2021ರ ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ
ಇಟಲಿ ಮೂಲದ ಸೂಪರ್‌ಬೈಕ್ ತಯಾರಕ ಕಂಪನಿಯಾದ ಡುಕಾಟಿ ತನ್ನ ಪ್ರಮುಖ ನೇಕಡ್ ಬೈಕ್ 2021ರ ಸ್ಟ್ರೀಟ್‌ಫೈಟರ್ ವಿ4 ಬೈಕನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತಿದೆ. ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜನಪ್ರಿಯ ಬೈಕ್‌ಗಳಲ್ಲಿ ಒಂದಾಗಿದೆ.

ಇನ್ನು ಡುಕಾಟಿ ಇತ್ತೀಚೆಗೆ 2021ರ ಸ್ಟ್ರೀಟ್‌ಫೈಟರ್ ವಿ4 ಬೈಕನ್ನು ಜಾಗತಿಕವಾಗಿ ಈಗಾಗಲೇ ಅನಾವರಣಗೊಳಿಸಿದೆ. ಈ ಬೈಕನ್ನು ಯುರೋ 5 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಪ್ರಮುಖ ಬದಲಾವಣೆಯೆಂದರೆ 2021ರ ಸ್ಟ್ರೀಟ್‌ಫೈಟರ್ ವಿ4 ಬೈಕ್ ಹೊಸ 'ಡಾರ್ಕ್ ಸ್ಟೆಲ್ತ್' ಬಣ್ಣವನ್ನು ಪಡೆದುಕೊಂಡಿದೆ. ಬ್ರ್ಯಾಂಡ್ ಇದರ ಕಾರ್ಯಕ್ಷಮತೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದೀಗ ಡುಕಾಟಿಯ ಕೆಲವು ಆಯ್ದ ಡೀಲರ್ ಗಳು ಈ 2021ರ ಸ್ಟ್ರೀಟ್‌ಫೈಟರ್ ವಿ4 ಬೈಕಿನ ಖರೀದಿಗಾಗಿ ಅನಧಿಕೃತವಾಗಿ ಪ್ರಿ-ಬುಕ್ಕಿಂಗ್ ಸ್ವೀಕರಿಸುವುದನ್ನು ಪ್ರಾರಂಭಿಸಿದ್ದಾರೆ.

2021ರ ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಅದೇ 1,103 ಸಿಸಿ ಡೆಸ್ಮೋಸೆಡಿಸಿ ಸ್ಟ್ರಾಡೇಲ್ ವಿ4 ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಈ 12,750 ಆರ್‌ಪಿಎಂನಲ್ಲಿ 205 ಬಿಹೆಚ್‌ಪಿ ಪವರ್ ಮತ್ತು 9.500 ಆರ್‌ಪಿಎಂನಲ್ಲಿ 123 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಈ ಎಂಜಿನ್ ಅನ್ನು ಆರು-ಸ್ಪೀಡ್ ಗೇರ್‌ಬಾಕ್ಸ್‌ಗೆ ಬ್ರ್ಯಾಂಡ್‌ನ ಬೈ-ಡೈರಕ್ಷನಲ್ ಡುಕಾಟಿ ಕ್ವಿಕ್ ಶಿಫ್ಟ್ (ಡಿಕ್ಯೂಎಸ್) ಇವಿಒ 2 ಜೊತೆಗೆ ಸ್ಲಿಪ್-ಅಸಿಸ್ಟೆಡ್ ಕ್ಲಚ್‌ನೊಂದಿಗೆ ಜೋಡಿಸಲಾಗಿದೆ. ಈ ಬೈಕಿನಲ್ಲಿ ಇನ್ಸ್ ಟ್ರೂಮೆಂಟ್ ಕನ್ಸೋಲ್‌ಗಾಗಿ 5 ಇಂಚಿನ ಟಿಎಫ್‌ಟಿ ಕಲರ್ ಡಿಸ್ ಪ್ಲೇಯನ್ನು ಸಹ ನೀಡಲಾಗಿದೆ.

