ಆಗಸ್ಟ್ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ Royal Enfield Himalayan ಬೈಕ್

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಭಾರತೀಯ ಮಾರುಕಟ್ಟೆಯ ಜನಪ್ರಿಯ ಅಡ್ವೆಂಚರ್-ಟೂರರ್ ಬೈಕ್‌ಗಳಲ್ಲಿ ಒಂದಾಗಿದೆ. ಇನ್ನು ಈ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಅತ್ಯಂತ ಅಗ್ಗದ ಅಡ್ವೆಂಚರ್ ಟೂರರ್ ಬೈಕ್‌ಗಳಲ್ಲಿ ಒಂದಾಗಿದೆ. ಅಲ್ಲದೇ ಇದು ಅತ್ಯಂತ ಸಮರ್ಥ ಬೈಕ್ ಆಗಿದೆ.

ಆಗಸ್ಟ್ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ Royal Enfield Himalayan ಬೈಕ್

ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಅಡ್ವೆಂಚರ್ ಬೈಕ್‌ಗಳ ಬೇಡಿಕೆ ಹೆಚ್ಚಾಗುತ್ತಿದೆ. ಕಳೆದ ತಿಂಗಳು ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮಾದರಿಯ 2,770 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ತಿಂಗಳಲ್ಲಿ ಹಿಮಾಲಯನ್ ಮಾದರಿಯ ಕೇವಲ 530 ಯುನಿಟ್‌ಗಳು ಮಾರಾಟವಾಗಿತ್ತು. ಹಿಮಾಲಯನ್ ಕಳೆದ ತಿಂಗಳು 423 ಶೇಕಡಾ ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ ಬೆಳವಣಿಗೆಯನ್ನು ಸಾಧಿಸಿದೆ, ಕಳೆದ ತಿಂಗಳು ವಾರ್ಷಿಕ ಮಾರಾಟದಲ್ಲಿ ಬೆಳವಣಿಗೆಯನ್ನು ದಾಖಲಿಸಿದ ಏಕೈಕ ರಾಯಲ್ ಎನ್‍ಫೀಲ್ಡ್ ಬೈಕ್ ಹಿಮಾಲಯನ್ ಆಗಿದೆ.

ಆಗಸ್ಟ್ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ Royal Enfield Himalayan ಬೈಕ್

2021ರ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನ ಬಗ್ಗೆ ಹೇಳುವುದಾದರೆ, ಇದು ಸ್ಟ್ಯಾಂಡರ್ಡ್, ಡ್ಯುಯಲ್ ಟೋನ್ ಮತ್ತು ಪೈನ್ ಗ್ರೀನ್ ಮತ್ತು ಗ್ರಾನೈಟ್ ಬ್ಲ್ಯಾಕ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಈ ಬೈಕಿನಲ್ಲಿ 'ಟ್ರಿಪ್ಪರ್ ನ್ಯಾವಿಗೇಷನ್' ಅನ್ನು ಸಹ ಒಳಗೊಂಡಿದೆ. ಹೊಸ ಸರಳ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಪಾಡ್ ಅನ್ನು ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಜೊತೆಗೆ ಅಳವಡಿಸಲಾಗಿದೆ.

ಆಗಸ್ಟ್ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ Royal Enfield Himalayan ಬೈಕ್

ಈ ಟ್ರಿಪ್ಪರ್ ನ್ಯಾವಿಗೇಷನ್ ಸಿಸ್ಟಂ ಬೈಕ್ ರೈಡಿಂಗ್ ವೇಳೆ ಸವಾರನಿಗೆ ಸಾಕಷ್ಟು ಸಹಕಾರಿಯಾಗಿರುತ್ತದೆ. ಈ ರಾಯಲ್ ಎನ್‌ಫೀಲ್ಡ್ ಎಕ್ಸ್‌ಪ್ಲೊರ್ ಆ್ಯಂಡ್ ಪ್ಲ್ಯಾನ್ ರೈಡರ್ ಆ್ಯಪ್ ಮೂಲಕ ಟ್ರಿಪ್ರರ್ ಮೀಟರ್‌ಗೆ ಕನೆಕ್ಟ್ ಮಾಡಬಹುದಾಗಿದೆ. ಇದು ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಸೇವೆಯನ್ನು ಒದಗಿಸಲಿದೆ.

