ಡೀಲರ್ಸ್ ಮಟ್ಟದಲ್ಲೂ ಲಭ್ಯವಿರಲಿದೆ Royal Enfield ಮೇಕ್ ಇಟ್ ಯುವರ್ಸ್ ಕಸ್ಟಮೈಜ್ಡ್ ಸೌಲಭ್ಯ

ಬೈಕ್ ಕಸ್ಟಮೈಜ್ಡ್ ಸೌಲಭ್ಯಕ್ಕೆ ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಹರಿದುಬರುತ್ತಿದ್ದು, ಕ್ಲಾಸಿಕ್ ಬೈಕ್ ಮಾರಾಟ ಕಂಪನಿಯಾದ ರಾಯಲ್ ಎನ್‌ಫೀಲ್ಡ್(Royal Enfield) ತನ್ನ ಪ್ರಮುಖ ಬೈಕ್ ಮಾದರಿಗಳಿಗಾಗಿ ಕಸ್ಟಮೈಜ್ಡ್ ಸೌಲಭ್ಯ ತೆರೆಯುವ ಮೂಲಕ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ಡೀಲರ್ಸ್ ಮಟ್ಟದಲ್ಲೂ ಲಭ್ಯವಿರಲಿದೆ Royal Enfield ಮೇಕ್ ಇಟ್ ಯುವರ್ಸ್ ಕಸ್ಟಮೈಜ್ಡ್ ಸೌಲಭ್ಯ

ಹೊಸ ವಾಹನಗಳ ಖರೀದಿ ನಂತರ ಬಹುತೇಕ ಗ್ರಾಹಕರು ತಮ್ಮ ಇಷ್ಟದಂತೆ ಹೊಸ ವಾಹನಗಳನ್ನು ಮತ್ತಷ್ಟು ಆಕರ್ಷಣೆಗೊಳಿಸಲು ಹೆಚ್ಚುವರಿ ಆಕ್ಸೆಸರಿಸ್ ಸೌಲಭ್ಯಗಳನ್ನು ಪಡೆದುಕೊಳ್ಳುವುದು ಸಾಮಾನ್ಯ. ಅದರಲ್ಲೂ ಕ್ಲಾಸಿಕ್ ಬೈಕ್ ಮಾದರಿಯಾಗಿರುವ ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿ ನಂತರ ಕಸ್ಟಮೈಜ್ಡ್‌ಗೆ ಹೆಚ್ಚು ಬೇಡಿಕೆಯಿದ್ದು, ಕಂಪನಿಯೇ ಇದೀಗ ಅಧಿಕೃತವಾಗಿ ಮಾಡಿಫೈ ಸೌಲಭ್ಯಕ್ಕಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರೆದಿದೆ.

ಡೀಲರ್ಸ್ ಮಟ್ಟದಲ್ಲೂ ಲಭ್ಯವಿರಲಿದೆ Royal Enfield ಮೇಕ್ ಇಟ್ ಯುವರ್ಸ್ ಕಸ್ಟಮೈಜ್ಡ್ ಸೌಲಭ್ಯ

ರಾಯಲ್ ಎನ್‌ಫೀಲ್ಡ್ ಕಂಪನಿಯು ತೆರೆದಿರುವ ಎಂಐವೈ(ಮೇಕ್ ಇಟ್ ಯುವರ್ಸ್) ಪ್ಲ್ಯಾಟ್‌ಫಾರ್ಮ್ ಅಡಿ ಹೊಸ ಬೈಕ್ ಖರೀದಿ ವೇಳೆಯೇ ಆನ್‌ಲೈನ್ ಕಸ್ಟಮೈಜ್ಡ್ ಮಾಡಬಹುದಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಕಂಪನಿಯೇ ಹೊಸ ಬೈಕಿನ ಮಾಡಿಫೈ ಸೌಲಭ್ಯಗಳನ್ನು ಸಿದ್ದಪಡಿಸುತ್ತದೆ.

ಡೀಲರ್ಸ್ ಮಟ್ಟದಲ್ಲೂ ಲಭ್ಯವಿರಲಿದೆ Royal Enfield ಮೇಕ್ ಇಟ್ ಯುವರ್ಸ್ ಕಸ್ಟಮೈಜ್ಡ್ ಸೌಲಭ್ಯ

ಇಷ್ಟು ದಿನಗಳ ಕಾಲ ಆನ್‌ಲೈನ್ ಮಾತ್ರ ಮೇಕ್ ಇಟ್ ಯುವರ್ಸ್ ಪ್ಲ್ಯಾಟ್‌ಫಾರ್ಮ್ ಬಳಕೆಗೆ ಅವಕಾಶ ನೀಡಿದ್ದ ಕಂಪನಿಯು ಗ್ರಾಹಕರ ಬೇಡಿಕೆ ಡೀಲರ್ಸ್‌ಗಳಲ್ಲಿ ಆಕ್ಸೆಸರಿಸ್ ಸೌಲಭ್ಯಗಳನ್ನು ಪರಿಚಯಿಸಿದ್ದು, ಗ್ರಾಹಕರು ಆಕ್ಸೆಸರಿಸ್‌ಗಳನ್ನು ನೋಡಿದ ನಂತರ ಜೋಡಣೆ ಮಾಡಿಕೊಳ್ಳಲು ಅವಕಾಶ ನೀಡಿದೆ.

