿಂದೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ರೂ.10 ಸಾವಿರ ಸಬ್ಸಿಡಿ ನೀಡಲಾಗುತ್ತಿತ್ತು. ಈಗ ಈ ಮೊತ್ತವನ್ನು ಕೇಂದ್ರ ಸರ್ಕಾರವು ರೂ.15,000ಗಳಿಗೆ ಏರಿಕೆ ಮಾಡಿದೆ.

Most Read Articles

Kannada
English summary
Red Moto EXV electric scooters and bike booking opens from today. Read in Kannada.
Story first published: Friday, July 2, 2021, 9:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X