ಅಕ್ಟೋಬರ್ ತಿಂಗಳಿನಲ್ಲಿ 40 ಸಾವಿರಕ್ಕೂ ಹೆಚ್ಚು ಬೈಕ್‌ಗಳನ್ನು ಮಾರಾಟ ಮಾಡಿದ Royal Enfield
ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್‌ಫೀಲ್ಡ್ 2021ರ ಅಕ್ಟೋಬರ್ ತಿಂಗಳಿನ ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಕಳೆದ ತಿಂಗಳು ರಾಯಲ್ ಎನ್‌ಫೀಲ್ಡ್ ಕಂಪನಿಯು 40,611 ಬೈಕ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 62,000ಕ್ಕೂ ಹೆಚ್ಚು ಬೈಕ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದನ್ನು ಕೆಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ರಾಯಲ್ ಎನ್‌ಫೀಲ್ಡ್ ಕಂಪನಿಯು ವರ್ಷದಿಂದ ವರ್ಷದ ಮಾರಾಟದಲ್ಲಿ ಶೇ.38.13 ಇಳಿಕೆಯನ್ನು ಕಂಡಿದೆ. ಇನ್ನು ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 3,522 ಯುನಿಟ್‌ಗಳನ್ನು ರಫ್ತು ಮಾಡಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 4,033 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು.

ಇದನ್ನು ಕಳೆದ ತಿಂಗಳ ರಫ್ತಿಗೆ ಹೋಲಿಸಿದರೆ ಶೇ.12.67 ರಷ್ಟು ಕುಸಿತವನ್ನು ಕಂಡಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಈ ಬಾರಿ ಮಾರಾಟದಲ್ಲಿ ದೊಡ್ಡ ಕುಸಿತವನ್ನು ಕಂಡಿದೆ. ಮಾರಾಟದ ಜೊತೆ ರಫ್ತಿನಲ್ಲಿಯು ಕೂಡ ಈ ಬಾರಿ ಕುಸಿತವನ್ನು ಕಂಡಿದೆ,

ಇನ್ನು ರಾಯಲ್ ಎನ್‌ಫೀಲ್ಡ್ ಕಂಪನಿಯು - ದಿ ಪಿಕ್ನಿಕ್ ಸ್ಪೆಷಲ್ ಹಾಗೂ ಬರ್ತ್ ಆಫ್ ದಿ ಬುಲೆಟ್ - ಎಂಬ ಹೆಸರಿನ ಎರಡು ಹೊಸ ಹೆಲ್ಮೆಟ್‌ಗಳನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದೆ. ಈ ಹೆಲ್ಮೆಟ್‌ಗಳು ಕಂಪನಿಯ 120 ನೇ ವಾರ್ಷಿಕೋತ್ಸವವನ್ನು ಆಚರಿಸಲು ಸೀಮಿತ ಸಂಖ್ಯೆಯಲ್ಲಿ ಬಿಡುಗಡೆಗೊಳಿಸಲಾದ ವಿಶೇಷ ಸರಣಿಯ ಭಾಗವಾಗಿವೆ. ಈ ಹೆಲ್ಮೆಟ್ ಗಳನ್ನು 12 ವಿಶಿಷ್ಟ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಈ ಹಿಂದೆ ರಾಯಲ್ ಎನ್‌ಫೀಲ್ಡ್ ಕಂಪನಿಯು ದಿ ಒರಿಜಿನಲ್ ರಾಯಲ್ ಎನ್‌ಫೀಲ್ಡ್ ಹಾಗೂ ದಿ ವಿ ಟ್ವಿನ್ ಹೆಲ್ಮೆಟ್‌ಗಳನ್ನು ಬಿಡುಗಡೆಗೊಳಿಸಿತ್ತು. ಈ ಎರಡೂ ಹೆಲ್ಮೆಟ್ ಗಳನ್ನು ಒಂದೇ ದಿನದಲ್ಲಿ ಮಾರಾಟ ಮಾಡಲಾಗಿತ್ತು. ಅಂದ ಹಾಗೆ ರಾಯಲ್ ಎನ್‌ಫೀಲ್ಡ್ ಕಂಪನಿಯು 1901 ರಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿತು. ಈಗ ಬಿಡುಗಡೆಯಾಗಿರುವ ಹೆಲ್ಮೆಟ್‌ಗಳ 12 ವಿಶಿಷ್ಟ ವಿನ್ಯಾಸಗಳು ಕಂಪನಿಯ 12 ದಶಕಗಳ ಕಾರ್ಯಾಚರಣೆಯನ್ನು ಬಿಂಬಿಸುತ್ತವೆ.

