ಡೀಲರ್ಸ್ ಯಾರ್ಡ್ ತಲುಪಿದ ಹೊಸ Classic 350 ಬೈಕ್ ಆನ್ ರೋಡ್ ದರ ಮಾಹಿತಿ ಬಹಿರಂಗ

Royal Enfield ಕಂಪನಿಯು 2021ರ Classic 350 ಬೈಕ್ ಆವೃತ್ತಿಯನ್ನು ನ್ಯೂ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕ್ಲಾಸಿಕ್ ಬೈಕ್ ಮಾದರಿಯು ಹಲವಾರು ಹೊಸ ವಿನ್ಯಾಸ ಮತ್ತು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬಿಡುಗಡೆಗೊಂಡಿದೆ.

ಡೀಲರ್ಸ್ ಯಾರ್ಡ್ ತಲುಪಿದ ಹೊಸ Classic 350 ಬೈಕ್ ಆನ್ ರೋಡ್ ದರ ಮಾಹಿತಿ ಬಹಿರಂಗ

Classic 350 ನ್ಯೂ ಜನರೇಷನ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಮಾರುಕಟ್ಟೆ ಪ್ರವೇಶಿಸಿದ್ದು, ಶೀಘ್ರದಲ್ಲೇ ಹೊಸ ಬೈಕ್ ವಿತರಣೆಗೆ Royal Enfield ಕಂಪನಿಯು ಸಿದ್ದತೆ ನಡೆಸಿದೆ. ಹೊಸ ಬೈಕ್ ಮಾದರಿಯು ಅಧಿಕೃತ ಡೀಲರ್ಸ್ ಯಾರ್ಡ್‌ಗಳಲ್ಲಿ ಸ್ಟಾಕ್ ಮಾಡಲಾಗುತ್ತಿದ್ದು, ಹೊಸ ಬೈಕಿನ ಆನ್‌ರೋಡ್ ದರ ಮಾಹಿತಿಯು ಡ್ರೈವ್‌ಸ್ಪಾರ್ಕ್ ತಂಡಕ್ಕೆ ಲಭ್ಯವಾಗಿದೆ.

ಡೀಲರ್ಸ್ ಯಾರ್ಡ್ ತಲುಪಿದ ಹೊಸ Classic 350 ಬೈಕ್ ಆನ್ ರೋಡ್ ದರ ಮಾಹಿತಿ ಬಹಿರಂಗ

ಹೊಸ Classic 350 ಮಾದರಿಯು ಹಳೆಯ ಆವೃತ್ತಿಗಳಿಂತಲೂ ಸಾಕಷ್ಟು ಬದಲಾವಣೆಯೊಂದಿಗೆ ವಿವಿಧ ಮಾದರಿಗಳಿಗೆ ಅನುಗುಣವಾಗಿ ರೂ.10 ಸಾವಿರದಿಂದ ರೂ. 15 ಸಾವಿರದಷ್ಟು ದುಬಾರಿಯಾಗಿದ್ದು, ಬೆಲೆ ಹೆಚ್ಚಳಕ್ಕೆ ಅನುಗುಣವಾಗಿ ಹೊಸ ಬೈಕಿನಲ್ಲಿ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿದೆ.

ಡೀಲರ್ಸ್ ಯಾರ್ಡ್ ತಲುಪಿದ ಹೊಸ Classic 350 ಬೈಕ್ ಆನ್ ರೋಡ್ ದರ ಮಾಹಿತಿ ಬಹಿರಂಗ

ಬೈಕಿನಲ್ಲಿರುವ ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಹೊಸ ಬೈಕ್ ಮಾದರಿಯು ಒಟ್ಟು ಐದು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಆರಂಭಿಕ ಮಾದರಿಯು ಆನ್ ರೋಡ್ ಪ್ರಕಾರ ಆರಂಭಿಕವಾಗಿ ರೂ. 2.07 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 2.40 ಲಕ್ಷ ಬೆಲೆ(ನಗರಗಳಿಗೆ ಅನುಗುಣವಾಗಿ ಬದಲಾಗಲಿದೆ) ಹೊಂದಿದೆ.

