ಆಕರ್ಷಕ ವಿನ್ಯಾಸದಲ್ಲಿ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500 ಟ್ರಿಬ್ಯೂಟ್ ಬ್ಲ್ಯಾಕ್ ಎಡಿಷನ್ ಬಿಡುಗಡೆ

ಜನಪ್ರಿಯ ದಿಚಕ್ರ ವಾಹನ ತಯಾರಕ ಕಂಪನಿಯಾ ರಾಯಲ್ ಎನ್‍‍ಫೀಲ್ಡ್ ಕಂಪನಿಯು ತನ್ನ ಕ್ಲಾಸಿಕ್ 500 ಟ್ರಿಬ್ಯೂಟ್ ಬ್ಲ್ಯಾಕ್ ಎಡಿಷನ್ ಅನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಬಿಡುಗಡೆಗೊಳಿಸಿದೆ. ಆಕರ್ಷಕ ವಿನ್ಯಾಸದಲ್ಲಿ ಈ ಹೊಸ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500 ಟ್ರಿಬ್ಯೂಟ್ ಬ್ಲ್ಯಾಕ್ ಎಡಿಷನ್ಅನ್ನು ಬಿಡುಗಡೆಗೊಳಿಸಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500 ಟ್ರಿಬ್ಯೂಟ್ ಬ್ಲ್ಯಾಕ್ ಎಡಿಷನ್ ಬಿಡುಗಡೆ

ಈ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500 ಟ್ರಿಬ್ಯೂಟ್ ಬ್ಲ್ಯಾಕ್ ಎಡಿಷನ್ 200 ಯುನಿಟ್ ಗಳನ್ನು ಆಸ್ಟ್ರೇಲಿಯಾದಲ್ಲಿ ಬಿಡುಗಡೆಗೊಳಿಸಿದರೆ ನ್ಯೂಜಿಲೆಂಡ್ ನಲ್ಲಿ ಕೇವಲ 40 ಯುನಿಟ್ ಗಳನ್ನು ಮಾತ್ರ ಬಿಡುಗಡೆಗೊಳಿಸಲಾಗಿದೆ. ರಾಯಲ್ ಎನ್‍‍‍ಫೀಲ್ಡ್ ಕಂಪನಿಯು ತನ್ನ 500 ಸಿಸಿ ಯು‍ಸಿಇ (ಯುನಿಟ್ ಕನ್‌ಸ್ಟ್ರಕ್ಷನ್ ಎಂಜಿನ್) ಸೆಗ್‍‍ಮೆಂಟ್‍‍ನ ಬೈ‍ಕ್ ಅನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಶೀಘ್ರದಲ್ಲೇ ಸ್ಥಗಿತಗೊಳಿಸುವ ಸಾಧ್ಯತೆಗಳಿದೆ. ಈ ಸಂದರ್ಭದಲ್ಲಿ ಅದರ ನೆನೆಪಿಗಾಗಿ ಈ ಕ್ಲಾಸಿಕ್ 500 ಟ್ರಿಬ್ಯೂಟ್ ಬ್ಲ್ಯಾಕ್ ಲಿಮೆಟೆಡ್ ಎಡಿಷನ್ ಅನ್ನು ಬಿಡುಗಡೆಗೊಳಿಸಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500 ಟ್ರಿಬ್ಯೂಟ್ ಬ್ಲ್ಯಾಕ್ ಎಡಿಷನ್ ಬಿಡುಗಡೆ

ಕ್ಲಾಸಿಕ್ 500 ಟ್ರಿಬ್ಯೂಟ್ ಬ್ಲ್ಯಾಕ್ ಲಿಮೆಟೆಡ್ ಬೈಕಿನಲ್ಲಿ ಡ್ಯುಯಲ್ ಟೋನ್ ಮ್ಯಾಟ್ ಅಂಡ್ ಗ್ಲೋಸ್ ಬ್ಲ್ಯಾಕ್ ಬಣ್ಣವನ್ನು ಹೊಂದಿದೆ. ಈ ಬೈಕಿನಲ್ಲಿ ಮುಂಭಾಗ ಮತ್ತು ಹಿಂಭಾಗದ ಫೆಂಡರ್‍‍ಗಳಲ್ಲಿ, ರಿಮ್ಸ್ ಸುತ್ತಲೂ ಮತ್ತು ಫ್ಯೂಯಲ್ ಟ್ಯಾಂಕಿನಲ್ಲಿ ಆರೇಂಜ್ ಬಣ್ಣ‍ಗಳನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500 ಟ್ರಿಬ್ಯೂಟ್ ಬ್ಲ್ಯಾಕ್ ಎಡಿಷನ್ ಬಿಡುಗಡೆ