ಆಗಸ್ಟ್ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ Royal Enfield Himalayan ಬೈಕ್

ಈ ಹಿಮಾಲಯನ್ ಬೈಕಿನಲ್ಲಿ ಅದೇ 411ಸಿಸಿ ಸಿಂಗಲ್-ಸಿಲಿಂಡರ್ ಎಸ್‌ಒಹೆಚ್‌ಸಿ ಏರ್-ಕೂಲ್ಡ್ ಎಂಜಿನ್ ಅನ್ನು ಆಳವಡಿಸಲಾಗಿದೆ. ಈ ಎಂಜಿನ್ 24.3 ಬಿಹೆಚ್‍ಪಿ ಪವರ್ ಮತ್ತು 32 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಆಗಸ್ಟ್ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ Royal Enfield Himalayan ಬೈಕ್

ಈ ಹೊಸ ಹಿಮಾಲಯನ್ ಬೈಕ್ ಅದರ ಹಿಂದಿನ ಮಾದರಿಗಳಂತೆಯೇ ಅದೇ ವಿನ್ಯಾಸ ಮತ್ತು ಸಿಲೂಯೆಟ್ ಅನ್ನು ಮುಂದಕ್ಕೆ ಸಾಗಿಸಿದ್ದು, ಆದರೆ ಕೆಲವು ಸಣ್ಣ ನವೀಕರಣಗಳಿವೆ. ಇವುಗಳಲ್ಲಿ ನವೀಕರಿಸಿದ ಸೀಟ್ ಸೇರಿವೆ. ಇದು ಈಗ ಉತ್ತಮ ಕಂಫರ್ಟ್ ಅನ್ನು ನೀಡುತ್ತದೆ. ವಿಶೇಷವಾಗಿ ಲಾಂಗ್ ರೈಡ್ ತೆರಳುವಾಗ ಇದು ಹೆಚ್ಚು ಸಹಕಾರಿಯಾಗಿರುತ್ತದೆ. ಇನ್ನು ನವೀಕರಿಸಿದ ಹಿಂಭಾಗದ ಕ್ಯಾರಿಯರ್ ಮತ್ತು ಮುಂಭಾಗ ಮೆಟಲ್ ಫ್ರೇಮ್ ಮತ್ತು ಹೊಸ ವಿಂಡ್‌ಸ್ಕ್ರೀನ್ ಸೇರ್ಪಡೆಯಾಗಿದೆ.

ಆಗಸ್ಟ್ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ Royal Enfield Himalayan ಬೈಕ್

2021ರ ಹಿಮಾಲಯನ್ ಆಫ್-ರೋಡರ್ ಹೊಸ ಪೈನ್ ಗ್ರೀನ್, ಗ್ರಾನೈಟ್ ಬ್ಲ್ಯಾಕ್ (ಡ್ಯುಯಲ್-ಟೋನ್ ವಿಥ್ ಮ್ಯಾಟ್ & ಗ್ಲೋಸ್ ಬ್ಲ್ಯಾಕ್) ಮತ್ತು ಮಿರಾಜ್ ಸಿಲ್ವರ್‌ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿದೆ. ಇದರೊಂದಿಗೆ ಪ್ರಸ್ತುತ ಇರುವ ಗ್ರೇವೆಲ್ ಗ್ರೇ, ರಾಕ್ ರೆಡ್ ಮತ್ತು ಲೇಕ್ ಬ್ಲೂ ಬಣ್ಣಗಳಲ್ಲಿಯು ಲಭ್ಯವಿದೆ.

ಆಗಸ್ಟ್ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ Royal Enfield Himalayan ಬೈಕ್

ಇನ್ನು 2021ರ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಸಸ್ಪಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 41ಎಂಎಂ ಟೆಲಿಸ್ಕೋಪಿಕ್ ಸೆಟಪ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ಹೊಂದಿದೆ. ಇನ್ನು ಇದರ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 300ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 240ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇನ್ನು ಸ್ಟ್ಯಾಂಡರ್ಡ್ ಆಗಿ 'ಸ್ವಿಚ್ ಮಾಡಬಹುದಾದ ಎಬಿಎಸ್' ಅನ್ನು ಹೊಂದಿದೆ.