ಡೀಲರ್ಸ್ ಮಟ್ಟದಲ್ಲೂ ಲಭ್ಯವಿರಲಿದೆ Royal Enfield ಮೇಕ್ ಇಟ್ ಯುವರ್ಸ್ ಕಸ್ಟಮೈಜ್ಡ್ ಸೌಲಭ್ಯ

ಮೇಕ್ ಇಟ್ ಯುವರ್ಸ್ ಪ್ಲ್ಯಾಟ್‌ಫಾರ್ಮ್‌ನಲ್ಲಿ ಗ್ರಾಹಕರು ಬೈಕ್ ಖರೀದಿಗೆ ಬುಕ್ಕಿಂಗ್ ಸಲ್ಲಿಸಿದ ನಂತರ ಆಫ್ಟರ್ ಮಾರ್ಕೆಟ್ ಮಾಡಿಫೈ ಸೌಲಭ್ಯಗಳನ್ನು ಆನ್‌ಲೈನ್ ಮೂಲಕವೇ ನಿಮ್ಮ ನೆಚ್ಚಿನ ಬೈಕಿಗೆ ಜೋಡಿಸುವ ಮೂಲಕ 3ಡಿ ವ್ಯೂ ಮಾಡಬಹುದಾಗಿದ್ದು, ಕಂಪನಿಯ ಮಾಡಿಫೈ ಸೌಲಭ್ಯಗಳು ಇಷ್ಟವಾದಲ್ಲಿ ಮುಂದುವರಿಸಬಹುದು.

ಡೀಲರ್ಸ್ ಮಟ್ಟದಲ್ಲೂ ಲಭ್ಯವಿರಲಿದೆ Royal Enfield ಮೇಕ್ ಇಟ್ ಯುವರ್ಸ್ ಕಸ್ಟಮೈಜ್ಡ್ ಸೌಲಭ್ಯ

ಕಸ್ಟಮೈಜ್ಡ್ ಪ್ಲ್ಯಾಟ್‌ಫಾರ್ಮ್‌ನಲ್ಲಿ ಗ್ರಾಹಕರು ತಮ್ಮ ವಾಹನಗಳಿಗೆ ವಿವಿಧ ಬಣ್ಣಗಳ ಆಯ್ಕೆ, ಎಂಜಿನ್ ಗಾರ್ಡ್, ಕಸ್ಟಮೈಜ್ಡ್ ಜಾಕೆಟ್ ಆಯ್ಕೆಗೆ ಅವಕಾಶ ನೀಡಲಾಗಿದ್ದು, ಕಸ್ಟಮೈಜ್ಡ್ ಸೌಲಭ್ಯಗಳಿಗೆ ಬೆಲೆ ಕೂಡಾ ಆಫ್ಟರ್ ಮಾರ್ಕೆಟ್ ಬೆಲೆಗಳಿಂತಲೂ ಆಕರ್ಷಕವಾಗಿವೆ.

ಡೀಲರ್ಸ್ ಮಟ್ಟದಲ್ಲೂ ಲಭ್ಯವಿರಲಿದೆ Royal Enfield ಮೇಕ್ ಇಟ್ ಯುವರ್ಸ್ ಕಸ್ಟಮೈಜ್ಡ್ ಸೌಲಭ್ಯ

ಇದಲ್ಲದೆ ಗ್ರಾಹಕ ಸೇವೆಗಳನ್ನು ಒಂದೇ ಸೂರಿನಡಿ ಸರಳಗೊಳಿಸಲು ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಿದ್ದು, ಹೊಸ ಆ್ಯಪ್‌ ಮೂಲಕ ಆರ್‌ಇ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ.