2021ರ ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಬೈಕ್ ಐದು-ಸ್ಪೀಕ್ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಈ ಹೊಸ ಬೈಕಿನಲ್ಲಿ ಪಿರೆಲ್ಲಿ ಡಯಾಬ್ಲೊ ರೊಸ್ಸೊ ಕೊರ್ಸಾ ಪರ್ಫಾರ್ಮೆನ್ಸ್ ಟಯರುಗಳನ್ನು ಹೊಂದಿರಲಿದೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಸ್ಟ್ಯಾಂಡರ್ಡ್ ಬೈಕಿನಲ್ಲಿ ಸಸ್ಪೆಂಕ್ಷನ್ ಸೆಟಪ್ ಗಾಗಿ 43 ಎಂಎಂ ಸಂಪೂರ್ಣ ಹೊಂದಾಣಿಕೆ ಮಾಡಬಹುದಾದ ಶೋವಾ ಬಿಪಿಎಫ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಸಂಪೂರ್ಣ ಹೊಂದಾಣಿಕೆ ಮಾಡಬಹುದಾದ ಸ್ಯಾಚ್ಸ್ ಮೊನೊ-ಶಾಕ್ ಯುನಿಟ್ ಹೊಂದಿದೆ.

ಇನ್ನು ಇದರ ಸಿಸ್ಟಂ ಬಗ್ಗೆ ಹೇಳುವುದಾದರೆ, ಡ್ಯುಯಲ್ 330 ಎಂಎಂ ಸೆಮಿ-ಫ್ಲೋಟಿಂಗ್ ಡಿಸ್ಜ್ ಗಳ ಜೊತೆಯಲ್ಲಿ ರೇಡಿಯಲ್-ಮೌಂಟೆಡ್ ಬ್ರೆಂಬೊ ಮೊನೊಬ್ಲೋಕ್ ಸ್ಟೈಲ್ಮಾ ಎಂ4.30 4-ಪಿಸ್ಟನ್ ಕ್ಯಾಲಿಪರ್‌ಗಳು ಮತ್ತು ಹಿಂಭಾಗದಲ್ಲಿ ಎರಡು ಪಿಸ್ಟನ್ ಕ್ಯಾಲಿಪರ್ ಗಳನ್ನು ಹೊಂದಿವೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

2021ರ ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಬೈಕಿನಲ್ಲಿ ರೈಡಿಂಗ್ ಮೋಡ್‌ಗಳು, ಪವರ್ ಮೋಡ್‌ಗಳು, ಕಾರ್ನರಿಂಗ್ ಎಬಿಎಸ್ ಇವಿಒ, ಡುಕಾಟಿ ಟ್ರ್ಯಾಕ್ಷನ್ ಕಂಟ್ರೋಲ್(ಡಿಟಿಸಿ) ಇವಿಒ 2, ಡುಕಾಟಿ ವ್ಹೀಲಿ ಕಂಟ್ರೋಲ್ (ಡಿಡಬ್ಲ್ಯೂಸಿ) ಇವಿಒ, ಡುಕಾಟಿ ಸ್ಲೈಡ್ ಕಂಟ್ರೋಲ್ ಎಂಜಿನ್ ಬ್ರೇಕ್ ಕಂಟ್ರೋಲ್ ಸೇರಿದಂತೆ ಹಲವು ಎಲೆಕ್ಟ್ರಾನಿಕ್ ರೈಡರ್ ಫೀಚರ್ ಗಳನ್ನು ಹೊಂದಿವೆ

2021ರ ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಬೈಕ್ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕೆಟಿಎಂ 1290 ಸೂಪರ್ ಡ್ಯೂಕ್ ಆರ್, ಕವಾಸಕಿ ಝಡ್ ಹೆಚ್2, ಯಮಹಾ ಎಂಟಿ -10, ಎಪ್ರಿಲಿಯಾ ಟುವೊನೊ ವಿ4 ಮತ್ತು ಬಿಎಂಡಬ್ಲ್ಯು ಎಸ್1000ಆರ್ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ. ಇನ್ನು ಈ ಹೊಸ ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.


Click it and Unblock the Notifications