ಆಗಸ್ಟ್ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ Royal Enfield Himalayan ಬೈಕ್

ಇನ್ನು ರಾಯಲ್ ಎನ್‍ಫೀಲ್ಡ್ ತನ್ನ ಹಿಮಾಲಯನ್ ಅಡ್ವೆಂಚರ್ ಬೈಕಿನ ಹೊಸ ವೆರಿಯೆಂಟ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹಿಮಾಲಯನ್ ಬೈಕಿನ ಆನ್-ರೋಡ್-ರೋಡ್ ಆಧಾರಿತ ಹೊಸ ವೆರಿಯೆಂಟ್ ಇತ್ತೀಚೆಗೆ ಸ್ಪಾಟ್ ಟೆಸ್ಟ್ ನಡೆಸಿದೆ.

ಆಗಸ್ಟ್ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ Royal Enfield Himalayan ಬೈಕ್

ಹಿಮಾಲಯನ್ ಬೈಕಿನ ಹೊಸ ವೆರಿಯೆಂಟ್ ಸ್ಪಾಟ್ ಟೆಸ್ಟ್ ಅನ್ನು ನಡೆಸುವ ಸ್ಪೈ ಚಿತ್ರಗಳು ಇತ್ತೀಚೆಗೆ ಬಹಿರಂಗವಾಗಿವೆ. ಚಿತ್ರದಲ್ಲಿ ಹಲವಾರು ಬದಲಾವಣೆಗಳನ್ನು ನಾವು ಗಮನಿಸಬಹುದು. ಇದು ಸಣ್ಣ ಮುಂಭಾಗದ ವ್ಹೀಲ್, ಮುಂಭಾಗದ ಜೆರ್ರಿ-ಕ್ಯಾನ್ ಹೋಲ್ಡರ್ ಫ್ರೇಮ್ ಕಾಣುವುದಿಲ್ಲ, ಫೋರ್ಕ್ ಗೇಟರ್ಸ್, ಎತ್ತರದ ವಿಂಡ್‌ಸ್ಕ್ರೀನ್ ಮತ್ತು ಮುಂಭಾಗದ ಮಡ್‌ಗಾರ್ಡ್ ಅನ್ನು ಒಳಗೊಂಡಿದೆ. ಇನ್ನು ಮುಂಭಾಗದ ಫ್ರೇಮ್ ಬದಲಿಸಿದೆ.

ಆಗಸ್ಟ್ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ Royal Enfield Himalayan ಬೈಕ್

ಈ ಬದಲಾವಣೆಗಳ ಹೊರತಾಗಿ, ಹೊಸ ರಾಯಲ್ ಎನ್‍ಫೀಲ್ಡ್ ಹಿಮಾಲಯದ ಬೈಕಿನ ಅಡ್ವೆಂಚರ್ ಆವೃತ್ತಿಯಿಂದ ತನ್ನ ಮೆಕ್ಯಾನಿಕಲ್ ಮತ್ತು ಇತರ ಟ್ರಿಮ್‌ಗಳನ್ನು ಎರವಲು ಪಡೆಯುತ್ತದೆ. ಇನ್ನು ಆನ್-ರೋಡ್ ಆಧಾರಿತ ಮಾದರಿಯಲ್ಲಿ ಎಕ್ಸಾಸ್ಟ್ ಮತ್ತು ಎತ್ತರ ಹ್ಯಾಂಡಲ್‌ಬಾರ್‌ನೊಂದಿಗೆ ನೇರವಾಗಿ ಕುಳಿತುಕೊಳ್ಳುವಂತಹ ಸೀಟ್ ಪೋಷಿಸನ್ ಅನ್ನು ಹೊಂದಿದೆ.ಉಳಿದಂತೆ ಹಿಮಾಲಯದ ಬೈಕಿನ ಹೊಸ ವೆರಿಯೆಂಟ್ ಇತರ ಮಾಹಿತಿಗಳು ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ

ಆಗಸ್ಟ್ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ Royal Enfield Himalayan ಬೈಕ್

ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಜಿ 310 ಜಿಎಸ್ ಹಾಗೂ ಕವಾಸಕಿ ವರ್ಸಿಸ್-ಎಕ್ಸ್ 300, ಕೆಟಿ‍ಎಂ 390 ಅಡ್ವೆಂಚರ್ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

Article Published On: Thursday, September 23, 2021, 14:11 [IST]
English summary
Royal enfield himalayan registers 423 percent sales growth in august 2021 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+