ಲಾಕ್‌ಡೌನ್ ನಂತರ ಆರ್‌ಇ ಮಿಟಿಯೊರ್ 350 ಬೇಡಿಕೆಯಲ್ಲಿ ಭಾರೀ ಹೆಚ್ಚಳ

ಕೋವಿಡ್ ಪರಿಣಾಮ ಕಳೆದ ತಿಂಗಳು ತಗ್ಗಿದ್ದ ಹೊಸ ವಾಹನಗಳ ಬುಕ್ಕಿಂಗ್ ಪ್ರಕ್ರಿಯೆ ಇದೀಗ ಮತ್ತೆ ಚುರುಕುಗೊಂಡಿದ್ದು, ರಾಯಲ್ ಎನ್‌ಫೀಲ್ಡ್ ಮಿಟಿಯೊರ್ ಬೈಕ್ ಮಾದರಿಗೂ ಉತ್ತಮ ಬೇಡಿಕೆ ಹರಿದುಬರುತ್ತಿದೆ.

ಲಾಕ್‌ಡೌನ್ ನಂತರ ಆರ್‌ಇ ಮಿಟಿಯೊರ್ 350 ಬೇಡಿಕೆಯಲ್ಲಿ ಭಾರೀ ಹೆಚ್ಚಳ

ರಾಯಲ್ ಎನ್‌ಫೀಲ್ಡ್ ಕಂಪನಿಯ ಮಾಹಿತಿಯ ಪ್ರಕಾರ ಹೊಸ ಮಿಟಿಯೊರ್ 350 ಬೈಕ್ ಖರೀದಿಸುವ ಗ್ರಾಹಕರು ಬುಕ್ಕಿಂಗ್ ನಂತರ ವಿತರಣೆಗಾಗಿ ವಿವಿಧ ನಗರಗಳಿಗೆ ಅನುಗುಣವಾಗಿ 2 ರಿಂದ 4 ತಿಂಗಳು ಕಾಯಬೇಕಾಗುತ್ತದೆ. ಲಾಕ್‌ಡೌನ್ ನಡುವೆಯೂ ಕಂಪನಿಯು ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳ ಮೂಲಕ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಶೀಘ್ರದಲ್ಲೇ ಕಂಪನಿಯು ಬೈಕ್ ಉತ್ಪಾದನೆಯನ್ನು ಹೆಚ್ಚಿಸಲು ನಿರ್ಧರಿಸಿದೆ.

ಲಾಕ್‌ಡೌನ್ ನಂತರ ಆರ್‌ಇ ಮಿಟಿಯೊರ್ 350 ಬೇಡಿಕೆಯಲ್ಲಿ ಭಾರೀ ಹೆಚ್ಚಳ

ಕೋವಿಡ್ ಪರಿಣಾಮ ಬೈಕ್ ಉತ್ಪಾದನಾ ಘಟಕದಲ್ಲಿ ಕನಿಷ್ಠ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಣೆ ಹಿನ್ನಲೆಯಲ್ಲಿ ಉತ್ಪಾದನಾ ಪ್ರಮಾಣವು ಕುಸಿತ ಕಂಡಿದ್ದು, ಪರಿಸ್ಥಿತಿ ಸುಧಾರಣೆ ಇನ್ನು ಕೆಲವು ತಿಂಗಳು ಕಾಲ ಬೇಕಾಗಬಹುದಾಗಿದೆ.

ಲಾಕ್‌ಡೌನ್ ನಂತರ ಆರ್‌ಇ ಮಿಟಿಯೊರ್ 350 ಬೇಡಿಕೆಯಲ್ಲಿ ಭಾರೀ ಹೆಚ್ಚಳ

2020ರ ನವೆಂಬರ್‌ನಲ್ಲಿ ಬಿಡುಗಡೆಗೊಂಡಿದ್ದ ಮಿಟಿಯೊರ್ 350 ಕ್ರೂಸರ್ ಬೈಕ್ ಮಾದರಿಯು ತಾಂತ್ರಿಕವಾಗಿ ಈ ಹಿಂದಿನ ಥಂಡರ್‌ಬರ್ಡ್ ಎಕ್ಸ್ ಮಾದರಿಗಿಂತಲೂ ಸಾಕಷ್ಟು ವಿಭಿನ್ನತೆಗಳನ್ನು ಹೊಂದಿದ್ದು, ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಬೈಕ್ ಬಿಡುಗಡೆಗೊಳಿಸಿದ ನಂತರ ಸುಮಾರು 20 ಸಾವಿರಕ್ಕೂ ಅಧಿಕ ಬುಕ್ಕಿಂಗ್ ಪಡೆದುಕೊಂಡಿದೆ.