ಹೊಸ ಬೈಕ್‌ ದರವು ಎಕ್ಸ್‌ಶೋರೂಂ ದರಕ್ಕಿಂತ ವಿವಿಧ ಮಾದರಿಗಳಿಗೆ ಅನುಗುಣವಾಗಿ ಆನ್ ರೋಡ್ ದರವು ರೂ. 25 ಸಾವಿರದಷ್ಟು ಹೆಚ್ಚುವರಿ ಇರಲಿದ್ದು, ಇದರಲ್ಲಿ ಟಾಪ್ ಎಂಡ್ ಮಾದರಿಯ ಮೇಲೆ ರೂ. 16,777 ಆರ್‌ಟಿಒ ನೋಂದಣಿ ಶುಲ್ಕ ಮತ್ತು ರೂ. 8,787 ವಾಹನ ವಿಮೆ ಒಳಗೊಂಡಿರುತ್ತದೆ.

ಡೀಲರ್ಸ್ ಯಾರ್ಡ್ ತಲುಪಿದ ಹೊಸ Classic 350 ಬೈಕ್ ಆನ್ ರೋಡ್ ದರ ಮಾಹಿತಿ ಬಹಿರಂಗ

ನ್ಯೂ ಜನರೇಷನ್ ಮಾದರಿಯನ್ನು ಮಾರ್ಡನ್ ರೆಟ್ರೊ ವಿನ್ಯಾಸದೊಂದಿಗೆ ಅಭಿವೃದ್ದಿಗೊಳಿಸಿರುವ Royal Enfield ಕಂಪನಿಯು ಹೊಸ ಬೈಕಿ ಪ್ರತಿಯೊಂದು ತಾಂತ್ರಿಕ ಅಂಶಗಳನ್ನು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಉನ್ನತೀಕರಿಸಿದೆ.

ಡೀಲರ್ಸ್ ಯಾರ್ಡ್ ತಲುಪಿದ ಹೊಸ Classic 350 ಬೈಕ್ ಆನ್ ರೋಡ್ ದರ ಮಾಹಿತಿ ಬಹಿರಂಗ

ರೆಡ್‌ಡಿಚ್, ಹಾಲ್ಕೈನ್, ಸಿಗ್ನಲ್ಸ್, ಡಾರ್ಕ್ ಮತ್ತು ಕ್ರೋಮ್ ಎಂಬ ಐದು ವೆರಿಯೆಂಟ್ ಮತ್ತು ಹನ್ನೊಂದು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿರುವ ಹೊಸ Classic 350 ಮಾದರಿಯು ಹೊಸದಾಗಿ ಬಿಡುಗಡೆಯಾಗಿರುವ Meteor 350 ಮಾದರಿಯಿಂದಲೂ ಕೆಲವು ತಾಂತ್ರಿಕ ಅಂಶಗಳನ್ನು ಎರವಲು ಪಡೆದುಕೊಂಡಿದೆ.

ಡೀಲರ್ಸ್ ಯಾರ್ಡ್ ತಲುಪಿದ ಹೊಸ Classic 350 ಬೈಕ್ ಆನ್ ರೋಡ್ ದರ ಮಾಹಿತಿ ಬಹಿರಂಗ

ಹೊಸ Classic 350 ಬೈಕ್ ಮಾದರಿಯಲ್ಲಿ ಸಸ್ಷೆಂಷನ್ ಮತ್ತು ಬ್ರೇಕಿಂಗ್ ಸೌಲಭ್ಯವನ್ನು ಸಂಪೂರ್ಣವಾಗಿ ಬದಲಾವಣೆಗೊಂಡಿದ್ದು, ಹೊಸ ಬೈಕಿನಲ್ಲಿ ಇದೀಗ ಫ್ಯೂಲ್ ಗೇಜ್ ಮತ್ತು ಟ್ರಿಪ್ಪರ್ ನ್ಯಾವಿಗೇಷನ್ ಸೌಲಭ್ಯವು ಸುಲಭ ಪ್ರಯಾಣಕ್ಕೆ ಸಹಕಾರಿಯಾಗಿವೆ.