ಈ ಪ್ರತಿ ಹೆಲ್ಮೆಟ್'ನ ವಿನ್ಯಾಸವು ಕಂಪನಿಯ ಒಂದೊಂದು ದಶಕದ ಕಾರ್ಯಾಚರಣೆಗೆ ಸಂಬಂಧಿಸಿವೆ. ದಿ ಪಿಕ್ನಿಕ್ ಸ್ಪೆಷಲ್ ಹೆಲ್ಮೆಟ್ 1920 ರ ದಶಕಕ್ಕೆ ಸಂಬಂಧಿಸಿದೆ. ಇನ್ನು ಬರ್ತ್ ಆಫ್ ದಿ ಬುಲೆಟ್ ಹೆಲ್ಮೆಟ್ 1930 ರ ದಶಕವನ್ನು ಪ್ರತಿಬಿಂಬಿಸುತ್ತದೆ.ಈ ಸೀಮಿತ ಆವೃತ್ತಿಯ ಹೆಲ್ಮೆಟ್‌ಗಳನ್ನು ಕೈಯಿಂದ ಚಿತ್ರಿಸಲಾಗಿದೆ. ಪ್ರತಿ ವಿನ್ಯಾಸದ 120 ಹೆಲ್ಮೆಟ್‌ಗಳನ್ನು ಮಾತ್ರ ತಯಾರಿಸಲಾಗುತ್ತದೆ.

ಪಿಕ್ನಿಕ್ ಸ್ಪೆಷಲ್ ಹೆಲ್ಮೆಟ್ ಐಎಸ್‌ಐ, ಡಿಒಟಿ ಹಾಗೂ ಇಸಿಇಗಳಿಂದ ಪ್ರಮಾಣೀಕರಣಗೊಂಡಿದೆ. ಪಿಕ್ನಿಕ್ ಸ್ಪೆಷಲ್ಪೂರ್ಣ ಮುಖದ ಹೆಲ್ಮೆಟ್ ಆಗಿದ್ದು, ಬ್ರೀತ್ ಡಿಫ್ಲೆಕ್ಟರ್, ನೆಕ್ ಕರ್ಟನ್ ಹಾಗೂ ಡಿ ರಿಂಗ್ ಗಳ ಜೊತೆಗೆ ಹೆಚ್ಚಿನ ಸುರಕ್ಷತೆಯನ್ನು ಹೊಂದಿದೆ. ಈ ಹೆಲ್ಮೆಟ್ ಪಾಲಿಜೀನ್ ಆ್ಯಂಟಿ ಮೈಕ್ರೋಬಿಯಲ್ ಟ್ರೀಟೆಡ್ ಇಂಟರ್ನಲ್ ಗಳನ್ನು ಹೊಂದಿದೆ. ಈ ಹೆಲ್ಮೆಟ್'ನ ಹೊರಭಾಗದಲ್ಲಿ, ಕಾರ್ಯಾಚರಣೆಯ ಸ್ವಿಚ್ನೊಂದಿಗೆ ಸನ್ ವೈಸರ್ ಹಾಗೂ ಆ್ಯಂಟಿ ಫಾಗ್ ಫಿಲ್ಮ್ ಹೊಂದಿರುವ ಮೈನ್ ವೈಸರ್ ನೀಡಲಾಗಿದೆ.

ಈ ಹೆಲ್ಮೆಟ್'ನ ಬೆಲೆಯ ಬಗ್ಗೆ ಹೇಳುವುದಾದರೆ ಸೀಮಿತ ಆವೃತ್ತಿಯ ಪಿಕ್ನಿಕ್ ಸ್ಪೆಷಲ್ ಹೆಲ್ಮೆಟ್ ಬೆಲೆ ರೂ. 8,450 ಗಳಾಗಿದೆ. ದಿ ಪಿಕ್ನಿಕ್ ಸ್ಪೆಷಲ್ 1920 ರ ದಶಕವನ್ನು ಪ್ರತಿನಿಧಿಸುತ್ತದೆ. ಈ ಅವಧಿಯಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಒಂದು ದಶಕದ ಬಲವರ್ಧನೆಯ ನಂತರ, ವಿಸ್ತರಣೆ ಹಾಗೂ ಕನಿಷ್ಠ ಎರಡು ಮಾದರಿ ಕಾರ್ಯಕ್ರಮದೊಂದಿಗೆ ಮೊದಲ ಮಹಾಯುದ್ದದಿಂದ ಚೇತರಿಸಿಕೊಂಡಿತು. ಈ ದಶಕದಲ್ಲಿ ರಾಯಲ್ ಎನ್‌ಫೀಲ್ಡ್ಕಂಪನಿಯು 350 ಸಿಸಿ ಹಾಗೂ 500 ಸಿಸಿ ಸೈಡ್ ವಾಲ್ವ್ ಹಾಗೂ ಓವರ್‌ಹೆಡ್ ವಾಲ್ವ್ ಸಿಂಗಲ್ ಬೈಕುಗಳನ್ನು ಅಭಿವೃದ್ಧಿ ಪಡಿಸಿತು.