ಲಾಕ್‌ಡೌನ್ ನಂತರ ಆರ್‌ಇ ಮಿಟಿಯೊರ್ 350 ಬೇಡಿಕೆಯಲ್ಲಿ ಭಾರೀ ಹೆಚ್ಚಳ

ಬುಕ್ಕಿಂಗ್ ಆಧರಿಸಿ ಇದುವರೆಗೆ ಸುಮಾರು 12 ಸಾವಿರ ಯುನಿಟ್ ವಿತರಣೆ ಮಾಡಲಾಗಿದ್ದು, ಬೇಡಿಕೆಗೆ ತಕ್ಕಂತೆ ಉತ್ಪಾದನೆಯನ್ನು ಹೆಚ್ಚಿಸಲಾಗುತ್ತಿದೆ. ಹೊಸ ಬೈಕ್ ಮಾದರಿಯು ಫೈರ್‌ಬಾಲ್, ಸ್ಟೆಲ್ಲಾರ್ ಮತ್ತು ಸೂಪರ್‌ನೊವಾ ಎಂಬ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಬೆಂಗಳೂರಿನಲ್ಲಿ ಆನ್‌ರೋಡ್ ಪ್ರಕಾರ ರೂ.2.25 ಲಕ್ಷ (ಫೈರ್‌ಬಾಲ್), ರೂ. 2.31 ಲಕ್ಷ (ಸ್ಟೆಲ್ಲಾರ್) ಮತ್ತು ಹೈ ಎಂಡ್ ಮಾದರಿಯಾದ (ಸೂಪರ್‌ನೊವಾ) ಮಾದರಿಯು ರೂ. 2.43 ಲಕ್ಷ ಬೆಲೆ ಹೊಂದಿದೆ.

ಲಾಕ್‌ಡೌನ್ ನಂತರ ಆರ್‌ಇ ಮಿಟಿಯೊರ್ 350 ಬೇಡಿಕೆಯಲ್ಲಿ ಭಾರೀ ಹೆಚ್ಚಳ

ಡಬಲ್ ಡೌನ್‌ಟ್ಯೂಬ್ ಕ್ರೆಡಲ್ ಫ್ರೇಮ್ ಮೇಲೆ ಅಭಿವೃದ್ದಿಗೊಂಡಿರುವ ಹೊಸ ಬೈಕ್ ಮಾದರಿಯು ಥಂಡರ್‌ಬರ್ಡ್ ಮಾದರಿಗಿಂತಲೂ ಹೆಚ್ಚು ಅರಾಮದಾಯಕ ರೈಡಿಂಗ್ ಒದಗಿಸಲಿದ್ದು, ಮುಂಭಾಗದಲ್ಲಿ 41-ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ 6 ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಟ್ವಿನ್ ಶಾಕ್‌ ಅಬ್ಸಾರ್ಬರ್‌ ನೀಡಲಾಗಿದೆ.

ಲಾಕ್‌ಡೌನ್ ನಂತರ ಆರ್‌ಇ ಮಿಟಿಯೊರ್ 350 ಬೇಡಿಕೆಯಲ್ಲಿ ಭಾರೀ ಹೆಚ್ಚಳ

ಹೊಸ ಬೈಕಿನಲ್ಲಿ ಮತ್ತೊಂದು ಪ್ರಮುಖ ಬದಲಾವಣೆ ಎಂದರೆ ಥಂಡರ್‌ಬರ್ಡ್ ಎಕ್ಸ್ ಮಾದರಿಗಿಂತಲೂ 6 ಕೆ.ಜಿ ಕಡಿಮೆ ತೂಕ ಹೊಂದಿರುವ ಹೊಸ ಮಿಟಿಯೊರ್ 350 ಬೈಕ್ ಮಾದರಿಯು 1,400-ಎಂಎಂ ವೀಲ್ಹ್‌ಬೆಸ್, 170-ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಪಡೆದುಕೊಂಡಿದೆ.

ಲಾಕ್‌ಡೌನ್ ನಂತರ ಆರ್‌ಇ ಮಿಟಿಯೊರ್ 350 ಬೇಡಿಕೆಯಲ್ಲಿ ಭಾರೀ ಹೆಚ್ಚಳ

ಮಿಟಿಯೊರ್ 350 ಬೈಕ್ ಮಾದರಿಯು 349-ಸಿಸಿ ಫ್ಯೂಲ್ ಇಂಜೆಕ್ಷೆಡ್ ಸಿಂಗಲ್ ಸಿಲಿಂಡರ್ ಹೊಂದಿದ್ದು, 5-ಸ್ಪೀಡ್ ಗೇ‌ರ್‌ಬಾಕ್ಸ್‌ನೊಂದಿಗೆ 20.2-ಬಿಎಚ್‌ಪಿ ಮತ್ತು 27-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