ಡೀಲರ್ಸ್ ಯಾರ್ಡ್ ತಲುಪಿದ ಹೊಸ Classic 350 ಬೈಕ್ ಆನ್ ರೋಡ್ ದರ ಮಾಹಿತಿ ಬಹಿರಂಗ

Royal Enfield ಕಂಪನಿಯು Meteor 350 ಮಾದರಿಯಲ್ಲಿನ 349 ಸಿಸಿ SOHC ಎಂಜಿನ್ ಬಳಕೆ ಮಾಡಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 19.1 ಬಿಎಚ್‌ಪಿ ಮತ್ತು 28 ಎನ್ಎಂ ಟಾರ್ಕ್ ಉತ್ಪಾದನಾ ವೈಶಿಷ್ಟ್ಯತೆ ಹೊಂದಿರುವ ಹೊಸ ಬೈಕ್ ಅತ್ಯುತ್ತಮ ಹ್ಯಾಂಡ್ಲಿಂಗ್ ಪಡೆದುಕೊಂಡಿದೆ.

ಡೀಲರ್ಸ್ ಯಾರ್ಡ್ ತಲುಪಿದ ಹೊಸ Classic 350 ಬೈಕ್ ಆನ್ ರೋಡ್ ದರ ಮಾಹಿತಿ ಬಹಿರಂಗ

ಹೊಸ ಬೈಕಿನಲ್ಲಿ ಈ ಹಿಂದಿನ 346 ಸಿಸಿ UCE ಎಂಜಿನ್ ತೆಗೆದುಹಾಕಿರುವ Royal Enfield ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಎಂಜಿನ್ ಜೋಡಣೆ ಮಾಡಿದ್ದು, ಈ ಹಿಂದಿನ ಮಾದರಗಳಲ್ಲಿ ಇದ್ದ ವೈಬ್ರೆಷನ್ ಪ್ರಮಾಣವು ಗಣನೀಯವಾಗಿ ಸುಧಾರಣೆಯಾಗಿದೆ.

ಡೀಲರ್ಸ್ ಯಾರ್ಡ್ ತಲುಪಿದ ಹೊಸ Classic 350 ಬೈಕ್ ಆನ್ ರೋಡ್ ದರ ಮಾಹಿತಿ ಬಹಿರಂಗ

ಎಲೆಕ್ಟ್ರಾನಿಕ್ಸ್ ಸೌಲಭ್ಯಗಳು ಬೈಕ್ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸಲಿದ್ದು, ಹೊಸ ಮಾದರಿಯ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಸೌಲಭ್ಯವನ್ನು ಜೋಡಣೆ ಮಾಡಲಾಗಿದೆ. ಎಲ್‌ಸಿಡಿ ಜೊತೆ ಪ್ರತ್ಯೇಕವಾದ ಫ್ಯೂಲ್ ಗೇಜ್ ಮತ್ತು ಟ್ರಿಪ್ಲರ್ ಮೀಟರ್ ನೀಡಲಾಗಿದ್ದು, Meteor 350 ಮಾದರಿಯಲ್ಲಿರುವಂತೆ ಪ್ರತ್ಯೇಕವಾದ ಟ್ವಿನ್ ಪಾಡ್ ನೀಡದೆ ಇಂಟ್ರಾಗ್ರೆಟೆಡ್ ಮಾಡಲಾಗಿದೆ.