ಡೀಲರ್ಸ್ ಮಟ್ಟದಲ್ಲೂ ಲಭ್ಯವಿರಲಿದೆ Royal Enfield ಮೇಕ್ ಇಟ್ ಯುವರ್ಸ್ ಕಸ್ಟಮೈಜ್ಡ್ ಸೌಲಭ್ಯ

ಆರ್‌ಇ ಬಿಡುಗಡೆ ಮಾಡಿರುವ ಎಕ್ಸ್‌ಪ್ಲೊರ್ ಆ್ಯಂಡ್ ಪ್ಲ್ಯಾನ್ ರೈಡರ್ ಆ್ಯಪ್ ಐಎಸ್ಒ ಮತ್ತು ಅಂಡ್ರಾಯಿಡ್ ಎರಡು ಮಾದರಿಯಲ್ಲೂ ಲಭ್ಯವಿದ್ದು, ಆ್ಯಪ್ ಮೂಲಕವೇ ಹೊಸ ದ್ವಿಚಕ್ರ ವಾಹನಗಳಿಗೆ ಬುಕ್ಕಿಂಗ್ ಸಲ್ಲಿಕೆ ಮಾಡುವುದಲ್ಲದೆ ಸರ್ವಿಸ್ ಸ್ಟೆಟಸ್ ಅನ್ನು ಸಹ ತಿಳಿಯಬಹುದಾಗಿದೆ. ಈ ಮೂಲಕ ಗ್ರಾಹಕರ ಸೇವೆಗಳನ್ನು ಸರಳಗೊಳಿಸುತ್ತಿರುವ ರಾಯಲ್ ಎನ್‌ಫೀಲ್ಡ್ ಕಂಪನಿಯು ಕಮ್ಯುನಿಟಿ ರೈಡಿಂಗ್ ಸಹ ಹೆಚ್ಚಿಸುವ ಯೋಜನೆ ಹೊಂದಿದೆ.

ಡೀಲರ್ಸ್ ಮಟ್ಟದಲ್ಲೂ ಲಭ್ಯವಿರಲಿದೆ Royal Enfield ಮೇಕ್ ಇಟ್ ಯುವರ್ಸ್ ಕಸ್ಟಮೈಜ್ಡ್ ಸೌಲಭ್ಯ

ಹೊಸ ಆ್ಯಪ್‌ನಲ್ಲಿ ಲಾಗಿನ್ ಆಗುವ ಮೂಲಕ ಗ್ರಾಹಕರು ಕಂಪನಿಯ ಮಾಹಿತಿ ಜೊತೆಗೆ ಗ್ರಾಹಕರ ಸೇವೆಗಳ ಮಾಹಿತಿಯನ್ನು ಸಂಪೂರ್ಣವಾಗಿ ಪಡೆದುಕೊಳ್ಳಬಹುದಾಗಿದ್ದು, ಗ್ರಾಹಕರ ಸೇವೆಗಳ ಜೊತೆಗೆ ಹೊಸ ವಾಹನ ಬಿಡುಗಡೆ ಮಾಹಿತಿಯೊಂದಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಉತ್ಪನ್ನಗಳ ಬೆಲೆ ಮತ್ತು ಬುಕ್ಕಿಂಗ್ ಮಾಹಿತಿ ನೀಡಲಿದೆ.

ಡೀಲರ್ಸ್ ಮಟ್ಟದಲ್ಲೂ ಲಭ್ಯವಿರಲಿದೆ Royal Enfield ಮೇಕ್ ಇಟ್ ಯುವರ್ಸ್ ಕಸ್ಟಮೈಜ್ಡ್ ಸೌಲಭ್ಯ

ಹಾಗೆಯೇ ಗ್ರಾಹಕರಿಗೆ ಕಾಲಕಾಲಕ್ಕೆ ತಕ್ಕಂತೆ ವಾಹನ ನಿರ್ವಹಣೆ ಮತ್ತು ರೈಡಿಂಗ್ ವೇಳೆ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳ ಬಗೆಗೆ ಆಟೋ ತಜ್ಞರ ಸಲಹೆಗಳನ್ನು ಸಹ ನೀಡಲಿದ್ದು, ಇದಲ್ಲದೆ ಬೈಕ್ ಸರ್ವಿಸ್ ಸ್ಟೆಟಸ್ ತಿಳಿಯಲು ಇದು ಸಾಕಷ್ಟು ಸಹಕಾರಿಯಾಗಿದೆ.

ಡೀಲರ್ಸ್ ಮಟ್ಟದಲ್ಲೂ ಲಭ್ಯವಿರಲಿದೆ Royal Enfield ಮೇಕ್ ಇಟ್ ಯುವರ್ಸ್ ಕಸ್ಟಮೈಜ್ಡ್ ಸೌಲಭ್ಯ

ಬೈಕ್ ಸರ್ವಿಸ್‌ಗೆ ನೀಡಿದ ತಕ್ಷಣವೇ ಸರ್ವಿಸ್ ಐಡಿ ನೀಡಲಿರುವ ಕಂಪನಿಯು ಅದನ್ನು ಆ್ಯಪ್‌ನಲ್ಲೂ ಅಪ್‌ಡೆಟ್ ಮಾಡುತ್ತದೆ. ತದನಂತರ ಸರ್ವಿಸ್ ವಾಹನದ ಸಂಪೂರ್ಣ ಮಾಹಿತಿಯನ್ನು ಆ್ಯಪ್ ಮೂಲಕ ಅಪ್‌ಡೆಟ್ ನೀಡಲಿರುವ ಕಂಪನಿಯು ಸರ್ವಿಸ್ ಅನ್ನು ಹಂತ-ಹಂತವಾಗಿ ಗ್ರಾಹಕರ ಬೇಡಿಕೆ ಅನ್ವಯ ಅಪ್‌ಗ್ರೆಡ್‌ಗೊಳಿಸಲಿದೆ.

