ಐಷಾರಾಮಿ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಬೈಕಿನ ವಿಶೇಷತೆಗಳು

ಅಮೆರಿಕ ಮೂಲದ ಐಷಾರಾಮಿ ದ್ವಿಚಕ್ರ ತಯಾರಕ ಕಂಪನಿಯಾದ ಹಾರ್ಲೆ ಡೇವಿಡ್ಸನ್ ತನ್ನ ಹೊಸ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕನ್ನು ನಿನ್ನೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಹೊಸ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕ್ ಎರಡು ರೂಪಾಂತರಗಳಲ್ಲಿ ಲಭ್ಯವಿದೆ.

ಐಷಾರಾಮಿ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಬೈಕಿನ ವಿಶೇಷತೆಗಳು

ಹಾರ್ಲೆ ಡೇವಿಡ್ಸನ್ ಕಂಪನಿಯು ತನ್ನ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕ್ ನವೀಕರಿಸಿ ಹೊಸ ರೂಪದಲ್ಲಿ ಭಾರತದಲ್ಲಿ ನಿನ್ನೆ ಬಿಡುಗಡೆಗೊಳಿಸಿದೆ. ಅಗ್ರೇಸಿವ್ ಲುಕ್ ಮತ್ತು ಹಾಲಿವುಡ್ ಸಿನಿಮಾಗಳಲ್ಲಿ ಕಾಣುವ ಅಡ್ವೆಂಚರ್ ಬೈಕ್ ಗಳ ರೀತಿ ವಿನ್ಯಾಸವನ್ನು ಹೊಂದಿದೆ. ಅಲ್ಲದೇ ಈ ಬೈಕಿನಲ್ಲಿ ಹಲವಾರು ನೂತನ ಫೀಚರ್ಸ್‌ಗಳು ಮತ್ತು ಅತ್ಯಾಧುನಿಕ ತಂತ್ರಜ್ಙಾನಗಳನ್ನು ಒಳಗೊಂಡಿದೆ. ಈ ಹೊಸ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕಿನ ಪ್ರಮುಖ ವಿಶೇಷತೆಗಳು ಇಲ್ಲಿವೆ.

ಐಷಾರಾಮಿ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಬೈಕಿನ ವಿಶೇಷತೆಗಳು

ವಿನ್ಯಾಸ

ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕನ್ನು ಸಂಪೂರ್ಣವಾಗಿ ಹೊಸದಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ. ಇದರ ವಿನ್ಯಾಸದ ಬಗ್ಗೆ ಹೇಳುವುದಾದರೆ, ಅಡ್ವೆಂಚರ್ ಪ್ರಿಯರನ್ನು ಸೆಳೆಯುವಂತೆ ವಿಶಿಷ್ಟವಾದ ವಿನ್ಯಾಸಗೊಳಿಸಿದ್ದಾರೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಐಷಾರಾಮಿ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಬೈಕಿನ ವಿಶೇಷತೆಗಳು

ಬೆಲೆ

ಇದರಲ್ಲಿ ಬೇಸ್ ಸ್ಪೆಕ್ ಬೆಲೆಯು ರೂ.ರೂ.16.90 ಲಕ್ಷಗಳಾದರೆ, ಟಾಪ್-ಸ್ಪೆಕ್ ಪ್ಯಾನ್ ಅಮೇರಿಕಾ 1250 ಸ್ಪೆಷಲ್‌ಗೆ ರೂ.19.99 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ಹೊಸ ಬೈಕಿನ ಎರಡು ಬೈಕಿನಲ್ಲಿ ವಿಭಿನ್ನವಾಗಿ ಫೀಚರ್ ಗಳನ್ನು ನೀಡಲಾಗಿದೆ.

ಐಷಾರಾಮಿ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಬೈಕಿನ ವಿಶೇಷತೆಗಳು

ಫೀಚರ್ಸ್‌ಗಳು

ಈ ಹೊಸ ಅಡ್ವೆಂಚರ್ ಬೈಕಿನ ಎರಡು ರೂಪಾಂತರಗಳಲ್ಲಿ ಕೆಲವು ಫೀಚರ್ಸ್‌ಗಳು ಒಂದೇ ರೀತಿಯಲ್ಲಿ ನೀಡಿದ್ದಾರೆ. ಇದು ಫುಲ್-ಎಲ್ಇಡಿ ಲೈಟಿಂಗ್, ಬ್ಲೂಟೂತ್-ಕನೆಕ್ಟಿವಿಟಿ ಹೊಂದಿರುವ 6.8-ಇಂಚಿನ ಕಲರ್ ಡಿಸ್ ಪ್ಲೇ ಮತ್ತು ಯುಎಸ್‌ಬಿ ಸಿ-ಟೈಪ್ ಔಟ್ ಲೈಟ್ ಅನ್ನು ಒಳಗೊಂಡಿವೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಐಷಾರಾಮಿ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಬೈಕಿನ ವಿಶೇಷತೆಗಳು