MOST READ: ಪ್ರತಿ ಚಾರ್ಜ್‌ಗೆ 240ಕಿ.ಮೀ ಮೈಲೇಜ್ ನೀಡುವ ಸಿಂಪಲ್ ಎನರ್ಜಿ ಸ್ಕೂಟರ್ ಬೆಲೆ ಮಾಹಿತಿ ಬಹಿರಂಗ

ಲಾಕ್‌ಡೌನ್ ನಂತರ ಆರ್‌ಇ ಮಿಟಿಯೊರ್ 350 ಬೇಡಿಕೆಯಲ್ಲಿ ಭಾರೀ ಹೆಚ್ಚಳ

ಮಿಟಿಯೊರ್ 350 ಆರಂಭಿಕ ಮಾದರಿಯಾದ ಫೈರ್‌ಬಾಲ್‌ನಲ್ಲಿ ಬ್ಲ್ಯಾಕ್ ಔಟ್ ಕಾಂಪೊನೆಟ್ಸ್, ಸಿಂಗಲ್ ಟೋನ್ ಗ್ರಾಫಿಕ್ಸ್ ನೊಂದಿಗೆ ಫ್ಯೂಯಲ್ ಟ್ಯಾಂಕ್, ಬ್ಲ್ಯಾಕ್ ಔಟ್ ಎಂಜಿನ್ ಮತ್ತು ಕಲರ್ ರಿಮ್ ಟೇಪ್ ಅಳವಡಿಸಲಾಗಿದ್ದು, ಎರಡನೇ ಮಾದರಿಯಾದ ಸ್ಟೆಲ್ಲಾರ್ ರೂಪಾಂತರದಲ್ಲಿ ಬ್ಯಾಡ್ಜ್‌ಗಳು, ಕ್ರೋಮ್ ಎಕ್ಸಾಸ್ಟ್, ಕ್ರೋಮ್ ಹ್ಯಾಂಡಲ್‌ಬಾರ್ ಮತ್ತು ಕ್ರೋಮ್ ಇಎಫ್‌ಐ ಕವರ್ ಪಡೆದುಕೊಂಡಿದ್ದು, ಇದರಲ್ಲಿ ಬ್ಯಾಕ್ ರೆಸ್ಟ್ ಸಹ ಒಳಗೂಂಡಿದೆ.

ಲಾಕ್‌ಡೌನ್ ನಂತರ ಆರ್‌ಇ ಮಿಟಿಯೊರ್ 350 ಬೇಡಿಕೆಯಲ್ಲಿ ಭಾರೀ ಹೆಚ್ಚಳ

ಹೈ ಎಂಡ್ ಮಾದರಿಯಾದ ಸೂಪರ್‌ನೊವಾದಲ್ಲಿ ಡ್ಯುಯಲ್-ಟೋನ್ ಬಣ್ಣದ ಆಯ್ಕೆಯನ್ನು ಹೊಂದಿದ್ದು, ಇದು ಪ್ರೀಮಿಯಂ ಸೀಟ್ ಫಿನಿಶಿಂಗ್, ವಿಂಡ್‌ಸ್ಕ್ರೀನ್ ಮತ್ತು ಕ್ರೋಮ್ ಇಂಡಿಕೇಟರ್ ಸಹ ಹೊಂದಿದೆ.

MOST READ: ಭಾರತದಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಹೈ ಪರ್ಫಾಮೆನ್ಸ್ ಸ್ಕೂಟರ್‌ಗಳಿವು

ಲಾಕ್‌ಡೌನ್ ನಂತರ ಆರ್‌ಇ ಮಿಟಿಯೊರ್ 350 ಬೇಡಿಕೆಯಲ್ಲಿ ಭಾರೀ ಹೆಚ್ಚಳ

ಜೊತೆಗೆ ಹೊಸ ಬೈಕಿನಲ್ಲಿ ಟಿಪ್ಪರ್ ಪಾಡ್ ಒಳಗೊಂಡಿರುವ ಟರ್ನ್-ಬೈ-ಟರ್ನ್ ಗೂಗಲ್ ನ್ಯಾವಿಗೇಷನ್, ಬ್ಲೂಟೂಥ್ ಮೂಲಕ ಕನೆಕ್ಟ್ ಮಾಡಬಹುದಾದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಪಡೆದುಕೊಂಡಿದೆ.

Article Published On: Monday, June 7, 2021, 13:57 [IST]
English summary
Royal Enfield Meteor 350 Waiting Period In June 2021.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+