ಈ ಹೊಸ ಕ್ಲಾಸಿಕ್ 500 ಟ್ರಿಬ್ಯೂಟ್ ಬ್ಲ್ಯಾಕ್ ಎಡಿಷನ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಡ್ಯುಯಲ್-ಶಾಕ್‌ ಸೆಟಪ್ ಅನ್ನು ಅಳವಡಿಸಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500 ಟ್ರಿಬ್ಯೂಟ್ ಬ್ಲ್ಯಾಕ್ ಎಡಿಷನ್ ಬಿಡುಗಡೆ

ಇನ್ನು ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಕೂಡ ನೀಡಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500 ಟ್ರಿಬ್ಯೂಟ್ ಬ್ಲ್ಯಾಕ್ ಎಡಿಷನ್ ಬಿಡುಗಡೆ

ಈ ಕ್ಲಾಸಿಕ್ 500 ಟ್ರಿಬ್ಯೂಟ್ ಬ್ಲ್ಯಾಕ್ ಎಡಿಷನ್ ಬೈಕ್ 500 ಸಿಸಿ ಲಾಂಗ್ ಸ್ಪೋಕ್ ಸಿಂಗಲ್ ಸಿಲಿಂಡರ್ ಯುಸಿ‍ಇ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 5,250 ಆರ್‍‍ಪಿ‍ಎಂನಲ್ಲಿ 27.2 ಬಿಹೆಚ್‍ಪಿ ಪವರ್ ಮತ್ತು 4,000 ಆರ್‍‍ಪಿಎಂನಲ್ಲಿ 41.3 ಎನ್‍ಎಂ ಟಾಕ್ ಅನ್ನು ಉತ್ಪಾದಿಸುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500 ಟ್ರಿಬ್ಯೂಟ್ ಬ್ಲ್ಯಾಕ್ ಎಡಿಷನ್ ಬಿಡುಗಡೆ

ಇದರೊಂದಿಗೆ 5 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ರಾಯಲ್ ಎನ್‍‍ಫೀಲ್ಡ್ 500 ಸೆಗ್‍‍ಮೆಂಟ್‍‍ನ ನೆನೆಪಿಗಾಗಿ ಬಿಡುಗಡೆಗೊಳಿಸುವುದರಿಂದ ಕೊನೆಯ ಬೈಕ್ ಅನ್ನು ಲಿಮಿಡೆಡ್ ಎಡಿಷನ್ ಆಗಿ ಬಿಡುಗಡೆಗೊಳಿಸಲಾಗಿದೆ ಎಂದು ನಿರೀಕ್ಷಿಸುತ್ತೇವೆ.

ಆಕರ್ಷಕ ವಿನ್ಯಾಸದಲ್ಲಿ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500 ಟ್ರಿಬ್ಯೂಟ್ ಬ್ಲ್ಯಾಕ್ ಎಡಿಷನ್ ಬಿಡುಗಡೆ

ರಾಯಲ್ ಎನ್‍‍ಫೀಲ್ಡ್ ಕಂಪನಿಯ ಟ್ವಿನ್ ಬೈಕ್‍‍ಗಳು ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿವೆ. ಇದರಿಂದಾಗಿ ಗ್ರಾಹಕರನ್ನು ಸೆಳೆಯಬಹುದು ಮತ್ತು 500 ಸಿಸಿ ಸೆಗ್‍‍ಮೆಂಟ್‍‍ನ ಸ್ಥಾನವನ್ನು ಇದು ಸರಿಯಾಗಿ ನಿಭಾಹಿಸಬಹುದು ಎಂದು ಕಂಪನಿಯ ಈ ನಿರ್ಧಾರವನ್ನು ಕೈಗೊಂಡಿದೆ.

ಆಕರ್ಷಕ ವಿನ್ಯಾಸದಲ್ಲಿ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500 ಟ್ರಿಬ್ಯೂಟ್ ಬ್ಲ್ಯಾಕ್ ಎಡಿಷನ್ ಬಿಡುಗಡೆ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‍‍ಫೀಲ್ಡ್ ಕಂಪನಿಯು ಹಿಮಾಲಯನ್ ಬೈಕಿಗೆ ಹೆಚ್ಚು ಗಮನವನ್ನು ಹರಿಸಲಿದೆ. ಇನ್ನು ಭಾರತದಲ್ಲಿ ರಾಯಲ್ ಎನ್‍‍ಫೀಲ್ಡ್ ತನ್ನ ಜನಪ್ರಿಯ ಮಾದರಿಗಳನ್ನು ಹೊಸ ಅಪ್ಡೇಟ್ ಗಳೊಂದಿಗೆ ಬಿಡುಗಡೆಗೊಳಿಸುವುದರೊಂದಿಗೆ ಹೊಚ್ಚ ಹೊಸ ಮಾದರಿಗಳನ್ನು ಕೂಡ ಬಿಡುಗಡೆಗೊಳಿಸಲಿವೆ.

Article Published On: Friday, June 18, 2021, 18:56 [IST]
English summary
Royal Enfield Classic 500 Tribute Black Edition Launched. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+