ಡೀಲರ್ಸ್ ಮಟ್ಟದಲ್ಲೂ ಲಭ್ಯವಿರಲಿದೆ Royal Enfield ಮೇಕ್ ಇಟ್ ಯುವರ್ಸ್ ಕಸ್ಟಮೈಜ್ಡ್ ಸೌಲಭ್ಯ

ಇನ್ನು ಕಂಪನಿಯು ಹೊಸ ಕ್ಲಾಸಿಕ್ 350 ಬೈಕ್ ಮೂಲಕ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಹೊಸ ಕ್ಲಾಸಿಕ್ 350 ಮಾದರಿಯು ಹಳೆಯ ಆವೃತ್ತಿಗಳಿಂತಲೂ ಸಾಕಷ್ಟು ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಡೀಲರ್ಸ್ ಮಟ್ಟದಲ್ಲೂ ಲಭ್ಯವಿರಲಿದೆ Royal Enfield ಮೇಕ್ ಇಟ್ ಯುವರ್ಸ್ ಕಸ್ಟಮೈಜ್ಡ್ ಸೌಲಭ್ಯ

ಹೊಸ ಬೈಕ್ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.84 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 2.15 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಹೊಸ ಬೈಕಿನಲ್ಲಿ ಕಂಪನಿಯು ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಆಕ್ಸೆಸರಿಸ್ ಪ್ಯಾಕೇಜ್ ಮೂಲಕ ಹೆಚ್ಚುವರಿ ಸೌಲಭ್ಯಗಳನ್ನು ಹೊಂದಬಹುದಾಗಿದೆ.

ಡೀಲರ್ಸ್ ಮಟ್ಟದಲ್ಲೂ ಲಭ್ಯವಿರಲಿದೆ Royal Enfield ಮೇಕ್ ಇಟ್ ಯುವರ್ಸ್ ಕಸ್ಟಮೈಜ್ಡ್ ಸೌಲಭ್ಯ

ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಬೈಕ್ ಮಾದರಿಯಲ್ಲಿ ಮಿಟಿಯೊರ್ 350 ಮಾದರಿಗಾಗಿ ಪರಿಚಯಿಸಿರುವ 349 ಸಿಸಿ SOHC ಎಂಜಿನ್ ಬಳಕೆ ಮಾಡಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 19.1 ಬಿಎಚ್‌ಪಿ ಮತ್ತು 28 ಎನ್ಎಂ ಟಾರ್ಕ್ ಉತ್ಪಾದನಾ ವೈಶಿಷ್ಟ್ಯತೆಯೊಂದಿಗೆ ಅತ್ಯುತ್ತಮ ಹ್ಯಾಂಡ್ಲಿಂಗ್ ಹೊಂದಿದೆ.

ಡೀಲರ್ಸ್ ಮಟ್ಟದಲ್ಲೂ ಲಭ್ಯವಿರಲಿದೆ Royal Enfield ಮೇಕ್ ಇಟ್ ಯುವರ್ಸ್ ಕಸ್ಟಮೈಜ್ಡ್ ಸೌಲಭ್ಯ

ಕ್ಲಾಸಿಕ್ 350 ಬೈಕಿನಲ್ಲಿ ಈ ಹಿಂದೆ ಬಳಕೆ ಮಾಡಲಾಗುತ್ತಿದ್ದ 346 ಸಿಸಿ UCE ಎಂಜಿನ್ ತೆಗೆದುಹಾಕಿರುವ ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ 349 ಸಿಸಿ SOHC ಎಂಜಿನ್ ಜೋಡಣೆ ಮಾಡಿದ್ದು, ಈ ಹಿಂದಿನ ಮಾದರಿಗಳಲ್ಲಿ ಇದ್ದ ವೈಬ್ರೆಷನ್ ಪ್ರಮಾಣವು ಗಣನೀಯವಾಗಿ ಸುಧಾರಣೆಯಾಗಿದೆ.

Article Published On: Tuesday, September 21, 2021, 13:01 [IST]
English summary
Royal enfield introduces make it yours riding jackets soon at dealership level detalis
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+