ಇನ್ನು ಬರ್ತ್ ಆಫ್ ದಿ ಬುಲೆಟ್ ಹೆಲ್ಮೆಟ್ ಸಹ ಐಎಸ್‌ಐ, ಡಿಒಟಿ ಹಾಗೂ ಇಸಿಇಗಳಿಂದ ಪ್ರಮಾಣೀಕರಣಗೊಂಡಿರುವ ಓಪನ್ ಫೇಸ್ ಹೆಲ್ಮೆಟ್ ಆಗಿದೆ.ಈ ಫೇಸ್ ಕವರಿಂಗ್ ಬಬಲ್ ವೈಸರ್ ಪಾಲಿಜೀನ್ ಟ್ರೀಟ್ ಮಾಡಿದ ಫ್ಯಾಬ್ರಿಕ್ ಇಂಟರ್ನಲ್‌ಗಳೊಂದಿಗೆ ಪ್ರೀಮಿಯಂ ಲೆದರ್ ಹೊಂದಿದೆ. ಶೆಲ್ ಬೀಡಿಂಗ್‌ನಲ್ಲಿ ಕೈಯಿಂದ ಸ್ಟಿಚ್ ಮಾಡಲಾದ ಲೆದರ್ ಟ್ರಿಮ್‌ಗಳಿವೆ. ಈ ಹೆಲ್ಮೆಟ್‌ನ ಹೊರಕವಚವು ಹಗುರವಾದ ಫೈಬರ್‌ಗ್ಲಾಸ್ ವಸ್ತುಗಳಿಂದ ಮಾಡಲ್ಪಟ್ಟಿದೆ. ಬಬಲ್ ವೈಸರ್ ಅಲ್ಟ್ರಾ ವಯೋಲೆಟ್ ಲೇಪನವನ್ನು ಹೊಂದಿದೆ.

ಇದು ಬೈಕ್ ರೈಡರ್'ನ ಕಣ್ಣುಗಳನ್ನು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸುತ್ತದೆ. ಈ ಹೆಲ್ಮೆಟ್'ನ ಬೆಲೆಯ ಬಗ್ಗೆ ಹೇಳುವುದಾದರೆ, ಬರ್ತ್ ಆಫ್ ದಿ ಬುಲೆಟ್ ಹೆಲ್ಮೆಟ್ ಬೆಲೆ ರೂ. 6,950 ಗಳಾಗಿದೆ. ಬರ್ತ್ ಆಫ್ ದಿ ಬುಲೆಟ್ ಹೆಲ್ಮೆಟ್, 1932 ರಲ್ಲಿ ದಿ ಮೋಟಾರ್‌ಸೈಕಲ್ ಮ್ಯಾಗಜೀನ್‌ನ ಆರ್ಮ್‌ಚೇರ್ ಪ್ರದರ್ಶನದಲ್ಲಿ ಮೊದಲ ಬುಲೆಟ್‌ನ ವರ್ಚುವಲ್ ಬಿಡುಗಡೆಗೆ ಗೌರವ ಸಲ್ಲಿಸುತ್ತದೆ.

ರಾಯಲ್ ಎನ್‌ಫೀಲ್ಡ್ ಕಂಪನಿಯ ಪ್ರಕಾರ, 1930 ರ ದಶಕವು Royal Enfield ಬೈಕುಗಳ ಅಭಿವೃದ್ಧಿಗೆ ಸುವರ್ಣಯುಗವಾಗಿತ್ತು. ಈ ಅವಧಿಯಲ್ಲಿ ವಿಶ್ವ ವಿಖ್ಯಾತ ಬುಲೆಟ್ ಬೈಕ್ ಅನ್ನು ಉತ್ಪಾದಿಸಲಾಯಿತು. ಇನ್ನು ರಾಯಲ್ ಎನ್‌ಫೀಲ್ಡ್ ಕಂಪನಿಯ ದೇಶಿಯ ಮಾರುಕಟ್ಟೆಯಲ್ಲಿನ ಮಾರಾಟದ ಬಗ್ಗೆ ಹೇಳುವುದಾದರೆ ಕಂಪನಿಯು 2021ರ ಸೆಪ್ಟೆಂಬರ್ ತಿಂಗಳಿನಲ್ಲಿ 33,529 ಯುನಿಟ್ ದ್ವಿ ಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಈ ಪ್ರಮಾಣವು 2020 ರ ಸೆಪ್ಟೆಂಬರ್ ತಿಂಗಳಿನಲ್ಲಿ ಮಾರಾಟವಾದ ವಾಹನಗಳಿಗಿಂತ 40% ನಷ್ಟು ಕಡಿಮೆಯಾಗಿದೆ.

ಇನ್ನು ರಾಯಲ್ ಎನ್‌ಫೀಲ್ಡ್ ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ. ಇದರ ಭಾಗವಾಗಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಬೈಕ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಬಾರತದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ದೊಡ್ಡ ಅಭಿಮಾನಿ ವರ್ಗವಿದೆ. ಹೊಸ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಹೊಸ ಬೈಕ್‌ಗಳ ಪರಿಚಯಿಸುವ ಮೂಲಕ ಮಾರಾಟದ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ರಾಯಲ್ ಎನ್‌ಫೀಲ್ಡ್ ಭಾರತದಲ್ಲಿ ಎರಡು 650ಸಿಸಿ ಬೈಕ್‍ಗಳನ್ನು ಪರೀಕ್ಷಿಸುತ್ತಿದೆ.


Click it and Unblock the Notifications