ಡೀಲರ್ಸ್ ಯಾರ್ಡ್ ತಲುಪಿದ ಹೊಸ Classic 350 ಬೈಕ್ ಆನ್ ರೋಡ್ ದರ ಮಾಹಿತಿ ಬಹಿರಂಗ

ಟಾಪ್ ಎಂಡ್ ಮಾದರಿಯಲ್ಲಿ ಮಾತ್ರವೇ ಕಂಪನಿಯು ಟ್ರಿಪ್ಪರ್ ಮೀಟರ್ ಅನ್ನು ಜೋಡಣೆ ಮಾಡಿದ್ದು, ಈ ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಮೂಲಕ ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಡೀಲರ್ಸ್ ಯಾರ್ಡ್ ತಲುಪಿದ ಹೊಸ Classic 350 ಬೈಕ್ ಆನ್ ರೋಡ್ ದರ ಮಾಹಿತಿ ಬಹಿರಂಗ

ಇನ್ನು ಹೊಸ ಬೈಕಿನಲ್ಲಿ ಕಂಪನಿಯು ಎಲ್ಇಡಿ ಬದಲಾಗಿ ಹಾಲೊಜೆನ್ ಬಲ್ಬ್ ಬಳಕೆ ಮಾಡಿದ್ದು, ಹೆಡ್‌ಲ್ಯಾಂಪ್ ಮಾತ್ರವಲ್ಲ ಟೈಲ್ ಲ್ಯಾಂಪ್, ಟರ್ನ್ ಇಂಡಿಕೇಟರ್ ಸಹ ಹಾಲೊಜೆನ್ ಬಲ್ಬ್ ಹೊಂದಿವೆ.

ಡೀಲರ್ಸ್ ಯಾರ್ಡ್ ತಲುಪಿದ ಹೊಸ Classic 350 ಬೈಕ್ ಆನ್ ರೋಡ್ ದರ ಮಾಹಿತಿ ಬಹಿರಂಗ

ಹೊಸ ಬೈಕಿನಲ್ಲಿರುವ ಸ್ವಿಚ್ ಗೇರ್ ಸೌಲಭ್ಯವನ್ನು Meteor 350 ಮಾದರಿಯಿಂದ ಎರವಲು ಪಡೆದುಕೊಳ್ಳಲಾಗಿದ್ದು, ಕಂಪನಿಯು ಹೊಸ ಬೈಕ್ ಮಾದರಿಯನ್ನು ಸಿಂಗಲ್ ಕ್ರೆಡಲ್ ಫ್ರೆಮ್ ಬದಲಾಗಿ ಡ್ಯುಯಲ್ ಡೌನ್ ಟ್ಯೂಬ್ ಚಾರ್ಸಿ‌ಯೊಂದಿಗೆ ಅಭಿವೃದ್ದಿಗೊಳಿಸಿದೆ.

ಡೀಲರ್ಸ್ ಯಾರ್ಡ್ ತಲುಪಿದ ಹೊಸ Classic 350 ಬೈಕ್ ಆನ್ ರೋಡ್ ದರ ಮಾಹಿತಿ ಬಹಿರಂಗ

ಚಾರ್ಸಿಸ್ ಬದಲಾವಣೆಯಿಂದಾಗಿ ಬೈಕ್ ರೈಡಿಂಗ್ ಹೊಸ ಅನುಭವ ನೀಡಲಿದ್ದು, 41 ಎಂಎಂ ಟೆಲಿಸ್ಕೊಪಿಕ್ ಫೋರ್ಕ್‌ನೊಂದಿಗೆ 170 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ. ಹಾಗೆಯೇ ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ಜೋಡಣೆ ಮಾಡಿದ್ದು, ಡ್ಯುಯಲ್ ಚಾನೆಲ್ ಎಬಿಎಸ್, ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಸೌಲಭ್ಯಗಳನ್ನು ನೀಡಲಾಗಿದೆ.

Article Published On: Thursday, September 2, 2021, 20:30 [IST]
English summary
Royal enfield classic 350 arrived at dealership on road price booking delivery details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+