ರೈಡಿಂಗ್ ಮೋಡ್‌ಗಳು

ಇನ್ನು ಹೊಸ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕಿನ ಸ್ಟ್ಯಾಂಡರ್ಡ್ ರೂಪಾಂತರದಲ್ಲಿ ಐದು ರೈಡಿಂಗ್ ಮೋಡ್ ಗಳನ್ನು ಪಡೆಯುತ್ತದೆ. ನಾಲ್ಕು ಪ್ರಿ-ಪ್ರೊಗಾಮ್ ಮಾಡಲಾದ ರೋಡ್, ಸ್ಪೋರ್ಟ್, ರೈನ್, ಆಫ್-ರೋಡ್ ಮತ್ತು ಒಂದು ಕಸ್ಟಮ್ ಮೋಡ್ ಅನ್ನು ರೈಡರ್ ತನ್ನ ಸ್ವಂತ ಆದ್ಯತೆಯ ಪ್ರಕಾರ ಹೊಂದಿಸಬಹುದು.

ಐಷಾರಾಮಿ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಬೈಕಿನ ವಿಶೇಷತೆಗಳು

ಇನ್ನು ಟಾಪ್-ಸ್ಪೆಕ್ ಆದ ಸ್ಪೆಷಲ್ ರೂಪಾಂತರದಲ್ಲಿ ಕಸ್ಟಮೈಸ್ ಮಾಡಬಹುದಾದ ಎರಡು ಹೆಚ್ಚುವರಿ ಮೋಡ್‌ಗಳನ್ನು ಪಡೆಯುತ್ತದೆ. ಇದರ ಮೂಲಕ ರೈಡರ್ ವಿಭಿನ್ನವಾದ ರೈಡಿಂಗ್ ಆನುಭವವನ್ನು ಪಡೆಯಲು ಸಹಕಾರಿಯಾಗಿರುತ್ತದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಐಷಾರಾಮಿ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಬೈಕಿನ ವಿಶೇಷತೆಗಳು

ಎಂಜಿನ್

ಮೆಕ್ಯಾನಿಕಲ್‌ಗಳ ವಿಷಯದಲ್ಲಿ ಎರಡು ರೂಪಾಂತರಗಳಲ್ಲಿ ಒಂದೇ 1,252 ಸಿಸಿ, ರೆವಲ್ಯೂಷನ್ ಮ್ಯಾಕ್ಸ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 9,000 ಆರ್‌ಪಿಎಂನಲ್ಲಿ 150 ಬಿಹೆಚ್‌ಪಿ ಪವರ್ ಮತ್ತು 6,750 ಆರ್‌ಪಿಎಂನಲ್ಲಿ 127 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಯುನಿಟ್ ಅನ್ನು ಜೋಡಿಸಲಾಗಿದೆ.

ಐಷಾರಾಮಿ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಬೈಕಿನ ವಿಶೇಷತೆಗಳು

ಈ ಐಷಾರಾಮಿ ಅಡ್ವೆಂಚರ್ ಬೈಕಿನಲ್ಲಿ ಸೆಮಿ-ಆಕ್ಟಿವ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ. ಪ್ಯಾನ್ ಅಮೇರಿಕಾ 1250 ಹಾರ್ಲೆ-ಡೇವಿಡ್ಸನ್‌ನಿಂದ ಬಂದ ಮೊದಲ ಅಡ್ವೆಂಚರ್ ಬೈಕ್ ಆಗಿದೆ. ಹೊಸ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಬೈಕ್ ಅಗ್ರೇಸಿವ್ ಮತ್ತು ರಗಡ್ ಲುಕ್ ಅನ್ನು ಹೊಂದಿರುವ ಫ್ಯೂಚರಿಸ್ಟಿಕ್ ಫ್ರಂಟ್ ಎಂಡ್ ಪಡೆದುಕೊಂಡಿದೆ.

ಐಷಾರಾಮಿ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಬೈಕಿನ ವಿಶೇಷತೆಗಳು

ಪ್ಯಾನ್ ಅಮೇರಿಕಾ 1250 ಸ್ಪೆಷಲ್ ರೂಪಾಂತರವು ಲೋಡ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಸ್ಟ್ಯಾಂಡರ್ಡ್ ಸೆಂಟರ್ ಸ್ಟ್ಯಾಂಡ್, ಹೊಂದಾಣಿಕೆ ಮಾಡಬಹುದಾದ ರಿಯರ್ ಬ್ರೇಕ್ ಪೆಡಲ್, ಅಲ್ಯೂಮಿನಿಯಂ ಸ್ಕಿಡ್-ಪ್ಲೇಟ್, ಸ್ಟೀರಿಂಗ್ ಡ್ಯಾಂಪರ್ ಮತ್ತು ಅಡಾಪ್ಟಿವ್ ರೈಡ್ ಎಂಬ ಫೀಚರ್ ಗಳನ್ನು ಹೊಂದಿವೆ.

Article Published On: Thursday, April 29, 2021, 20:51 [IST]
English summary
Harley-Davidson Pan America 1250: Top Highlights. Read In Kananda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+